About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ನಿಜಾಮ್ ಮ್ಯೂಸಿಯಂನಲ್ಲಿ ಚಿನ್ನ, ವಜ್ರ ದರೋಡೆ

ಹೈದರಾಬಾದ್: ಇಲ್ಲಿನ ಪ್ರಖ್ಯಾತ ನಿಜಾಮ್ ಮ್ಯೂಸಿಯಂನಿಂದ 2 ಕೆ.ಜಿ ತೂಕದ ಚಿನ್ನದ ಟಿಫಿನ್ ಬಾಕ್ಸ್, ಒಂದು ಕಪ್, ತಟ್ಟೆ, ಮತ್ತು ಚಮಚ, ವಜ್ರಗಳು ಕಳುವಾಗಿರುವ ಘಟನೆ ನಡೆದಿದೆ.

ಭಾನುವಾರ ರಾತ್ರಿ ಹೈದರಾಬಾದ್‍ನ ಹಳೆಯ ನಗರದಲ್ಲಿರುವ ಪುರನಿ ಹವೇಲಿಯಲ್ಲಿರುವ ಮ್ಯೂಸಿಯಂ ಒಳ ನುಗ್ಗಿದ ಖದೀಮರು ದರೋಡೆ ಮಾಡಿದ್ದಾರೆ. ಮೌಲ್ಯಯುತವಾದ ವಸ್ತುಗಳು ಕಾಣೆಯಾದುದನ್ನು ಕಂಡ ಮ್ಯೂಸಿಯಂ ಅಧಿಕಾರಿಗಳು ಮಿರ್ ಚೌಕ್ನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದರೋಡೆಕೋರರು ಮೊದಲ ಮಹಡಿಯಲ್ಲಿ ಕಬ್ಬಿಣದ ಗ್ರಿಲ್ ವೆಂಟಿಲೇಟರ್ ನ್ನು ಮುರಿದು ಒಳನುಗ್ಗಿದ್ದಾರೆ. ಅಲ್ಲದೆ ಕಟ್ಟಡಕ್ಕೆ ಪ್ರವೇಶಿಸಲು ಹಗ್ಗವನ್ನು ಬಳಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ಫೂಟೇಜ್‍ಗಳನ್ನು ಪರಿಶೀಲಿಸಿದ್ದು, ಮ್ಯೂಸಿಯ ಒಳಗಿನವರ ಕಳ್ಳತನದ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close