ಇದ್ರೆ ಆ್ಯಕ್ಸಸರಿ, ನಥಿಂಗ್ ಟು ವರಿ

Posted In : ಗೆಜೆಟಿಯರ್

ಹಾಹಾಕಾರ್‌:ಬಡೆಕ್ಕಲ ಪ್ರದೀಪ್‌ ಸಿ

ಒಂದು ಕಾರ್ ಕೊಂಡರೆ ಅದು ಅಲ್ಲಿಗೇ ಮುಗಿ ದಂಗೆ ಅನ್ಕೊಳ್ಳೋರು ಕಾರ್ ತಗೊಳೋಕೆ ಹೋಗದಿರೋದೇ ಒಳ್ಳೇದು. ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು  ಥರ, ಕಾರ್ ಕೊಂಡ್ಕೊಂಡ್ ನೋಡು ಮೇಂಟೇನ್ ಮಾಡಿ ನೋಡು ಅನ್ನೋದೂ ಇಂದಿನ ಮಾಡರ್ನ್ ಯುಗಕ್ಕೆ ಹೇಳಿ ಮಾಡಿಸಿ ದಂಥ ಮಾತು.ಹೀಗೆ ಕೊಂಡ ಕಾರ್‌ಗೆ ಆಗಾಗ ಸರ್ವಿಸ್ ಇತ್ಯಾದಿಗಳನ್ನು ಮಾಡಿಸಿ ಅದನ್ನು ಒಪ್ಪ ಓರಣವಾಗಿರಿಸಿಕೊಳ್ಳೋದರಿಂದ ತೊಡಗಿ ಕಾರೊಳಗೆ ಕೂತಾಗ ಅದೆನೋ ಕಂಫರ್ಟ್ ಕಡಿಮೆ ಯಾಗಿದೆಯಲ್ಲಾ ಅನಿಸೋದು ಅದರಲ್ಲಿ ಸರಿಯಾದ  ಆ್ಯಕ್ಸಸರೀಸ್ ಇಲ್ಲದಿರೋವಾಗ. ಈ ವಾರ ನಾನು ನಮಗೆ ಅತಿ ಅಗತ್ಯ ಎನಿಸುವ ಹಾಗೂ ಅದಿಲ್ಲದಿದ್ದರೆ ಕಾರ್ ಒಳಗೆ ಕೂರಲೇ  ಕೆಲವು ಆ್ಯಕ್ಸಸರೀಸ್‌ಗಳ ಕುರಿತು ಹೇಳೋಣ ಅನಿಸ್ತು. ಇದೇ ಆರ್ಡರ್‌ನಲ್ಲಿ ಅಲ್ಲದಿದ್ದರೂ, ಈ ಆ್ಯಕ್ಸಸರೀಸ್ ನಿಮ್ಮ ಕಾರಿನಲ್ಲೂ ಇರೋದು ಅತಿ ಅವಶ್ಯ!

ಕಾರ್ ಚಾರ್ಜರ್‌

ಇಂದಿನ ಕಾಲದಲ್ಲಿ ಫೋನ್ ಇಲ್ಲದೆ ಬದುಕೋದೇ ಕಷ್ಟ, ಹಾಗೂ ಈ ಫೋನ್‌ಗಳಲ್ಲಿ ಚಾರ್ಜ್ ನಿಲ್ಲೋದೂ ಕಷ್ಟ ಕಷ್ಟ. ಅಂಥಾದ್ರಲ್ಲಿ ಕಾರೊಳಗೆ ಒಂದು ಚಾರ್ಜರ್ ಇಲ್ಲದಿದ್ದರೆ ಹೇಗೆ ಹೇಳೀ ಸ್ವಾಮಿ! ಹಾಗಾಗಿ ಕಾರ್‌ನಲ್ಲಿ ಫೋನ್ ಚಾರ್ಜ್ ಮಾಡೋದಕ್ಕೆಂದೇ ಒಂದು ಕಾರ್ ಚಾರ್ಜರ್ ಇಟ್ಟುಕೊಳ್ಳ ಬೇಕು. ಇನ್ನೂ  ಏನು ಅಂದರೆ ಒಬ್ಬರೇ ಒಂದಕ್ಕಿಂತ ಹೆಚ್ಚು ಫೋನ್‌ಗಳನ್ನು ಹೊಂದಿರೋ ಇಂದಿನ ದಿನಗಳಲ್ಲಿ ಒಮ್ಮೆಗೆ ಒಂದು ಫೋನ್ ಮಾತ್ರ ಚಾರ್ಜ್ ಆಗೋ ಚಾರ್ಜರ್ ಇಟ್ಟುಕೊಂಡರೆ ಕಷ್ಟ. ಇನ್ನು ಕೇವಲ 0.7 ಆ್ಯಂಪ್ ಚಾರ್ಜರ್ ಇದ್ದರೆ ಇಂದು ನಾವು ಉಪಯೋಗಿಸೋ ದೊಡ್ಡ ಡಿಸ್ಪ್ಲೇಯ ಹೆಚ್ಚು ಬ್ಯಾಟರಿ ಹೀರುವ ಫೋನ್‌ಗಳು ಬೇಗ ಚಾರ್ಜ್ ಆಗೋದು ಕನಸಿನ ಮಾತೇ ಸರಿ. ಹಾಗಾಗಿ ಆದಷ್ಟು ಹೆಚ್ಚು (ಕಡಿಮೆ ಅಂದರೂ 2.1) ಆ್ಯಂಪ್ ಚಾರ್ಜ್ ಮಾಡುವ ಜಾರ್ಜರ್‌ಗಳನ್ನು  ಫೋನ್ ಅಥವಾ ಡಿವೈಸ್ ಯಾವುದಾದರೂ ಸರಿ, ಯುಎಸ್‌ಬಿ ಮೂಲಕ ಚಾರ್ಜ್ ಮಾಡುವುದು ಸಾಧ್ಯವಿರುವ ಕಾರಣ, ಹೆಚ್ಚು ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿರುವ ಹೆಚ್ಚು ಆ್ಯಂಪ್‌ನಲ್ಲಿ ಚಾರ್ಜ್ ಆಗುವ ಯುನಿಟ್ ಇಟ್ಟುಕೊಂಡರೆ ಸಾಕು. (ಬೆಲೆ: ರೋಡ್ ಸೈಡ್‌ನಲ್ಲಿ ಕೆಲವು ನೂರಕ್ಕೆ ಸಿಗೋ ಹಲವು ಕೇಬಲ್‌ಗಳಿರೋ ಚಾರ್ಜರ್‌ಗಳಿಂದ ತೊಡಗಿ (ಆದಷ್ಟು ಇವನ್ನು ತೆಗೆದುಕೊಳ್ಳಲೇ ಬೇಡಿ!) ಒಂದೋ ಎರಡೋ ಮೂರೋ ಸಾವಿರ ರುಪಾಯಿಯ ಸೂಪರ್ ಫಾಸ್‌ಟ್ ಆಗಿ ಚಾರ್ಜ್ ಮಾಡಬಲ್ಲ ಚಾರ್ಜರ್‌ಗಳೂ ಮಾರ್ಕೆಟ್‌ನಲ್ಲಿ, ಅಥವಾ  ಮಾರ್ಕೆಟ್‌ನಲ್ಲಿ ಲಭ್ಯವಿವೆ.)

ಕಾರ್ ಚಾರ್ಜರ್

ಎ.ಸಿ.ಲ್ಯಾಪ್‌ಟಾಪ್ ಇತ್ಯಾದಿ ಅರ್ಜೆಂಟಾಗಿ ಚಾರ್ಜ್ ಮಾಡಿಸಿಕೊಳ್ಳೋರಿಗೆ ಅತಿ ಅಗತ್ಯ ಅನಿಸೋದು ಈ ಎ.ಸಿ.- ಚಾರ್ಜರ್‌ಗಳು. ಹೆಚ್ಚಾಗಿ ಬೆಲ್ಕಿನ್ ಅವರ 1.0 ಆ್ಯಂಪ್ ಕಾರ್ ಚಾರ್ಜರ್ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದ್ದು, ದೀರ್ಘ ಬಾಳಿಕೆಯನ್ನೂ ಹೊಂದಿವೆ. ನೀವು  ಕಚೇರಿ ಕೆಲಸ ಮಾಡಿಕೊಂಡು ಓಡಾಡೋರಾದರೆ ಈ ಚಾರ್ಜಿಂಗ್ ಯುನಿಟ್‌ಗಳು ನಿಮ್ಮ ಕಾರ್‌ನಲ್ಲಿ ಅತಿ ಅಗತ್ಯ. ಕಾರ್‌ನಿಂದ ಬರುವ 12  ವೋಲ್‌ಟ್  ಪವರ್‌ಅನ್ನು 200 ವಾಟ್‌ಗೆ ಕನ್ವರ್ಟ್ ಮಾಡಿ  ಲ್ಯಾಪ್‌ಟಾಪ್, ಫೋನ್, ಇತ್ಯಾದಿಗಳ ಜತೆಗೆ ಚಾರ್ಜ್ ಮಾಡುವುದು ಸಾಧ್ಯ. ಬೆಲೆಯಲ್ಲಿ ಸ್ವಲ್ಪ ಖಾರವೇ ಆದರೂ (ಅಂದಾಜು 3500 ರೂಪಾಯಿ) ಇದರ ಉಪಯೋಗದಿಂದ ಮನಸ್ಸಿಗೆ ಭಾರವಾಗುವುದಿಲ್ಲ ಅನ್ನೋದು ನನ್ನ ಅನಿಸಿಕೆ.

ಗಾಳಿ ಹಾಕುವ ಪಂಪ್

ಪಂಚರ್ ಯುನಿಟ್ಈಗೆಲ್ಲಾ ಕಾರ್‌ಗಳ ಟೈರ್‌ಗಳು ಟ್ಯೂಬ್‌ಲೆಸ್, ಆದರೂ ಪಂಚರ್ ಆಗ್ದೇ ಇರೋ ಟೈರ್‌ಗಳು ಅಲ್ವಲ್ಲಾ! ಹಾಗಾಗಿ ಸಿಂಪಲ್ಲಾಗಿ ಒಂದು ಪಂಚರ್ ಹಾಕಿಸಿಕೊಳ್ಳೋ ಸೆಟ್‌ಅನ್ನು ಇಟ್ಟುಕೊಳ್ಳೋದು ಅತಿ ಅವಶ್ಯಕ. ಯಾವಾಗಲೂ ಸಿಟಿ ಒಳಗೇ ಓಡಾಡ್ತಿದ್ರೆ  ಆದರೆ ಲಾಂಗ್ ಡ್ರೈವ್ ಹೋದಾಗ ದಾರಿ ಮಧ್ಯೆ ಸಿಕ್ಕಿಬೀಳೋ ತಾಪತ್ರಯ ಬೇಡಾಂದ್ರೆ ಅಟ್‌ಲೀಸ್ಟ್ ಪಂಚರ್ ಮಾಡಿಕೊಳ್ಳೋಕೆ ಒಂದು ವ್ಯವಸ್ಥೆ ಮಾಡಿಟ್ಟುಕೊಳ್ಳೋದು ಒಳ್ಳೇದು. ಟ್ಯೂಬ್‌ಲೆಸ್ ಟೈರ್‌ಗಳು ಒಂದೊಮ್ಮೆ ಪಂಚರ್ ಆದರೂ ಗಾಳಿ ಹಾಕಿದರೆ ಅದು ಕೆಲವು ಕಿಲೋಮೀಟರ್‌ಗಳ ಕಾಲ ಹಾಗೇ ಉಳಿಯುವುದರಿಂದ ಕನಿಷ್ಟಪಕ್ಷ ಗಾಳಿ ಹಾಕುವ ಪಂಪ್ (ಕಾರ್ ಚಾರ್ಜಿಂಗ್ ಯುನಿಟ್‌ನಿಂದ ಕನೆಕ್‌ಟ್ ಮಾಡಿ) ಇದ್ದರೂ ಎಮರ್ಜೆನ್ಸಿ ಸಮಯಕ್ಕೆ ಸುಲಭದ ಪರಿಹಾರವೆನಿಸುತ್ತದೆ.

 

ಮೊಬೈಲ್ ಮೌಂಟ್‌

ಪೋನಿದ್ದರೆ ಸಾಲದು ಅದನ್ನು  ಇಡೋದಕ್ಕೂ  ಸ್ಟ್ಯಾಂಡ್ ಬೇಕು. ಕೇವಲ ಸ್ಟ್ಯಾಂಡ್ ಅಂದರೂ ಅದು ಮಜಾ ನೀಡೋದಿಲ್ಲ. ಬೇಕಾದ ಹಾಗೆ ತಿರುಗಿಸಿ ಮುರುಗಿಸಿ, ನಮ್ಮ ಅವಶ್ಯಕತೆಗನುಗುಣವಾಗಿ ಉಪಯೋಗ ಮಾಡುವುದಕ್ಕೆ ಸಾಧ್ಯವೆನಿಸಬಲ್ಲ ಮೊಬೈಲ್ ಮೌಂಟ್ ಇದ್ದರೆ ಅದು ಇನ್ನಷ್ಟು ಮೇಳೈಸಿದಂತಿರುತ್ತವೆ. ಯಾಕೆಂದರೆ ಈಗ ಫೋನ್ ಕೇವಲ ಫೋನ್ ಕಾಲ್‌ಗಳನ್ನು ಮಾಡೋದಕ್ಕೆ ಮಾತ್ರ ಅಲ್ವಲ್ಲ, ಮ್ಯಾಪ್ ಹಾಕ್ಕೊಂಡು ರೂಟ್ ಹುಡುಕೋದಕ್ಕೆ, ವಿಡಿಯೋ ಕಾಲ್ ಮಾಡೋದಕ್ಕೆ ಹೀಗೆ ಹಲವಾರು ರೀತಿಯ ಉಪಯೋಗ ಇವೆ ಹಾಗೂ ಈ ರೀತಿಯ ಫೋನ್ ಮೌಂಟ್‌ಗಳು  ಅನುಕೂಲ ಮಾಡಿಕೊಡುತ್ತವೆ(ಐವತ್ತೋ ನೂರಕ್ಕೋ ಬರುವ ಸಿಂಪಲ್ ಹಾಗೂ ಲೋಕಲ್ (ಅಂದ್ರೆ ಚೈನಾ ಮಾಲ್) ಮೌಂಟ್‌ಗಳಿಂದ ಹಿಡಿದು 500-600 ರೇಂಜ್‌ನ  ಬ್ರ್ಯಾಂಡೆಡ್ ಹೋಲ್ಡರ್‌ಗಳು ಕೂಡ ಮಾರ್ಕೆಟ್‌ನಲ್ಲಿ ಲಭ್ಯ).

ಫೇವರಿಟ್ ಆ್ಯಕ್ಸೆಸ್ಸರೀಸ್

* ಮಿನಿ ಕೂಲರ್: ಏಸಿ ಕೂಲಿಂಗ್ ಜತೆ ಲಾಂಗ್ ಡ್ರೆûವ್‌ನಲ್ಲಿ ಕೂಲ್ ಡ್ರಿಂಕ್‌ಗಳಿರದಿದ್ರೆ ಹೇಗೆ ಅನ್ನೋರಿಗೆ.

* ಕಾರ್ ಪಾಲಿಶ್: ನೇಲ್ ಪಾಲಿಶ್ ಇಲ್ದೇ ಹೊರ ಹೋಗದ ಹುಡುಗಿಯರಿಗಿಂತ ಕಾರ್ ಪಾಲೀಶ್ ಮಾಡದೇ ಡ್ರೈವಿಂಗ್ ಮಾಡದ ನಾವು ಮೇಲು  ಹುಡುಗರಿಗಾಗಿ.

* ಮಿನಿ-ಕಸದ ಬುಟ್ಟಿ: ಸ್ವಚ್ಛ ಭಾರತ ಅಭಿಯಾನ ಮಾಡೋರಿಗೆ ನಮ್ಮ ಸಹಾಯ ಇಲ್ವೇ ಇಲ್ಲ, ರೋಡಲ್ಲಿ ಕಸ ಬಿದ್ರೆ ತಾನೆ ಅವರು ಅಭಿಯಾನ ಮಾಡೋಕಾ ಗೋದು ಅನ್ನೋರಿಗಾಗಿ.

* ಕಾರ್- ಅಗ್ನಿಶಾಮಕ: ಫೈರ್ ಡಿಪಾರ್ಟ್‌ಮೆಂಟಿಗೆ ಕಾಂಪಿಟೀಶನ್ ಕೊಡೋಕಾಗದೇ ಇದ್ರೂ ಎಮರ್ಜೆನ್ಸಿ ಟೈಮಲ್ಲಿ ಬೆಂಕಿ ನಂದಿಸೋದು ಅನಿವಾರ್ಯನೇ ತಾನೆ!

* ಆಕ್ಸ್ ಕೇಬಲ್: ಬ್ಲೂಟೂತ್ ಅದೂ ಇದೂ ಅನ್ನೋ ಈ ಜಮಾನಾದಲ್ಲೂ ಆಕ್‌ಸ್ ಕೇಬಲ್ ಬೇಕೇ ಬೇಕು, ಒಂದೇ  ಮೂರ್ ಮೂರ್ ಫೋನ್ ಕನೆಕ್ಟ್ ಮಾಡ್ಬೇಕು ಅನ್ನೋ ಆಸೆ ಹುಟ್ಟೋ ಸಮಯಗಳಿಗಾಗಿ !

Leave a Reply

Your email address will not be published. Required fields are marked *

four × one =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top