About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಪ್ರಧಾನಿ, ಯೋಗಿ ಭಾವಚಿತ್ರವುಳ್ಳ ಗೋಲ್ಡನ್ ರಾಖಿ..!

ಸೂರತ್: ಇಂದು ಸಹೋದರ-ಸಹೋದರಿಯ ಭಾತೃತ್ವ ಸಾರುವ ರಕ್ಷಾಬಂಧನ ಹಬ್ಬದ ಸಂಭ್ರಮ. ದೇಶದೆಲ್ಲೆಡೆ ಸಹೋದರಿಯರು ತಮ್ಮ ಅಣ್ಣನಿಗೆ ರಾಖಿ ಕಟ್ಟಲು ತುದಿಗಾಲಿನಲ್ಲಿ ನಿಂತಿದ್ದಾರೆ. ವಿಧ-ವಿಧವಾದ ರಾಖಿಗಳು ಮಾರುಕಟ್ಟೆಗಳನ್ನು ಅಲಂಕರಿಸಿದೆ. ರಾಖಿ ಖರೀದಿ ಹಬ್ಬವೂ ಭಾರಿ ಜೋರಾಗಿಯೇ ಇದೆ.

      ಗುಜರಾತ್‍ನ ಸೂರತ್‍ನಲ್ಲಿ ಚಿನ್ನಾಭರಣದ ಮಳಿಗೆಯೊಂದು ವಿಶೇಷ ರಾಖಿಯನ್ನು ಸಿದ್ಧಪಡಿಸಿದೆ. ಅದೂ ಬಂಗಾರದ ರಾಖಿ..! ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರ ಭಾವಚಿತ್ರವನ್ನೊಳಗೊಂಡ ಚಿನ್ನದ ರಾಖಿಯನ್ನು ಸಿದ್ಧಪಡಿಸಲಾಗಿದ್ದು, ಈ ರಾಖಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ.

ಈ ಜುವೆಲ್ಲರಿಯಲ್ಲಿ ಒಟ್ಟು 50 ಚಿನ್ನದ ರಾಖಿಗಳನ್ನು ಸಿದ್ಧಪಡಿಸಲಾಗಿದ್ದು, ಈಗಾಗಲೇ 47 ರಾಖಿ ಮಾರಾಟವಾಗಿದ್ಯಂತೆ. 22 ಕ್ಯಾರೆಟ್ ಚಿನ್ನದಲ್ಲಿ ಈ ಬಂಗಾರದ ರಾಖಿಯನ್ನು ಸಿದ್ಧಪಡಿಸಲಾಗಿದ್ದು, ಇದರ ಖರೀದಿದೆ ಜನ ಮುಗಿಬೀಳ್ತಿದ್ದಾರಂತೆ. ಈ ಚಿನ್ನದ ರಾಖಿಯ ಮೌಲ್ಯ 50,000 ರೂ.ನಿಂದ 70,000 ರೂ.ವರೆಗೆ ಲಭ್ಯವಿದೆ.

‘ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಹಾಗೂ ಗುಜರಾತ್ ಸಿಎಂ ಅವರು ದೇಶಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ.  ಇದರಿಂದ ವಿಶ್ವದ ಲಕ್ಷಾಂತರ ಜನರು ಸ್ಫೂರ್ತಿ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇವರ ಭಾವಚಿತ್ರವಿರುವ ರಾಖಿಯನ್ನು ಸಿದ್ಧಪಡಿಸಲಾಗಿದೆ. ಮಹಿಳೆಯರು ರಾಖಿಯನ್ನು ನೋಡಿ ಸ್ಫೂರ್ತಿ ಪಡೆದುಕೊಂಡು ತಮ್ಮ ಸಹೋದರರೂ ಕೂಡ ಇಂತಹ ನಾಯಕರಾಗಬೇಕೆಂದು ರಾಖಿಗಳನ್ನು ಖರೀದಿ ಮಾಡುತ್ತಿದ್ದಾರೆ’ ಎಂದು ಜುವೆಲ್ಲರಿ ವ್ಯವಸ್ಥಾಪಕರು ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close