About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಗಾಂಧಿ ಎಂಬ ಸರ್‌ನೇಮ್‌ನಲ್ಲೇ ಸಿಖ್ಖರ ಹತ್ಯಾಕಾಂಡದ ರಕ್ತ ಮೆತ್ತಿದೆ: ಹರ್‌ಸಿಮ್ರತ್‌ ಕೌರ್‌

ದೆಹಲಿ: 1984ರ ಸಿಖ್ ವಿರೋಧಿ ದಂಗೆಗೂ ಕಂಗ್ರೆಸ್‌ಗೂ ಸಂಬಂಧವಿಲ್ಲ ಎಂದಿದ್ದ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ ಬಾದಲ್‌ ವಾಗ್ದಾಳಿ ನಡೆಸಿದ್ದಾರೆ.

“ನಿಮ್ಮ ತಲೆಮಾರುಗಳು ಮಾಡಿರುವ ಕೆಲಸವನ್ನು ನೀವು ಮರೆತಿದ್ದೀರಿ. ನಿಮ್ಮ ಸರ್‌ನೇಮ್‌ ಆದ ಗಾಂಧಿ ಎಂಬುದರಲ್ಲೇ ಸಿಖ್ಖರ ಹತ್ಯಾಕಾಂಡ, ಅಖಾಲ್‌ ತಖ್ತ್‌ ಸಾಹೀಬ್‌ನ ನೆಲಸಮ ಹಾಗು ಗುರುಗ್ರಂಥ ಸಾಹಿಬ್‌‌ನ ಸಹಸ್ರಾರು ಪ್ರತಿಗಳನ್ನು ಸುಟ್ಟುಹಾಕಿದ ಕ್ಷಮಿಸಲಾಗದ ಅಪರಾಧಗಳು ಮೆತ್ತಿಕೊಂಡಿವೆ” ಎಂದು ಹರ್‌ಸಿಮ್ರತ್‌ ಕೌರ್‌ ಟ್ವೀಟ್‌ ಮಾಡಿದ್ದಾರೆ.

ತಮ್ಮ ವಾಗ್ದಾಳಿ ಮುಂದುವರೆಸಿದ ಬಾದಲ್‌, “ತಪ್ಪಿನ ನಿರಾಕರಣೆಯಿಂದ ನಿಮ್ಮ ಕೈಗೆ ಮೆತ್ತಿಕೊಂಡಿರುವ ಅಮಾಯಕರ ರಕ್ತದ ಕಲೆಯನ್ನು ತೊಳೆದುಹಾಕಲು ಆಗುವುದಿಲ್ಲ. ಕಾಂಗ್ರೆಸ್‌  ಹಾಗು ನಿಮ್ಮ ಕುಟುಂಬದ ಕಾರಣದಿಂದ ಸಹಸ್ರಾರು ಸಿಖ್ಖರ  ಮಾರಣಹೋಮ ನಡೆದಿದ್ದು, ಈ ವಿಷಯ ಇಡೀ ಜಗತ್ತಿಗೇ ಗೊತ್ತಿದೆ. 34 ವರ್ಷಗಳಾದರೂ ಸಿಖ್ಖರಿಗೆ ಇನ್ನೂ ನ್ಯಾಯ ಸಿಗದ ಕಾರಣವೇನೆಂದು ಇದು ತಿಳಿಸುತ್ತದೆ” ಎಂದು ಬಲವಾದ ಆಪಾದನೆಯನ್ನು ಕಾಂಗ್ರೆಸ್‌ ವಿರುದ್ಧ ಮಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close