ವಿಶ್ವವಾಣಿ

ಉತ್ತರದಲ್ಲಿ ಭಾರಿ ಮಳೆ ಸಂಭವ: ಹವಾಮಾನ ಇಲಾಖೆ ಮುನ್ಸೂಚನೆ

ದೆಹಲಿ: ಉತ್ತರ ಭಾರತದಾದ್ಯಂತ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಪ್ರದೇಶ, ದೆಹಲಿ, ಉತ್ತರಖಂಡ, ಮಧ್ಯಪ್ರದೇಶ, ರಾಜಸ್ತಾನ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಂಭವವಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಇನ್ನು ದೆಹಲಿಯ ಯಮುನಾ ಬಜಾರ್ ಪ್ರದೇಶದಲ್ಲಿ ಬಸ್ ವೊಂದು ಮುಂದೆ ಹೋಗಲಾರದೆ ನೀರಿನಲ್ಲಿ ಸಿಲುಕಿದೆ. ಬಸ್ ನಲ್ಲಿ ರುವ 30 ಮಂದಿ ಪ್ರಯಾಣಿಕರು ಹೊರಬರಲಾರದೆ ಪರದಾಡುವಂತಾಗಿರೋ ಘಟನೆ ನಡೆದಿದೆ.

ಈಗಾಗಲೇ ಕೇರಳ ಹಾಗೂ ಕರ್ನಾಟಕದ ಕೊಡಗಿನಲ್ಲಿ ಭಾರಿ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ. ಇದೀಗ ಉತ್ತರ ಭಾರತದಲ್ಲೂ ಮೇಘಸ್ಫೋಟದ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಜನರಲ್ಲಿ ಭೀತಿಯನ್ನುಂಟು ಮಾಡಿದೆ.