About Us Advertise with us Be a Reporter E-Paper

Breaking Newsಕ್ರೀಡೆದೇಶಪ್ರಚಲಿತ

ಏಷ್ಯನ್ ಗೇಮ್ಸ್‌ನ ಚಿನ್ನದ ಹುಡುಗ ತಜೀಂದರ್ ಸಿಂಗ್ ಅವರ ತಂದೆ ಇನ್ನಿಲ್ಲ

ದೆಹಲಿ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಶಾಟ್‌ಪುಟ್‌ನಲ್ಲಿ ಬಂಗಾರದ ಪದಕ ಗೆದ್ದಿದ್ದ ತಜೀಂದರ್ ಸಿಂಗ್ ಅವರ ತಂದೆ ಕರಮ್ ಸಿಂಗ್ ಕೊನೆಯುಸಿರೆಳೆದಿದ್ದಾರೆ.

ಪ್ರಶಸ್ತಿ ಗೆದ್ದ ಬೆನ್ನಲ್ಲೇ ಚಿನ್ನದ ಪದಕವನ್ನು ಕಳೆದೆರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತಿದ್ದ ತನ್ನ ತಂದೆಗೆ ಅರ್ಪಿಸುವುದಾಗಿ ತಜೀಂದರ್ ಹೇಳಿದ್ದರು. ದೇಶಕ್ಕಾಗಿ ಚಿನ್ನ ಗೆಲ್ಲಬೇಕು ಎನ್ನುವ ತಂದೆಯ ಆಸೆಯನ್ನು ಈಡೇರಿಸಿದ್ದ ತಜೀಂದರ್ ಆದಷ್ಟು ಬೇಗ ತಂದೆಯನ್ನು ಭೇಟಿಯಾಗುವ ಆಸೆಯಿಂದ ತವರಿಗೆ ಮರಳಿದ್ದರು.

ದೆಹಲಿ ಏರ್‌ಪೋರ್ಟ್‌‌ಗೆ ಕಾಲಿಡುತ್ತಿದ್ದಂತೆ ತಜೀಂದರ್ ಅವರಿಗೆ ಭಾರತದ ಅಥ್ಲೇಟಿಕ್ಸ್ ಫೆಡರೇಶನ್ ತಜೀಂದರ್ ತಂದೆಯ ಸಾವಿಗೆ ಸಂತಾಪ ಸೂಚಿಸಿದೆ.

23 ವರ್ಷದ ಪಂಜಾಬ್ ಮೂಲದ ತಜೀಂದರ್ ಸಿಂಗ್ 20.75 ಮೀಟರ್ ದೂರ ಶಾಟ್‌ಪುಟ್ ಎಸೆಯುವುದರೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close