About Us Advertise with us Be a Reporter E-Paper

ಅಂಕಣಗಳು

ಸ್ವ ಉದ್ಯೋಗಿಗಳಿಗೆ ಭೂತವಾಗಿ ಕಾಡುತ್ತಿರುವ ಜಿಎಸ್‌ಟಿ

ಕಳಕಳಿ: ಅನಿಲ್

ಆರ್ಥಿಕ ಸುಧಾರಣೆಯಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಒಮ್ಮೆಲೇ ಅನುಷ್ಠಾನಗೊಂಡಿದ್ದು, ಹಲವಾರು ನಿಯಮಗಳು ಮತ್ತು ಒಂದಿಷ್ಟು ಸಾಫ್‌ಟ್ ವೇರ್ ಸಮಸ್ಯೆಗಳು ಬಳಕೆದಾರರನ್ನು, ಉದ್ಯಮಿಗಳನ್ನು, ಅಷ್ಟೇ ಏಕೆ, ಲೆಕ್ಕ ಪರಿಶೋಧಕರು ಮತ್ತು ತೆರಿಗೆ ಅಧಿಕಾರಿಗಳನ್ನೂ ಗೊಂದಲಕ್ಕೆ ಒಳಗಾಗಿಸಿತ್ತು. ಪದೇಪದೆ ಮುಂದೂಡಲ್ಪಟ್ಟ ಫೈಲಿಂಗ್ ಅಂತಿಮ ದಿನಾಂಕಗಳು, ನಂತರ ನೀಡಿದ ವಿನಾಯಿತಿಗಳು…ಹೀಗೆ  ಜಿಎಸ್‌ಟಿ ಪ್ರಸ್ತಾಪಗೊಂಡು ಹತ್ತು ವರ್ಷವಾಗಿದ್ದರೂ ಇವೆಲ್ಲ ನಡೆಯುತ್ತಿದ್ದುದು ನಾವಿನ್ನೂ ಪೂರ್ಣ ಸಜ್ಜಾಗಿರಲಿಲ್ಲ ಎಂಬುದರ ಸೂಚಕ. ಹೀಗಾಗಿ ಅನೇಕ  ನಿಯಮ ಹಾಗು ಫೈಲಿಂಗ್ ವಿಧಾನಗಳನ್ನು  ಹಂತ  ಹಂತವಾಗಿ ಜಾರಿಗೆ ತರಬಹುದಿತ್ತು ಎಂಬ ಅಭಿಪ್ರಾಯವಿದೆ. ಸೇವಾ ತೆರಿಗೆಯೂ ಹೀಗೆಯೇ ವಿಸ್ತರಿಸಿದ್ದನ್ನು ಗಮನಿಸಬಹುದು. ಆದರೂ ದೇಶದ ವ್ಯಾಪಾರ-ವಹಿವಾಟಿಗೆ ಜಿಎಸ್‌ಟಿ ಅನಿವಾರ್ಯ ಹಾಗೂ ಪ್ರಾರಂಭದಲ್ಲಿ ಇದು ಸಹಜ ಎಂಬುದನ್ನು ಒಪ್ಪಿಕೊಂಡರೂ ಜಿಎಸ್‌ಟಿ ಬಹುವಾಗಿ ಕಾಡಿದ್ದು ಸಣ್ಣ ಉದ್ಯಮಗಳನ್ನು ಹಾಗೂ ಸ್ವ ಉದ್ಯೋಗಿಗಳನ್ನು.

ಜಿಎಸ್‌ಟಿ ಅನುಷ್ಠಾನವಾಗಿ ಒಂದು ವರ್ಷ ಕಳೆದಿರುವಾಗ ಉದ್ಯಮ ಅದಕ್ಕೆ ಹೊಂದಿಕೊಂಡಿದೆ ಎನ್ನುವುದಕ್ಕೆ ಏರುತ್ತಿರುವ ಜಿಡಿಪಿ ಸಾಕ್ಷಿ ಎಂಬುದು ಸರಕಾರದ ನಿಲುವಾಗಿರಬಹುದು.  ನಾವಿಲ್ಲಿ ಹೇಳ ಹೊರಟಿರುವುದು ದೊಡ್ಡ ಉದ್ಯಮಗಳ ಕುರಿತಲ್ಲ, ಬದುಕಿಗಾಗಿ ಸಣ್ಣ  ವ್ಯಾಪಾರ ಹಾಗೂ ಸೇವೆಗಳ ಮೂಲಕ ಸ್ವ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಳ್ಳುತ್ತಿರುವವರ ಗೋಳು. ಜಿಎಸ್‌ಟಿ ಸಣ್ಣಪುಟ್ಟ ಉದ್ಯಮಗಳಿಗೆ ಪ್ರಬಲ ಹೊಡೆತವನ್ನೇ ನೀಡಿದೆ. ದೊಡ್ದ ಉದ್ದಿಮೆಗಳಿಗೆ ತಡೆದುಕೊಳ್ಳಬಲ್ಲ ಸಾಮರ್ಥ್ಯವಿದೆ. ಸಣ್ಣ ಉದ್ಯಮಗಳು ಹೆಣಗಾಡುತ್ತಿವೆ. ಕೆಲವು ಕುಂಟುತ್ತಾ ನಡೆಯುತ್ತಿವೆ. ಇದನ್ನೇ ಹೊಂದಿಕೊಳ್ಳುವುದು ಎಂದು ಸರಕಾರ ಭಾವಿಸಿದ್ದಲ್ಲಿ ಏನು ಹೇಳುವುದು?

130 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಬಹಳಷ್ಟು ಜನ ಬಯಸುವ  ಕೆಲಸ ಕೇವಲ 2-3 ಕೋಟಿ ಇದೆ. ಬೃಹತ್ ಉದ್ದಿಮೆಗಳಲ್ಲಿ ಆಟೊಮೇಷನ್‌ನಿಂದಾಗಿ ಬಂಡವಾಳ ಹಾಗೂ ವಹಿವಾಟಿಗೆ ಅನುಗುಣವಾಗಿ ಉದ್ಯೋಗಗಳನ್ನು ಸೃಷ್ಟಿಸಲು ಸರಕಾರ ವಿಫಲವಾಗಿದೆ ಎಂಬ ವಾದವೂ ಇದೆ. ಹೀಗಾಗಿ ಬದುಕಿನ ದಾರಿ ಕಂಡುಕೊಳ್ಳಲು, ಒಂದಿಷ್ಟು ಹೆಚ್ಚಿನ ಆದಾಯ, ಅನುಕೂಲಕರ ಕೆಲಸದ ವೇಳೆ ಇತ್ಯಾದಿ ಗಮನಿಸಿ ಅನೇಕರು ಸ್ವ ಉದ್ಯೋಗಿಗಳಾಗಲು ಬಯಸುತ್ತಾರೆ. ಭಾರತಕ್ಕೆ ಇದು ಅನಿವಾರ್ಯ ಕೂಡ. ಹಾಗಾಗಿಯೇ ಸರಕಾರವೂ ಸೇರಿದಂತೆ ಹಲವಾರು ಸರಕಾರೇತರ ಸಂಸ್ಥೆಗಳು ಸಹ ಈ ಬಗ್ಗೆ  ತರಬೇತಿ  ಕೆಲಸದಲ್ಲಿ ವಿಶೇಷ ಕೌಶಲ ಹೊಂದಿರುವವರಿಗೆ ಸ್ವ ಉದ್ಯೋಗ ಅತಿ ಸೂಕ್ತ.

ಮುಂದೆ ಬೃಹತ್ತಾಗಿ ಬೆಳೆಯುವ ಮಹತ್ವಾಕಾಂಕ್ಷೆಯಿಂದ ವಿದ್ಯಾವಂತ ಯುವಜನರು ಅದರಲ್ಲೂ ತಾಂತ್ರಿಕ ಅರ್ಹತೆ ಪಡೆದಿರುವವರು ಸ್ವ ಉದ್ಯೊಗದಿಂದಲೇ ವೃತ್ತಿಜೀವನ ಪ್ರಾರಂಭಿಸ ಬಯಸುತ್ತಾರೆ. ವಯಸ್ಸು, ಉತ್ಸಾಹ, ಕಲಿಕಾ ಸಾಮರ್ಥ್ಯ ಎಲ್ಲಾ ಇದ್ದರೂ ಇವರಿಗೆ ಕಾಡುವ ಸಮಸ್ಯೆಗಳು ಬಂಡವಾಳ, ನಂಬಿಕಾರ್ಹ ಸಿಬ್ಬಂದಿ ಇತ್ಯಾದಿ. ಮೇಲಿನ ಎಲ್ಲದರೊಂದಿಗೆ ಕಾಡುತ್ತಿರುವ ಹೊಸ ಸಮಸ್ಯೆ ಜಿಎಸ್‌ಟಿ.

 ಜಿಎಸ್‌ಟಿ ನಿಯಮಾವಳಿ ರೂಪಿಸುವಾಗ ಇವರನ್ನು ಗಮನಿಸಲೇ ಇಲ್ಲವೆ? ಅದೃಷ್ಟವಶಾತ್  ಇಲ್ಲ. ವಾರ್ಷಿಕ 20 ಲಕ್ಷ ರು. ವಹಿವಾಟು ನಡೆಸುವವರಿಗೆ, ಅದು ಸರಕು ಮಾರಾಟ ಅಥವಾ ಸೇವೆ ಯಾವುದೇ ಆದರೂ ನೊಂದಣಿಯಿಂದ ಪೂರ್ತಿ ವಿನಾಯಿತಿ ಇದೆ.

20 ಲಕ್ಷ ದಿಂದ 1 ಕೋಟಿ ರುಪಾಯಿವರೆಗೆ ವಹಿವಾಟು ನಡೆಸುವವರಿಗೆ ಶೇ.1 ಕಾಂಪೊಸಿಷನ್ ತೆರಿಗೆಗೆ ಅವಕಾಶವಿದೆ. ಆದರೆ ಇಲ್ಲಿ ಸರಕು ಮಾರಾಟಕ್ಕೆ ಮಾತ್ರ ಅವಕಾಶ. ರಿಪೇರಿ ಸೇರಿದಂತೆ ಇತರ ಯಾವುದೇ ಸೇವೆಗೆ ಅವಕಾಶವಿಲ್ಲ. (ಈ ಲೇಖನ ಕಳಿಸುವ ವೇಳೆಗೆ ಮಿತಿಯನ್ನು 1.5 ಕೋಟಿ  ಏರಿಸಿ ಶೇ.10 ಸೇವಾ ವಹಿವಾಟಿಗೆ ಅವಕಾಶ ಕಲ್ಪಿಸುವ ಪ್ರಸ್ತಾಪವನ್ನು ಜಿಎಸ್‌ಟಿ ಮಂಡಲಿ ಮಾಡಿದೆ.)

ಮೇಲೆ ತಿಳಿಸಿದ ಪ್ರತಿ ವರ್ಗವೂ ತನ್ನದೇ ಆದ ಸಮಸ್ಯೆ ಹೊಂದಿದ್ದರೂ ನಾವಿಲ್ಲಿ ಚರ್ಚಿಸಹೊರಟಿರುವುದು 20 ಲಕ್ಷ ರುಪಾಯಿಗಿಂತ ಕಡಿಮೆ ವಹಿವಾಟು ಹೊಂದಿರುವ ವರ್ಗದ ಬಗ್ಗೆ. ನಿಯಮದ ಅನುಷ್ಠಾನದಲ್ಲೋ, ಅರ್ಥೈಸುವಿಕೆಯಲ್ಲೋ ಆಗುತ್ತಿರುವ ಗೊಂದಲದಿಂದ ವಿನಾಯಿತಿಯ ಲಾಭ ಪಡೆಯುವಲ್ಲಿ ಈ ವರ್ಗದ ಅನೇಕರು ವಿಫಲರಾಗುತ್ತಿದ್ದಾರೆ. ಜಿಎಸ್‌ಟಿ ವಿನಾಯಿತಿಯಿಂದ ಸ್ಪರ್ಧಾತ್ಮಕವಾಗಿರಬೇಕಾದವರು ಸ್ಪರ್ಧೆಯಿಂದಲೇ ಹೊರಗುಳಿಯುವಂತಾಗುತ್ತಿದೆ. ಸಮಸ್ಯೆಗೆ ವಿವಿಧ ಮುಖಗಳಿರುವುದು ಸಹ  ಗೊತ್ತಾಗುತ್ತದೆ.

ಜಿಎಸ್‌ಟಿ ಇಲ್ಲದ ವ್ಯಕ್ತಿಯಿಂದ ಜಿಎಸ್‌ಟಿ ಇರುವ ವ್ಯಕ್ತಿ/ಸಂಸ್ಥೆ ಸರಕು ಅಥವಾ ಸೇವೆ ಪಡೆದಲ್ಲಿ , ಅದಕ್ಕೆ ಪಡೆದಾತ ತೆರಿಗೆ ಪಾವತಿಸಬೇಕು. ಇದನ್ನು ರಿವರ್ಸ್ ಚಾರ್ಜ್ ಎಂದು ಕರೆಯುತ್ತಾರೆ. (ಇದನ್ನು ಸೆ. 30, 2018ರವರೆಗೆ ಮುಂದೂ ಲಾಗಿದ್ದು, ಈಗ ಇನ್ನೂ ಒಂದು ವರ್ಷ ಮುಂದೂಡಲು ಪ್ರಸ್ತಾಪಿಸಲಾಗಿದೆ.)  ಆದರೆ ಈ ಗೊಡವೆಯೇ ಬೇಡವೆಂದು ಎಲ್ಲರೂ ಜಿಎಸ್‌ಟಿ ನೋಂದಾಯಿತರಿಂದಲೇ ಸರಕು-ಸೇವೆ ಪಡೆಯಲು ಬಯಸುತ್ತಾರೆ. ಜಿಎಸ್‌ಟಿ ನೋಂದಣಿ ಅವಶ್ಯವಿಲ್ಲದ ಸಂಸ್ಥೆಗಳೂ ಕೂಡ (ಉದಾಹರಣೆಗೆ  ಸಂಸ್ಥೆಗಳು, ಆಸ್ಪತ್ರೆ, ಸರಕಾರಿ ಇಲಾಖೆ ಇತ್ಯಾದಿ) ಮುಂದೆಂದೋ ಬರಬಹುದಾದ ಆಡಿಟ್ ತಕರಾರಿನ ಭಯದಿಂದ ಜಿಎಸ್‌ಟಿ ನೋಂದಾಯಿತರಿಗೇ ಪ್ರಾಮುಖ್ಯ ನೀಡುತ್ತವೆ. ಹಾಗಾಗಿ ಇನ್ನು ಸ್ಪರ್ಧೆ ಉಳಿಯುವುದು ಜಿಎಸ್‌ಟಿ ಹೊಂದಿರುವರರ ಮಧ್ಯೆಯೇ.

ಹಲವಾರು ಸ್ವ ಉದ್ಯೋಗಿಗಳು ಸರಕು-ಸೇವೆಗಳನ್ನೊಳಗೊಂಡ ಕಾರ್ಯಗಳನ್ನು ನಿರ್ವಹಿಸುತ್ತಾರೆ. ವಿದ್ಯುತ್, ಪ್ಲಂಬಿಂಗ್, ಸಿವಿಲ್, ರಿಪೇರಿ, ಪೀಠೋಪಕರಣ, ಕಂಪ್ಯೂಟರ್, ಸೋಲಾರ್ ಉಪಕರಣ ನಿರ್ವಹಣೆ ಇತ್ಯಾದಿ. ಕೌಶಲ ತರಬೇತಿ ಪಡೆದ ಟೆಕ್ನಿಷಿಯನ್‌ಗಳು ಇವನ್ನು ಮಾಡುತ್ತಾರೆ. ವಾಸ್ತವವಾಗಿ ಅಗತ್ಯ ಬಿದ್ದಾಗ ಇಂಥಾ ಸೇವೆಗಳು ಸಿಗುವುದೇ  ಎಂಬುದು ಅನೇಕರ ಅನುಭವ. ಇನ್ನು ಜಿಎಸ್‌ಟಿ ಇದ್ದವರೇ ಬೇಕೆಂದರೆ ಇನ್ನೂ ಕಷ್ಟ. ಸೂಕ್ತ ಸಮಯದಲ್ಲಿ ಸಿಗುವ ಸೇವೆಯಿಂದ ಉಪಕರಣಗಳ ಜೀವಿತಾವಧಿ ಹೆಚ್ಚುತ್ತದೆ. ಎಲೆಕ್ಟ್ರಾನಿಕ್ ವ್ಟ್ೇನಿಂದಾಗುವ ಪರಿಸರ ಹಾನಿ ಕಡಿಮೆಯಾಗುತ್ತದೆ. ಪ್ರತಿದಿನ ರು.5000 ಕ್ಕೆ ಒಳಪಟ್ಟು ಇಂಥಾ ಸೇವೆಯನ್ನು ಪಡೆಯಲು ಅವಕಾಶವಿದ್ದರೂ ಸರಕು ಮತ್ತು ಸರ್ವಿಸ್ ಚಾರ್ಜ್ ಸೇರಿದಾಗ ಈ ಮಿತಿ ಸಾಕಾಗದು.ಇದಲ್ಲದೇ ರಿಸ್ಕ್ ಯಾಕೆ ಎಂಬ ಗ್ರಾಹಕರ ಮನೋಭಾವ ಬೇರೆ.

ಕೇವಲ ಗೃಹ ಬಳಕೆದಾರರಿಗಷ್ಟೇ ಸೀಮಿತಗೊಳಿಸಿ ಸ್ವ ಉದ್ಯೋಗ  ಉತ್ತಮ ನಡೆಯಲ್ಲ. ಸೇವೆಗೆ ಹೆಚ್ಚಿನ ಮೌಲ್ಯ ಸಿಗುವುದು ಸಾಂಸ್ಥಿಕ ಗ್ರಾಹಕರನ್ನು ಒಳಗೊಂಡಾಗ ಮಾತ್ರ. ಇದರಿಂದ ಸ್ವ-ಉದ್ಯಮವನ್ನು ಮುಂದಿನ ಹಂತಕ್ಕೆ ಬೆಳೆಸಬಹುದು. ಮೇಲಿನ ಅನೇಕ ಸಂದರ್ಭಗಳಲ್ಲಿ ಜಿಎಸ್‌ಟಿ ನೊಂದಾಯಿತ ಪರಿಚಯಸ್ಥ ವ್ಯಾಪಾರಿಗಳಿಂದ ಬಿಲ್ ಪಡೆದು ಗ್ರಾಹಕರಿಗೆ ತಲುಪಿಸುವ ಪದ್ಧತಿಯೂ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದೆ. ಇದೊಂದು ಸಾಂದರ್ಭಿಕ ಪರಿಹಾರವಾದರೂ, ಸ್ವ ಉದ್ಯೋಗದ ಬೆಳವಣಿಗೆಗೆ ಏನೇನೂ ಸೂಕ್ತವಲ್ಲ. ಅನೇಕ ವೇಳೆ ಗ್ರಾಹಕ ಚೆಕ್ ಮೂಲಕ ವ್ಯಾಪಾರಿಗೆ ನೇರವಾಗಿ ಪಾವತಿಸಿದಲ್ಲಿ ತನ್ನ ಪಾಲಿನ ಹಣ ವಾಪಸ್  ಸೇವೆ ನೀಡಿದವನು ಒಂದಿಷ್ಟು ಶ್ರಮ ಪಡಬೇಕಾದ ಪರಿಸ್ಥಿತಿಯಿದೆ.

ಇನ್ನು ಉದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಹಾಗೂ ಗ್ರಾಹಕರನ್ನು ಆಕರ್ಷಿಸಲು ಸ್ವ ಉದ್ಯೋಗಿಗಳು ವ್ಯಾಪಾರಕ್ಕೆ ಸಂಸ್ಥೆಯ ಹೆಸರು (್ಛಜ್ಟಿಞ ್ಞಞಛಿ) ಇಡಲು ಬಯಸುತ್ತಾರೆ. ಇದು ಸಂಸ್ಥೆಯ ಕಾರ್ಯವ್ಯಾಪ್ತಿಯ ಸ್ಥೂಲ ಪರಿಚಯ ಮಾಡುವಂತಿರುತ್ತದೆ. ಉದಾಹರಣೆಗೆ, ಶ್ರೀ ಗಣೇಶ ಎಲೆಕ್ಟ್ರಾನಿಕ್‌ಸ್, ಆಟೋ ಮೆಕಾನಿಕ್‌ಸ್ ಇತ್ಯಾದಿ. ವಿಸಿಟಿಂಗ್ ಕಾರ್ಡ್, ಲೆಟರ್ ಹೆಡ್ ಬಳಕೆ, ಇವು ಸ್ವ ಉದ್ಯೊಗಿಗಳ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿ. ವ್ಯಾಪಾರಿ ಸಂಸ್ಥೆಯ ಹೆಸರಿನಲ್ಲಿ  ್ಞಞಛಿ) ಬ್ಯಾಂಕ್ ನಲ್ಲಿ ಖಾತೆ ತೆಗೆಯಲು ಬ್ಯಾಂಕ್‌ಗಳು ಮತ್ತೆ ಜಿಎಸ್‌ಟಿ ನೊಂದಣಿ ಸಂಖ್ಯೆ ಕೇಳುತ್ತವೆ. ಸುರಕ್ಷೆ ದೃಷ್ಟಿಯಿಂದ ಬ್ಯಾಂಕ್‌ಗಳ ಈ ನಿಲುವು ಸಮರ್ಥನೀಯವೇ. ಆದರೆ ಖಾತೆ ಇಲ್ಲದೆ ಪಡೆದ ಚೆಕ್ ನಗದೀಕರಿಸುವುದಾದರೂ ಹೇಗೆ?  ಅಕೌಂಟಿಂಗ್ ದೃಷ್ಟಿಯಿಂದ ಎಲ್ಲರೂ ವ್ಯಾಪಾರಿ ಸಂಸ್ಥೆಯ ಹೆಸರಿನ ಬಿಲ್ ಪಡೆದು ಚೆಕ್ ಅಥವಾ ಆನ್‌ಲೈನ್ ಮೂಲಕ ಪಾವತಿ ಮಾಡಲು ಬಯಸುತ್ತಾರೆ. ಸರಕಾರವೂ ಇದನ್ನೇ ಪ್ರೋತ್ಸಾಹಿಸುತ್ತಿದೆ.

ನೌಕರಿಯಲ್ಲಿರುವವರನ್ನು ಸಮಾಜ  ನೋಡುವ ದೃಷ್ಟಿ, ಸ್ವ ಉದ್ಯೋಗದಲ್ಲಿರುವವರನ್ನು ನೋಡುವುದಕ್ಕಿಂತ  ಜತೆಗೆ, ನೆಲೆ ನಿಲ್ಲಲು ಬೇಕಾಗುವ ಸಮಯ ಹಾಗೂ ಅನಿಶ್ಚಿತತೆಯ ಪರಿಣಾಮವಾಗಿ ಖಾಸಗಿ ಬದುಕು ರೂಪಿಸಿಕೊಳ್ಳಲು ಸಾಕಷ್ಟು ಸಮಸ್ಯೆಗಳಿರುತ್ತವೆ. ಇದರಿಂದಾಗಿ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರುವ ಅನೇಕರಿಗೆ ಸ್ವ ಉದ್ಯೋಗ ಬೇಕಿಲ್ಲ. ಇನ್ನು ಸಾಧಾರಣ ವಿದ್ಯಾಭ್ಯಾಸ ಹೊಂದಿರುವವರಿಗೆ ಕೂಡಾ ಸ್ವ ಉದ್ಯೋಗ ಆದ್ಯತೆಯ ಕ್ಷೇತ್ರವಾಗದೆ ಅನಿವಾರ್ಯ ಎಂಬಂತಾಗಿದೆ. ಇದು  ಅಸಂಘಟಿತ ವಲಯವಾಗಿದ್ದು ಪ್ರತಿಭಟಿಸುವ, ಕಾನೂನಿನ ಮೊರೆ ಹೋಗುವ, ಲಾಬಿ ನಡೆಸುವ ಸಾಮರ್ಥ್ಯ ಇವರಲ್ಲಿಲ್ಲ. ಆದ್ದರಿಂದ ಸ್ವ ಉದ್ಯೋಗ ಪ್ರೋತ್ಸಾಹಿಸುವ ಸರಕಾರೇತರ ಸಂಸ್ಥೆಗಳು  ಪರಿಹಾರ ತರಲು ಒಂದಿಷ್ಟು ಪ್ರಯತ್ನಿಸಬಹುದು. ಸ್ವ ಉದ್ಯೋಗಿಗಳ ಸಂಖ್ಯೆ ಕಡಿಮೆಯಾದಲ್ಲಿ ಹಲವಾರು ಸೇವೆ ಪಡೆಯಲು ಕಷ್ಟವಾಗಬಹುದು ಅಥವಾ ದೊಡ್ಡ ಕಂಪನಿಗಳು ಇದರ ಲಾಭ ಪಡೆದು ಹೆಚ್ಚಿನ ಲಾಭ ಗಳಿಸಬಹುದು. ನಿರುದ್ಯೋಗ ಸಮಸ್ಯೆ ಇನ್ನೂ ಹೆಚ್ಚಬಹುದು ಎಂಬ ದೀರ್ಘಕಾಲೀನ ಪರಿಣಾಮಗಳ ಕುರಿತು ಸಹ ಸರಕಾರ ಯೋಚಿಸಬೇಕು.

ಜಿಎಸ್‌ಟಿ ಅಳವಡಿಸುವ ಮೊದಲು ಈ ಸಮಸ್ಯೆಗಳು ಇರಲಿಲ್ಲವೆ? ಆಗಲೂ ಇದ್ದವು. ಆದರೆ ರಿವರ್ಸ್ ಚಾರ್ಜ್ ನ ಪ್ರಸ್ತಾಪ ಇರಲಿಲ್ಲ. ಪ್ರತಿದಿನ ರು.5000 ವೆಚ್ಚದ  ಇರಲಿಲ್ಲ. ಮಾರಾಟದ ವಹಿವಾಟು ಮಿತಿ ವಾರ್ಷಿಕ 5 ಲಕ್ಷ ರು. ಇತ್ತು. ಸೇವಾ ವಹಿವಾಟು ಮಿತಿ 10 ಲಕ್ಷ ರು. ಇತ್ತು. ಹೀಗಾಗಿ ಬಹಳಷ್ಟು ಸೇವಾ ಪೂರೈಕೆದಾರರು ಸೇವಾತೆರಿಗೆ ವಿನಾಯಿತಿ ವ್ಯಾಪ್ತಿಗೆ ಬರುತ್ತಿದ್ದರು. ಗ್ರಾಹಕರಿಗೂ ಜಿಎಸ್‌ಟಿ ಬಗ್ಗೆ ಈಗ ಇರುವಂಥ ಭಯ ಇರಲಿಲ್ಲ. ಜಿಎಸ್‌ಟಿ ನಿಯಮದಲ್ಲಿರುವ ಪೂರ್ವಾನ್ವಯವಾಗುವ ತೆರಿಗೆ, ಬಡ್ಡಿ, ದಂಡ ಇತ್ಯಾದಿಗಳ ಭಯ ಈಗ ಪ್ರತಿಯೊಬ್ಬ ವ್ಯಾಪಾರಿಯಲ್ಲೂ ಇದೆ. ಮೊದಲು ಬ್ಯಾಂಕ್‌ಗಳೂ ಕೂಡಾ ಖಾತೆ ತೆರೆಯುವಲ್ಲಿ ಒಂದಿಷ್ಟು  ಧಾರಾಳತನ ತೋರುತಿದ್ದವು.

ಸಣ್ಣ ವ್ಯಾಪಾರಿಗಳು, ಉದ್ದಿಮೆದಾರರ ಹಲವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೆಳಗಿನ ಕ್ರಮಗಳು ಸಹಕಾರಿಯಾಗಬಲ್ಲವು: ಸರಕಾರದ  ಸ್ಪಷ್ಟ ಮತ್ತು ಸೂಕ್ತ ನಿರ್ದೇಶನ, ರಿವರ್ಸ್ ಚಾರ್ಜ್ ವಿಧಾನವನ್ನು ಸಾಧ್ಯವಾದಷ್ಟು ವರ್ಷಗಳವರೆಗೆ ಮುಂದೂ ಡುವುದು ಮತ್ತು ಈ ಬಗ್ಗೆ ಮರು ಚಿಂತನೆ ನಡೆಸುವುದು. ನೊಂದಾಯಿತರಲ್ಲದ ವ್ಯಕ್ತಿಯಿಂದ ಪಡೆಯುವ ಸರಕು-ಸೇವೆ ಮೌಲ್ಯ ಮಿತಿಯನ್ನು ದಿನದ ಬದಲು ತಿಂಗಳು ಹಾಗೂ ವಾರ್ಷಿಕ ಲೆಕ್ಕಾಚಾರದ ಮೇಲೆ ನಿಗದಿ ಪಡಿಸುವುದು.

ಜಿಎಸ್‌ಟಿ ಪೋರ್ಟಲ್ ನಲ್ಲಿ ಸ್ವ ಉದ್ಯೋಗಿಗಳಿಗೆ  ಬಾರಿ(ಟ್ಞಛಿ ಠಿಜಿಞಛಿ) ನೋಂದಣಿಗೆ ಅವಕಾಶ ಕಲ್ಪಿಸುವುದು. ಇದು ಐಚ್ಛಿಕವಾಗಿದ್ದು ಕಡ್ಡಾಯವಾಗಬಾರದು. ಟ್ರಾನ್ಸ್

ಪೋರ್ಟ್‌ಗಳಿಗೆ ಪರ್ಯಾಯ ನೋಂದಣಿಗೆ ಈಗಾಗಲೇ ಅವಕಾಶವಿದೆ. ಮೇಲಿನ ವಿಶೇಷ ನೋಂದಣಿ ಆಧಾರದ ಮೆಲೆ, ಸಂಸ್ಥೆ ಹೆಸರಿನಲ್ಲಿ ಖಾತೆ ತೆರೆಯಲು ದಾಖಲೆಯಾಗಿ ಪರಿಗಣಿಸಲು ಬ್ಯಾಂಕ್‌ಗಳಿಗೆ  ನಿರ್ದೇಶನ ನೀಡಬಹುದು.

ಉದ್ಯೊಗ ಸೃಷ್ಟಿಗಾಗಿ ಹಲವಾರು ಸರ್ಕಸ್ ಮಾಡುವ ಸರಕಾರಗಳು ಸ್ವ ಉದ್ಯೋಗಿಗಳ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು. ಅಷ್ಟೇ ಅಲ್ಲದೆ ಸರಕಾರದ ಇಲಾಖೆಗಳಲ್ಲಿ ಸ್ವ ಉದ್ಯೋಗಿಗಳನ್ನು ಪ್ರೋತ್ಸಾಹಿಸಲು ಆದೇಶ ಹೊರಡಿಸಬೇಕು. ಸಣ್ಣ  ಪೂರೈಕೆ, ಸೇವೆಗಳನ್ನು ಇವರಿಗೆ ಮೀಸಲಿಡುವಂತೆಯೂ ಪ್ರಸ್ತಾಪಿಸಬಹುದು. ಸ್ವ ಉದ್ಯೋಗಿಗಳು ಕೆಲಸಗಾರರ ಅಲಭ್ಯತೆ, ಅನಿಶ್ಚಿತತೆಯಿಂದ ನರಳುತ್ತಿರುವ ಸಣ್ಣ-ಮಧ್ಯಮ ಕೈಗಾರಿಕೆಗಳಿಗೂ ಬೆಂಬಲವಾಗಿ ಕೆಲಸ ಮಾಡಬಲ್ಲರು. ಹೆಚ್ಚು ತಡಮಾಡದೆ ಈ ಬಗ್ಗೆ ಚಿಂತನೆ ಪ್ರಾರಂಭವಾಗಲಿ. ಮೊದಲು ದೊಡ್ಡ ಪೆಟ್ಟು  ಕೊಟ್ಟು , ಅದನ್ನು ತಾಳಿಕೊಳ್ಳಲು ಆಗದೇ ಹೋದಾಗ ಹೊಡೆತ  ಕಡಿಮೆ ಮಾಡುವುದು ವಿವೇಚನಾಯುಕ್ತ ನಡೆಯೆ?

Tags

Related Articles

Leave a Reply

Your email address will not be published. Required fields are marked *

Language
Close