About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಗೂಡ್ಸ್ ಟ್ರೈನ್‍ನ ಎರಡು ವ್ಯಾಗನ್‍ಗಳಿಗೆ ಬೆಂಕಿ: 12 ರೈಲುಗಳ ಸಂಚಾರ ರದ್ದು

ಮುಂಬೈ: ಗೂಡ್ಸ್‌ ರೈಲೊಂದರ ಎರಡು ವ್ಯಾಗನ್‌ಗಳಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ 12 ರೈಲುಗಳನ್ನು ರದ್ದು ಪಡಿಸಲಾಯಿತು. ಮಹಾರಾಷ್ಟ್ರದ ಪಾಲ್‌ಘರ್‌ ಜಿಲ್ಲೆಯ ದಹಾಣು ರೋಡ್‌ ಸ್ಟೇಷನ್‌ ಸಮೀಪ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ.

ಇನ್ನು ವಿಷಯ ತಿಳಿದ ಕೂಡಲೆ ಅಗ್ನಿಶಾಮಕ ದಳ, ರೈಲ್ವೆ ಪೊಲೀಸ್‌ ದಳ ಮತ್ತು ಸರಕಾರಿ ರೈಲ್ವೆ ಪೊಲೀಸ್‌ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ರೈಲ್ವೇ ವ್ಯಾಗನ್‌ಗಳಿಗೆ ಹೊತ್ತಿಕೊಂಡ ಬೆಂಕಿಯು ಮೇಲ್ಗಡೆ ವಿದ್ಯುತ್‌ ವಯರ್‌ಗಳಿಗೆ ತಗುಲಿದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ 12 ರೈಲುಗಳನ್ನು ರದ್ದುಗೊಳಿಸಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close