About Us Advertise with us Be a Reporter E-Paper

ಗುರು

ಗುರುವೇ ನಮಃ

 ‘ಹಿಂದೆ ಗುರುವಿದ್ದ ಮುಂದೆ ಗುರಿ ಇತ್ತು ಸಾಗುತ್ತಿತ್ತು ರಣಧೀರರ ದುಂಡು, ಇಂದು ಹಿಂದೆ ಗುರುವಿಲ್ಲ ಮುಂದೆ  ಸಾಗುತ್ತಿದೆ ರಣಹೇಡಿಗಳ ಹಿಂಡು’ ಎಂಬ ಉಕ್ತಿ ಅದೆಷ್ಟು ಅರ್ಥಗರ್ಭಿತ! ನಿಜವಾದ ಗುರು ಮತ್ತು ನಿರ್ದಿಷ್ಟ ಗುರಿ ಇದ್ದರೆ ಖಂಡಿತಾ ಯಶಸ್ಸು ಸಾಧ್ಯ. ಒಳ್ಳೆಯ ಮಾರ್ಗದರ್ಶಕನಾಗಿ ಸರಿದಾರಿಯನ್ನು ತೋರುವ ಗುರು ಮತ್ತು  ಏನು ಮಾಡಬೇಕೆಂಬ ಗುರಿ ಇಲ್ಲದಿದ್ದರೆ ಅಂತಹ ಬದುಕು ಅಡ್ಡ ದಾರಿ ಹಿಡಿದು, ಅತಂತ್ರವಾಗುತ್ತದೆ. ಶಿಕ್ಷಕರ ದಿನದ ಪ್ರಯುಕ್ತ ತಮ್ಮ ಅರಿವಿನ ದಾರಿ ದೀಪವಾಗಿರುವ ಗುರುಗಳ ಬಗ್ಗೆ ಲೇಖಕರು ಇಲ್ಲಿ ಪ್ರಸ್ತುತಪಡಿಸಿದ್ದಾರೆ.

ಜ್ಞಾನದ ಮಾರ್ಗದರ್ಶಕನೇ ಗುರು

-ರಾಘವೇಂದ್ರ  ಹೊರಬೈಲು

ಶಿಲೆಯಲ್ಲಿನ ಬೇಡವಾದ ವಸ್ತುಗಳನ್ನು ಹೊರತೆಗೆದು ಸುಂದರವಾದ ಶಿಲ್ಪಯಾಗಿಸುವ ಶಕ್ತಿ ಹೇಗೆ ಒಬ್ಬ ಶಿಲ್ಪಿಗಿರುತ್ತದೆಯೋ ಹಾಗೆಯೇ ವಿದ್ಯಾರ್ಥಿಗಳಲ್ಲಿನ ಬೇಡದ ಗುಣಗಳನ್ನು ತೆಗೆದುಹಾಕಿ, ಅವರೊಳ ಗಡಗಿರುವ ಸುಪ್ತ ಪ್ರತಿಭೆಯನ್ನು ಹೊರಚಿಮ್ಮಿಸಿ, ಜ್ಞಾನವನ್ನು ಹೆಚ್ಚಿಸುವ ಶಕ್ತಿ ಒಬ್ಬ ಶಿಕ್ಷಕನಿಗಿರುತ್ತದೆ. ಮಕ್ಕಳಲ್ಲಿರುವ ಬೇಡದ ಗುಣಗಳನ್ನು ತೆಗೆದುಹಾಕುವಾಗ ಪ್ರೀತಿಯೆಂಬ ಪ್ರಬಲ ಅಸ್ತ್ರವನ್ನು ಬಳಸಬಹುದು. ಹಿಂದೆ ಗುರುವಾದವನು ತನ್ನ ಶಿಷ್ಯರು ತಪ್ಪು ಮಾಡಿದಾಗ ಪ್ರೀತಿ ಮತ್ತು ದಂಡನೆ ಈ ಎರಡೂ ಅಸ್ತ್ರಗಳನ್ನು ಬಳಸಿ, ಒಳ್ಳೆಯ ಶಿಕ್ಷಣ  ಶಿಷ್ಯರು, ಗುರು ತೋರುವ ಗುರಿಯೆಡೆಗೆ ಗುರುವಿನ ಮೇಲಿನ ಭಕ್ತಿಯ ಜೊತೆಗೆ ಭಯದಿಂದಲಾದರೂ ಮನಸಿಟ್ಟು ಮುನ್ನಡೆದು, ಜಯಶಾಲಿಗಳಾಗುತ್ತಿದ್ದರು. ಆದರೆ ಇಂದು ಶಿಕ್ಷಕನಾದವನು ವಿದ್ಯಾರ್ಥಿಗಳನ್ನು ದಂಡಿಸುವುದಿರಲಿ, ಗದರಿಸುವ ಅಥವಾ ದಿಟ್ಟಿಸಿ ನೋಡುವ ಹಕ್ಕನ್ನೂ ಕಳೆದುಕೊಂಡಿದ್ದಾನೆ. ಯಾವಾಗ ಗದರಿ ಬುದ್ಧಿ ಹೇಳುವ ಸ್ವಾತಂತ್ರ್ಯ ಶಿಕ್ಷಕನಿಗಿಲ್ಲದಾಯಿತೋ, ಶಿಕ್ಷಕರ ಬಗೆಗಿದ್ದ ಭಯ, ಭಕ್ತಿಗಳು ಕ್ಷೀಣಿಸಿ ಮಕ್ಕಳಲ್ಲಿ ನೈತಿಕ ಅಧಃಪತನ ಪ್ರಾರಂಭವಾಯಿತು. ಇಂದಿನ ಅನೇಕ ಭ್ರಷ್ಟಾಚಾರದ, ಮೋಸದ, ಮೂಢತೆಯ ಕೂಪದಲ್ಲಿ ಬಿದ್ದಿರುವವರಲ್ಲಿ ಅವಿದ್ಯಾವಂತರಿಗಿಂತ ವಿದ್ಯಾವಂತರೇ ಹೆಚ್ಚು ಎಂಬುದು  ಸಂಗತಿ. ಅದಕ್ಕೆ ಕಾರಣ ವಿದ್ಯಾರ್ಥಿಗಳ ಮೇಲಿದ್ದ ಶಿಕ್ಷಕನ ಸ್ವಾತಂತ್ರ್ಯ ಹರಣ.

ಇಂದು ಗುರು-ಶಿಷ್ಯರ ಅಂದರೆ ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಬಂಧ ಸಂಪೂರ್ಣ ಶಿಥಿಲಗೊಂಡಿದೆ. ‘ಗುರುವಿನ ಗುಲಾಮನಾಗುವತನಕ ದೊರೆಯ ದಣ್ಣ ಮುಕುತಿ’ ಎನ್ನುವಂತಿದ್ದ ಗುರು-ಶಿಷ್ಯರ ಸಂಬಂಧ ಇಂದು ‘ಗುರುವೇ ಗುಲಾಮನಾಗುವತನಕ…’ ಎಂಬ ಹಂತಕ್ಕೆ ತಲುಪಿರುವುದು ಇಡೀ ಗುರು ವೃಂದಕ್ಕೇ ಒದಗಿರುವ ಶೋಚನೀಯ ಸ್ಥಿತಿ. ಜ್ಞಾನ ಪ್ರವಹಿಸುವ ಬಹುಮುಖ್ಯ ಮೂಲವಾಗಿದ್ದ ಶಿಕ್ಷಕ ಮೂಲೆಗುಂಪಾಗುತ್ತಿದ್ದಾನೆ. ಶಿಕ್ಷಕರು ಮತ್ತು ವಿದ್ಯಾರ್ಥಿ ಗಳ ನಡುವೆ ಭಾವನೆಗಳು  ಅವಕಾಶ ಕಡಿಮೆಯಾಗಿ, ಶಿಕ್ಷಕರ ಮೇಲಿದ್ದ ಭಯ, ಭಕ್ತಿ, ಗೌರವಗಳು ಕ್ಷೀಣಿಸುತ್ತಿವೆ ಎನಿಸುತ್ತಿದೆ. ಎಲ್ಲೋ ಕೆಲವು ಶಿಕ್ಷಕರಿಂದ ತಪ್ಪುಗಳಾಗಿರುವುದನ್ನೇ ನೆಪ ಮಾಡಿಕೊಂಡು ಇಡೀ ಶಿಕ್ಷಕ ಸಮು ದಾಯವನ್ನೇ ಸಮಾಜವು ಖಳರಂತೆ ನೋಡುವಂತಾಗಿರುವುದು ಶಿಕ್ಷಕರಾದವರಿ ಗೊದಗಿರುವ ದುರ್ಗತಿಯೇ ಸರಿ. ಇಂದಿಗೂ ಅದೆಷ್ಟೋ ಶಿಕ್ಷಕರು ತಮ್ಮ ವೈಯಕ್ತಿಕ ಜೀವನವನ್ನೇ ಬದಿಗೊತ್ತಿ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಪಣ ತೊಟ್ಟು ನಿಂತಿದ್ದಾರೆ. ಅಂಥವರನ್ನೂ ಸಮಾಜ ಅನುಮಾನದ ದೃಷ್ಟಿಯಿಂದ ನೋಡುವಂತಾಗಿರುವುದು ನಿಜವಾಗಿಯೂ ದುರಂತ.

ತಿಳಿಯಲು ಅದೆಷ್ಟೇ ಮೂಲಗಳಿದ್ದರೂ ಅದು  ಮಾರ್ಗದಲ್ಲಿ ಹೋಗಬೇಕಾದರೆ ಒಬ್ಬ ಗುರುವಿರಲೇಬೇಕು. ಒಂದು ಚಿಕ್ಕ ಉದಾಹರಣೆ ನೀಡು ವುದಾದರೆ, ಒಬ್ಬ ವ್ಯಕ್ತಿ ಯಾವುದೋ ಒಂದು ಊರಿಗೆ ಹೊರಟು ನಿಂತಿರುತ್ತಾನೆ. ಸ್ವಲ್ಪ ದೂರದ ಪ್ರಯಾಣದ ನಂತರ ಒಂದೇ ದಾರಿಯಿದ್ದದ್ದು ಕವಲೊಡೆದು ಐದಾರು ದಾರಿಗಳಾಗಿವೆ. ಆಗ ಅವನು ಗೊಂದಲಕ್ಕೊಳಗಾದಾಗ, ಆ ದಾರಿಗಳ ಬಗ್ಗೆ ಸರಿಯಾದ ಅರಿವಿದ್ದ ಸಹೃದಯಿಯೊಬ್ಬ ಆ ವ್ಯಕ್ತಿಗೆ ಊರಿಗೆ ಹೋಗುವ ಸರಿಯಾದ ಮತ್ತು ಹತ್ತಿರದ ದಾರಿ ತೋರಿಸುತ್ತಾನೆ. ಆ ದಾರಿ ತೋರಿಸುವವನೇ ಗುರು ಅಥವಾ ಶಿಕ್ಷಕ.  ಮುಂದೆ ನೂರಾರು ಜ್ಞಾನದ ಮೂಲಗಳಿದ್ದರೂ ಅವುಗಳ ಸರಿಯಾದ ಉಪಯೋಗ ತಿಳಿಯಬೇಕೆಂದರೆ ಅಲ್ಲೊಬ್ಬ ಸರಿಯಾದ ಮಾರ್ಗದರ್ಶಕನಿರಬೇಕು. ಆ ಮಾರ್ಗದರ್ಶಕನೇ ಗುರು.

ಗುರು ಋಣ ಬರೆದು ಮುಗಿಯದ

-ಸುಧಾ ವಿ.ಜೆ.

ಸೆಪ್ಟೆಂಬರ್ ಐದು ಬಂತೆಂದರೆ ಸಾಕು ನನಗಂತು ಸಂಭ್ರಮ, ನನ್ನ ಗುರುಗಳಿಗೆ ಶುಭಾಶಯಗಳನ್ನು ಹೇಳುವುದಕ್ಕಾಗಿ ಕಾಯು ತ್ತಿರುತ್ತೇನೆ. ನಮ್ಮ ಕಾಲದಲ್ಲಿ ಅಂದರೆ ಸುಮಾರು 20 ವರುಷದ ಹಿಂದೆ ಗುರುವೆಂದರೆ ಪ್ರತ್ಯಕ್ಷ ದೇವರು (ಕೆಲವು ಕಡೆ ಇನ್ನೂ ಆ ಸತ್ಯ  ನಾನು ಶಾಲೆಗೆ ಹೋಗುತ್ತಿರುವಾಗ ನನ್ನ ಹಿರಿಯರು ಅದೇ ಸತ್ಯವನ್ನು ನನ್ನಲ್ಲಿ ಬಿತ್ತಿದರು. ‘ಗುರುವಿನ ಗುಲಾಮನಾಗುವ ತನಕ ದೊರೆಯ ದಣ್ಣ ಮುಕುತಿ’ಎಂಬ ಮಾತಿನಂತೆ ನಾವು ಎಲ್ಲಿಯವರೆಗೆ ಗುರುವಿನ ಸಲಹೆ ಸೂಚನೆಗಳನ್ನು ಪಾಲಿಸುತ್ತೇವೊ ಅಲ್ಲಿಯವರೆಗೆ ನಾವು ಸನ್ಮಾರ್ಗದಲ್ಲಿ ನಡೆಯುತ್ತಿರುತ್ತೇವೆ. ಗುರುವಿನ ಆಶೀರ್ವಾದ ಇರುವವರೆಗೆ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ನನ್ನ ಜೀವನದಲ್ಲಿಯೂ ಅನೇಕ ಗುರುಗಳು ನನಗೆ ಪಾಠವನ್ನು ಕಲಿಸಿರುತ್ತಾರೆ. ನನ್ನ ಮೂರನೇ ವಯಸ್ಸಿನಲ್ಲಿ ನನ್ನ ಮೊದಲ ಗುರುವಾದ ಪ್ರೇಮ ಟೀಚರ್‌ನಿಂದ ಹಿಡಿದು, ಬಿ.ಎಡ್.  ಪೃಥ್ವಿ ಮೇಡಂವರೆಗೆ ಅನೇಕ ಶಿಕ್ಷಕರು ನನ್ನ ನೆನಪಿನ ಬುತ್ತಿಯಲ್ಲಿರುವರು.

ನಿರಂತರ ಪ್ರೋತ್ಸಾಹ, ಸಹಕಾರ ಒಬ್ಬ ಗುರುಗಳು ಒಂದು ವಿದ್ಯಾರ್ಥಿಗೆ ನೀಡಿದರೆ ಆ ವಿದ್ಯಾರ್ಥಿ ಉನ್ನತ ಮಟ್ಟಕ್ಕೆ ಏರುವುದರಲ್ಲಿ ಸಂಶಯವಿಲ್ಲ. ಇವ ತ್ತಿಗೂ ನಾನು ನನ್ನ ಕೆಲವು ಗುರು ಗಳೊಂದಿಗೆ ಸಲಹೆಗಳನ್ನು ಪಡೆಯು ತ್ತಿರುತ್ತೇನೆ. ನನ್ನ ಜೀವನದಲ್ಲಿ ನನ್ನ ಗುರುಗಳ ಕೆಲವು ಗುಣಗಳನ್ನು ಕೆಲವು ಸಲಹೆಗಳನ್ನು ಇನ್ನು ಪಾಲಿಸುತ್ತಿ ದೆನೆಂದು ಹೆಮ್ಮೆಯಿಂದ ಹೇಳಿಕೊಳ್ಳು ತ್ತೇನೆ. ಸರಳ ಜೀವನಕ್ಕೆ ಒಂದು ಉದಾ  ಕನ್ನಡ ಮೇಡಂ, ಕೋಪ ಬಂದಾಗ ಎದ್ದು ಹೋಗು ಎಂದು ಹೇಳಿಕೊಟ್ಟ ನಮ್ಮ ಪ್ರಾಂಶುಪಾಲರು, ಸಾಧನೆಯ ಹಾದಿಯಲ್ಲಿ ಕಲ್ಲು ಮುಳ್ಳುಗಳು ಸಹಜ ಎಂದು ನನಗೆ ಆಗಾಗ ನೆನಪಿಸುತ್ತಿದ್ದ ನನ್ನ ಆಂಗ್ಲ ಭಾಷಾ ಶಿಕ್ಷಕಿ, ವಿದ್ಯಾರ್ಥಿ ಎಂದರೆ ಬರೀ ಶಿಕ್ಷಣ ಪಡೆಯಲು ಬಂದವರಲ್ಲ ಸ್ನೇಹ ಪ್ರೀತಿಗೂ ಅರ್ಹರು ಎಂಬುದನ್ನು ತೋರಿಸಿಕೊಟ್ಟ ನನ್ನ ಅರ್ಥಶಾಸ್ತ್ರ ಉಪನ್ಯಾಸಕಿ ಹಾಗೂ ಇನ್ನಷ್ಟು ಬದುಕಿನ ಪಾಠಗಳನ್ನು ಹೇಳಿಕೊಟ್ಟ ಶಿಕ್ಷಕಿಯರೇ ಇಂದಿಗೂ ನನ್ನ ಬಾಳಿಗೆ ದಾರಿ ದೀಪ. ಇದೆಲ್ಲರ  ನಾನು ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲಿದ್ದ ವಸಂತ ಮೇಷ್ಟ್ರುನ್ನು ನೆನಪಿಸಿ ಕೊಳ್ಳಲೇಬೇಕು.  ಇವತ್ತಿಗೂ ಎಲ್ಲಾ ಗುರುಗಳ ಜತೆಗಿನ ನನ್ನ ಸಂಬಂಧ  ಪವಿತ್ರ ವಾಗಿ ಹಾಗೂ ಭಯ ಮಿಶ್ರಿತವಾಗಿಯೇ ಇದೆ. ಗೌರವ, ಅದರ ಮೊದಲು ಹೇಗೆ ಇತ್ತೋ ಅದೇ ಭಾವನೆ ಇನ್ನು ಉಳಿದಿದೆ. ಸಪ್ತ ಸಾಗರಗಳ ನೀರನ್ನು ಬರೆವ ಮಸಿಯಾಗಿಸಿ, ಲೋಕದ ಮರಗಳೆಲ್ಲವ ಲೇಖನಿಗಳಾಗಿ ಬರೆದರೂ ಗುರು ಋಣ ಬರೆದು ಮುಗಿಯದು ಎಂಬ ಕವಿ ಕಬೀರ್ ದಾಸ್‌ರ ವಾಣಿ ನೂರಕ್ಕೆ ನೂರರಷ್ಟು

ಶಿಕ್ಷಕರು ಆಪ್ತರಕ್ಷಕರಿದ್ದಂತೆ..!

-ಪ್ರಶಾಂತ ಜಿ. ಹೂಗಾರ

ಗರ್ಭದಲ್ಲಿ ಒಂಭತ್ತು ತಿಂಗಳು ನಮ್ಮನ್ನು ಕಾಪಾಡಿದವಳೇ ನಮ್ಮ ಮೊದಲ ಗುರು. ತಾಯಿಯಿಂದ ಭೂಮಿಗೆ ಕಾಲಿಡುವ ಮುನ್ನವೇ ನಾವು ಕಲಿಯಲು ಪ್ರಾರಂಭಿಸಿ ಮಣ್ಣಿನ ಗುಣಗಳನ್ನು ಅಳವಡಿಸಿ ಕೊಳ್ಳುತ್ತೇವೆ. ಹೀಗೆ ಕಲಿಯಲು ಪ್ರಾರಂಭಿಸಿದ ನಾವು ಸಾಯುವ ಕೊನೆ ಘಳಿಗೆಯ ತನಕ ಮುಂದುವರೆಸುತ್ತೇವೆ. ಯಾರು ಕೂಡ ಕಲಿಕೆಯನ್ನು ತ್ಯಜಿಸಿ ಸಾಯುವುದಿಲ್ಲ. ಪರಿಸರ, ಜೀವನ, ಪ್ರಪಂಚ, ಗೆಳೆಯ, ಗೆಳತಿ ಮತ್ತು ಗುರುಗಳು ಎಲ್ಲರೂ ಎಲ್ಲವು  ರೀತಿಯಲ್ಲಿ ನಮಗೆ ಗುರುಗಳೇ ಸರಿ.

ಜನ್ಮ ತಾಳಿದ ನಂತರ ಮೊದಲ ಗುರುವಾದ ತಂದೆ ತಾಯಿಯಿಂದ ಕಲಿತು ಅರೆಬೆಂದ ಮಡಿಕೆಯಂತೆ ಶಾಲೆ ಸೇರಿದ ಮಗುವನ್ನು, ತಿದ್ದಿ ತೀಡಿ ಪೂರ್ತಿಬೆಂದ ಗಟ್ಟಿ ಮಡಿಕೆಯನ್ನಾಗಿ ಮಾಡುವ ಮಹತ್ತರ ಜವಾಬ್ದಾರಿ ಶಿಕ್ಷಕನ ಮೇಲಿದೆ. ಶಿಕ್ಷಕರು ನಮಗೆ ಆಪ್ತರಕ್ಷಕರಿದ್ದಂತೆ. ನಮ್ಮ ಮೆದುಳಿಗೆ ಶಿಕ್ಷಣದ ಸುಧೆ ತುಂಬಿ ಜ್ಞಾನದ ಬಿಂದಿಗೆಯಾಗಿ ರೂಪಿಸುತ್ತಾರೆ. ವಿದ್ಯೆ ಒಲಿಯ ಬೇಕಾದರೆ  ಗುಲಾಮ ನಾಗಬೇಕು. ಇಡೀ ಜಗತ್ತನ್ನೇ ಬದಲಿಸುವ ಸಾಮರ್ಥ್ಯ ಶಿಕ್ಷಕರಿಗಲ್ಲದೇ ಮತ್ಯಾರಿ  ಅಡ್ಡದಾರಿ ಹಿಡಿದಾಗ ಶಿಕ್ಷಿಸಿ, ಶಿಕ್ಷಣ ಕಲಿಸಿದ ಶಿಕ್ಷಕರು ಮೇಲ್ನೋಟಕ್ಕೆ ಶತ್ರುಗಳಂತೆ ಕಂಡರೂ ಅಂತರಾಳದಲ್ಲಿ ಮಿತ್ರರಾಗಿರುತ್ತಾರೆ. ನಮ್ಮ ಒಳಿತನ್ನೇ ಬಯಸುತ್ತಿರುತ್ತಾರೆ. ನಮ್ಮ ಸಾಧನೆಯನ್ನ ಎದುರು ನೋಡುತ್ತಿರುತ್ತಾರೆ.

ಶಿಕ್ಷಕರು, ಗುರುಗಳು, ಗುರುಮಾತೆಯರು, ಪರಬ್ರಹ್ಮನ ಸ್ವರೂಪಿಯಾದ ವರು. ಆ ಪರಬ್ರಹ್ಮನಿಗಿರುವ ಚತುರ್ಮುಖಗಳಂತೆ ಶಿಕ್ಷಕರು ನಮ್ಮ ಬದುಕಿನಲ್ಲಿ ಒಂದು ಮರೆಯಲಾಗದ ಒಂದು ಅಧ್ಯಾಯವನ್ನು ಬರೆದು ಹೋಗುತ್ತಾರೆ. ಕಾಲಗಳು ಉರುಳಿದಂತೆ ಶಿಕ್ಷಕರ ಮೇಲಿನ ಪ್ರೀತಿ ಮತ್ತು ಗೌರವ ಉರುಳು ತ್ತಿರುವುದು ವಿಷಾದನೀಯ. ಗುರುಶಿಷ್ಯರ ನಡುವಿನ ಪವಿತ್ರ  ಹಾಳಾಗ ದಂತೆ ನೋಡಿಕೊಂಡು ಅವರಿಗಾಗಿ ಸ್ವಲ್ಪಸಮಯವನ್ನೂ ಕಾದಿಟ್ಟು ಗೌರವವನ್ನು ಸಮರ್ಪಿಸಬೇಕು. ಇತಿಹಾಸದ ಪುಟಗಳಲ್ಲಿ ಅಳಿಸಲಾಗದ ನಮ್ಮ ಸಾಧನೆಯೇ, ನಾವು ಗುರುಗಳಿಗೆ ಕೊಡುವ ನಿಜವಾದ ಗುರುಕಾಣಿಕೆ.

Tags

Related Articles

Leave a Reply

Your email address will not be published. Required fields are marked *

Language
Close