ವಿಶ್ವವಾಣಿ

ಗುರುಗ್ರಾಮದಲ್ಲೂ ಅಬ್ಬರಿಸಿದ ವರುಣ

ಗುರುಗ್ರಾಮ: ದೇಶದ ಹಲವೆಡೆ ವರುಣನ ಅಬ್ಬರ ಜೋರಾಗಿದೆ. ಹರಿಯಾಣದ ಗುರುಗ್ರಾಮದಲ್ಲೂ ಭಾರಿ ಮಳೆಯಾಗುತ್ತಿದೆ.

ತಡರಾತ್ರಿ 2 ಗಂಟೆಯಿಂದ ಶುರುವಾದ ಮಳೆ, ಬೆಳಗ್ಗೆ ಅಬ್ಬರಿಸತೊಡಗಿದೆ. ಇದರಿಂದ ರಸ್ತೆ ತುಂಬೆಲ್ಲಾ ನೀರು ತುಂಬಿಕೊಂಡ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಯಿತು. ದೆಹಲಿ-ಜೈಪುರ-ಮುಂಬೈ ಹೈವೇನಲ್ಲಿ ಮಳೆಯಿಂದಾಗಿ ನೀರು ತುಂಬಿದ್ದು, ವಾಹನ ಸವಾರರು ಪರದಾಡುವಂತಾಯಿತು.