About Us Advertise with us Be a Reporter E-Paper

ಯಾತ್ರಾಯಾತ್ರಾ panel2

ಗೊಡಚಿನ ಮಲ್ಕಿ ಜಲಧಾರೆ

ವೈ.ಬಿ.ಕಡಕೋಳ

ಮುಂಗಾರು ವರ್ಷ ಧಾರೆಗೆ ಗೊಡಚಿನಮಲ್ಕಿ ಪ್ರದೇ ಶವು ಮೈದುಂಬಿಕೊಂಡ ಸಮಯ ಕಣ್ಣಾಯಿಸಿದಷ್ಟು ದೂರ ನೀರ ಅಲೆಗಳ ಹೊದ್ದು ಮಲಗಿರುವ ದೃಶ್ಯನೋಟ ಅಬ್ಬಾ! ಅಮೆರಿಕದ ನಯಾಗರ ನೆನಪಿಸುವುದು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಪುಟ್ಟಹಳ್ಳಿ ಗೊಡಚಿನಮಲ್ಕಿ. ತಾಲೂಕಿನಿಂದ 16 ಕಿ.ಮೀ ಅಂತರ ದಲ್ಲಿದೆ. ಈ ಗ್ರಾಮದ ಹತ್ತಿರ ಹರಿದಿರುವ ನದಿ ಮಾರ್ಕಂಡೇಯ ನದಿ ಸೃಷ್ಟಿಸಿರುವ  ಗೊಡಚಿನಮಲ್ಕಿ ಫಾಲ್‌ಸ್. ಅಲ್ಲಿ ತಲುಪಿದ ತಕ್ಷಣ ನೀರಲೆ ಗಳ ನಿನಾದ ಕೇಳತೊಡಗುತ್ತದೆ. ಗೊಡಚಿನಮಲ್ಕಿ ಪ್ರದೇ ಶಕ್ಕೆ ಎಂಬ ಸೂಚನೆ ನೀಡುವ ನಾಮಫಲಕ ಗೋಚರಿಸುವ ಜತೆಗೆ ನಮ್ಮಂತೆ ಅದನ್ನು ನೋಡಲು ಹೊರಟ ವರ, ನೋಡಿ ಬರುತ್ತಿರುವ ದೃಶ್ಯ ಬೆಳಗಿನಿಂದ ಸಂಜೆ ವರೆಗೂ ಮಾಮೂಲಿ.

ಮಳೆಗಾಲದಲ್ಲಿ ಮಾರ್ಕಂಡೇಯ ನದಿ ಗಂಭೀರ ವಾಗಿ ಹರಿಯುವ ಅದರ ಸೊಬಗು ತನ್ನ ಎರಡೂ ದಡದಲ್ಲಿ ಹೊಲ-ಗದ್ದೆಗಳ ಹಸಿರನ್ನು ಬೆಳೆಸಿಕೊಂಡ ಅದರ ಪರಿ, ಧೋ ಎಂದು ಸುರಿದ  ಅದು ನಿಂತ ನಂತರ ಇಲ್ಲಿ ನಡೆಯುವ ರಮ್ಯ ವಿಸ್ಮಯಕಾರಿ ನೀರ ಅಲೆಗಳ ದೃಶ್ಯನೋಟ ಎಷ್ಟು ನೋಡಿದರೂ ನೋಡುವ ಹಂಬಲ ತೀರಲಾರದಷ್ಟು ಅದ್ಭುತ. ಇಲ್ಲಿರುವ ಕರಿಬಂಡೆ ಗಳು ಅದರಲ್ಲಿ ಹರಿದು ತನ್ನದೇ ಆದ ಸದ್ದು ಮಾಡುತ್ತ ನದಿ ಹರಿಯುವ ರೀತಿ ಎತ್ತರಕ್ಕಿಂತಲೂ ತನ್ನ ವಿಶಾಲತೆಯಿಂದ ಕೂಡಿರುವ ಈ ಜಲಪಾತ ಜೂನ್ ತಿಂಗಳಿ ನಿಂದ ಫೆಬ್ರುವರಿಯವರೆಗೂ ವೀಕ್ಷಣೆಗೆ ಅನುಕೂಲ. ಈ ಸ್ಥಳ ಬೆಳಗಾವಿಯಿಂದ 40 ಕಿ.ಮೀ ಅಂತರವಿದೆ. ಮಾರ್ಕಂಡೇಯ ನದಿಯು ಮೊದಲು  ಮೀಟರ್ ಎತ್ತರದಿಂದ ಧುಮುಕಿ ಅನಂತರ 18 ಮೀಟರ್ ಎತ್ತರ ದಿಂದ ಧುಮುಕುವುದು. ಈ ಜಲಧಾರೆಯು ಎತ್ತರಕ್ಕಿಂತ ಹೆಚ್ಚು ಅಗಲವಾಗಿದ್ದು ಬಂಡೆಗಲ್ಲುಗಳ ಮೇಲೆ ಹಂತ ಹಂತವಾಗಿ ಜಾರಿದಂತೆ ಇಳಿಯುತ್ತದೆ. ಅಲ್ಲಿಂದ ಮುಂದೆ ಮಾರ್ಕಂಡೇಯ ನದಿಯು ಘೋಡಗೇರಿ ಯಲ್ಲ ಘಟಪ್ರಭಾ ನದಿಯನ್ನು ಸೇರುತ್ತದೆ.

ಇಲ್ಲಿರುವ ನಿಲ್ದಾಣದಲ್ಲಿ ಅಕ್ಕಪಕ್ಕದಲ್ಲಿರುವ ಅಂಗಡಿಗಳಲ್ಲಿ ತಿನ್ನಲು ಏನಾದರೂ  ಖರೀದಿಸಿಕೊಳ್ಳಿ. ಅಂದರೆ  ಶೇಂಗಾ(ಕಡಲೆಬೀಜ), ಭಜಿ, ತಂಪಾದ ಪಾನೀಯ ಗಳು. ಚುರುಮುರಿ, ಇತ್ಯಾದಿ ಏಕೆಂದರೆ ನೀವು ನದಿ ಹರಿಯುವ ಜಾಡನ್ನು  ಕಾಲುಹಾದಿಯಲ್ಲಿ ಕ್ರಮಿಸಬೇಕಾದ ದೂರ 2 ಕಿ.ಮೀ.ನಷ್ಟು. ಗಾಬರಿಯಾಗ ಬೇಡಿ, ಅದನ್ನು ತಲುಪಿದ ಮೇಲೆ ನೀವು ಸವಿಯುವ ಆನಂದದ ಮುಂದೆ ನಡೆದುಬಂದ ಆಯಾಸವೆಲ್ಲ ಮಾಯ, ಆಗ ತಿನ್ನಲು ಏನಾದರೂ ತರಬಾರದಿತ್ತೇ  ಅನ್ನಿಸದಿರದು. ಹಾಗೆಂದು ಸುತ್ತಲೂ ಕಣ್ಣಾಯಿಸಿದಷ್ಟು ನೀರ ಸೊಬಗ ಬಿಟ್ಟರೆ ಏನೂ ಕಾಣಿಸದು,ಅದಕ್ಕಾಗಿಯೇ ಇಲ್ಲಿಗೆ ಬರುವ ಮುಂಚೆ ಮನೆಯಿಂದ ಆಗಲಿ, ಅಂಗಡಿಗಳಲ್ಲಿ ಆಗಿರಲಿ ತಿನ್ನಲು ತಿಂಡಿತಿನಿಸುಗಳೊಂದಿಗೆ ಬಂದಿ ದ್ದಲ್ಲಿ ಇನ್ನೂ ಅನುಕೂಲ.

ಅಂದಹಾಗೆ  ಇಲ್ಲಿರುವ ಕಚ್ಚಾ ಕಾಲುಹಾದಿ ನದಿ ರಭಸದ  ಜಾಡನ್ನು ಅನುಸರಿಸಿ ನದಿ ತಲುಪಿ ದಾಗ ಅಲ್ಲಿ ಕಂಡುಬರುವ ಮಮೋಹಕ ದೃಶ್ಯನೋಟ ಕಣ್ತುಂಬಿಕೊಳ್ಳುತ್ತ ಸಾಗುವ ಮುಂಚೆ ಬಂಡೆಗಲ್ಲುಗಳ ಮೇಲೆ ಹೆಜ್ಜೆ ಕೂಡ ಎಚ್ಚರಿಕೆಯಿಂದ ಇಡುತ್ತ ಸಾಗಿ ಸ್ವಲ್ಪ ಆಯ ತಪ್ಪಿದರೆ ಈಜು ಬರದಿದ್ದಲ್ಲಿ ಮುಂದಿರುವ ಪ್ರಪಾತದಲ್ಲಿ ಅಘೋರ ಸಂಭವಿಸಬಹುದು, ಮಕ್ಕ ಳೊಂದಿಗೆ ಬಂದಿದ್ದಲ್ಲಿ ಅವರ ಮೇಲೂ ನಿಗಾ ಇರಲಿ, ನದಿ ತೀರದಗುಂಟ ಬಂಡೆಗಲ್ಲುಗಳ ನಡುವೆ ಅಲ್ಲಿನ ದೃಶ್ಯವೈಭವ ನೋಡುತ್ತ ಸಾಗಿದಂತೆ ಒಂದೂವರೆ ಕಿ.ಮೀ  ನಷ್ಟು ಮುಂದೆ ಬಂದಾಗ ಎತ್ತರವಾದ  ಜಲಪಾತದೆದುರು ನೀವಿರುತ್ತೀರಿ, ಅಲ್ಲಿ ನೀರು ಧುಮುಕುವ ದೃಶ್ಯ ಅಬ್ಬಾ ರೋಮಾಂಚನಕಾರಿ, ಅಲ್ಲಿ ಬಂಡೆಗಲ್ಲುಗಳ ಮೇಲೆ ಒಂದೆಡೆ ಕುಳಿತು ನೀವು ಜತೆಗೆ ತಂದಿರುವ ತಿಂಡಿತಿನಿಸುಗಳ ಸವಿಯುವುದರೊಂದಿಗೆ  ಜಲಧಾರೆ ಸೊಬಗ ಸವಿಯಿರಿ ಅಂದರೆ ಇದುವರೆಗೂ ನೀವು ನಡೆದುಬಂದ ಮೂರುವರೆ ಕಿ.ಮೀ.ದೂರ ಕೂಡ ನಿಮಗೆ ಏನೂ ಆಯಾಸ ಅನ್ನಿಸದು. ಆದರೆ ನೀವೂ ಕುಳಿತ ಬಂಡೆಗಲ್ಲು ಕೂಡ ವಿಪರೀತ ಮಳೆಯಾದ ಕ್ಷಣ ನೀರಲ್ಲಿ ಮುಳುಗಡೆ ಆಗಿತ್ತು ಎಂಬುದನ್ನು ನೆನೆದಾಗ ಭಯ ಅನ್ನಿಸದಿರದು, ಯಾಕೆಂದರೆ ಮಳೆಗಾಲದ  ಇಲ್ಲಿರುವ ಎರಡು ಕಿ.ಮೀ ಕಾಲುಹಾದಿ ಕೂಡ ರಭಸದ ಮಳೆಗೆ ತನ್ನ ನೆಲೆಯನ್ನು ಕಳೆದು ಕೊಂಡಿರುತ್ತದೆ ಎನ್ನುವುದೂ ಕೂಡ ಅಷ್ಟೇ ಸತ್ಯ. ಅದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಏನಾದರೂ ಮಾಡಿ ಇಂಥ ಸ್ಥಳ ಜನರ ಪ್ರವಾಸಕ್ಕೆ ಎಟುಕುವ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದರೆ ರಾಜ್ಯದಲ್ಲಿ ಇದೊಂದು ಅತ್ಯತ್ತಮ ಪ್ರವಾಸೀ ತಾಣವಾಗುವುದರಲ್ಲಿ ಸಂದೇಹವಿಲ್ಲ,

ಏನೇ ಆಗಲಿ ಮಳೆಗಾಲದ ಅವಧಿಗಳಲ್ಲಿ ಇಂಥ ಜಲ ಪಾತಗಳನ್ನು ಕಷ್ಟಪಟ್ಟು ಆದರೂ ಸರಿ ಒಮ್ಮೆಯಾದರೂ ನೋಡಬೇಕು. ಸ್ವಂತ  ಬಂದರೆ ಹೆಚ್ಚು ಅನು ಕೂಲ. ಇಲ್ಲದಿದ್ದಲ್ಲಿ ಸರಕಾರಿ ಅಥವ ಖಾಸಗಿ ವಾಹನಗಳ ಸಂಚಾರ ಕೂಡ ಇಲ್ಲಿದ್ದು ಅವುಗಳಲ್ಲಿ ಬಂದು ಹೋಗಬಹುದು,ಯಾವ ವಾಹನಗಳಲ್ಲಿ ಆಗಮಿಸಿ ಎರಡು ಕಿ.ಮೀ ಮಾತ್ರ ನಡೆಯಲೇಬೇಕು.ಹಾಗೆಂದು ನೀವು ನಡೆದ ದೂರ ಈ ಜಲಧಾರೆಯ ಸೊಬಗ ಕಂಡಾಗ ಎಲ್ಲಾ ಆಯಾಸವನ್ನು ಮರೆತು ಮುಂದೆ ಪ್ರಪಾತದವರೆಗೂ ತನ್ನಷ್ಟಕ್ಕೆ ತಾನಾಗಿಯೇ ನಿಮ್ಮ ಕಾಲುಗಳು ನಿಮ್ಮನ್ನು ಕರೆದೊಯ್ಯುತ್ತವೆ ಎಂಬುದು ಕೂಡ ಅಷ್ಟೇ ಸತ್ಯ.

ಇಲ್ಲಿಗೆ ಬರಲು ಸಾರಿಗೆ ಸಂಸ್ಥೆಯ ವಾಹನಗಳ ಸೌಕರ್ಯದ  ಖಾಸಗಿ ವಾಹನಗಳ ಅನುಕೂಲ ಗೋಕಾಕದಿಂದ ಸಾಕಷ್ಟು ಇದ್ದು. ರೈಲು ಮೂಲಕ ಗೋಕಾಕವರೆಗೂ ಬಂದರೆ ಅಲ್ಲಿಂದ ಸಾರಿಗೆ ಸೌಕರ‌್ಯದ ಪ್ರಯೋಜನ ಪಡೆಯಬಹುದು.ಮಳೆಗಾಲದ ಅಂದರೆ ಜೂನ್‌ನಿಂದ ಅ್ಟೋಬರ್ ವರೆಗೂ ಈ ಸ್ಥಳ ನೋಡಲು ಬಯಸುವವರಿಗೆ ತುಂಬಾ ಸುಂದರ ನೀರಿನ ಹರಿವು ಕಡಿಮೆಯಾದಂತೆ ಮನೋಹರತೆ ಕಡಿಮೆಯಾಗುತ್ತದೆ.  ಗೋಕಾಕದಿಂದ ಮೇಲ್ಮಟ್ಟಿ ಮಾರ್ಗವಾಗಿ ಪಾಶ್ಚಾಪೂರ ಹೋಗುವ ಬಸ್ಸುಗಳು ಗೊಡಚಿನಮಲ್ಕಿ ಮೂಲಕ ಹಾದು ಹೋಗುತ್ತವೆ.ಖಾಸಗಿ ವಾಹನಗಳೂ ಕೂಡ ಗೋಕಾಕದಲ್ಲಿ ದೊರಕುತ್ತವೆ. ಈ ಮೂಲಕ ಗೊಡಚಿನ ಮಲ್ಕಿ ತಲುಪಬಹುದು.

Tags

Related Articles

Leave a Reply

Your email address will not be published. Required fields are marked *

Language
Close