ಧರ್ಮ ವಿಚಾರದಿಂದ ರಾಜಕಾರಣಿಗಳು ದೂರವಿರಲಿ

Posted In : ಬಾಗಲಕೋಟೆ, ರಾಜ್ಯ

ಬಾಗಲಕೋಟೆ: ನಾಳೆ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಚಚೆ೯ ಇಟ್ಟುಕೊಂಡಿದ್ದೇ ತಪ್ಪು ಎಂದು ಮಾಜಿ ಸಿಎಮ್ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಗುಳೇದಗುಡ್ಡದಲ್ಲಿ ನೇಕಾರ ಪರ್ವ ಕಾರ್ಯಕ್ರಮದ ವೇಳೆ ಮಾತನಾಡಿದ ಹೆಚ್ಡಿಕೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕಾಗಿ ಯಾವುದೋ ಒಂದು ಸಮಿತಿ ರಚನೆ ಮಾಡಿದ್ದಾರೆ. ಅದನ್ನು ರಚನೆ ಮಾಡಿ ಒಂದೆರಡು ತಿಂಗಳು ಆಗಿಲ್ಲ. ಆ ಸಮಿತಿಯಿಂದ ಏನು ಬೇಕಾದರೂ ವರದಿ ಬರೆಯಿಸಿಕೊಂಡಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.

ಎರಡೇ ತಿಂಗಳಲ್ಲಿ ಸಮಿತಿ ಕೊಟ್ಟಿರುವ ವರದಿ ಎಷ್ಟರ ಮಟ್ಟಿಗೆ ಇದೆ ಅನ್ನೋದನ್ನ ಯಾರು ಬೇಕಾದರೂ ಅಥ೯ ಮಾಡಿ ಕೊಳ್ಳಬಹುದು.

ಇಂತಹ ವಿಚಾರಗಳಲ್ಲಿ ಸಮಾಜದ ಧಾರ್ಮಿಕ ಗುರುಗಳೇ ಪರ ವಿರೋಧ ಚಚಿ೯ಸಿ ಸಕಾ೯ರದ ಮುಂದಿಡೋದು ಸೂಕ್ತ.ಸಮಿತಿ ವರದಿಯಿಂದ ಗೊಂದಲಗಳು ಉಂಟಾಗಿ ಸಮಾಜದಲ್ಲಿ ಅರಾಜಕತೆ ಉಂಟು ಮಾಡೋದು ಬೇಕಿಲ್ಲ ಎಂದರು.ಇನ್ನು ಇದೆ ವೇಳೆ ಐಪಿಎಸ್ ಅಧಿಕಾರಿಗಳ ಬಂಡಾಯ ವಿಚಾರ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಇದು ಸಕಾ೯ರದ ನಿಲುವನ್ನು ತೋರಿಸಿಕೊಡುತ್ತೆ ಇದೇ ರೀತಿ ಸಕಾ೯ರ ಮುಂದುವರೆದರೆ ಸಕಾ೯ರದ ವಿರುದ್ದ ಜನರೇ ಬಂಡಾಯ ಏಳುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

4 − 4 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top