ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆರೋಗ್ಯ

Vishwavani Health: ಜಿರಳೆಗಳೆಂದು ಒಪ್ಪಿಕೊಂಡು ತಪ್ಪು ಮಾಡಿದ್ರಾ ಜೆನ್ ಝೀಗಳು?

ಜೆನ್ ಝೀಗಳನ್ನು ಜಿರಳೆಗಳಿಗೆ ಹೋಲಿಸುವುದು ಏಕೆ?

Gen Z: ದೇಶಾದ್ಯಂತ ಗಮನ ಸೆಳೆದಿರುವ ಜೆನ್ ಝೀಗಳು ತಮ್ಮನ್ನು ತಾವು ಜಿರಳೆಗಳು ಎಂದು ಒಪ್ಪಿಕೊಂಡು ತಪ್ಪು ಮಾಡಿದ್ರಾ ? ಈ ಕುರಿತು ವಿಜ್ಞಾನ ಹೇಳುವುದೇನು? ಜಿರಳೆ ಯಾವುದನ್ನು ಪ್ರತಿನಿಧಿಸುತ್ತದೆ ಮತ್ತು ಅವುಗಳಿಂದ ಯಾವ ರೀತಿಯ ಅಪಾಯಗಳಿವೆ ಎನ್ನುವ ಕುರಿತು ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ನೀಡಿರುವ ಮಾಹಿತಿ ಇಲ್ಲಿದೆ.

ತೂಕ ನಿಯಂತ್ರಣದಿಂದ ಚರ್ಮದ ಆರೈಕೆವರೆಗೆ ಕೊಬ್ಬರಿ ಎಣ್ಣೆಯ ಪ್ರಯೋಜನ ಒಂದೆರಡಲ್ಲ!

ಕೊಬ್ಬರಿ ಎಣ್ಣೆಯ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ!

Health Tips: ಭಾರತೀಯ ಅಡುಗೆಯಲ್ಲಿ ಕೊಬ್ಬರಿ ಎಣ್ಣೆಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ತಾಜಾ ತೆಂಗಿನ ತಿರುಳಿನಿಂದ ಹೊರತೆಗೆಯಲಾದ ಈ ನೈಸರ್ಗಿಕ ಎಣ್ಣೆಯು ಕೊಬ್ಬಿನಾಮ್ಲಗಳಲ್ಲಿ ಹಾಗೂ ವಿಶೇಷವಾಗಿ ಲಾರಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಉತ್ಕರ್ಷಣ ನಿರೋಧಕ ಹೆಚ್ಚು ಮಾಡಿ ದೇಹಕ್ಕೆ ಉತ್ತೇಜನ ನೀಡುತ್ತದೆ.​

ಅಡುಗೆ ಎಣ್ಣೆಯನ್ನು ಪದೇ ಪದೆ ಬಳಕೆ ಮಾಡುವ ಅಭ್ಯಾಸ ಇದೆಯೆ? ಹಾಗಾದರೆ ನೀವು ಡೇಂಜರ್‌ ಝೋನ್‌ನಲ್ಲಿದ್ದೀರಿ ಎಂದೇ ಅರ್ಥ!

ಅಡುಗೆ ಎಣ್ಣೆ ಮರುಬಳಕೆ: ತಜ್ಞರು ಹೇಳೋದೇನು?

Health Tips: ಅಡುಗೆಗೆ ಎಣ್ಣೆ ಹಾಕದೇ ಆಹಾರದ ರುಚಿಯೇ ಇಲ್ಲ ಅನ್ನುವ ಮಟ್ಟಿಗೆ ಅಭ್ಯಾಸ ಮಾಡಿಕೊಂಡಿದ್ದೇವೆ. ಅದರೆ ನಾವು ಬಳಸುವ ಎಣ್ಣೆಯೂ ಕೂಡ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಕೆಲವರು ಒಮ್ಮೆ ಕರಿಯಲು ಬಳಸಿದ ಎಣ್ಣೆಯನ್ನು ಪುನಃ ಬಳಕೆ ಮಾಡುತ್ತಾರೆ. ಇದನ್ನು ನಾವು ಸರಿಯೆಂದು ಭಾವಿಸಿದ್ದೇವೆ. ಆದರೆ ಈ ಅಭ್ಯಾಸದ ಕುರಿತು ತಜ್ಞರು ಪ್ರಮುಖ ಎಚ್ಚರಿಕೆಯನ್ನು ನೀಡಿದ್ದಾರೆ.

ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಿಂದ ಅಂಗಾಂಗ ದಾನ ಜಾಗೃತಿ ಅಭಿಯಾನ; ಆರೋಗ್ಯ ಸಚಿವರಿಂದ ಕಾರ್ಯಕ್ರಮಕ್ಕೆ ಚಾಲನೆ

ಆಸ್ಪತ್ರೆಯಿಂದ ಅಂಗಾಂಗ ದಾನ ಜಾಗೃತಿ ಅಭಿಯಾನ

ದೇಶದ ಮೃತ ಅಂಗಾಂಗ ದಾನ ಪ್ರಮಾಣವು ಪ್ರತಿ ದಶಲಕ್ಷ ಜನಸಂಖ್ಯೆಗೆ 1 ದಾನಿಗಿಂತ ಕಡಿಮೆಯಿದ್ದು, ಸ್ಪೇನ್’ನಲ್ಲಿ ಇದು ಪ್ರತಿ ದಶಲಕ್ಷಕ್ಕೆ 48ಕ್ಕಿಂತ ಹೆಚ್ಚಿದೆ. 2025ರಲ್ಲಿ ಭಾರತವು 20,138 ಕಸಿ ಶಸ್ತ್ರಚಿಕಿತ್ಸೆ ಗಳೊಂದಿಗೆ ಒಂದು ಮೈಲಿಗಲ್ಲನ್ನು ದಾಖಲಿಸಿದರೂ, ಅವುಗಳಲ್ಲಿ ಸುಮಾರು 82% ಜೀವಂತ ದಾನಿಗಳನ್ನು ಅವಲಂಬಿಸಿದ್ದವು, ಮತ್ತು ಮಾರ್ಚ್ 2026ರ ಹೊತ್ತಿಗೆ 89,000ಕ್ಕೂ ಹೆಚ್ಚು ರೋಗಿಗಳು ಕಸಿ ನಿರೀಕ್ಷಣಾ ಪಟ್ಟಿಯಲ್ಲಿ ಉಳಿದಿದ್ದಾರೆ, ಈ ಸಂಖ್ಯೆ ಲಭ್ಯವಿರುವ ಅಂಗಾಂಗಗಳಿಗಿಂತ ಬಹಳಷ್ಟು ಮುಂದಿದೆ.

ಸ್ತ್ರೀರೋಗ ಶಸ್ತ್ರಚಿಕಿತ್ಸೆಯಲ್ಲಿ ಫ್ಲೋರಸೆನ್ಸ್-ಮಾರ್ಗದರ್ಶಿತ ತಂತ್ರಜ್ಞಾನಕ್ಕೆ ಉತ್ತೇಜನ: ಸ್ಟ್ರೈಕರ್–ಐಎಜಿಇ ಸಹಭಾಗಿತ್ವ

ಸ್ತ್ರೀರೋಗ ಶಸ್ತ್ರಚಿಕಿತ್ಸೆಯಲ್ಲಿ ಫ್ಲೋರಸೆನ್ಸ್-ಮಾರ್ಗದರ್ಶಿತ ತಂತ್ರಜ್ಞಾನ

ಎಫ್‌ಜಿಎಸ್ ಕ್ಷೇತ್ರದಲ್ಲಿ ಗುಣಮಟ್ಟದ ಶೈಕ್ಷಣಿಕ ಅವಕಾಶಗಳ ಲಭ್ಯತೆಯನ್ನು ವಿಸ್ತರಿಸಲು ಸ್ಟ್ರೈಕರ್ ಮತ್ತು ಐಎಜಿಇ ಉದ್ದೇಶಿಸಿವೆ. ಮುಂದಿನ ಎರಡು ವರ್ಷ ಗಳಲ್ಲಿ ದೇಶದಾದ್ಯಂತ ವಿವಿಧ ವೈದ್ಯಕೀಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಈ ಸಹಯೋಗದಡಿ ಆಯೋಜಿಸಲಾಗುವುದು. ಭಾಗವಹಿಸುವ ಶಸ್ತ್ರಚಿಕಿತ್ಸಕರು ಭಾರತದ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ತಜ್ಞರಿಂದ ಕಲಿಯುವ ಅವಕಾಶ ಪಡೆಯಲಿದ್ದು, ಇದರಿಂದ ಜ್ಞಾನ ವಿನಿಮಯಕ್ಕೆ ಉತ್ತೇಜನ ದೊರೆಯಲಿದೆ ಮತ್ತು ಸ್ತ್ರೀರೋಗ ಶಸ್ತ್ರಚಿಕಿತ್ಸೆಯಲ್ಲಿ ಜಾಗತಿಕ ಉತ್ತಮ ಪದ್ಧತಿಗಳ ಅಳವಡಿಕೆಗೆ ಪ್ರೋತ್ಸಾಹ ದೊರೆಯಲಿದೆ

ರೋಗನಿರೋಧಕ ಶಕ್ತಿ, ಒತ್ತಡ ನಿವಾರಣೆಗೆ ರಾಮಬಾಣ ಈ ಗಿಡಮೂಲಿಕೆಗಳು!

ಈ ಗಿಡಮೂಲಿಕೆಗಳ ಬಳಕೆ ದೈನಂದಿನ ಜೀವನದಲ್ಲಿರಲಿ!

Health Tips: ಭಾರತೀಯ ಸಂಸ್ಕೃತಿಯಲ್ಲಿ ಗಿಡಮೂಲಿಕೆಗಳಿಗೆ ಹಿಂದಿನಿಂದಲೂ ಪ್ರಾಮುಖ್ಯತೆ ಇದೆ.ಇವುಗಳು ಅಡುಗೆಯ ರುಚಿ ಹೆಚ್ಚು ಮಾಡುವುದಲ್ಲದೆ ವೈದ್ಯಕೀಯವಾಗಿ ಹಲವು ರೋಗಗಳಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಲಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು,ಜೀರ್ಣಕ್ರಿಯೆ ಯನ್ನು ಸುಧಾರಿಸಲು, ಉರಿಯೂತವನ್ನು ಕಡಿಮೆ ಮಾಡುವ ಹಾಗೂ ಚಯಾಪಚಯವನ್ನು ಸಮತೋಲನಗೊಳಿಸುವ ಆರೋಗ್ಯವನ್ನು ಬೆಂಬಲಿಸುತ್ತವೆ.

Vishwavani Health: ನಿಮ್ಮ ಹಿತ್ತಿಲಿನಲ್ಲಿ ಬೆಳೆಯುವ ನೀಲ ಶಂಖ ಪುಷ್ಪ ಬಳಸಿ ಆರೋಗ್ಯ, ಸೌಂದರ್ಯ ಹೆಚ್ಚಿಸಬಹುದು; ಎಲ್ಲಿ ಸಿಕ್ಕರೂ ಬಿಡಬೇಡಿ Video

ಸೌಂದರ್ಯ ಹೆಚ್ಚಿಸಲು ಬಳಸಿ ನೀಲಶಂಖ ಪುಷ್ಪ

ಸಾಮಾನ್ಯವಾಗಿ ಎಲ್ಲೆಂದರಲ್ಲಿ ಬೆಳೆಯುವ ನೀಲಶಂಖ ಪುಷ್ಪ ಎಲ್ಲೇ ಸಿಕ್ಕರೂ ಬಿಡಬೇಡಿ. ಇದರಲ್ಲಿ ನಾನಾ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಇದರಿಂದ ಕಣ್ಣು, ಮುಖ್ಯ, ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲ ಇನ್ನೂ ಹಲವಾರು ರೀತಿಯ ಪ್ರಯೋಜನವನ್ನು ಪಡೆಯಬಹುದು ಎನ್ನುತ್ತಾರೆ ಆಯುರ್ವೇದ ಸೌಂದರ್ಯ ತಜ್ಞರಾದ ದೀಪಾ ನಾಗೇಶ್.

Health Tips: ಚುರುಕಾದ ಮೆದುಳು ಬೇಕೇ? ಈ ಆಹಾರಗಳ ಸೇವನೆ ಮಾಡಿ

ಮೆದುಳು ಚುರುಕುಗೊಳ್ಳಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

ನೀವು ಸೇವನೆ ಮಾಡುವ ಆಹಾರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಮೂಲಕ ಆರೋಗ್ಯ ವೃದ್ಧಿಸಿ ಸ್ಮರಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ನೀವು ಆರೋಗ್ಯಕರ ಮತ್ತು ಚುರುಕಾದ ಮೆದುಳನ್ನು ಬೆಂಬಲಿಸಲು ಬಯಸಿದರೆ ನಿಮ್ಮ ಊಟಕ್ಕೆ ಸೇರಿಸಲು ಯೋಗ್ಯವಾದ ಆಹಾರಗಳ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ‌.

Heart Disease Prevention: ಹೃದಯದ ಆರೋಗ್ಯ ಕಾಪಾಡಲು ತಾಜಾ ಹಣ್ಣು, ತರಕಾರಿಗೆ ಇರಲಿ ಆದ್ಯತೆ

ಹೃದಯದ ಆರೋಗ್ಯ ಕಾಪಾಡಲು ತಜ್ಞರ ಸಲಹೆ ಏನು?

Health Tips: ನಮ್ಮ ದಿನ ನಿತ್ಯದ ಅಭ್ಯಾಸದಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಳ್ಳುವ ಮೂಲಕ ಹೃದಯವನ್ನು ರಕ್ಷಿಸಬಹುದು. ಇವುಗಳಲ್ಲಿ ಮುಖ್ಯವಾಗಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು ಹೃದಯದ ಆರೋಗ್ಯವನ್ನು ಸುಧಾರಿಸಲು ಸುಲಭ ಮಾರ್ಗ. ಇವು ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ನೈಸರ್ಗಿಕ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ.

ವಾರವೆಲ್ಲಾ ರೆಸ್ಟ್‌ ! ವೀಕೆಂಡ್‌ʼನಲ್ಲಿ ಎವರೆಸ್ಟ್‌ ?

ವಾರವೆಲ್ಲಾ ರೆಸ್ಟ್‌ ! ವೀಕೆಂಡ್‌ʼನಲ್ಲಿ ಎವರೆಸ್ಟ್‌ ?

ಇತ್ತೀಚೆಗೆ ಯುವಕರಲ್ಲಿ ದಿಢೀರ್ ಹೃದಯ ಸ್ತಂಭನದಂತಹ ದಾರುಣ ಪ್ರಕರಣಗಳು ಹೆಚ್ಚಾಗಲು ಇದೂ ಒಂದು ಮುಖ್ಯ ಕಾರಣ. ಬೆಟ್ಟ ಹತ್ತುವ ಹುಮ್ಮಸ್ಸು ವಾರಾಂತ್ಯ ಬಂತು ಅಂದ್ರೆ ಸಾಕು, ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಕುಮಾರಪರ್ವತ, ಮುಳ್ಳಯ್ಯನಗಿರಿ ಅಥವಾ ಹಿಮಾಲಯದ ಕಠಿಣ ಚಾರಣಕ್ಕೆ ಹೊರಡುವ ಯುವಕರ ಸಂಖ್ಯೆ ಕಡಿಮೆ ಇಲ್ಲ

Vishwavani Health: ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಎಚ್ಐವಿ ಸೋಂಕಿತರ ಸಂಖ್ಯೆ; ಕಾರಣವೇನು?

ಜೆನ್ ಝೀಗಳಲ್ಲಿ ಹೆಚ್ಚಾಗುತ್ತಿದೆ ಎಚ್ಐವಿ ಸೋಂಕಿತರ ಸಂಖ್ಯೆ

ಅಸುರಕ್ಷಿತ ಲೈಂಗಿಕತೆಯಿಂದ ಬರುವ ಕಾಯಿಲೆಗಳ ಬಗ್ಗೆ ಅರಿವಿದ್ದರೂ ಜೆನ್ ಝೀಗಳಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಹಲವು ಕಾರಣಗಳಿದ್ದರೂ ಯುವ ಜನರಲ್ಲಿ ತೃಪ್ತಿ ಎಂಬುದು ಇಲ್ಲದೇ ಇರುವುದೇ ಮುಖ್ಯ ಕಾರಣ ಎಂದಿದ್ದಾರೆ ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ. ಜೆನ್ ಝೀಗಳಲ್ಲಿಎಚ್ಐವಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಅವರು ನೀಡಿರುವ ಕಾರಣಗಳು ಇಲ್ಲಿವೆ.

ಮಧುಮೇಹದಿಂದ ರಕ್ತನಾಳಗಳಿಗೆ ಆಗುವ ಹಾನಿ ತಡೆಯಲು ಅರಿಶಿನ ಸಹಾಯ ಮಾಡುತ್ತಾ? ಹೊಸ ಅಧ್ಯಯನದಲ್ಲಿದೆ  ಮಹತ್ವದ ಮಾಹಿತಿ

ಅರಿಶಿನದ ಕರ್ಕ್ಯುಮಿನ್‌ ಮಧುಮೇಹಿಗಳ ರಕ್ತನಾಳಗಳನ್ನು ಕಾಪಾಡಬಹುದೇ?

ಮಧುಮೇಹದಿಂದ ರಕ್ತನಾಳಗಳಿಗೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಅರಿಶಿನದಲ್ಲಿರುವ ಕರ್ಕ್ಯುಮಿನ್ ಸಹಾಯ ಮಾಡಬಹುದು ಎಂದು ಹೊಸ ಅಧ್ಯಯನವೊಂದು ಸೂಚಿಸಿದೆ. ಟೈಪ್-1 ಮಧುಮೇಹ ಹೊಂದಿರುವ ಇಲಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಉರಿಯೂತ ಕಡಿಮೆಯಾಗಿದ್ದು, ರಕ್ತನಾಳಗಳ ಕಾರ್ಯ ಮತ್ತು ರಚನೆಯಲ್ಲಿ ಸುಧಾರಣೆ ಕಂಡುಬಂದಿದೆ. ಆದರೆ ಈ ಫಲಿತಾಂಶಗಳು ಇಲಿಗಳ ಅಧ್ಯಯನಕ್ಕೆ ಮಾತ್ರ ಸೀಮಿತವಾಗಿದ್ದು, ಮನುಷ್ಯರಲ್ಲಿ ಪರಿಣಾಮವನ್ನು ದೃಢಪಡಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ.

Health Tips: ದೇಹದಲ್ಲಿನ ಸಕ್ಕರೆ ಪ್ರಮಾಣ ಇಳಿಸಬೇಕೇ? ಮನೆಯಲ್ಲೇ ಈ ಪಾನೀಯ ತಯಾರಿಸಿ

ಸಕ್ಕರೆ ಮಟ್ಟ ಇಳಿಸಲು ಈ ಗಿಡಮೂಲಿಕೆ ಪಾನೀಯ ಸೇವಿಸಿ

Blood Sugar Levels: ದೇಹದಲ್ಲಿ ಸಕ್ಕರೆಯ ಮಟ್ಟ ಕಾಯ್ದುಕೊಳ್ಳುವುದು ಬಹಳಷ್ಟು ಅಗತ್ಯ. ದೇಹದಲ್ಲಿ ಇದರ ಮಟ್ಟ ಏರಿಳಿತವಾದರೆ ತೂಕ ಹೆಚ್ಚಳ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಸಮತೋಲನದಲ್ಲಿಡಲು ನಾವು ಸೇವಿಸುವ ಆಹಾರ ಕೂಡ ಮುಖ್ಯ. ವೈದ್ಯಕೀಯ ಚಿಕಿತ್ಸೆಗಳ ಜತೆಗೆ, ನೈಸರ್ಗಿಕ ಮನೆಮದ್ದುಗಳು ಮನೆಯಲ್ಲೆ ಬಳಕೆ ಮಾಡುವ ಮೂಲಕ ಸಕ್ಕರೆ ಪ್ರಮಾಣ ಕಡಿಮೆ ಮಾಡಬಹುದು.

ಫೋರ್ಟಿಸ್ ಆಸ್ಪತ್ರೆ-ಅಜಿಲಸ್ ಡಯಾಗ್ನೋಸ್ಟಿಕ್ಸ್ ಸಹಯೋಗ: ಅಜಿಲಸ್- ಫೋರ್ಟಿಸ್ ಕಾರ್ಡಿಯೋ- ರೀನಲ್- ಮೆಟಬಾಲಿಕ್ ಕ್ಲಿನಿಕ್ ನೂತನ ಚಿಕಿತ್ಸಾ ಕೇಂದ್ರ ಲೋಕಾರ್ಪಣೆ

ಫೋರ್ಟಿಸ್ ಆಸ್ಪತ್ರೆ-ಅಜಿಲಸ್ ಡಯಾಗ್ನೋಸ್ಟಿಕ್ಸ್ ಸಹಯೋಗ

ಹೃದ್ರೋಗ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಮತ್ತು ಮಧುಮೇಹದ ನಡುವಿನ ನಿಕಟವಾದ ಪರಸ್ಪರ ಸಂಬಂಧವನ್ನು ಸಂಪೂರ್ಣವಾಗಿ ಮನಗಂಡು, ರೋಗಿಗಳಿಗೆ ಸಮನ್ವಯತೆಯುಳ್ಳ ಮೌಲ್ಯ ಮಾಪನ, ಆರೋಗ್ಯದ ಅಪಾಯಗಳ ಮುಂಚಿತ ಪತ್ತೆ ಹಾಗೂ ಸಮಗ್ರ, ಸಂಯೋಜಿತ ನಿರ್ವಹಣೆಯನ್ನು ಒದಗಿಸಲು ಈ ಕ್ಲಿನಿಕ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

First Liver Nodule clinic: ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ರಾಜ್ಯದ ಮೊದಲ ಲಿವರ್ ನಾಡ್ಯೂಲ್ ಕ್ಲಿನಿಕ್ ಆರಂಭ

ಬಿಜಿಎಸ್ ಆಸ್ಪತ್ರೆಯಲ್ಲಿ ಮೊದಲ ಲಿವರ್ ನಾಡ್ಯೂಲ್ ಕ್ಲಿನಿಕ್ ಆರಂಭ

ರೋಗಿಗಳು ಬೇರೆ ಬೇರೆ ವೈದ್ಯರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಹಲವು ಪರೀಕ್ಷೆಗಳನ್ನು ಪುನರಾ ವರ್ತಿಸುವ ಅಗತ್ಯವನ್ನು ಕಡಿಮೆ ಮಾಡುವುದು ಈ ಕ್ಲಿನಿಕ್‌ನ ಮುಖ್ಯ ಉದ್ದೇಶವಾಗಿದೆ. ಒಂದೇ ಸಮಗ್ರ ಚಿಕಿತ್ಸಾ ವ್ಯವಸ್ಥೆಯ ಮೂಲಕ ತಜ್ಞರ ಅಭಿಪ್ರಾಯ ಮತ್ತು ರೋಗಿಯ ಅಗತ್ಯಕ್ಕೆ ಅನುಗುಣ ವಾದ ವೈಯಕ್ತಿಕ ಚಿಕಿತ್ಸಾ ಸಲಹೆ ಪಡೆಯಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ನಿಮ್ಮ ಮಗುವಿನ ಚಿತ್ರಗಳು, ಕುಳಿತುಕೊಳ್ಳುವ ಭಂಗಿ ಮತ್ತು ಟಿವಿ ನೋಡುವ ಅಭ್ಯಾಸಗಳು ಅವರ ಕಣ್ಣುಗಳ ಬಗ್ಗೆ ಏನು ಹೇಳುತ್ತಿರಬಹುದು?

ನಿಮ್ಮ ಮಗು ತಲೆನೋವು ಇದೆ ಎಂದು ಹೇಳುತ್ತಿದ್ದರೆ...?

ಮಕ್ಕಳಿಗೆ ತಾವು ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಯಾವಾಗಲೂ ಹೇಳಲು ಸಾಧ್ಯ ವಾಗುವುದಿಲ್ಲ. ಬದಲಾಗಿ, ಅವರು ಚಿತ್ರ ಬಿಡಿಸುವ, ಕುಳಿತುಕೊಳ್ಳುವ, ಓದುವ ಅಥವಾ ಟಿವಿ ನೋಡುವ ರೀತಿಯಲ್ಲಿನ ಬದಲಾವಣೆಗಳು ಕೆಲವೊಮ್ಮೆ ಅವರ ದೃಷ್ಟಿಯ ಬಗ್ಗೆ ಪ್ರಮುಖ ಸುಳಿವು ಗಳನ್ನು ನೀಡಬಹುದು.

Health Tips: ಆಯಾಸವೇ? ದೈಹಿಕ, ಮಾನಸಿಕ ಚೈತನ್ಯಕ್ಕೆ ಕಪ್ಪು ಎಳ್ಳು ಸೇವಿಸಿ

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಎಳ್ಳಿನ ಸೇವನೆ ಮಾಡಿ!

Black Sesame Seeds: ಆಧುನಿಕ ಜೀವನ ಶೈಲಿಯಲ್ಲಿ ಆಯಾಸ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಎಂಟು ಗಂಟೆಗಳ ಕಾಲ ಹಾಸಿಗೆಯಲ್ಲಿ ಕಳೆದರೂ ಸುಸ್ತು, ಒತ್ತಡ ಎನ್ನುವುದು ಮತ್ತಷ್ಟು ನಿಶ್ಯಕ್ತಿಯನ್ನಾಗಿ ಮಾಡುತ್ತದೆ. ಹೀಗಾಗಿ ನಾವು ಸೇವಿಸುವ ಆಹಾರವು ದೇಹಕ್ಕೆ ಅಗತ್ಯ ಪೋಷಕಾಂಶವನ್ನು ಒದಗಿಸುವಂತಿರಬೇಕು. ನಿಮ್ಮ ಆಹಾರದಲ್ಲಿ ಎಳ್ಳಿನಂತಹ ಬೀಜಗಳನ್ನು ಸೇರಿಸಿಕೊಳ್ಳುವುದು ಉತ್ತಮ. ಈ ಬೀಜದಲ್ಲಿ ಆಕ್ಸಲೇಟ್ಸ್‌ ಮತ್ತು ಫೈಟಿಕ್ ಆ್ಯಸಿಡ್, ಆ್ಯಂಟಿ-ನ್ಯೂಟ್ರಿಯೆಂಟ್ಸ್‌ನಂತಹ ಹಲವು ಪೋಷಕಾಂಶಗಳು ಇವೆ.

Fitness Tips: ದಿನ ನಿತ್ಯ ವಾಕಿಂಗ್‌ ಮಾಡಿದರೂ ತೂಕ ಇಳಿಕೆಯಾಗಿಲ್ಲವೇ? ಅದಕ್ಕೆ ಈ ತಪ್ಪುಗಳೇ ಕಾರಣ!

ವಾಕಿಂಗ್ ವೇಳೆ ಈ ತಪ್ಪುಗಳನ್ನು ಮಾಡದಿರಿ!

Walking Tips: ಕೆಲವರು ದಿನ ನಿತ್ಯದ ಆಹಾರ ಬಿಟ್ಟಾದರೂ ತೂಕ ಇಳಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಅದರಲ್ಲೂ ತೂಕ ಇಳಿಕೆಗೆ ತಜ್ಞರು ನೀಡುವ ಸರಳ ಸಲಹೆ ಎಂದರೆ ನಡಿಗೆ ಅಥವಾ ವ್ಯಾಯಾಮ. ತೂಕ ಇಳಿಸಿಕೊಳ್ಳಲು ಮತ್ತು ಆರೋಗ್ಯವ ನ್ನು ವೃದ್ಧಿಸಿಕೊಳ್ಳಲು ನಡಿಗೆ ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಮಾರ್ಗ. ಆದರೆ, ದಿನವೂ ತಪ್ಪದೇ ನಡೆದರೂ ಅನೇಕರಿಗೆ ತೂಕ ಇಳಿಕೆಯಾಗುವುದಿಲ್ಲ. ಇದಕ್ಕೆ ಕಾರಣ ವಾಕಿಂಗ್ ವೇಳೆ ಮಾಡುವ ಕೆಲವೊಂದು ತಪ್ಪು.

ಭಾರತದ ಬದಲಾಗುತ್ತಿರುವ ಋತುಗಳು: ಶೀತ, ಅಲರ್ಜಿ ಅಥವಾ ಫ್ಲೂ ಎಂದು ಗುರುತಿಸುವುದು ಹೇಗೆ?

ಶೀತ, ಅಲರ್ಜಿ ಅಥವಾ ಫ್ಲೂ ಎಂದು ಗುರುತಿಸುವುದು ಹೇಗೆ?

ಹಠಾತ್ ಋತುಮಾನ ಬದಲಾವಣೆಗಳು ವೈರಸ್‌ಗಳು ಬದುಕುಳಿಯಲು ಮತ್ತು ಹರಡಲು ಅನುಕೂಲ ವಾಗುವ ಪರಿಸ್ಥಿತಿಗಳನ್ನು ಸೃಷ್ಟಿಸಬಹುದು. ಇದೇ ಸಮಯದಲ್ಲಿ, ಅನೇಕ ನಗರಗಳಲ್ಲಿ ವಾಯು ಗುಣಮಟ್ಟವೂ ಹದಗೆಡುತ್ತಿದ್ದು, ಇದು ನಮ್ಮ ಶ್ವಾಸಕೋಶಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ.

Health Tips: ಆರೋಗ್ಯಕರ ಆಹಾರಪದ್ಧತಿಯಿಂದ ತಿನ್ನುವ ವ್ಯಸನ ತಡೆಯಬಹುದೇ?

ಮಿತಿಮೀರಿ ತಿನ್ನುವ ಅಭ್ಯಾಸ ಇದೆಯೇ? ತಡೆಯುವುದು ಹೇಗೆ?

Health Tips: ಇಡೀ ದಿನ ಮೊಬೈಲ್‌ ಗೀರುವವರನ್ನು ಮಾತ್ರವೇ ವ್ಯಸನಿಗಳು ಎಂದಾಗಬೇಕಿಲ್ಲ. ತಿನ್ನುವ ವ್ಯಸನಿಗಳೂ ಇದ್ದಾರೆ ಎಂದರೆ ಹುಬ್ಬೇರಿಸಬೇಡಿ. ಹೌದು, ಅನಾರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಂಡಲ್ಲಿ ಆಗುವ ಅನಾಹುತಗಳಲ್ಲಿ ಇದೂ ಒಂದು- ತಿನ್ನುವುದೇ ವ್ಯಸನವಾಗುವುದು. ತಿನ್ನುವ ವ್ಯಸನಿಗಳು ಎಂದು ಕರೆಸಿಕೊಳ್ಳುವವರು ಹೇಗಿರುತ್ತಾರೆಂಬ ಬಗ್ಗೆ ತಜ್ಞರು ಈ ಲಕ್ಷಣಗಳನ್ನು ಪಟ್ಟಿ ಮಾಡಿದ್ದಾರೆ.

Contact Lens: ಹೆಚ್ಚಿನ ಕಾಂಟ್ಯಾಕ್ಟ್ ಲೆನ್ಸ್ ಬಳಕೆದಾರರಿಗೆ ಈ ನಿಯಮ. ಏನದು ?

ಹೆಚ್ಚಿನ ಕಾಂಟ್ಯಾಕ್ಟ್ ಲೆನ್ಸ್ ಬಳಕೆದಾರರಿಗೆ ಈ ನಿಯಮ. ಏನದು ?

ಪ್ರತಿ 20 ನಿಮಿಷಗಳಿಗೊಮ್ಮೆ, 20 ಅಡಿ ದೂರದಲ್ಲಿರುವ ವಸ್ತುವನ್ನು 20 ಸೆಕೆಂಡುಗಳ ಕಾಲ ನೋಡಿ. ಹೆಚ್ಚಿನ ಕಾಂಟ್ಯಾಕ್ಟ್ ಲೆನ್ಸ್ ಬಳಕೆದಾರರಿಗೆ ಈ ನಿಯಮವನ್ನು ನಿರ್ದಿಷ್ಟ ಸಮಸ್ಯೆಯನ್ನು ಗಮನ ದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂಬುದು ತಿಳಿದಿರುವುದಿಲ್ಲ. ಮತ್ತು ಆ ಸಮಸ್ಯೆ ಕನ್ನಡಕ ಅಥವಾ ಯಾವುದೇ ದೃಷ್ಟಿ ತಿದ್ದುಪಡಿ ಸಾಧನವನ್ನು ಬಳಸದವರಿಗಿಂತ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಬೆಳಿಗ್ಗೆ ಎದ್ದ ಕೂಡಲೇ ಈ ತಪ್ಪುಗಳನ್ನು ಮಾಡ್ತೀರಾ? ಹಾಗಾದ್ರೆ ಈ ಸಮಸ್ಯೆಗೆ ಬರಬಹುದು ಹುಷಾರ್‌!

ಬೆಳಿಗ್ಗೆ ಎದ್ದ ಕೂಡಲೇ ಮಾಡಬಾರದ ಕೆಲಸಗಳೇನು?

ಬೆಳಗಿನ ತಿಂಡಿ ಸೇವಿಸುವ ಮುನ್ನವೇ ನಮ್ಮ ದೇಹದಲ್ಲಿ ಸಕ್ಕರೆ ಮಟ್ಟ ಏರಿಕೆಯಾಗಲು ನಾವು ಮಾಡುವ ದಿನನಿತ್ಯದ ಅಭ್ಯಾಸಗಳೇ ಮುಖ್ಯ ಕಾರಣವೆಂದು ಆರೋಗ್ಯ ತಜ್ಞರು ಹೇಳುತ್ತಾರೆ. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು, ಬೆಳಗಿನ ಉಪಾಹಾರ ತ್ಯಜಿಸುವುದು ಸೇರಿದಂತೆ ಬೆಳಿಗ್ಗೆ ಮಾಡುವ 5 ತಪ್ಪುಗಳು ಮತ್ತು ಅವುಗಳನ್ನು ಸರಿಪಡಿಸಿಕೊಳ್ಳುವ ಮಾರ್ಗಗಳ ವಿವರ ಇಲ್ಲಿದೆ.

ನಾರಿಯರಲ್ಲಿ ಆಟೋಇಮ್ಯುನ್ ಕಾಯಿಲೆಗಳ ಹೆಚ್ಚಳ ಮತ್ತು ರೋಗ ನಿರೋಧಕತೆಯ ಸವಾಲು

ನಾರಿಯರಲ್ಲಿ ರೋಗ ನಿರೋಧಕತೆಯ ಸವಾಲು

ಎಲ್ಲದರಲ್ಲೂ "ಲೇಡೀಸ್ ಫ಼ಸ್ಟ್" ಇರುವ ಸಮಾಜದಲ್ಲಿ, ಆಟೋಇಮ್ಯುನಿಟಿ ಸಂಬಂಧಿತ ಕಾಯಿಲೆ ಗಳೂ ಪುರುಷರಿಗಿಂತ ನಾಲ್ಕು ಪಟ್ಟು ಮಹಿಳೆಯರಲ್ಲೇ ಹೆಚ್ಚಾಗಿ ಕಾಣಸಿಗುವುದು ವಿಷಾದನೀಯ. ಅನೇಕ ಸಂಶೋಧನೆಗಳ ನಂತರವೂ ದೇಹದ ಈ ವರ್ತನೆಗೆ ಸೂಕ್ತ ಕಾರಣಗಳು ಧೃಢೀಕರಿಸ ಲ್ಪಟ್ಟಿಲ್ಲ. ಆದರೆ ಮಹಿಳೆಯರ ವಯಸ್ಸು, ಆಹಾರಶೈಲಿ, ದೈಹಿಕ ಕಾಯಕಗಳು, ಹಾರ್ಮೋನಿನ ಬದಲಾವಣೆ, ಜೀವನ ಶೈಲಿಯ ಒತ್ತಡಗಳು ಹಾಗೂ ಹೆಚ್ಚುತ್ತಿರುವ ಆಟೋಇಮ್ಯುನ್ ಕಾಯಿಲೆಗಳ ಸಂಬಂಧವು ಸಮೀಕ್ಷೆ ಗಳಲ್ಲಿ ಮೂಲವನ್ನು ಕಂಡುಕೊಳ್ಳುತ್ತಿವೆ.

ಸುಸ್ತು, ಕೂದಲು ಉದುರುವಿಕೆ ಇದೆಯೇ? ದೇಹದಲ್ಲಿ ಕಬ್ಬಿಣದ ಕೊರತೆಯಿರಬಹುದು ಹುಷಾರ್‌! ಪತ್ತೆ ಹಚ್ಚುವುದು ಹೇಗೆ?

ಕಬ್ಬಿಣ ಕೊರತೆ ಇದ್ದರೆ ಪತ್ತೆ ಹಚ್ಚುವುದು ಹೇಗೆ?

Health Tips: ವಯಸ್ಸು ಮತ್ತು ಲಿಂಗದ ತಾರತಮ್ಯವಿಲ್ಲದಂತೆ ಯಾರಿಗಾದರೂ ಕಬ್ಬಿಣದ ಕೊರತೆ ಎದುರಾಗಬಹುದು. ಅದರಲ್ಲೂ ಶೇ. 50೦ರಷ್ಟು ಗರ್ಭಿಣಿಯರು ಕಬ್ಬಿಣದ ಕೊರತೆಯಿಂದ ಬಳಲುತ್ತಾರೆ ಮತ್ತು ಇದರಿಂದ ಮುಂದೆ ತಾಯಿ-ಮಗುವಿಗೆ ಸಮಸ್ಯೆಗಳೂ ಎದುರಾಗುತ್ತವೆ ಎನ್ನುತ್ತದೆ ವೈದ್ಯಲೋಕ. ಕಬ್ಬಿಣದ ಕೊರತೆ ಎದುರಾಗುವುದಕ್ಕೆ ಹಲವಾರು ಕಾರಣಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿದ್ದು, ಆಹಾರದಲ್ಲಿ ಕಬ್ಬಿಣದಂಶ ಕಡಿಮೆಯಿರುವುದು. ಇದಲ್ಲದೆ, ಕೆಲವು ಕಾರಣಗಳಿಂದ ಕಬ್ಬಿಣಾಂಶವನ್ನು ದೇಹ ಸರಿಯಾಗಿ ಹೀರಿಕೊಳ್ಳದೇ ಇರುವುದು ಮತ್ತು ಅತಿಯಾದ ರಕ್ತಸ್ರಾವದಿಂದಲೂ ಈ ಕೊರತೆ ಎದುರಾಗಬಹುದು.

Loading...