About Us Advertise with us Be a Reporter E-Paper

Breaking Newsದೇಶಪ್ರಚಲಿತ

ಇ ವಾಹನ ರಸ್ತೆಗಿಳಿಯಲು ಇನ್ಮುಂದೆ ಯಾವುದೇ ಪರ್ಮಿಟ್ ಬೇಕಿಲ್ಲ..!

ದೆಹಲಿ: ವಾಯು ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಕವಾಗಿರುವ ಕೇಂದ್ರ ಸರಕಾರ ಇದೀಗ ನೂತನ ಪ್ರಯತ್ನಕ್ಕೆ ಮುಂದಾಗಿದೆ. ಎಲೆಕ್ಟ್ರಿಕ್ ಮತ್ತು ಪರ್ಯಾಯ ಇಂಧನಗಳನ್ನು ಬಳಸುವ ವಾಹನಗಳಿಗೆ ಯಾವುದೇ ಪರ್ಮಿಟ್ ಇಲ್ಲದೇ ಚಲಿಸಬಹುದು ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್‍ಐಎಎಂ) ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿ, ಎಲೆಕ್ಟ್ರಿಕ್ ಮತ್ತು ಪರ್ಯಾಯ ಇಂಧನ ಬಳಸಿ ಚಲಿಸುವ ವಾಹನಗಳಿಗೆ ಪ್ರೋತ್ಸಾಹ ನೀಡಲು ಎಲೆಕ್ಟ್ರಿಕಲ್ ವಾಹನ ಸೇರಿದಂತೆ, ಎಥೆನಾಲ್, ಬಯೋ ಡೀಸೆಲ್, ಸಿಎನ್‍ಜಿ ಹಾಗೂ ಬಯೋ ಇಂಧನಗಳ ಮೂಲಕ ಸಾಗುವ ವಾಹನಗಳಿಗೆ ರಸ್ತೆ ರಹದಾರಿಯನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದೇವೆ. ಇಂತಹ ವಾಹನಗಳಿಗೆ ಉಚಿತ ಪರ್ಮಿಟ್ ನೀಡುವ ಮೂಲಕ, ಸುಲಭವಾಗಿ ರಸ್ತೆಗಿಳಿಯುವಂತೆ ಮಾಡಲಾಗಿದೆ ಎಂದರು.

ಆ್ಯಪ್ ಆಧಾರಿತಾ ಟ್ಯಾಕ್ಸಿ ಸೇವೆಗಳಾದ ಊಬರ್ ಹಾಗೂ ಓಲಾಗಳು ತಮ್ಮ ವಾಹನಗಳನ್ನು ಎಲೆಕ್ಟ್ರಿಕ್ ಮಾದರಿಗಳನ್ನು ಬಳಸುವ ಮೂಲಕ ರಸ್ತೆ ತೆರಿಗೆಗಳ ವಿನಾಯಿತಿ ಹೊಂದಬಹುದಾಗಿದೆ ಎಂದು ಈ ವೇಳೆ ಸಲಹೆ ನೀಡಿದರು.

ವಾಹನ ತಯಾರಿಕಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಮುಂದೆ ಬರುವುದಕ್ಕಾಗಿ ಈ ನಿರ್ಧಾರನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೇ ಎಲೆಕ್ಟ್ರಿಕ್ ವಾಹನಗಳಿಗೆ ಮೇಲೆ 12% ಜಿಎಸ್‍ಟಿ ಇದೆ. ಹೀಗಾಗಿ ಮತ್ತೆ ಯಾವುದೇ ಸಬ್ಸಿಡಿ ಅವಶ್ಯಕತೆ ಇರುವುದಿಲ್ಲ ಎಂದು ಯೋಚಿಸಿದ್ದೇನೆ. ಉತ್ತಮ ವಾತಾವರಣವನ್ನು ಕಲ್ಪಿಸುವ ದೃಷ್ಟಿಯಿಂದ ಈಗಾಗಲೇ ನಮ್ಮ ಇಲಾಖೆಯು ಈ ಬಗ್ಗೆ ವರದಿ ಸಿದ್ದಪಡಿಸಿದ್ದು, ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಓಡಾಟ ಜಾಸ್ತಿಯಾಗುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರವು 2015ರಲ್ಲಿ ಜಾರಿಗೆ ತಂದ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಯೋಜನೆಗೆ ಈ ನಿರ್ಧಾರವು ಸಹಾಯಕವಾಗುತ್ತದೆ. ವಾಹನಗಳ ಮೇಲಿನ ಪರ್ಮಿಟ್ ತೆಗೆದು ಹಾಕಿರುವುದರಿಂದ ವಾಹನ ತಯಾರಿಕಾ ಸಂಸ್ಥೆಗಳ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಒತ್ತು ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close