ಚೊಚ್ಚಲ ಶತಕದತ್ತ ಹಾರ್ದಿಕ್ ಪಾಂಡ್ಯ

Posted In : ಕ್ರೀಡೆ

ಕ್ಯಾಂಡಿ: ಶತಕದತ್ತ ದಾಪುಗಾಲು ಹಾಕುತ್ತಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಬೃಹತ್ ರನ್ ಕನಸಿಗೆ ಜೀವ ತುಂಬುತ್ತಿದ್ದಾರೆ.  ಈಗಾಗಲೇ ಆರು ಬೌಂಡರಿ ಹಾಗೂ ಆರು ಸಿಕ್ಸರ್ ನೆರವಿನಿಂದ ಟಿ20 ಶೈಲಿಯಲ್ಲಿ ಬ್ಯಾಟಿಂಗ್ ಮಾಡು ತ್ತಿರುವ ಹಾರ್ದಿಕ್ 76 ಏಸೆತಗಳಿಂದ 90ರನ್ ಗಳಿಸಿ ಆಡುತ್ತಿದ್ದಾರೆ. ವೇಗಿ ಉಮೇಶ್ ಯಾದವ್ ಜತೆ ನೀಡುತ್ತಿದ್ದಾರೆ.

ಪಂದ್ಯದ ಮೊದಲನೇ ದಿನ ಆರಂಭಿಕರಾದ ಧವನ್ ಹಾಗೂ ರಾಹುಲ್ ಅವರ ಅಮೋಘ ಜತೆಯಾಟದ ನೆರವಿನಿಂದ ಭಾರತ ಶ್ರೀಲಂಕಾ ವಿರುದ್ಧದ ಅಂತಿಮ ಟೆಸ್‌ಟ್‌‌ನ ಮೊದಲ ದಿನ 329 ರನ್ ಗಳಿಸಿತ್ತು.  ರಾಹುಲ್ 15 ರನ್‌ಗಳಿಂದ ಶತಕ ವಂಚಿತರಾದರು. ಶ್ರೀಲಂಕಾ ಪರವಾಗಿ ಉತ್ತಮ ಬೌಲಿಂಗ್ ಮಾಡಿದ ಪುಷ್ಪಕುಮಾರ ಅವರು ಮೂರು ಮತ್ತು ಸಂದಕನ್ 2 ವಿಕೆಟ್ ಪಡೆದು ಪುಷ್ಪಕುಮಾರಗೆ ಸಾಥ್ ನೀಡಿದರು.

ಆತಿಥೇಯರ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದ ಈ ಜೋಡಿ ತಂಡಕ್ಕೆ 188 ರನ್‌ಗಳ ಜತೆಯಾಟದ ಕಾಣಿಕೆ ನೀಡಿತು. ಇದು ಶ್ರೀಲಂಕಾ ವಿರುದ್ಧ ಆರಂಭಿಕ ಜೋಡಿಯ ಅತಿ ಹೆಚ್ಚು ರನ್ ಜತೆಯಾಟವಾಗಿದೆ. ಇದಕ್ಕೂ ಮೊದಲು 1993ರಲ್ಲಿ ಮನೋಜ್ ಪ್ರಭಾಕರ್ ಮತ್ತು ನವಜೋತ್ ಸಿಂಗ್ ಜೋಡಿಯು 171 ರನ್‌ಗಳ ಜತೆಯಾಟ ನಡೆಸಿತ್ತು. ಲಂಕಾ ಬೌಲರ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಧವನ್, 17 ಬೌಂಡರಿಗಳ ಸಹಿತ 119 ರನ್ ಗಳಿಸಿದರು. ನಂತರ ರಹಾನೆ(17) ಮತ್ತು ಅಶ್ವಿನ್(31) ಹೆಚ್ಚು ಹೊತ್ತು ಅಂಗಳದಲ್ಲಿ ನಿಲ್ಲಲಿಲ್ಲ.

ಸ್ಕೋರ್ ವಿವರ:
ಭಾರತ ಪ್ರಥಮ ಇನ್ನಿಂಗ್ಸ್
ಶಿಖರ್ 119, ರಾಹುಲ್ 85, ಕೊಹ್ಲಿ 42, ಹಾರ್ದಿಕ್ ಪಾಂಡ್ಯ 90 ಬ್ಯಾಟಿಂಗ್, ಉಮೇಶ್ ಯಾದವ್ 2 ಬ್ಯಾಟಿಂಗ್.
ಬೌಲಿಂಗ್: ಫೆರ್ನಾಂಡೋ 85/2, ಸಂದಕನ್ 122/4, ಪುಷ್ಪಕುಮಾರ 82/3

Leave a Reply

Your email address will not be published. Required fields are marked *

three × 4 =

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

 

Monday, 23.10.2017

ಶ್ರೀಹೇಮಲಂಭಿ, ದಕ್ಷಿಣಾಯನ ಶರದ್‌ಋತು, ಕಾರ್ತಿಕ ಮಾಸ, ಶುಕ್ಲಪಕ್ಷ, ಚತುರ್ಥಿ, ಸೋಮವಾರ, ನಿತ್ಯ ನಕ್ಷತ್ರ -ಅನುರಾಧಾ ಯೋಗ-ಸೌಭಾಗ್ಯ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

Back To Top