About Us Advertise with us Be a Reporter E-Paper

Breaking Newsದೇಶಪ್ರಚಲಿತ

ಹೆಲಿಕಾಪ್ಟರ್ ಪತನ: 7 ಮಂದಿ ಸಾವು

ಕಠ್ಮಂಡು: ಏಳು ಮಂದಿ ಪ್ರಯಾಣಿಕರಿದ್ದ ಆಲ್ಟಿಟ್ಯೂಡ್ ಏರ್ ಹೆಲಿಕಾಪ್ಟರ್ ನೇಪಾಳದ ದಾಡಿಂಗ್ ಮತ್ತು ನುವಾಕೊಟ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಇದರಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಜಪಾನಿನ ಚಾರಣಿಗರು ಸೇರಿದಂತೆ ಆರು ಮಂದಿ ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು,ಅದರ ಅವಶೇಷಗಳನ್ನು ಸ್ಥಳೀಯರು ಗುರುತಿಸಿದ್ದಾರೆ ಎಂದು ಅಲ್ಟಿಟ್ಯೂಡ್ ಏರ್ ಕಂಪನಿ ವ್ಯವಸ್ಥಾಪಕ ನಿಮಾ ನೂರ್ ಶೆರ್ಪಾ ತಿಳಿಸಿದ್ದಾರೆ.

ಕಠ್ಮಂಡು ವಿಮಾನ ನಿಲ್ದಾಣದಿಂದ ಬೆಳಿಗ್ಗೆ ಹೊರಟ ಹೆಲಿಕಾಪ್ಟರ್ 20 ಮೈಲು ಕ್ರಮಿಸಿದ ನಂತರ ಬೆಳಗ್ಗೆ 8.10 ರಿಂದ ರೇಡಿಯೊ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ತ್ರಿಭುವನ್ ಅಂತರಾಷ್ಟ್ರೀಯ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪ್ರಯಾಣಿಕರ ಹುಡುಕಾಟ ನಡೆಸುತ್ತಿದ್ದಾರೆ. ಅಪಘಾತಕ್ಕೀಡಾದ ಸ್ಥಳಕ್ಕೆ ನೇಪಾಳ ಸೇನಾ ಹೆಲಿಕಾಪ್ಟರ್ ಮತ್ತು ಖಾಸಗಿ ಹೆಲಿಕಾಪ್ಟರ್‌ನಲ್ಲಿ ರಕ್ಷಣಾ ಸಿಬ್ಬಂದಿಗಳನ್ನು ರವಾನಿಸಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close