Sri Ganesh Tel

ಗುಜರಾತ್, ಹಿ.ಪ್ರ ಚುನಾವಣಾ ದಿನಾಂಕ ಇಂದು ಘೋಷಣೆ

Posted In : ದೇಶ

ದೆಹಲಿ: ಕೇಂದ್ರ ಚುನಾವಣಾ ಆಯೋಗ ಇಂದು ಎರಡು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕವನ್ನು ಪ್ರಕಟಿಸಲಿದೆ.
ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣೆ ದಿನಾಂಕ ಘೋಷನೆ ಕುರಿತಂತೆ, ಆಯೋಗ ಸಂಜೆ ನಾಲ್ಕು ಗಂಟೆಗೆ ಸುದ್ದಿಗೋಷ್ಠಿ ಕರೆಯಲಿದೆ.

ಇದೇ ಡಿಸೆಂಬರ್‌ನಲ್ಲಿ ಎರಡೂ ರಾಜ್ಯಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಗಳಿವೆ. ಹಿನ್ನಲೆಯಲ್ಲಿ ಈಗಾಗಲೇ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಒಂದು ಸುತ್ತಿನ ಗುಜರಾತ್ ಪ್ರವಾಸ ಮಾಡಿದ್ದಾರೆ. ಗುಜರಾತ್‌ನಲ್ಲಿ 182 ಅಸೆಂಬ್ಲಿ ಕ್ಷೇತ್ರಗಳಿದ್ದು, ಹಿಮಾಚಲ ಪ್ರದೇಶ 68 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ.

ಮೂಲಗಳ ಪ್ರಕಾರ, ಗುಜರಾತ್ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ. 182 ಸದನ ಬಲದ ಹಾಲಿ ಗುಜರಾತ್ ವಿಧಾನಸಭೆಯ ಅವಧಿ 2018ರ ಜನವರಿ 22ರಂದು ನಡೆಯಲಿದೆ. ಕಳೆದ ಬಾರಿ 2012ರಲ್ಲಿ ಎರಡು ಹಂತಗಳಲ್ಲಿ ಡಿ.13 ಮತ್ತು ಡಿ.17ರಂದು ಚುನಾವಣೆ ನಡೆದಿತ್ತು. ಹಿಮಾಚಲ ಪ್ರದೇಶದ ಹಾಲಿ ವಿಧಾನಸಭೆಯ ಅವಧಿ 2018ರ ಜನವರಿ 7ರಂದು ಮುಗಿಯಲಿದೆ.

Leave a Reply

Your email address will not be published. Required fields are marked *

16 + eighteen =

Saturday, 16.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶನಿವಾರ, ನಿತ್ಯ ನಕ್ಷತ್ರ-ಅನು ರಾಧಾ, ಯೋಗ-ಧೃತಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

 

Saturday, 16.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶನಿವಾರ, ನಿತ್ಯ ನಕ್ಷತ್ರ-ಅನು ರಾಧಾ, ಯೋಗ-ಧೃತಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

Back To Top