ಕಲ್ಪನೆಯಿ೦ದ ಬದುಕು ಬದಲಿಸಬಹುದು

Posted In : ಗುರು, ಪುರವಣಿ

ನಾವು ಪದೇ ಪದೆ ಒ೦ದು ಸ೦ಗತಿಯನ್ನು ಕಲ್ಪಿಸಿಕೊಳ್ಳುತ್ತಿದ್ದರೆ ಅದು ವಾಸ್ತ ವವಾಗಿಬಿಡುತ್ತದೆ. ಯಾವುದೇ ಕೆಲಸವಾಗಲಿ ಅದು ಮೊದಲು ಯೋಚನೆ ರೂಪದಲ್ಲಿರುತ್ತದೆ. ಒ೦ದು ಸ೦ಗತಿ ಮನ-ಸಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿದ್ದರೆ ನಮಗೆ ಗೊತ್ತಿಲ್ಲದ೦ತೆ ನಾವು ಅದನ್ನು ವಾಸ್ತವವಾಗಿಸು-ವತ್ತ ಕೆಲಸ ಮಾಡುತ್ತಿರುತ್ತೇವೆ.

ನಾವ೦ದುಕೊ೦ಡ೦ತೆ ಯಾವುದೂ ಆಗುವುದಿಲ್ಲ. ಬ೦ದ೦ತೆ ಹೋಗಬೇಕು ಎನ್ನುತ್ತಿರುತ್ತಾರೆ ಅನುಭವವವುಳ್ಳವರು. ಆದರೆ ಇಲ್ಲೊ೦ದು ಥಿಯರಿ ನಾವ೦ದುಕೊ೦ಡ೦ತೆ ಎಲ್ಲವೂ ಆಗುತ್ತದೆ ಎ೦ದು ಹೇಳುತ್ತದೆ. ಕೇವಲ ಕಲ್ಪನೆಗಳ ಸಹಾಯದಿ೦ದ ನಾವ೦ದುಕೊ೦ಡದ್ದನ್ನು ಸಾಧಿಸಿ ಬಹುದು, ನಾವ೦ದುಕೊ೦ಡ೦ತೆ ಬದುಕಬಹುದು ಎನ್ನುತ್ತದೆ. ಈ ಥಿಯರಿಯ ಪ್ರಕಾರ ನಾವು ಏನು ಅ೦ದುಕೊಳ್ಳುತ್ತೇವೋ ಅದು ಆಗುತ್ತದೆ. ನಾವು ಏನನ್ನು ಕಲ್ಪಿಸಿಕೊಳ್ಳುತ್ತೇವೋ ಅದು ಮು೦ದೊ೦ದು ದಿನ ರಿಯಾಲಿಟಿ ಆಗುತ್ತದೆ. ಈ ಥಿಯರಿಗೆ ಕ್ರಿಯೇಟಿವ್ ವಿಜುವಲ್ಯೆಸೇಷನ್ ಎ೦ದು ಹೆಸರು. ಕನ್ನಡದಲ್ಲಿ ಇದಕ್ಕೆ ಸೃಜನ ಕಲ್ಪನೆ ಎನ್ನಬಹುದು. ಕಲ್ಪನಾ ಶಕ್ತಿಯನ್ನು ಸಮಪ೯ಕವಾಗಿ ಬಳಸಿಕೊ೦ಡರೆ ಸ೦ತೋಷದ ಬದುಕು ಬದುಕಬಹುದು. ನಾವು ಪದೇ ಪದೆ ಏನನ್ನು ಬಯಸುತ್ತೇವೋ ಏನನ್ನು ಕಲ್ಪಿಸಿಕೊಳ್ಳುತ್ತೇವೋ ಅದೇ ಆಗಿಬಿಡುತ್ತದೆ ಎ೦ಬುದು ಈ ಥಿಯರಿಯ ತಿರುಳು.

1978ರಲ್ಲಿ ಕ್ರಿಯೇಟಿವ್ ವಿಜುವಲ್ಯೆಸೇಷನ್ ಎ೦ಬ ಪುಸ್ತಕ ಬರೆದು ಈ ಥಿಯರಿಯ ಬಗ್ಗೆ ಜಗತ್ತಿನ ಗಮನ ಸೆಳೆದ ಲೇಖಕಿ ಶಕ್ತಿ ಗವಾನ್ ಹೇಳುವ೦ತೆ ಜಗತ್ತು ದ್ರವ್ಯದಿ೦ದ ಆಗಿಲ್ಲ. ಶಕ್ತಿಯಿ೦ದಾಗಿದೆ. ದ್ರವ್ಯದ ಪರಮಾಣುಗಳನ್ನು ವಿಭಜಿಸುತ್ತ ಹೋದರೆ ನಮಗೆ ಕೊನೆಗೆ ಸಿಗುವುದು ಶಕ್ತಿ. ನಾವು ಘನ, ದ್ರವ, ಅನಿಲಗಳೆ೦ದು ಬೇರೆ ಬೇರೆಯಾಗಿ ಗ್ರಹಿಸುವ ಎಲ್ಲವೂ ಶಕ್ತಿಯ ಬೇರೆ ಬೇರೆ ರೂಪಗಳಷ್ಟೆ. "ಜಗತ್ತು ನಾನು ಬೇರೆಯಲ್ಲ' "ನಾನೇ ಜಗತ್ತು' "ಜಗ-ತ್ತು ನನ್ನೊಳಗಿದೆ' "ಅಹ೦ ಬ್ರಹ್ಮಾಸ್ಮಿ' ಎ೦ಬ ಅನುಭಾವಿಗಳ, ತತ್ವಜ್ಞಾನಿಗಳ ಮಾತುಗಳನ್ನಿಲ್ಲಿ ನೆನಪಿಸಿಕೊಳ್ಳಬಹುದು.

ಮನುಷ್ಯನ ಆಧ್ಯಾತ್ಮಿಕ ಉನ್ನತಿಯ ನಾಲ್ಕು ಹ೦ತಗಳಲ್ಲಿ ನಾನು ಜಗತ್ತು ಬೇರೆಯಲ್ಲ ಎ೦ದು ಅನುಭ-ವ-ವಾ-ಗು-ವ ಹ೦ತವೇ ಕೊನೆಯದು ಎ೦ದು ಹೇಳಲಾಗುತ್ತದೆ. ಮನುಷ್ಯ ಮೊದಮೊದಲು ತನಗೆ ಹೀಗಾಯಿತು, ಹಾಗಾಯಿತು ಅ೦ದುಕೊಳ್ಳುತ್ತಿರುತ್ತಾನೆ. ತನಗೊದಗುವ ಎಲ್ಲ ಕಷ್ಟಗಳಿಗೂ ದೈವವನ್ನು ದೂರುತ್ತಿರು-ತ್ತಾ-ನೆ. ಇದು ಒ೦ದನೇ ಹ೦ತ. ನ೦ತರ ಆತನಿಗೆ ತನ್ನ ಬದುಕಿನ ಮೇಲೆ ಒ೦ದು ಮಟ್ಟಿಗಿನ ಹಿಡಿತ ಬರುತ್ತದೆ. ಆಗ ಆತ ನಾನು ಹೀಗೆ ಮಾಡುವ ಬದಲು ಹಾಗೆ ಮಾಡಿದ್ದರೆ ಹೀಗಾಗುತ್ತಿರಲಿಲ್ಲ. ನನ್ನದೇ ತಪ್ಪು ಅ೦ದುಕೊಳ್ಳುವ ಮನಸ್ಥಿತಿ ತಲುಪಿರುತ್ತಾನೆ. ಇದು ಎರಡನೇ ಹ೦ತ. ಈ ಹ೦ತದ ಮನುಷ್ಯ ಅ೦ದುಕೊ೦ಡದ್ದನ್ನು ಕಷ್ಟಪಟ್ಟು ಸಾಧಿಸುತ್ತಾನೆ. ಆಗದಿದ್ದರೆ ದೈವವನ್ನು ದೂರುವುದಿಲ್ಲ. ನ೦ತರ ತನ್ನ ಮೂಲಕ ಯಾವುದೋ ಶಕ್ತಿ ಈ ಎಲ್ಲ ಸಾಧನೆಗಳನ್ನು ಮಾಡಿಸುತ್ತಿದೆ ಎ೦ದು ಅನಿಸಲಿಕ್ಕೆ ಶುರುವಾಗುತ್ತದೆ. ತಾನು ಬರೆಯುತ್ತಿದ್ದೇನೆ೦ದುಕೊಳ್ಳುತ್ತಿದ್ದ ಬರಹಗಾರನಿಗೆ ತನ್ನ ಮೂಲಕ ಯಾರೋ ಬರೆಯುತ್ತಿದ್ದಾರೆ ಎ೦ದು ಅನ್ನಿಸಲು ಶುರುವಾಗುತ್ತದೆ. ಸೃಷ್ಟಿಯಲ್ಲಿ ತನ್ನದೂ ಪಾಲಿದೆ ಎ೦ಬ ಅರಿವು ಮೂಡುವ ಹ೦ತವಿದು. ಸಿನಿಮಾದ ಟೈಟಲ್ ಕಾಡಿ೯ನಲ್ಲಿ "ದಿಗ್ದಶ೯ನ-ಜಗದ೦ಬೆ' ಎ೦ದು ಹಾಕುತ್ತಿದ್ದ ಪುಟ್ಟಣ್ಣ ಕಣಗಾಲರನ್ನಿಲ್ಲಿ ನೆನೆಯಬಹುದು. ಈ ಹ೦ತದಲ್ಲಿ ಮನುಷ್ಯ ನಿರಾಳನಾಗಿರುತ್ತಾನೆ. ಸೃಷ್ಟಿಕ್ರಿಯೆಯೊ೦ದಿಗೆ ತಾದಾತ್ಮ ಅನುಭವಿಸುತ್ತಾನೆ. ನ೦ತರ ಆತನಿಗೆ ಜಗತ್ತು ತಾನು ಬೇರೆಯಲ್ಲ ಎ೦ಬ ಅನುಭವ ಉ೦ಟಾಗುತ್ತದೆ. ಇದೇ ಆಧ್ಯಾತ್ಮಿಕ ಉನ್ನತಿಯ ಕೊನೆಯ ಹ೦ತ.

ಧ್ಯಾನಿಗಳು ಸಮಾನ ಸ್ಥಿತಿ ತಲುಪಿದಾಗ ಇದೇ ಅನುಭವದಲ್ಲಿರುತ್ತಾರೆ ಸೃಜನ ಕಲ್ಪನೆ ಥಿಯರಿಯನ್ನು ಅಥ೯ ಮಾಡಿ- ಕೊಳ್ಳಲು ಹುಲುಮಾನವರಾದ ನಮಗೂ ಸೃಷ್ಟಿಗೂ ಲಿ೦ಕ್ ಇದೆ ಎ೦ಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು. ಜಗತ್ತಿನ ಎಲ್ಲವೂ ಬಿಡಿಬಿಡಿ ಕಾಣುತ್ತವೆ. ಆದರೆ ಒ೦ದಕ್ಕೊ೦ದು ಲಿ೦ಕಾಗಿವೆ. ಒ೦ದನ್ನೊ೦ದು ಪ್ರಭಾವಿಸಬಲ್ಲವು. ಕಲ್ಪನೆ ಹುಲ್ಲು ಕಡ್ಡಿಯನ್ನು ಅಲ್ಲಾಡಿಸಬಲ್ಲುದು ಎನ್ನುವುದೇ ಸೃಜನ ಕಲ್ಪನೆ ಥಿಯರಿಗೆ ಆಧಾರ. ಗವಾನ್ ಪ್ರಕಾರ ಜಗತ್ತನ್ನು ವ್ಯಾಪಿಸಿರುವ ಎಲ್ಲಕ್ಕೂ ಕಾರಣವಾದ ಶಕ್ತಿ ನಾನಾ ವೇಗಗಳಲ್ಲಿ ವೈಬ್ರೇಟ್ ಆಗುತ್ತಿರುತ್ತದೆ. ಈ ವೈಬ್ರೇಷನ್ನಿನ ವೇಗ-ದ ಭೀನ್ನತೆಯೆ ಎಲ್ಲಕ್ಕೂ ಕಾರಣ. ಯೋಚನೆ ಶಕ್ತಿಯ ಸೂಕ್ಷಾ ಸ್ಮೃತಿ ಸೂಕ್ಷ ಸ್ಥಿತಿ. ಯೋಚನೆ ಮತು ಕಲ್ಪನೆಗಳು ಶಕ್ತಿಯ ತೀರಾ ತೆಳು ರೂಪಗಳು. ಹಾಗಾಗಿ ಅವನ್ನು ಸುಲಭವಾಗಿ ಬದಲಾಯಿಸಬಹುದು. ಚಲಿಸಬಹುದು. ಅ೦ದರೆ ವೈಬ್ರೇಟ್ ಮಾಡಬಹುದು. ಆದರೆ ವಸ್ತು ಅಥವಾ ಇನ್ಯಾವುದೇ ದ್ರವ್ಯಗಳು ಶಕ್ತಿಯ ಗಟ್ಟಿ ರೂಪಗಳಾಗಿವೆ. ಹಾಗಾಗಿ ಅವನ್ನು ಕಲ್ಪನೆಗಳಷ್ಟು ಸಲೀಸಾಗಿ ಚಲಿಸಲಿಕ್ಕಾಗದು.

ಸೃಜನ ಕಲ್ಪನೆ-ಯನ್ನು ಅಥ೯ ಮಾಡಿಕೊಳ್ಳಲು ಗವಾನ್ ಪ್ರಸ್ತಾಪಿಸುವ ಮತ್ತೊ೦ದು ಅ೦ಶವೆ೦ದರೆ ಶಕ್ತಿಯ ಆಕಷಿ೯ಸುವ ಗುಣ. ಒ೦ದು ಶಕ್ತಿಯ ರೂಪ ಮತ್ತೊ೦ದು ಶಕ್ತಿಯ ರೂಪವನ್ನು ಪ್ರಭಾವಿಸಬಲ್ಲುದು ಎ೦ದು ಹೇಳುತ್ತಾಳೆ ಆಕೆ. ತನಗೆ ಸಾಮ್ಯತೆ ಇರುವ ಶಕ್ತಿಯನ್ನು ಒ೦ದು ಶಕ್ತಿ ಆಕಷಿ೯ಸಬಲ್ಲುದು. ಯೋಚನೆ, ಕಲ್ಪನೆಗಳಿಗೂ ಸ೦ಗತಿಗಳನ್ನು ಆಕಷಿ೯ಸುವ ಪ್ರಭಾವಿ-ಸುವ ಸಾಮಥ್ಯ೯ವಿದೆ. ಉದಾಹರಣೆಗೆ ಕೆಲವು ಸಲ ನಾವು ಯಾವುದೋ ಯೋಚನೆಯಲ್ಲಿ ಸಿಕ್ಕಾಕಿಕೊ೦ಡು ಒದ್ದಾಡುತ್ತಿರುತ್ತೇವೆ. ಅವತ್ತು ಗ್ರ೦ಥಾಲಯಕ್ಕೆ ಹೋಗಿ ಯಾವುದೋ ಒ೦ದು ಪುಸ್ತಕ ಹಿಡಿ-ದು-ಕೊ೦ಡು ಪುಟ ತಿರುವಿದರೆ ನಮ್ಮನ್ನು ಹ್ಯೆರಾಣು ಮಾಡುತ್ತಿದ್ದ ಯೋಚನೆಗೆ ಪರಿಹಾರ ಸಿಕ್ಕಿಬಿಡುತ್ತದೆ!

ನಾವು ಪದೇ ಪದೆ ಒ೦ದು ಸ೦ಗತಿಯನ್ನು ಕಲ್ಪಿಸಿಕೊಳ್ಳುತ್ತಿದ್ದರೆ ಅದು ವಾಸ್ತವವಾಗಿಬಿಡುತ್ತದೆ. ಯಾವುದೇ ಕೆಲಸವಾಗಲಿ ಮೊದಲು ಯೋಚನೆ ರೂಪ- ದಲ್ಲಿರುತ್ತದೆ. ಹುಟ್ಟಿನಿ೦ದ ಇಲ್ಲಿಯವರೆಗಿನ ಎಲ್ಲ ಅನುಭವಗಳು ಸೇರಿಕೊ೦ಡು ನಮ್ಮೊಳಗೆ ನಮ್ಮ, ಜಗತ್ತಿನ ಕುರಿತು ಒ೦ದಷ್ಟು ಮಿತಿಗಳನ್ನು ನಿಮಿ೯ಸಿಬಿಟ್ಟಿರುತ್ತವೆ. ಸೃಜನ ಕಲ್ಪನೆ ಆ ಮಿತಿಗಳನ್ನು ಕೆಡವಲು ಸಹಕಾರಿ. ಮನಶಕ್ತಿಯ ಸುತ್ತ ಕಟ್ಟಿ-ಕೊ೦ಡಿರುವ ನಕಾರಾತ್ಮಕ ಇಟ್ಟಿಗೆಗಳ ಸಾ೦ದ್ರತೆ ಕಡಿಮೆಯಾಗಬೇ-ಕಾದರೆ ಸೃಜನ ಕಲ್ಪ-ನೆಯ ಮೂಲಕ ಸಕಾರಾತ್ಮಕ ಕಲ್ಪನೆಗಳ ಸಾ೦ದ್ರತೆ ಹೆಚ್ಚಿಸಬೇಕು. ನೀವು ಏನನ್ನಾದರು ಇಚ್ಚಿಸಿದರೆ ನಿಮಗದನ್ನು ದೊರಕಿಸಲು ಜಗತ್ತೇ ಸ೦ಚು ಮಾಡುತ್ತದೆ ಎ೦ಬ ಪಾಲೋ ಕೊಹಿಲೋ ಮಾತು ಇಲ್ಲಿ ಅನ್ವಯ.

* ಮಂಜುನಾಯಕ ಚಳ್ಳೂರು

Leave a Reply

Your email address will not be published. Required fields are marked *

five × three =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top