About Us Advertise with us Be a Reporter E-Paper

Breaking Newsದೇಶಪ್ರಚಲಿತ

ಉಪವಾಸ ಸತ್ಯಾಗ್ರಹ: ಮಾತುಕತೆಗೆ ಬರದಿದ್ದರೆ ನೀರು ಕುಡಿಯಲ್ಲ ಎಂದು ಎಚ್ಚರಿಕೆ…!

ಅಹಮದಾಬಾದ್: ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಾರ್ದಿಕ್ ಪಟೇಲ್, 24 ಗಂಟೆಗಳಲ್ಲಿ ಗುಜರಾತ್ ಸರಕಾರ ಮಾತುಕತೆಗೆ ಬರದಿದ್ದರೆ ನೀರು ಕುಡಿಯುವುದನ್ನು ನಿಲ್ಲಿಸುವುದಾಗಿ ಎಚ್ಚರಿಸಿದ್ದಾರೆ.

ಪಾಟೀದಾರ್ ಜನಾಂಗಕ್ಕೆ ಮೀಸಲು ನೀಡಬೇಕೆಂದು ಆಗ್ರಹಿಸಿ ಹಾರ್ದಿಕ್ ಪಟೇಲ್ ನಡೆಸುತ್ತಿರುವ ಸತ್ಯಾಗ್ರಹ, ಗುರುವಾರ 12ನೇ ದಿನ ಪೂರೈಸಿದೆ. ಹಾರ್ದಿಕ್ ನೇತೃತ್ವದ ಪಾಟೀದಾರ್ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್) ಸಂಚಾಲಕ ಮನೋಜ್ ಪನಾರಾ ಮಾತನಾಡಿ, ಹಾರ್ದಿಕ್ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸರಕಾರಿ ಪ್ರತಿನಿಧಿಗಳು ಭೇಟಿ ನೀಡಿ ಅವರ ಜತೆ ಚರ್ಚೆ ನಡೆಸಿ ಬೇಡಿಕೆ ಈಡೇರಿಸುವತ್ತ ಗಮನ ಹರಿಸಬೇಕು. 24 ಗಂಟೆಯೊಳಗೆ ಯಾರೂ ಬರದಿದ್ದರೆ ಹಾರ್ದಿಕ್ ನೀರು ಕುಡಿಯುವುದನ್ನೂ ನಿಲ್ಲಿಸುವುದಾಗಿ ಹೇಳಿದ್ದಾರೆ ಎಂದರು.

ಇಡೀ ರಾಜ್ಯ ಹಾರ್ದಿಕ್ ಅವರ ಬೆಂಬಲಕ್ಕಿದೆ. ಈಗಾಗಲೇ ಜನರು ಅವರ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಚಿಂತಿಸುತ್ತಿದ್ದಾರೆ. ನಾವು ಸರಕಾರದ ಜತೆಗೆ ಮಾತುಕತೆಗೆ ಸದಾ ಸಿದ್ಧರಿದ್ದೇವೆ. ಆದರೆ ಸರಕಾರದ ಪ್ರತಿನಿಧಿಗಳು ಮುಂದೆ ಬಂದು ಸತ್ಯಾಗ್ರಹ ನಡೆಸುತ್ತಿರುವ ಸ್ಥಳದಲ್ಲಿಯೇ ಮಾತನಾಡಬೇಕು. ಅವರಿಗೆ ಎಸಿ ಕೋಣೆಯಲ್ಲಿ ಕುಳಿತು ಅಧಿಕಾರಿಗಳ ಜತೆ ಮಾತನಾಡಲು ಇಷ್ಟವಿಲ್ಲ ಎಂದು ಪನಾರಾ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close