About Us Advertise with us Be a Reporter E-Paper

ಯಾತ್ರಾಯಾತ್ರಾ panel 1

ಕೈ ಬೀಸಿ  ಕರೆಯುವ ಗೋಕಾಕ ಫಾಲ್ಸ್

ಸಂತೋಷ ಕರೀಕಟ್ಟಿ

ಬೆಳಗಾವಿಯಿಂದ ಸುಮಾರು 65 ಕಿ.ಮೀ ಅಂತರದಲ್ಲಿರುವ ಗೋಕಾಕ ನಗರದಿಂದ ಸಮೀಪ ದಲ್ಲಿರುವ ಸುಪ್ರಸಿದ್ಧ ಗೋಕಾಕ ಜಲಪಾತ ಮಳೆಗಾಲದ ಸ್ವರ್ಗವಾಗಿದೆ. ಈ ಜಲಪಾತ ಮಳೆಗಾಲದ ಪ್ರಾರಂಭದ ಎರಡು ತಿಂಗಳು ಮೈದುಂಬಿ ಹರಿಯುತ್ತದೆ. ಈ ಜಲಪಾತದ ದೃಶ್ಯ ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರ ರಾಜ್ಯಗಳ ಸಾವಿರಾರು ಜನ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

ಜೀವನದಿ ಘಟಪ್ರಭೆ ನದಿಯ ಜಲಾನಯನ ಪ್ರದೇಶದ ಹಾಗೂ  ಮತ್ತು ಮಹಾ ರಾಜ್ಯದ ಗಡಿಭಾಗದಲ್ಲಿ ಉತ್ತಮ ಮಳೆಯಾ ದರೇ ಸಾಕು ಗೋಕಾಕ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತದೆ. ಈ ಜಲಪಾತ ಭೋರ್ಗರೆ ಯುತ್ತಾ 180 ಮೀಟರ್ ಆಳಕ್ಕೆ ಧುಮುಕುವ ಮನಮೋಹಕ, ರುದ್ರರಮಣೀಯ ದೃಶ್ಯಕ್ಕೆ ಮನಸೋಲದವರೇ ಇಲ್ಲ.

ಈ ಜಲಪಾತ ಉಳಿದ ಜಲಪಾತಗಳಿಗಿಂತ ತುಂಬಾ ವಿಭಿನ್ನವಾಗಿದೆ. ಮಳೆಗಾಲದಲ್ಲಿ ಈ ಜಲಪಾತ ಆಸ್ವಾದಿಸುವದೇ ಒಂದು ಆನಂದ. ಕೆಂಪು ಮಿಶ್ರಿತ ನೀರಿನ ಕಲರವದ ಹತ್ತಿರಕ್ಕೆ ಹೋದಂತೆ ಹಾಲಿನಂತೆ ಕಂಗೊಳಿಸುವ ಗೋಕಾಕ ಫಾಲ್‌ಸ್, ಕರದಂಟೂ  ಗೋಕಾಕ ನಗರ ದಿಂದ 7 ಕಿ.ಮೀ ಅಂತರದಲ್ಲಿದೆ.

ಕರ್ನಾಟಕ ಎರಡನೇ ಅತಿ ದೊಡ್ಡ ಈ ಜಲಪಾತವನ್ನು ಬ್ರಿಟಿಷರು ಕೆನಡಾದ ನಯಾಗರಕ್ಕೆ ಹೋಲಿಸಿದ್ದಾರೆ. ಇದನ್ನು ಭಾರತದ ನಯಾಗರ ಎಂದಿದ್ದಾರೆ. ಪ್ರವಾಸಿಗರು ಈ ಜಲಪಾತವನ್ನು ಎಲ್ಲ ಬದಿಯಿಂದಲೂ ವೀಕ್ಷಿಸ ಬಹುದು. ಪ್ರಕೃತಿ ಸೌಂದರ್ಯದ ಜತೆಗೆ ಜಲ ಪಾತದ ಸೌಂದರ್ಯ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ.

ವಿದ್ಯುತ್ ಉತ್ಪಾದನೆ

ಗೋಕಾಕ ಜಲಪಾತ ಹಾಗೂ ಗೋಕಾಕ ಮಿಲ್‌ಸ್ ತನ್ನದೇ ಆದ ವೈಶಿಷ್ಟ್ಯತೆಯ ಜತೆಗೆ ಐತಿಹಾಸಿಕ  ಸಹ ಇದೆ. ಜೂನ್ ತಿಂಗಳಿನಿಂದ ಅಕ್ಟೋಬರ್‌ವರೆಗೆ ತುಂಬಿ ಹರಿಯುವ ಈ ಜಲಪಾತದ ಕೆಳಗೆ ವಿದ್ಯುತ್ ಉತ್ಪಾದನೆ ಘಟಕ ವಿದೆ. ಈ ವಿದ್ಯುತ್ ಘಟಕವನ್ನು ಬ್ರಿಟಿಷರ ಕಾಲ ದಲ್ಲಿ ಅಂದರೆ 1885-87ರಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಿದ ಇತಿಹಾಸವಿದೆ. ಏಷ್ಯಾಖಂಡದಲ್ಲೆ ಪ್ರಪ್ರಥಮ ಬಾರಿಗೆ ವಿದ್ಯುತ್ ಉತ್ಪಾದನೆ ಮಾಡಲಾಗಿದೆ ಎಂದು ಊಹಿಸಲಾ ಗಿದೆ. ಈ ಜಲಪಾತದ ವಿದ್ಯುತ್‌ನ್ನು ಗೋಕಾಕ ಫಾಲ್‌ಸ್ ಟೆಕ್ಸಟೈಲ್‌ಸ್ ಮಿಲ್‌ಸ್  ಹೆಸ್ಕಾಂ ಸೇರಿದಂತೆ ಸ್ಥಳೀಯ ಜಲಪಾತಗಳಲ್ಲಿ  ನೆಲೆಸಿರುವ ಕಾರ್ಮಿಕರ ಮನೆಗಳಿಗೆ  ಸರಬರಾಜು ನೀಡಲಾಗುತ್ತದೆ.

ತೂಗು ಸೇತುವೆ

ಗೋಕಾಕ ಫಾಲ್ಸನ ಮತ್ತೊಂದು ವಿಶೇಷತೆ ಎಂದರೆ ತೂಗು ಸೇತುವೆ. ಬ್ರಿಟಿಷರ ಕಾಲದಲ್ಲಿ ಇದನ್ನು ಮರದ ಕಟ್ಟಿಗೆ (ಪಳಿಗಳು) ಮತ್ತು ಕಬ್ಬಿಣದ ಸರಳುಗಳಿಂದ ಕಟ್ಟಲಾಗಿದೆ. ಜಲಪಾತ ಮೈದುಂಬಿ ಹರಿಯುತ್ತಿರುವಾಗ ಈ ತೂಗು ಸೇತುವೆಯ ಮೇಲೆ ನಡೆದಾಡುವದೇ ಒಂದು ಅದ್ಭುತ ರೊಮಾಂಚನದ ತೂಗುಯ್ಯಾಲೆಯ ಅನುಭವ. ಘಟಪ್ರಭೆ ರಭಸದಿಂದ ಕಲ್ಲು ಸೀಳಿ ಹರಿಯುತ್ತಿರುವ ದೃಶ್ಯ ಮನಮೋಹಕ ರಸ ದೌತಣ ನೀಡುತ್ತಿದೆ. ಪ್ರವಾಸಿಗರಿಗೆ ಜಲಪಾತದ ಸುಂದರ ದೃಶ್ಯ  ಹಾಗೂ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಈ ತೂಗು ಸೇತುವೆ ಸಹಾಯಕಾರಿಯಾಗಿದೆ. ರಾಜ್ಯದ ಲ್ಲಿಯೇ ಅತಿದೊಡ್ಡ ತೂಗು ಸೇತುವೆ. ಇಂತಹ ಅದ್ಭುತ ಅನುಭವ ನೀಡುವ ತೂಗು ಸೇತುವೆಯ ಮೋಜು ಅನುಭವಿಸದೇ ಯಾವವೊಬ್ಬ ಪ್ರವಾಸಿ ಗನು ಹೊಗುವುದಿಲ್ಲ. ಈ ಫಾಲ್‌ಸ್ನ ಪಕ್ಕದಲ್ಲೇ ಹಸಿರಿನಿಂದ ಕಂಗೊಳಿಸುವ ಕೆಂಪಲ್ ಪಾರ್ಕ ಇದ್ದು ಪ್ರವಾಸಿಗರಿಗೆ ವಿಶ್ರಾಂತಿ ತಾಣವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close