ವಿಶ್ವವಾಣಿ

19 ದಿನಗಳ ಬಳಿಕ ಅನಿರ್ದಿಷ್ಠಾವಧಿ ಉಪವಾಸ ಕೈಬಿಟ್ಟ ಹಾರ್ದಿಕ್ ಪಟೇಲ್

ಅಹಮದಾಬಾದ್‌‌: ಪಟೇಲ್‌‌ ಮೀಸಲು ಹೋರಾಟದ ನಾಯಕ ಹಾರ್ದಿಕ್‌‌ ಪಟೇಲ್‌‌ ಅನಿರ್ದಿಷ್ಠ 19 ದಿನಗಳ ಉಪವಾಸ ಸತ್ಯಗ್ರಹವನ್ನು ಬುಧವಾರ ಮಧ್ಯಹ್ನಾ ಅಂತ್ಯಗೊಳಿಸಿದ್ದಾರೆ.

ಪಟೇಲ್ ಸಮುದಾಯದ ಎರಡು ಮುಖ್ಯ ಸಾಮಾಜಿಕ-ಧಾರ್ಮಿಕ ಸಂಸ್ಥೆಗಳಾದ ಖೋಡಾಲ್ ಧಾಮ್ ಹಾಗೂ ಉಮ್ಯಾಧಾಮ್ ಗಳ ಮುಖಂಡರಾದ ಹಾರ್ಡಿಕ್ ಅವರ ನಿಕಟ ಸಹಾಯಕ ಮತ್ತು ಪಟಿದರ್ ಅನಾಮತ್ ಆಂದೋಲನ ಸಮಿತಿಯ ಸಂಚಾಲಕ ಮನೋಜ್ ಪನಾರಾ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ಘೋಷಿಸಿದ್ದಾರೆ.
ಪಟೇಲ್ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಹಾರ್ದಿಕ್ ಪಟೇಲ್ ಆಗಸ್ಟ್ 25ರಿಂದ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದರು. ಕಳೆದ 14 ದಿನಗಳಲ್ಲಿ ಸರ್ಕಾರವು ಹಾರ್ಡಿಕ್ ಜೊತೆ ಮಾತುಕತೆ ನಡೆಸಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ.