Sri Ganesh Tel

ಕ್ಷುಲ್ಲಕ ಕಾರಣಕ್ಕೆ ಜಗಳ : ಮಗು ಸಾವು

Posted In : ರಾಜ್ಯ, ಹಾಸನ

ಹಾಸನ: ಕ್ಷುಲ್ಲಕ ಕಾರಣಕ್ಕೆ ನೆರೆಮನೆಯವರೊಂದಿಗೆ ನಡೆದ ಜಗಳ ಒಂದು ವರ್ಷದ ಹೆಣ್ಣು ಮಗುವನ್ನು ಬಲಿ ಪಡೆದ ಘಟನೆ ಜಿಲ್ಲೆಯ ದುಂಬಿನಗೆರೆಯಲ್ಲಿ ನಡೆದಿದೆ.

ರಂಗರಾಜು ಹಾಗೂ ರೇಖಾ ಎಂಬ ದಂಪತಿಯ ಒಂದು ವರ್ಷದ ಪುತ್ರಿ ನಿರೀಕ್ಷಾ ಸಾವನ್ನಪ್ಪಿರುವ ಮಗು. ರಂಗರಾಜು ಪತ್ನಿ ರೇಖಾ ತಮ್ಮ ಮನೆ ಮುಂದೆ ನಲ್ಲಿಯಲ್ಲಿ ನೀರು ಹಿಡಿಯುತ್ತಿದ್ದಾಗ ನೆರೆಮನೆಯವರಾದ ಸತೀಶ್ ಹಾಗೂ ನಂಜುಂಡೇಗೌಡ ಹಸುವಿನ ಮೈ ತೊಳೆಯುತ್ತಿದ್ದರು. ಹೀಗಾಗಿ ಕುಡಿಯುವ ನೀರು ಗಲೀಜಾಗುತ್ತೆ ಅಂತ ಗಂಗರಾಜು ಪತ್ನಿ ರೇಖಾ ಅವರು ಸತೀಶ್ ಹಾಗೂ ನಂಜುಡೇಗೌಡಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಆದರೆ ಈ ವೇಳೆ ಸತೀಶ್ ಮನೆಯವರು ಗಂಗರಾಜು ಹಾಗೂ ಆತನ ಪತ್ನಿ ಮೇಲೆ ಏಕಾಏಕಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಇದೇ ವೇಳೆ ಗಂಗರಾಜು ಕೈಯಲ್ಲಿ ಎತ್ತಿಕೊಂಡಿದ್ದ ಒಂದು ವರ್ಷದ ಮಗು ನಿರೀಕ್ಷಾ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡ ನಿರೀಕ್ಷಾ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಇನ್ನು ಈ ಸಂಬಂಧ ಸತೀಶ್, ನಂಜುಂಡೇಗೌಡ, ಜಯಮ್ಮ, ಹಾಗೂ ತಂಗ್ಯಮ್ಮ ಸೇರಿದಂತೆ 6 ಮಂದಿ ಮೇಲೆ ಹಾಸನ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

15 − ten =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top