ಹೃದಯಾಘಾತ: ಬಸ್ ಚಾಲಕ ಸಾವು

Posted In : ರಾಜ್ಯ, ರಾಮನಗರ

ರಾಮನಗರ: ಹೃದಯಾಘಾತವುಂಟಾಗಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ರಂಗಸ್ವಾಮಿ(55) ಮೃತ ಚಾಲಕ. ಇವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ನಿಡಸಾಲೆ ಗ್ರಾಮದ ನಿವಾಸಿ. 

ಬೆಂಗಳೂರು-ಅಂಬಾಡಹಳ್ಳಿ ನಡುವೆ ಸಂಚರಿಸುವ ಬಸ್ ನಲ್ಲಿ ಚಾಲಕನಾಗಿದ್ದ ರಂಗಸ್ವಾಮಿ, ಇಂದು ತಮ್ಮ ಕರ್ತವ್ಯ ಮುಗಿಸಿ ಜಿಲ್ಲೆಯ ಚನ್ನಪಟ್ಟಣದ ಕೆಎಸ್ ಆರ್ ಟಿಸಿ ಬಸ್ ಡಿಪೋಗೆ ಬಸ್ ತಂದು ನಿಲ್ಲಿಸಿ ಚಾಲಕ ಸೀಟಿನಿಂದ ಕೆಳಗೆ ಇಳಿಯುವಾಗ ಹಠಾತ್ ಕುಸಿದುಬಿದ್ದರು. ಈ ವೇಳೆ ಸ್ಥಳದಲ್ಲಿದ್ದವರು ರಂಗಸ್ವಾಮಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರು ದಾರಿ ಮಧ್ಯೆ ಕೊನೆಯುಸಿರೆಳೆದರೆಂದು ವರದಿಯಾಗಿದೆ. 

ಚನ್ನಪಟ್ಟಣ ಡಿಪೋದ ಹಿರಿಯ ಅಧಿಕಾರಿಗಳು ಭೆಟಿ ನೀಡಿದ್ದಾರೆ. ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Leave a Reply

Your email address will not be published. Required fields are marked *

2 × 5 =

Sunday, 30.04.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ವಸಂತ. ಮಾಸ- ವೈಶಾಕ, ಪಕ್ಷ-ಶುಕ್ಲ, ಚತುರ್ಥಿ, ಭಾನುವಾರ, ನಿತ್ಯನಕ್ಷತ್ರ-ಮೃಗುಣ, ಯೋಗ-ಅತಿಗಂಡ, ಕರಣ-ಭವ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

 

Sunday, 30.04.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ವಸಂತ. ಮಾಸ- ವೈಶಾಕ, ಪಕ್ಷ-ಶುಕ್ಲ, ಚತುರ್ಥಿ, ಭಾನುವಾರ, ನಿತ್ಯನಕ್ಷತ್ರ-ಮೃಗುಣ, ಯೋಗ-ಅತಿಗಂಡ, ಕರಣ-ಭವ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

Back To Top