ವಿಶ್ವವಾಣಿ

ಅವರು ಕ್ರಾಂತಿಕಾರಿ ವಿಚಾರಸಾಗರದ ತರುಣರಾಗಿದ್ದರು!

ಶನಿವಾರ ಬೆಳಗ್ಗೆ ಪತ್ರಿಕೆ ಓದುತ್ತಿದ್ದೆ. ದಿಲ್ಲಿಯಿಂದ ಒಂದು ಫೋನ್ ಕರೆ ಬಂತು. ‘ಮುನಿಶ್ರೀ ತರುಣ ಸಾಗರ ದೈವಾಧೀನರಾದರು’ ಎಂದಿತು ಆ ಕಡೆಯ ದನಿ. ತಕ್ಷಣ ಟ್ವಿಟರ್ ನೋಡಿದೆ. ಸುದ್ದಿ ಬಿತ್ತರವಾಗಿ ಆಗಲೇ ನಾಲ್ಕು ನಿಮಿಷಗಳಾಗಿದ್ದವು. ಎರಡು ದಿನಗಳ ಹಿಂದಷ್ಟೇ ನನ್ನ ಪತ್ನಿ ಜತೆ ಅವರ ಬಗ್ಗೆ ಮಾತಾಡಿದ್ದೆ. ‘ಮುನಿಶ್ರೀ ಅವರನ್ನು ಭೇಟಿ ಮಾಡದೆ ಬಹಳ  ಈಗ ದಿಲ್ಲಿಯಲ್ಲಿ ಇದ್ದಾರಂತೆ. ಹೋಗಿ ನೋಡಿ ಬರೋಣ. ಅವರ ಆರೋಗ್ಯ ಅಷ್ಟು ಸರಿ ಇಲ್ಲ ಅಂತ ಕೇಳಿದ್ದೇನೆ. ಯಾವುದಕ್ಕೂ ಹೋಗಿ ಬರೋಣ’ ಎಂದಿದ್ದೆ.

ಮುಂದಿನ ವಾರ ಹೋಗುವುದೆಂದು ನಿರ್ಧರಿಸಿದ್ದೆವು. ಆದರೆ ಅವರು ಇಷ್ಟು ಅವಸರದಲ್ಲಿ, ಅದೂ ಅವರ ಐವತ್ತೊಂದನೇ ವಯಸ್ಸಿನಲ್ಲಿ ನಮ್ಮನ್ನೆಲ್ಲ ಬಿಟ್ಟು ಹೋಗಬಹುದು ಎಂದು ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ.

ಸುಮಾರು ಒಂದೂವರೆ ತಿಂಗಳ ಹಿಂದೆ ಧರ್ಮಸ್ಥಳಕ್ಕೆ ಹೋದಾಗ ಆಪ್ತರಾದ ಸುರೇಂದ್ರ ಹೆಗ್ಗಡೆ ಅವರು ಸಿಕ್ಕಿದ್ದರು. ‘ಮುನಿಶ್ರೀ ಅವರು  ನಿಮ್ಮನ್ನು ಕೇಳಿದರು’ ಎಂದರು. ‘ಹೌದು, ಅವರನ್ನು ಭೇಟಿ ಮಾಡದೆ ಬಹಳ ದಿನಗಳಾದವು. ಅವರನ್ನು ನೋಡಬೇಕು ಎಂದು ಅನಿಸುತ್ತಿದೆ’ ಎಂದಾಗ ಸದ್ಯದಲ್ಲಿಯೇ ನಾವಿಬ್ಬರೂ ಹೋಗೋಣ ಎಂದಿದ್ದರು ಹೆಗ್ಗಡೆಯವರು. ಅವರ ಆರೋಗ್ಯದಲ್ಲಿ ಸ್ವಲ್ಪ ಏರು-ಪೇರು ಆಗಿದೆ ಅಂತ ಗೊತ್ತಿತ್ತು. ಆದರೆ ಅದು ಇಷ್ಟು ಗಂಭೀರ ಎಂದು ಅಂದುಕೊಂಡಿರಲಿಲ್ಲ.

ಐವತ್ತೊಂದು ಅಗಲುವ ವಯಸ್ಸೇ? ತಮ್ಮ ಹೆಸರಿಗೆ ಅನ್ವರ್ಥವಾಗುವಂತೆ ‘ತರುಣ’ರಾಗಿರುವಾಗಲೇ ನಮ್ಮನ್ನು ಬಿಟ್ಟು ಹೋಗಿಬಿಟ್ಟರು!

ಸುಮಾರು ಹನ್ನೆರಡು ವರ್ಷಗಳ ಹಿಂದೆ ಮುನಿಶ್ರೀ ತರುಣ ಸಾಗರ  ಬೆಳಗಾವಿಗೆ ಆಗಮಿಸಿದ್ದರು. ಅಲ್ಲಿ ಅವರ ಪ್ರವಚನ ಆಯೋಜನೆಯಾಗಿತ್ತು. ಇಡೀ ನಗರದ ತುಂಬೆಲ್ಲ ‘ಕ್ರಾಂತಿಕಾರಿ ಸಂತ’ ರ ಪ್ರವಚನ ಎಂಬ ಬೋರ್ಡುಗಳು ರಾರಾಜಿಸುತ್ತಿದ್ದವು. ನನಗೆ ಕುತೂಹಲ ತಡೆಯಲಾಗದೇ ಅವರ ಪ್ರವಚನ ಕಾರ್ಯಕ್ರಮಕ್ಕೆ ಹೋಗಬೇಕೆನಿಸಿತು. ಅಲ್ಲಿಯವರೆಗೆ ಅವರ ಮಾತುಗಳನ್ನು ಕೇಳಿರಲಿಲ್ಲ. ಅವರ ಬಗ್ಗೆಯೂ ಕೇಳಿರಲಿಲ್ಲ.

ತರುಣ ಸಾಗರರು ಹೈ ವಾಲ್ಯೂಮ್ ನಲ್ಲಿ ಮಾತಾಡುತ್ತಿದ್ದರು. ಸಾಮಾನ್ಯವಾಗಿ ಸಂತರು, ಸ್ವಾಮೀಜಿಗಳು ನಿಧಾನವಾಗಿ, ಸಮಾಧಾನವಾಗಿ ಮಾತಾಡುವುದು ಸಂಪ್ರದಾಯ. ಆದರೆ ತರುಣ ಸಾಗರರು ಏರಿದ ಧ್ವನಿಯಲ್ಲಿ, ಆಕ್ರೋಶಭರಿತರಾಗಿ  ಪಟಾಕಿ ಸರಮಾಲೆಗೆ ಬೆಂಕಿ ಹಚ್ಚಿದಂತೆ ಪಟಪಟ ಮಾತಾಡುತ್ತಿದ್ದರು. ಅವರು ಹೇಳುತ್ತಿದ್ದ ವಿಚಾರಗಳೂ ಅಷ್ಟೇ ಹರಿತವಾಗಿದ್ದವು. ಎಂಥವರಿಗಾದರೂ ಇವರು ಹೊಸ ವಿಚಾರ ಹೇಳುತ್ತಿದ್ದಾರೆ ಎನಿಸುತ್ತಿತ್ತು. ಎಲ್ಲರಿಗಿಂತ ಭಿನ್ನವಾದ ವಿಷಯಗಳನ್ನು ಹೇಳುತ್ತಿದ್ದಾರೆ, ಅಷ್ಟೇ ಅಲ್ಲ, ತಮ್ಮ ಮಾತಿನಿಂದ ಎಲ್ಲರನ್ನೂ ಕೆಣಕುತ್ತಿದ್ದಾರೆ, ಪ್ರೇರೇಪಿಸುತ್ತಿದ್ದಾರೆ ಎಂದೆನಿಸುತ್ತಿತ್ತು.

ಹಾಗೆ ನೋಡಿದರೆ ಅದು ಪ್ರವಚನ ಅಲ್ಲವೇ ಅಲ್ಲ. ನಾನು ಅದನ್ನು ‘ಏಕವಚನ’ ಎಂದು ಮುನಿಶ್ರೀ ಅವರಿಗೇ ತಮಾಷೆಗೆ ಹೇಳಿದ್ದೆ.

ಯಾಕೆಂದರೆ ಅವರು ತಮ್ಮ ಪ್ರವಚನದಲ್ಲಿ ಎಲ್ಲರನ್ನೂ ತರಾಟೆಗೆ  ಅಲ್ಲದೆ ಏನೇ ಹೇಳಲಿ ಅದು ಯಾರಿಗೆ ತಲುಪಬೇಕೋ ಅವರಿಗೇ ತಲುಪುತ್ತದೆ, ಇಲ್ಲವೇ ತಲುಪಿಸುತ್ತಾರೆ. ಅವರು ಎಂದೂ ಮಾತನ್ನು ನುಂಗಿಕೊಂಡವರೇ ಅಲ್ಲ.

ಅಂದು ಮುನಿಶ್ರೀ ಹೇಳಿದ್ದರು -‘ಇಂದು ಸಂತರು – ಮುನಿಗಳು ತಮ್ಮ ಪ್ರವಚನವನ್ನು ಸಾಧಾರಣ ಜನರ ಮಧ್ಯೆ ಮಾಡುವುದರ ಬದಲಾಗಿ, ಲೋಕ ಸಭೆ ಮತ್ತು ರಾಜ್ಯಸಭೆಗಳಲ್ಲಿ ಮಾತಾಡಬೇಕು. ಯಾಕೆಂದರೆ ಭಯಾನಕ ಜನರು ಇರುವುದು ಅಲ್ಲಿಯೇ. ನಮ್ಮ ಸಂಸತ್ತಿನಲ್ಲಿರುವವರನ್ನು ಸುಧಾರಿಸಿದರೆ ದೇಶದ ನೂರು ಕೋಟಿ ಜನರು ತಮ್ಮಷ್ಟಕ್ಕೆ ತಾವೇ ಸುಧಾರಿಸುತ್ತಾರೆ.’

 ಕೆಲ ದಿನಗಳ ನಂತರ ಮುನಿಶ್ರೀ ಅವರು ಬೆಂಗಳೂರಿಗೆ ಆಗಮಿಸಿದರು. ಇಲ್ಲಿ ಸುಮಾರು ಎರಡು ತಿಂಗಳು ಅವರ ಪ್ರವಚನ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಯಾಗಿದ್ದವು. ಆ ಸಂದರ್ಭದಲ್ಲಿ ಅವರನ್ನು ಮುಖತಃ ಕಾಣುವ, ಸಂದರ್ಶಿಸುವ ಅವಕಾಶ ನನಗೆ ಸಿಕ್ಕಿತು. ಅವರ ಜತೆ ಮಾತಿಗೆ ಕುಳಿತರೆ ಸಮಯ ಸರಿದದ್ದೇ ಗೊತ್ತಾಗುತ್ತಿರಲಿಲ್ಲ. ಎಲ್ಲಾ ವಿಷಯಗಳ ಬಗ್ಗೆ ಅವರು ಮುಕ್ತವಾಗಿ ಮಾತಾಡುತ್ತಿದ್ದರು. ಹೀಗಾಗಿಯೇ ಅವರು ಆಪ್ತರಾದರು.

ಚಾಮರಾಜಪೇಟೆಯ ಭಕ್ತರ ಮನೆಯಲ್ಲಿ  ‘ಕೇಶಲೋಚನ’ (ಕ್ಷೌರ) ಕಾರ್ಯಕ್ರಮ  ಮುನಿಶ್ರೀ ಅವರು ತಮ್ಮ ತಲೆಗೂದಲು, ಮೀಸೆ, ಗಡ್ಡದ ಕೂದಲುಗಳನ್ನು ತಾವೇ ಸ್ವತಃ ಕಿತ್ತು ಸ್ವಾಕ್ಷೌರ ಮಾಡಿಕೊಳ್ಳುವ ಧಾರ್ಮಿಕ ಕ್ರಿಯೆಯದು. ಅವರು ಹಾಗೆ ಮಾಡುವಾಗ ಭಕ್ತರು ಅವರ ಪಕ್ಕ ನಿಂತು ಅದನ್ನು ಹರಿವಾಣದಲ್ಲಿ ಹಿಡಿದುಕೊಳ್ಳುತ್ತಿದ್ದರು. ಆ ಅವಕಾಶ ನನಗೂ ಸಿಕ್ಕಿತ್ತು. ಮುನಿಶ್ರೀ ಅವರ ತಲೆ, ಮುಖಗಳಿಂದ ರಕ್ತ ಜಿನುಗುತ್ತಿದ್ದರೂ ಅವರು ನಗು ಮೊಗದಿಂದ ಕೂದಲು ಕೀಳುವುದರಲ್ಲೇ ತಲ್ಲೀನರಾಗಿದ್ದರು. ಜೈನ ಮುನಿಗಳ ತಪಸ್ಸಿನ ಕಠೋರತೆ, ಸನ್ಯಾಸ ದೀಕ್ಷೆಯ ಮಹತ್ವವನ್ನು ಕಣ್ಣಾರೆ ನೋಡುವ  ಕಲ್ಪಿಸಿಕೊಟ್ಟಿದ್ದರು. ಆನಂತರ ಈ ವಿಷಯದ ಬಗ್ಗೆ ಮುನಿಶ್ರೀ ಸುದೀರ್ಘವಾಗಿ ಮಾತಾಡಿದ್ದರು.

ಆಗ ನಾನು ‘ವಿಜಯ ಕರ್ನಾಟಕ’ದಲ್ಲಿದ್ದೆ. ಮುನಿಶ್ರೀ ಅವರ ಮಾತು, ಪ್ರವಚನ ಕೇಳಿ, ಇವನ್ನೆಲ್ಲ ಅವರು ಪತ್ರಿಕೆಗೆ ಬರೆದರೆ ಚೆನ್ನಾಗಿರುತ್ತದೆ ಎಂದೆನಿಸಿತು. ನಮ್ಮ ಪತ್ರಿಕೆಗೆ ಬರೆಯಬೇಕೆಂದು ಅವರನ್ನು ಕೇಳಿಕೊಂಡೆ. ಇಬ್ಬರೂ ಆ ಅಂಕಣದ ವಿನ್ಯಾಸ ಚರ್ಚಿಸಿದೆವು. ಹತ್ತು – ಹನ್ನೆರಡು ವಾಕ್ಯ ಮೀರದ, ಆದರೆ ಪ್ರಭಾವಿ, ಹರಿತ ಸಂದೇಶವನ್ನೊಳಗೊಂಡ ದೈನಂದಿನ ಅಂಕಣ ಬರೆಯುವುದೆಂದು ನಿರ್ಧಾರವಾಯಿತು. ಅದಕ್ಕೆ ‘ನಗ್ನ ಸತ್ಯ’  ಹೆಸರಿಟ್ಟಾಗ ಅವರಿಗೆ ಖುಷಿಯಾಗಿತ್ತು.

ಅದನ್ನು ಅವರು ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಬರೆದರು. ಅವರ ಈ ಅಂಕಣ ಬಹಳ ಜನಪ್ರಿಯವಾಗಿತ್ತು. ಶಾಲೆಗಳಲ್ಲಿ ಪ್ರಾರ್ಥನೆ ವೇಳೆ ಈ ಅಂಕಣವನ್ನು ಮಕ್ಕಳಿಗೆ ಓದಿ ಹೇಳುತ್ತಿದ್ದರು. ಓದುಗರು ಇದನ್ನು ಕಟ್ ಮಾಡಿ ಇಟ್ಟುಕೊಳ್ಳುತ್ತಿದ್ದರು. ಆನಂತರ ಈ ಬರಹಗಳನ್ನೆಲ್ಲ ಸಂಗ್ರಹಿಸಿ ‘ಕಹಿ ಮಾತ್ರೆಗಳು’ ಎಂಬ ಹೆಸರಿನಲ್ಲಿ ಐದು ಪುಸ್ತಕಗಳು ಪ್ರಕಟವಾದವು. ಈ ಕೃತಿಗಳಿಗೆ ಮುನಿಶ್ರೀ ಅವರ ಆಶಯದಂತೆ ನನ್ನದೇ ಮುನ್ನುಡಿ !

ಅವರು  ಹೋಗುವುದಿದ್ದರೂ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದರು. ವಾಹನ ಪ್ರಯಾಣ ಮಾಡುತ್ತಿರಲಿಲ್ಲ. ‘ಇನ್ನು ನೀವು ನನ್ನನ್ನು ನೋಡಲು ನಾನಿದ್ದಲ್ಲಿಗೆ ಬರಬೇಕು’ ಎಂದು ಬೆಂಗಳೂರಿನಿಂದ ತೆರಳುವಾಗ ಅವರು ತಮಾಷೆಯಾಗಿ ಹೇಳಿದ್ದರು. ಅದಾದ ಬಳಿಕ ಅವರು ಬೆಂಗಳೂರಿಗೆ ಬರಲಿಲ್ಲ. ಬೆಂಗಳೂರಿನಿಂದ ಅವರು ನಿರ್ಗಮಿಸಿದ ನಂತರವೂ ಅವರೊಂದಿಗೆ ನನ್ನ ಸಂಪರ್ಕವಿತ್ತು. ಎಂಟು ವರ್ಷಗಳ ಹಿಂದೆ ಮಹಾರಾಷ್ಟ್ರದ ನಾಗಪುರದಲ್ಲಿ ಅವರು ಚಾತುರ್ಮಾಸ್ಯ ವ್ರತಕ್ಕೆ ಕುಳಿತಾಗ, ಮೂರು ದಿನ ತಮ್ಮ ಜತೆಗೆ ಇರಲೇಬೇಕೆಂದು ಹೇಳಿದಾಗ ನನಗೆ ಇಲ್ಲ ಎಂದು ಹೇಳಲು  ಅವರೊಂದಿಗೆ ಕಳೆದ ಆ ಮೂರು ದಿನಗಳನ್ನು ಮರೆಯುವಂತಿಲ್ಲ.

ಅದಾದ ನಂತರ ಅವರು ಎಲ್ಲೆಲ್ಲಿ ಚಾತುರ್ಮಾಸ್ಯ ವ್ರತಕ್ಕೆ ಕುಳಿತಿರುತ್ತಿದ್ದರೋ ಆಗ ನನಗೆ ತಪ್ಪದೆ ಆಹ್ವಾನ ಕಳಿಸುತ್ತಿದ್ದರು. ಅಲ್ಲದೆ ಪ್ರತಿ ಒಂದು- ಒಂದೂವರೆ ತಿಂಗಳಿಗೊಮ್ಮೆ ಬೆಳಗ್ಗೆ ಫೋನ್ ಮಾಡಿ, ಹದಿನೈದಿಪ್ಪತ್ತು ನಿಮಿಷ ಮಾತಾಡಿ, ಎಲ್ಲರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು.

ನನಗೆ ಮುನಿಶ್ರೀ ಅವರ ಶ್ರೇಷ್ಠತೆ ಕಾಣುತ್ತಿದ್ದುದು ಅವರ ವಿಚಾರಗಳಲ್ಲಿ. ತಮ್ಮ ಎಲ್ಲ ಧಾರ್ಮಿಕ ಕಟ್ಟುಪಾಡುಗಳು, ಆಚರಣೆ, ನಿಯಮ-ನಿಷ್ಠೆ, ಪೂಜೆ, ಪುನಸ್ಕಾರ, ಸಂಸ್ಕಾರಗಳ ಪಾಲನೆಯ  ಅವರು ಹೊಸ ನೋಟ, ಆಧುನಿಕಕ್ಕೆ ಪ್ರಸ್ತುತವಾಗುವ ವಿಚಾರವನ್ನು ಹೊಂದಿದ್ದರು. ಅಲ್ಲದೇ ಅದನ್ನು ಅವರು ನಿರ್ಭೀತವಾಗಿ ವ್ಯಕ್ತಪಡಿಸುತ್ತಿದ್ದರು. ಸಂತರಾದವರು ಕ್ರಾಂತಿಕಾರಿಗಳಾಗಲು ಸಾಧ್ಯವಿಲ್ಲ. ಕ್ರಾಂತಿಕಾರಿಗಳಾದವರು ಸಂತರಾಗುವುದೂ ಸಾಧ್ಯವಿಲ್ಲ. ಆದರೆ ಮುನಿಶ್ರೀ ಅವರು ಇವೆರಡೂ ಆಗಿದ್ದರು. ಹಾಗೆ ನೋಡಿದರೆ ಕ್ರಾಂತಿಕಾರಿ ಮತ್ತು ಸಂತ ಅವೆರಡೂ ಸ್ವಭಾವತಃ ವಿರುದ್ಧ ಪದಗಳು. ಆದರೆ ಅವರಲ್ಲಿ ಮಾತ್ರ ಅವೆರಡೂ ಗುಣವನ್ನು ಸಂತುಲಿತವಾಗಿ ನೋಡಬಹುದಿತ್ತು.

‘ನಾನು ಎಲ್ಲ ಸಂತರಂತೆ ಮೆತ್ತಗೆ ಮಾತಾಡುವುದಿಲ್ಲ. ಸಭೆಯಲ್ಲಿ ಕುಳಿತವರನ್ನು ಜೋಗುಳ ಹಾಡಿ ಮಲಗಿಸುವ  ಮಾತಾಡಲಾರೆ. ನನ್ನ ಮಾತುಗಳು ಮಲಗಿದ್ದವರನ್ನೂ ಎಬ್ಬಿಸಬೇಕು. ಅಜ್ಞಾನಿಗಳನ್ನು ಜ್ಞಾನದ ಮಾರ್ಗದತ್ತ ಕರೆದೊಯ್ಯಬೇಕು. ಅಪ್ರಿಯವಾದ ಸತ್ಯವಾದರೂ ಸರಿಯೇ ಅದನ್ನು ಜೋರಾಗಿ ಹೇಳಬೇಕು. ಹೀಗಾಗಿ ನಾನು ಬಿರುಸಾಗಿ ಮಾತಾಡುತ್ತೇನೆ, ಜೋರಾಗಿ ಕಿರುಚುತ್ತೇನೆ. ತಮ್ಮ ಮಾತುಗಳಿಂದ ಶಿಷ್ಯರನ್ನು ಮಲಗಿಸುವ ಹಲವು ಸಂತರಿದ್ದಾರೆ. ನನಗೆ ಅದು ಸಾಧ್ಯವಾಗದು’ ಎಂದು ಮುನಿಶ್ರೀ ಅಷ್ಟೇ ಮುಕ್ತವಾಗಿ ಹೇಳಿದ್ದರು.

ಮುನಿಶ್ರೀ ಇಷ್ಟವಾಗುತ್ತಿದ್ದುದು ಅವರ ಪ್ರಖರ ವಿಚಾರಗಳಿಂದ, ಭಿನ್ನ ಲಹರಿಗಳಿಂದ. ಒಮ್ಮೆ ಅವರು ಹೇಳಿದ್ದರು – ‘ಐವತ್ತು ವರ್ಷಗಳ ನಂತರ  ಪದ್ಧತಿ ಬದಲಿಸಬೇಕು. ನೂರು ವರ್ಷಗಳ ನಂತರ ಮನೆ ಕೆಡವಬೇಕು. ಐನೂರು ವರ್ಷಗಳ ನಂತರ ಮಂದಿರ- ಮಸೀದಿ ಬೀಳಿಸಿ ಬಿಡಬೇಕು. ಅಷ್ಟೇ ಎಲ್ಲ, ಸಾವಿರ ವರ್ಷಗಳ ತರುವಾಯ ಧರ್ಮಕ್ಕೆ ಬೆಂಕಿ ಹಚ್ಚಬೇಕು. ಐವತ್ತು ವರ್ಷಗಳ ನಂತರ ಊಟದ ಏಕತಾನತೆ ರುಚಿಯನ್ನು ಹದಗೆಡಿಸುತ್ತದೆ. ನೂರು ವರ್ಷಗಳ ನಂತರ ಮನೆ ವಾಸ್ತು ಹಳೆಯದಾಗಿ ತೋರುತ್ತದೆ. ಐನೂರು ವರ್ಷಗಳಲ್ಲಿ ಮಂದಿರ-ಮಸೀದಿ ಸಹ ಆಯುಷ್ಯ ತೀರಿದಂತೆ ಕಾಣುತ್ತದೆ. ಸಾವಿರ ವರ್ಷಗಳಲ್ಲಿ ಧರ್ಮದಲ್ಲಿಯೂ ರೂಢಿಗತ ಕಂದಾಚಾರಗಳಿಂದ ಕೊಲೆ,  ಸೇರಿಕೊಳ್ಳುತ್ತದೆ. ಇಂದು ಪ್ರತಿಯೊಂದು ಧರ್ಮದ ಸ್ಥಿತಿ ಹೀಗೆ ಆಗಿರುವುದರಿಂದ ಅವು ಸಮಸ್ಯೆಗಳಿಗೆ ಸಮಾಧಾನ ನೀಡದಂತಾಗಿವೆ. ಧರ್ಮವೇ ಜನರಿಗೆ ಸಮಸ್ಯೆಗಳಾಗಿಬಿಟ್ಟಿವೆ’

ಈ ವಿಚಾರಗಳನ್ನು ಇಷ್ಟು ನೇರಾನೇರ ವ್ಯಕ್ತಪಡಿಸಲು ಎದೆಗಾರಿಕೆ ಬೇಕು. ಮುನಿಶ್ರೀ ಅವರಲ್ಲಿ ಸಂತನ ವಿವೇಕವೂ ಇತ್ತು, ಸೈನಿಕನ ಧೈರ್ಯವೂ ಇತ್ತು. ದಾರ್ಶನಿಕನ ಕಾಳಜಿಯೂ ಇತ್ತು.ಧರ್ಮಗುರುವಿನ ಮಮತೆ ಇತ್ತು.

ಮುನಿಶ್ರೀ ತಮ್ಮ ವಿಚಾರಗಳಿಂದ, ಪ್ರಖರ ವಾಗ್ಝರಿಯಿಂದ ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದರು. ಅವರ ಮಾತುಗಳನ್ನು ಕೇಳಲು ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ  ಸೇರುತ್ತಿದ್ದರು. ಅವರ ‘ಕಹಿ ಮಾತ್ರೆ’ ಗೆ ಎಂಥ ಸಾಮಾಜಿಕ ಜಾಡ್ಯ, ಪಿಡುಗು ಹಾಗೂ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯವಿತ್ತು .

ಆದರೆ ಅವರು ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಅದೇ ದೊಡ್ಡ ಆಘಾತ. ಆದರೆ ಮುನಿಶ್ರೀ ತಮ್ಮ

ವಿಚಾರ, ಆಚಾರಗಳಿಂದ ನಮ್ಮೊಳಗೆ ಜೀವಂತವಾಗಿರುತ್ತಾರೆ. ಅವರು ಹೇಳಿದ ವಿಷಯಗಳಿಂದ ಪ್ರೇರಣೆ ಪಡೆಯೋಣ.

ಗಡಿಭಾಗದ ಜನರ ತುಮುಲಗಳು

ನೀವು ಕಾಪ್ಕಾ ಕಸ್ಸಾಬೊವಾ ಹೆಸರನ್ನು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಮೂಲತಃ  ಬುಲ್ಗೇರಿಯಾದವಳು. ಕಾಲೇಜು ವಿದ್ಯಾಭ್ಯಾಸ ಮುಗಿಯುವ ಮುನ್ನ ನ್ಯೂಜಿಲೆಂಡ್‌ಗೆ ಹೋಗಿ ನೆಲೆಸಿದಳು. ಅಲ್ಲಿ ಈಕೆ ಮನೆಯಲ್ಲೇ ಫ್ರೆಂಚ್, ರಷ್ಯನ್ ಹಾಗೂ ಇಂಗ್ಲಿಷ್ ಕಲಿತು, ಈ ಭಾಷೆಗಳ ಸಾಹಿತ್ಯದ ಗೀಳು ಅಂಟಿಸಿಕೊಂಡಳು. ಕತೆ, ಕವನ ಬರೆಯಲಾರಂಭಿಸಿದಳು. ಆನಂತರ ಈಕೆ ಸ್ಕಾಟ್‌ಲೆಂಡ್‌ಗೆ ಹೋಗಿ ನೆಲೆಸಿದಳು. ಕಳೆದ ಹದಿಮೂರು ವರ್ಷಗಳಿಂದ ಅಲ್ಲಿಯೇ ವಾಸವಿದ್ದಾಳೆ.

‘ಕಾಪ್ಕಾ ಮೇಲೆ ಕಣ್ಣಿಟ್ಟಿರು, ಬಹಳ ಸೊಗಸಾಗಿ ಬರೆಯುತ್ತಾಳೆ’ ಎಂದು ಒಮ್ಮೆ  ಯೋಗಿ ದುರ್ಲಭಜೀ ಹೇಳಿದ್ದರು. ಅವರು ಕಾಪ್ಕಾ ಬರೆದ ‘”Twelve Minutes of Love’’ ಕೃತಿ ನೋಡಿ ಹಾಗೆ ಹೇಳಿದ್ದರು. ಕಾಪ್ಕಾ ಮೊದಲ ಕವನ ಸಂಕಲನ ಸಾಹಿತ್ಯವಲಯದಲ್ಲಿ ಸಂಚಲನವನ್ನುಂಟುಮಾಡಿತ್ತು.

ಇತ್ತೀಚೆಗೆ ಯೋಗಿ ದುರ್ಲಭಜೀ, ಕಾಪ್ಕಾ ಕಸ್ಸಾಬೊವಾ ಬರೆದ ‘”Border: A Journey to the Edge of Europe’ ಪುಸ್ತಕ ಕಳಿಸಿಕೊಟ್ಟಿದ್ದರು. ಬಿಡುವಿಲ್ಲದ ತಿರುಗಾಟದ ಮಧ್ಯೆ ಕಣ್ಣಾಡಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಕೈಗೆತ್ತಿಕೊಂಡ ಪುಸ್ತಕ ಬೇರೆ ಇತ್ತು. ಆದರೆ ಯೋಗಿಜೀ ಎರಡು ಸಲ ‘ಪುಸ್ತಕ ಓದಿದಿರಾ? ಏನನಿಸಿತು?’ ಎಂದು ಕೇಳಿದ್ದರು. ಆಗ ಎಲ್ಲ  ಬಿಟ್ಟು ಕಸ್ಸಾಬೊವಾ ಕೃತಿ ಓದಲಾರಂಭಿಸಿದೆ. ಯೋಗಿಜೀ ಅಷ್ಟು ವರಾತ ಮಾಡಿ ಓದಿಸಿದ್ದೇಕೆಂದು ಆಗ ಅರಿವಾಯಿತು.

ಬುಲ್ಗೇರಿಯಾ ಒಂದು ವಿಶಿಷ್ಟವಾದ ದೇಶ. ಯಾರ ತಂಟೆಗೆ ಹೋಗದಿದ್ದರೂ ಈ ದೇಶದ ಮೇಲೆ ಎಲ್ಲರ ಕಣ್ಣು. ಅದಕ್ಕೆ ಅದರ ಭೌಗೋಳಿಕತೆಯೇ ಕಾರಣ. ಆಗ್ನೇಯ ಯುರೋಪಿನ ರಾಷ್ಟ್ರವಾಗಿರುವ ಬುಲ್ಗೇರಿಯಾವನ್ನು ರೊಮೇನಿಯಾ, ಸೆರ್ಬಿಯಾ, ಮೆಸಿಡೋನಿಯಾ, ಗ್ರೀಸ್, ಟರ್ಕಿ ಹಾಗೂ ಕಪ್ಪುಸಮುದ್ರಗಳು ಆವರಿಸಿವೆ. ಮೂರು-ನಾಲ್ಕು ದಶಕಗಳ ಹಿಂದಿನವರೆಗೂ ಬುಲ್ಗೇರಿಯಾವನ್ನು ಪಶ್ಚಿಮದ ಹೆಬ್ಬಾಗಿಲು ಎಂದೇ ಕರೆಯುತ್ತಿದ್ದರು. ಈ ಕಾರಣದಿಂದ  ಗೂಢಚಾರರು, ತಲೆಮರೆಸಿ ಓಡಾಡುವವರು ಈ ದೇಶದಲ್ಲಿ ಪ್ರಾಬಲ್ಯ ಸಾಧಿಸಿದ್ದರು. ರೊಮೆನಿಯಾ, ಬುಲ್ಗೇರಿಯಾದ ಮೇಲೆ ಹಿಡಿತ ಸಾಧಿಸಬಹುದೆಂದು ಟರ್ಕಿಯೂ ಮೂಗು ತೂರಿಸುತ್ತಿತ್ತು. ಸೆರ್ಬಿಯಾ ಕಿತಾಪತಿ ಮಾಡಬಹುದೆಂದು ಮೆಸಿಡೋನಿಯಾ ಸುಮ್ಮನೆ ಕುಳಿತುಕೊಳ್ಳುತ್ತಿರಲಿಲ್ಲ. ಗ್ರೀಸ್ ಮೇಲೆ ಟರ್ಕಿಗೆ ಏನೋ ಸಂದೇಹ. ಇವೆಲ್ಲವುಗಳ ಪರಿಣಾಮ ಬುಲ್ಗೇರಿಯಾದಲ್ಲಿ ಅನವಶ್ಯಕವಾಗಿ ತ್ವೇಷಮಯ ವಾತಾವರಣ. ಹಾಗೆಂದು ಬುಲ್ಗೇರಿಯಾವನ್ನು ಸುತ್ತುವರಿದ ದೇಶಗಳಿಗೆ ಅದನ್ನು ಹರಿದು ಮುಕ್ಕಬೇಕೆಂಬ ಹಪಾಹಪಿಯಿರಲಿಲ್ಲ. ಆದರೆ ತನ್ನ ಪಕ್ಕದ ದೇಶ ಬುಲ್ಗೇರಿಯಾ ಜತೆ ಸೇರಿಕೊಂಡು ತನ್ನ ಮೇಲೆ  ಮಾಡಬಹುದೆಂಬ ಆತಂಕ. ಇದೇ ರೀತಿ ಇತರ ದೇಶಗಳಿಗೂ ಇದೇ ಗುಮಾನಿ. ಪರಸ್ಪರ ಅಪನಂಬಿಕೆ, ಸಂಶಯ, ಸುಖಾಸುಮ್ಮನೆ ಅನುಮಾನದಿಂದ ನೋಡುವ ಪ್ರವೃತ್ತಿಯಿಂದಾಗಿ ಬುಲ್ಗೇರಿಯಾ ಹಾಗೂ ಅದರ ಗಡಿಗೆ ತಾಕಿಕೊಂಡಿರುವ ಎಲ್ಲ ದೇಶಗಳೂ ತಾನು ಕಳ್ಳ, ಪರರ ನಂಬ ಎಂಬಂತೆ ಬದುಕುತ್ತಿದ್ದವು. ಪರಸ್ಪರ ಅಕ್ಕಪಕ್ಕದ ದೇಗಳು ಗಾಢ ಅನುಮಾನ ಅಥವಾ ಸಂದೇಹಗಳಲ್ಲೇ ಜೀವಿಸುವಂತಾದರೆ, ಅದು ಭೀಕರ ಯಮಯಾತನೆ. ಏನೇ ಮಾಡಿದರೂ ಯಾರಿಗೂ ಸಮಾಧಾನವಿಲ್ಲ. ಪಕ್ಕದ ದೇಶ ಸುಮ್ಮನಿದ್ದರೂ, ಏನೋ ಕಾರಸ್ಥಾನ ಮಾಡುತ್ತಿರಬಹುದೇನೋ  ದುಗುಡ. ಈ ಮನಸ್ಥಿತಿ ಯಾರಿಗೂ ಬೇಡ. ಇದೊಂದು ರೀತಿಯಲ್ಲಿ ನಮ್ಮ ನೆರಳನ್ನು ನೋಡಿ, ನಾವೇ ಪದೇಪದೆ ಬೆಚ್ಚಿ ಬೀಳುವುದು.

ಈ ದ್ವಂದ್ವ, ತಾಕಲಾಟ, ಸಂದಿಗ್ಧತೆಯನ್ನೆಲ್ಲ ಕಾಪ್ಕಾ ಬಹಳ ಸೊಗಸಾಗಿ ಬಣ್ಣಿಸಿದ್ದಾಳೆ. ಜೀವನದ ಅಧಿಕ ಸಮಯವನ್ನು ತಾಯ್ನಾಡಿನಿಂದ ಹೊರಗೆ ಕಳೆದಿದ್ದರೂ, ಬಾಲ್ಯದ ದಿನಗಳ ತೀವ್ರ ಸಂವೇದನೆ, ನೆನಪು, ಕರುಳಬಳ್ಳಿಯ ನಂಟು, ಮಣ್ಣಿನ ಸೊಗಡಿನ ಸೆಳೆಗಳೆಲ್ಲ ಅಪ್ರಾಯೋಜಿತವಾಗಿ, ಅಚಾನಕ್ ಆಗಿ ಈ ಕೃತಿಯನ್ನು ಬರೆಯಿಸಿದೆ. ಗಡಿಭಾಗದ ಜನರ ತುಮುಲಗಳು ಬಹಳ ತೀವ್ರ  ಎಬ್ಬಿಸುವುದನ್ನು ಕಾಪ್ಕಾ ಕೃತಿಯಲ್ಲಿ ಅನುಭವಿಸಬಹುದು.

 ಈ ಪ್ರೀತಿ ಒಂಥರಾ!

ಇದೇನು ವಿಚಿತ್ರ ಅಂತ ಬೇಕಾದರೂ ಹೇಳಿ. ಮಾಡಲು ಬೇರೆ ಕೆಲಸ ಇಲ್ವಾ ಅಂತಾನಾದರೂ ಕೇಳಿ. ಆದರೆ ಈ ಕ್ರೇಜಿ ಐಡಿಯಾ ಸಾಕಷ್ಟು ಪರಿಣಾಮವನ್ನಂತೂ ಬೀರಿದೆ. ಇತ್ತೀಚೆಗೆ ಆಸ್ಟ್ರೇಲಿಯಾದ ಮೆಲ್ಬರ್ನ್ ನಗರದಲ್ಲಿರುವ ಎಲ್ಲ ಮರಗಳ ಗಣತಿಯನ್ನು ಮಾಡಲು ಅಧಿಕಾರಿಗಳು ನಿರ್ಧರಿಸಿದರು. ಪ್ರತಿ ಮರಕ್ಕೂ ಒಂದು ನಂಬರ್ ಕೊಟ್ಟರು. ಇಮೇಲ್ ಐಡಿ ಕೊಟ್ಟರು. ಯಾವುದಾದರೂ ಮರಕ್ಕೆ ಆಪತ್ತು ಎದುರಾದ ಸಂದರ್ಭದಲ್ಲಿ ಆ  ಇಮೇಲ್ ಮಾಡಿ ಅದರ ಪ್ರತಿಯನ್ನು(cc) ಅಧಿಕಾರಿಗಳಿಗೂ ಕಳಿಸುವಂತೆ ತಿಳಿಸಿದರು. ಆಶ್ಚರ್ಯವೆಂಬಂತೆ, ಆ ನಗರದ ಜನ ತಮಗೆ ಇಷ್ಟವಾದ ಒಂದೊಂದು ಮರವನ್ನು ಪ್ರೀತಿಸಲು, ಇಷ್ಟಪಡಲು ಆರಂಭಿಸಿದರು. ತಾವು ಹೀಗೆ ಇಷ್ಟಪಟ್ಟ ಮರವನ್ನು ನೋಡಲು ಆಗಮಿಸಲಾರಂಭಿಸಿದರು. ಆ ಮರದ ಯೋಗಕ್ಷೇಮದ ಬಗ್ಗೆ  ಕಾಳಜಿ ವಹಿಸಲಾರಂಭಿಸಿದರು. ತಾವು ಇಷ್ಟಪಟ್ಟ ಮರಕ್ಕೆ ಸ್ವಲ್ಪ ಕುಂದುಂಟಾದರೆ ಅದರ ಆರೈಕೆ, ವಾಗಾತಿಗೆ ಮುಂದಾದರು. ಕ್ರಮೇಣ ಆ ಮರದ ಜತೆಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳಲಾರಂಭಿಸಿದರು. ಅದನ್ನು ತಮ್ಮ ಮನೆಯ  ಕಾಣಲಾರಂಭಿಸಿದರು. ವಾರದಲ್ಲಿ ಕೆಲ ಹೊತ್ತು ತಾವು ಇಷ್ಟಪಟ್ಟು ಮರದಡಿಯಲ್ಲಿ ಕುಳಿತುಕೊಳ್ಳಲಾರಂಭಿಸಿದರು. ಒಂದೇ ಮರ ನೂರಾರು ಜನರ ಪ್ರೀತಿಗೆ ಪಾತ್ರವಾಯಿತು. ಇನ್ನು ಆ ಮರವನ್ನು ಕಡಿಯುವ ಪ್ರಸಂಗವೇ ಇಲ್ಲ. ಒಮ್ಮೆ ಬೀಸಿದ ಬಿರುಗಾಳಿಗೆ  ನೂರಾರು ಮರಗಳು ಧರೆಗುರುಳಿದವು. ಆ ಎಲ್ಲ ಮರಗಳನ್ನು ಪ್ರೀತಿಸುತ್ತಿದ್ದವರು, ಇಮೇಲ್ ಬರೆಯುತ್ತಿದ್ದವರು ಬಂದು ಪುನಃ ನೆಟ್ಟರು ಯಾವ ಮರವನ್ನೂ ಸಾಯಲು ಬಿಡಲಿಲ್ಲ.

ಮರವೊಂದಕ್ಕೆ ವೃಕ್ಷಪ್ರೇಮಿ ಬರೆದ ಇಮೇಲ್ ಹೀಗಿದೆ,-‘æ,&”Dearest Golden Elm, I see you everyday on my way to offi ce, but I had no idea of what kind of tree you are. You are the most beautiful tree in the city and I love you, I will be with you forever’

ಈ ಕ್ರೇಜಿ ಐಡಿಯಾ ಸಕಾರಾತ್ಮಕ ಪರಿಣಾಮವನ್ನಂತೂ ಬೀರಿದೆ. ಇದರಿಂದ ಸಾವಿರಾರು ಮರಗಳಿಗೆ ನಿಜವಾದ ಪ್ರೇಮಿಗಳು ಸಿಕ್ಕಿದ್ದಾರೆ. ಆ  ಅವುಗಳ ಅಸ್ತಿತ್ವ ಗಟ್ಟಿಯಾಗಿದೆ. ಈ ಐಡಿಯಾ ನಮ್ಮೂರಲ್ಲಿ  work ಆಗುತ್ತಾ?