ಅನ್ಯ ಭಾಷಿಗರು ಕನ್ನಡದ ಮುಖ್ಯವಾಹಿನಿಗೆ ಬರಲಿ

Posted In : ಸಂಗಮ, ಸಂಪುಟ

ನನ್ನ ಆಪ್ತಮಿತ್ರರೊಬ್ಬರ ಮಗ ಇತ್ತೀಚೆಗಷ್ಟೇ ಬಿ.ಇ ಪದವಿಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಆವನಿಗೊಂದು ನೌಕರಿ ಸಿಕ್ಕಿತು. ತರಬೇತಿಗಾಗಿ ಚೆನೈಗೆ ನಿಯುಕ್ತಗೊಂಡ. ಅಲ್ಲಿ ತಮಿಳರೂ ತರಬೇತಿಗೆ ನಿಯುಕ್ತಗೊಂಡಿದ್ದರು. ಎಲ್ಲರೂ ಇವನನ್ನು ತಮಿಳಿನಲ್ಲಿಯೇ ಸಂಭೋದಿಸುತ್ತಿದ್ದರು. ಅಪ್ಪಟ ಕನ್ನಡಿಗನಾದ ಇವನಿಗೆ ಏನೆಂದೂ ಅರ್ಥವಾಗದಿದ್ದಾಗ. I am from karnataka, i know only kannada and english ಎಂದು ಹೇಳಿದ. ಅದಕ್ಕವರು Are you from Bangalore? ಎಂದು ಪ್ರಶ್ನಿಸಿದರು. ಇವನು ಹೌದೆಂದ. ಅದಕ್ಕೆ ತಮಿಳು ಸಹಪಾಠಿಗಳು " it is wonderful! Being a bangalorean, how is that you don ' t know Tamil? ಒಮ್ಮೆ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ . ಹಿಂಬದಿಯ ಸೀಟಿನಲ್ಲಿ ಜರ್ದಾ ಜಿಗಿಯುತ್ತಾ, ಕುಳಿತಿದ್ದ ಪ್ರಯಾಣಿಕನೊಬ್ಬನನ್ನು ಗಮನಿಸಿದೇ ಏರು ಧ್ವನಿಯಲ್ಲಿ ಮೊಬೈಲ್‌ನಲ್ಲಿ ಅರುತ್ತಿದ್ದ. ‘ಬೆಂಗಳೂರ್ ಏಕ್‌ದಂ ಸಸ್ತಾ ಹೈ’ ಕೋಯಿ ಪ್ರಾಬ್ಲಂ ನಹೀ ಹೈ ಇದರ್. You just come down here.ಬಾದ್ ಮೇ ಕಾಂ ದೆಖೇಂಗೆ’ ಎಂದ. ಬೆಳಗಾವಿ ನಗರಸಭೆಯ ಸಭೆಯೊಂದರಲ್ಲಿ ಮಹಾರಾಷ್ಟ್ರ ಏಕೀಕರಣ ಸದಸ್ಯರು ಜಿಲ್ಲಾಧಿಕಾರಿಗಳನ್ನು ಮರಾಠಿಯಲ್ಲಿಯೇ ಮಾತನಾಡುಲು ಒತ್ತಾಯಿಸಿದಾಗ, ಜಿಲ್ಲಾಧಿಕಾರಿಗಳು ಇದಕ್ಕೆ ಒಪ್ಪಲಿಲ್ಲ.

ಈ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅನ್ಯಭಾಷಿಕರು ಕರ್ನಾಟಕವನ್ನು, ಕನ್ನಡಿಗರನ್ನು ತಾವೇ ಸಾಕುತ್ತಿದಂತೆ ವರ್ತಿಸುತ್ತಿದ್ದಾರೆ. ಎಂದೇನಿಸುವುದಿಲ್ಲವೇ? ಆದರೆ, ಬೆಂಗಳೂರು ‘ಕನ್ನಡಿಗರಿಗೂ’ ಆಶ್ರಯ ನೀಡಿದೆ. ಇದರಲ್ಲಿ ಆಶ್ಚರ್ಯವೇನು ಇಲ್ಲ. ಮೂಲತಃ ವಲಸಿಗರು ಉಳ್ಳವರಲ್ಲ, ಹೆಚ್ಚು ವಿದ್ಯಾವಂತರೂ ಅಲ್ಲ, ಒಂದಿಷ್ಟು ಅಕ್ಷರ ಜ್ಞಾನವಿರುವವರು. ಅಲ್ಪಸ್ವಲ್ಪ ಜಮೀನು ಇದ್ದರೂ ಮಳೆಯ ಅಭಾವದಿಂದ, ಬರ, ಬಡತನದಿಂದಾಗಿ ಜೀವನಸಾಗಿಸಲು ಕುಟುಂಬ ಸಮೇತವಾಗಿ ವಲಸೆ ಬಂದಿದ್ದಾರೆ. ಇವರಲ್ಲಿ ಮಹಿಳೆಯರು ಉಳ್ಳವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರೆ, ಪುರುಷರು ಸೆಕ್ಯೂರಿಟಿ ಗಾರ್ಡ್‌ಗಳಾಗಿಯೋ, ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರಾಗಿಯೋ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುವರು. ದುಂದು ವೆಚ್ಚಿಗರಲ್ಲ. ಅಚ್ಚ ಕನ್ನಡಿಗರು.ಕರ್ನಾಟಕದಲ್ಲಿನ ಮಾನವ ಸಂಪನ್ಮೂಲ ಮತ್ತು ಹಣ ಕನ್ನಡಿಗರಿಗೆ ಸೇರುತ್ತಿದೆ ಎಂಬುದೊಂದು ತೃಪ್ತಿಯೊಂದಿಗೆ ಕೊನೆಯ ಪಕ್ಷ ಇಂತಹ ವಲಸಿಗರಿಂದಲಾದರೂ ಬೆಂಗಳೂರಿನಲ್ಲಿ ‘ಕನ್ನಡ’ ಭಾಷೆಯೂ ಉಳಿಯಲು ನೆರವಾಗುತ್ತಿದೆ ಎಂಬುದರಲ್ಲಿ ತಪ್ಪಿಲ್ಲ.ಇವೆಲ್ಲಾ ಏನೇ ಇದ್ದರೂ ಕನ್ನಡಿಗರು ಸೂಕ್ಷ್ಮಾತಿ ಸೂಕ್ಷ್ಮ ಸನ್ನಿವೇಶದಲ್ಲಿ ತಾಳ್ಮೆಯನ್ನು ಪ್ರದರ್ಶಿಸುತ್ತಾರೆ.

 ಆದರೂ ಕನ್ನಡಿಗನ ರಾಜಕೀಯ ಶಕ್ತಿಯಲ್ಲಿ ‘ಕನ್ನಡ’ ಎಂದರೆ ಅದು ಚರ್ಚಿಸುವ, ವಾದಿಸುವ ವಿಷಯವೇ ಅಲ್ಲವೆಂಬಂತಾಗಿದೆ. ಇದು ಅಧಿಕಾರ ಹಿಡಿಯಲು ಎಷ್ಟರ ಮಟ್ಟಿಗೆಅನುಕೂಲವಾದೀತು ಎಂಬುದು ರಾಜಕೀಯ ವಲಯದ್ದು. ಕನ್ನಡಿಗರ ಕೂಗಿಗೆ ರಾಜಕೀಯ ವಲಯದಲ್ಲಿ ಜಾಣ ಕಿವುಡು ಪ್ರದರ್ಶನವಾದರೆ, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಕಡ್ಡಾಯ ಎಂಬುದು ಆಶ್ವಾಸನೆ ಅಷ್ಟೆ. ಈ ಕುರಿತು ಅಧಿವೇಶನ ಸಮಯದಲ್ಲಿ ಯಾವುದೇ ಪಕ್ಷದ ಶಾಸಕರು ಪ್ರಶ್ನೆ ಕೇಳುವ ಅಥವಾ ಸೂಚನೆ ನೀಡುವ ಪ್ರಯತ್ನವನ್ನೇ ಮಾಡಿಲ್ಲ. ಆದರೆ -ಲಾನುಭಾವಿಗಳ ಸಂಖ್ಯೆ ಕಡಿಮೆ ಎಂಬ ನೆಪವೊಡ್ಡಿ ಕನ್ನಡ ಶಾಲೆಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿವೆ. ಆಂಗ್ಲ ಮಾದ್ಯಮ ಶಾಲೆಗಳನ್ನು ತೆರೆಯಲು ಅನುಮತಿ ನೀಡುತ್ತಲೇ ಇದೆ. ಇದಕ್ಕೆ ಕಾರಣ ಖಾಸಗಿ ಶಿಕ್ಷಣ ಕ್ಷೇತ್ರಗಳು ರಾಜಕೀಯ ವಲಯದ ಪ್ರಭಾವಿಗಳ ಹಿಡಿತದಲ್ಲಿರುವುದು.ಪ್ರಸ್ತುತ ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿಯೂ ಕನ್ನಡಿಗರ ಕೂಗಿಗೆ ರಾಜಕೀಯ ವಲಯದಲ್ಲಿ ಬೆಂಬಲವಿಲ್ಲ. ಕನ್ನಡಿಗರಲ್ಲಿ ಕಳೆದ ಹದಿನೆಂಟು ವರ್ಷಗಳ ಕಾಲ ಪ್ರತಿನಿಧಿಸುತ್ತಿದ್ದ ವೆಂಕಯ್ಯನಾಯ್ಡುರವರ ಬಗ್ಗೆ ಯಾವುದೇ ದ್ವೇಷವಿಲ್ಲ. ಕನ್ನಡಿಗರಿಗೇ ಆದ್ಯತೆ ನೀಡಬೇಕು ಎಂಬುದೇ ಹಕ್ಕೊತ್ತಾಯವಾಗಿದೆ. ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿರುವ 28 ಸಂಸದರಲ್ಲಿ ಬಿಜೆಪಿಯ 17ಮಂದಿ ಸಂಸದರೂ ಕನ್ನಡಿಗರೇ.

ಲೋಕಸಭೆಗೆ ಪ್ರಜೆಗಳೇ ನೇರವಾಗಿ ಆಯ್ಕೆ ಮಾಡುತ್ತಾರೆ. ಆದರೆ, ರಾಜ್ಯಸಭೆಗೆ ಸದಸ್ಯರನ್ನು ಆಯಾ ರಾಜ್ಯದ ಚುನಾಯಿತ ಶಾಸನ ಸಭಾ ಸದಸ್ಯರು ಆಯ್ಕೆ ಮಾಡುತ್ತಾರೆ. ಕರ್ನಾಟಕದ 224 ಶಾಸನಸಭಾ ಸದಸ್ಯರು ಸಹ ಎಲ್ಲಿಂದಲೋ ಬಂದವರಲ್ಲ ಅವರೂ ಕನ್ನಡಿಗರೇ.ವಿಧಾನ ಪರಿಷತ್ ಆಗಲಿ ರಾಜ್ಯಸಭೆಯಾಗಲಿ, ಇವು ಚಿಂತಕರ ಚಾವಡಿ ಇದ್ದಂತೆ ‘ಮೇಲ್ಮನೆ’ ಎಂಬ ಮತ್ತೊಂದು ಹೆಸರು ಈ ಚಾವಡಿಗೆ ಇದೆ. ವಿಧಾನಸಭೆ ಅಥವಾ ಲೋಕಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಈ ಮೇಲ್ಮನೆ ಎಂಬ ಚಿಂತಕರ ಚಾವಡಿಯಲ್ಲಿ ಆನುಮೋದನೆಯಾಗಲೇ ಬೇಕು. ಅಂದರೆ ಚಿಂತಕರ ಚಾವಡಿಯಲ್ಲಿನ ಸದಸ್ಯರು ತಾವು ಪ್ರತಿನಿಧಿಸುವ ಭೌಗೋಳಿಕ ಪ್ರದೇಶದ ಹಾಗೂ ಜನಸಮುದಾಯವನ್ನು ಪ್ರತಿನಿಧಿಸುವಂತಿರಬೇಕು.ನಮ್ಮ ಹಳೆಯ ಮೈಸೂರು ಸಂಸ್ಥಾನದಲ್ಲಿ ರಾಜಾಳ್ವಿಕೆ ಇದ್ದಾಗ ಚುನಾವಣೆಗಳಿರಲಿಲ್ಲ. ಆ ಸನ್ನಿವೇಶದಲ್ಲಿ ಮಹಾರಾಜರು, ದಿವಾನರು, ಪ್ರಜಾಪ್ರತಿನಿಧಿಗಳು ಸಭೆಯನ್ನು ಕೈಗೊಂಡು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸುತ್ತಿದ್ದರು.

ಈ ಪ್ರಜಾಪ್ರತಿನಿಧಿಗಳು ‘ಸಮಾಜದ ಚಿಂತಕರಾಗಿರಬೇಕು’ ಎಂಬುದೊಂದೇ ಮಾನದಂಡವಾಗಿತ್ತು. ಜಾತಿ ಲೇಪನವೇ ಇರಲಿಲ್ಲ. ಇಲ್ಲಿ ದಿವಾನರಾಗಿದ್ದ ರಂಗಾಚಾರ್ಯರು, ಇಸ್ಮಾಯಿಲ್ ಮತ್ತು ಸರ್‌ಎಂ ವಿಶ್ವೇಶ್ವರಯ್ಯ, ಪ್ರಜಾಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದ ಡಿವಿಜಿಯವರನ್ನ ಸ್ಮರಿಸಬೇಕು.ಈಗಿನ ಒಕ್ಕೂಟ ವ್ಯವಸ್ಥೆಯಲ್ಲಿ ಮತ್ತು ರಾಜಕೀಯ ಸನ್ನಿವೆಶದಲ್ಲಿ ಎಲ್ಲವೂ ತಲೆಕೆಳಗು. ಒಂದು ಭೌಗೋಳಿಕ ಪ್ರದೇಶವನ್ನು ಮೇಲ್ಮನೆಗೆ ಪ್ರತಿನಿಧಿಸುವ ಅಭ್ಯರ್ಥಿಗಳ ಮನೋಧರ್ಮ ಯಾವ ರಿತಿಯದ್ದು ಎಂಬುದರ ಬಗ್ಗೆ ಯೋಚಿಸಬೇಕಾದ ಅನಿವಾರ್ಯ ಕನ್ನಡಿಗರಿಗೆ ಒದಗಿದೆ. ರಾಜ್ಯಸಭೆಗೆ ಮರುಪ್ರವೇಶಿಸಲು ಬಯಸಿದ್ದ ವೆಂಕಯ್ಯ ನಾಯ್ಡುರವರು ಆಡಿರುವ ಮಾತುಗಳು ಅವರ ದೌರ್ಬಲ್ಯವೋ? ಅಥವಾ ಧೈರ್ಯವೋ? ತಿಳಿಯದು.

 ಒಟ್ಟಿನಲ್ಲಿ ಕರ್ನಾಟಕದ ಶಾಸನ ಸಭೆಯ ಜನಪ್ರತಿನಿಧಿಯೇ ಮುಖ್ಯರಾದರೇ ಹೊರತು ಅಖಂಡ ಕರ್ನಾಟಕವನ್ನು ಪ್ರತಿನಿಧಿಸುವ ಮೇಲ್ಮನೆಯ ಹಿರಿಯ ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ.ಕಳೆದ ಹದಿನೆಂಟು ವರ್ಷಗಳಿಂದ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದ ಮತ್ತು ಈ ಮರು ಆಯ್ಕೆ ಬಯಸಿದ್ದ ನಾಯ್ಡುರವರು ಇತ್ತೀಚಿಗೆ ಬಹಿರಂಗ ಸಭೆಯಲ್ಲಿ ಮಾತಾಡಿದ್ದು ತೆಲುಗಿನಲ್ಲಿ .‘ಸುಲಿದ ಬಾಳೆ ಹಣ್ಣಿನಂತಿರುವ ಕನ್ನಡ ಭಾಷೆಯನ್ನು ಕಲಿಯಲು ಇಷ್ಟು ಸಮಯ ಸಾಲದೇ? ಇದರ ಅರ್ಥ ಅವರು ಕನ್ನಡ ವಿರೋಧಿ ಎಂಬುದು.ಇದೇನೇ ಇದ್ದರೂ ಎಲ್ಲ ಭಾಷಿಕರಿಗೂ ಕರ್ನಾಟಕ ಆಶ್ರಯ ನೀಡಿದೆ ಇದು ಕನ್ನಡಿಗರ ಉದಾರ ನೀತಿ ಮತ್ತು ಹೆಮ್ಮೆಯಾದರೂ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಕರ್ನಾಟಕದ ಜನರು ಸಹಿಸರು ಎಂಬುದು ಅನ್ಯಭಾಷಿಕರು ಅರ್ಥಮಾಡಿಕೊಳ್ಳಬೇಕು. ಕನ್ನಡದ ನೆಲದ ಭೌಗೋಳಿಕ ಸಂಸ್ಕೃತಿಯಲ್ಲಿ ತೊಡಗಿಸಿಕೊಂಡರೆ ಅವರಿಗೆ ಕನ್ನಡಿಗರ ಸಹಾಯ ಹಸ್ತ ಇದ್ದೇ ಇದೆ

ಅಂಜನಾದ್ರಿ

(ಲೇಖಕರು ಹವ್ಯಾಸಿ ಬರಹಗಾರರು)

[email protected]

Leave a Reply

Your email address will not be published. Required fields are marked *

16 − twelve =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top