About Us Advertise with us Be a Reporter E-Paper

ವಿ +

ಇಲ್ಲಿ ಅಕ್ಷರಗಳೇ ಸಾಂತ್ವನ ಹೇಳುತ್ತವೆ..

- ನಿಶಾಂತ್, ನರ್ತನಪುರಿ

ಯಾವುದೇ ವ್ಯಕ್ತಿ ತಾನಿದ್ದ ಕ್ಷೇತ್ರಗಳಲ್ಲಿ ಮಹತ್ವಪೂರ್ಣವಾದದ್ದನ್ನು ಸಾಧಿಸಲು, ಒತ್ತಡದಲ್ಲಿದ್ದಾಗ ರಿಲ್ಯಾಕ್‌ಸ್ ಆಗಲು, ಜೀವನ ಹಳಿ ತಪ್ಪಿದಾಗ ಸರಿದಾರಿಗೆ ತರಲು, ನೀ ನಡೆವ ಹಾದಿ ಹೀಗಿದ್ದರೆ ಚೆನ್ನ ಎನ್ನಲು ಜತೆಗೊಬ್ಬ ಮಾರ್ಗದರ್ಶಕ ಬೇಕೇ ಬೇಕೇ. ಅದು ವ್ಯಕ್ತಿಯೇ ಆಗಬೇಕಾಗಿಲ್ಲ. ಹಾಡಾಗಿರಬಹುದು, ಕಥೆಯಾಗಿರಬಹುದು, ವ್ಯಕ್ತಿತ್ವವಾಗಿರಲೂಬಹುದು. ಮಾದರಿ ಪ್ರೇರಣೆಯೂ ಇತರರನ್ನು ಸತ್‌ಕಾರ್ಯಕ್ಕೆ ಹುರಿದುಂಬಿಸುತ್ತದೆ. ಹೀಗೆ ಪ್ರತಿಯೊಬ್ಬರಿಗೆ ಸ್ಫೂರ್ತಿದಾಯಕವೆನ್ನಿಸುವ ಕೆಲವೊಂದು ಆನ್ ಲೈನ್ ಬ್ಲಾಗ್‌ಗಳ ಪಟ್ಟಿ ಇಲ್ಲಿದೆ. ಈ ಬ್ಲಾಗುಗಳು ನಿಮಗೆ ಅಗತ್ಯವಿರುವ ಸೋತು ಗೆದ್ದವರ ಆಕರ್ಷಕ ಕಥೆಗಳನ್ನು, ಲೇಖನಗಳನ್ನು, ಉಲ್ಲೇಖಗಳನ್ನು ಒದಗಿಸಬಲ್ಲದು.

*ಅಡಿಕ್ಟೆಡ್ ಟು ಸಕ್ಸಸ್
ಕಳೆದ ಆರು ವರ್ಷಗಳಲ್ಲಿ ಪ್ರೇರೇಪಣೆ ನೀಡುವಂತಹ ವಿಶ್ವದ ಪ್ರಮುಖ ಬ್ಲಾಗ್‌ಗಳ ಪಟ್ಟಿಯಲ್ಲಿ ಅಡಿಕ್ಟೆಡ್ ಟು ಸಕ್ಸಸ್ ಎಂಬ ಬ್ಲಾಗ್ ಕೂಡ ಒಂದಾಗಿದೆ. ಈ ಬ್ಲಾಗ್ ಯಶಸ್ಸನ್ನು ಗಳಿಸಲು ಅಗತ್ಯವಿರುವ ಸಲಹೆಗಳನ್ನು ಇದು ವಿಶ್ವದಾದ್ಯಂತ 110 ಕೋಟಿಗೂ ಹೆಚ್ಚಿನ ವೀಕ್ಷಣೆಗೊಳಪಟ್ಟಿದೆ. ಈ ಬ್ಲಾಗ್‌ನ್ನು ಜೋಯಲ್ ಬ್ರೋನ್ ಸ್ಥಾಪಿಸಿದ್ದಾರೆ.
https://addicted2success.com

* ಪಿಕ್ ದ ಬ್ರೈನ್
ಈ ಬ್ಲಾಗ್ 2006ರಿಂದೀಚಿಗೆ ನಿರ್ವಹಣೆಯಾಗುತ್ತಿದ್ದು, ಅಲ್ಲಿಂದೀಚೆಗೆ ಹೊಸ ಸದಸ್ಯರನ್ನು ಬ್ಲಾಗಿಗೆ ಸೇರಿಸಿಕೊಳ್ಳುವ, ವಿಸ್ತರಿಸುವ ಕೆಲಸವನ್ನು ಮಾಡುತ್ತಿದೆ. ಪ್ರಮುಖವಾಗಿ ಈ ಬ್ಲಾಗ್‌ನಲ್ಲಿ ಪ್ರೇರಣೆ, ಆರೋಗ್ಯ, ಉತ್ಪಾದಕತೆ ಎಂದು ವಿಭಾಗಗಳಿದ್ದು, ಲೇಖನಗಳು ಪ್ರತ್ಯೇಕವಾಗಿ ಸಿಗಲಿದೆ. ಈ ಬ್ಲಾಗ್‌ನ್ನು ಜಾನ್ ವೆಸ್ಲೆ ಸ್ಥಾಪಿಸಿದ್ದಾರೆ.
www.pickthebrain.com

* ಗೆಟ್ ಮೋಟಿವೇಶನ್
ಸೋಲನ್ನು ಗೆಲುವಿನತ್ತ ಹೆಜ್ಜೆ ಇಟ್ಟವರ ಬಗೆಗಿನ ಲೇಖನಗಳು, ಸ್ಫೂರ್ತಿ ನೀಡುವ ಸಂದೇಶಗಳು, ಕಥೆಗಳನ್ನು ಹೆಚ್ಚು ಕೇಂದ್ರೀಕರಿಸಿಕೊಂಡು ನಿರ್ವಹಿಸುತ್ತಿರುವ ಬ್ಲಾಗ್‌ಗಳಲ್ಲಿ ಗೆಟ್ ಮೋಟಿವೇಶನ್ ಪ್ರಮುಖವಾದದ್ದಾಗಿದೆ. ಈ ಬ್ಲಾಗ್‌ನ್ನು ಜೋಶ್ ಹಿಂಡ್‌ಸ್ ಎಂಬುವವರು ಸ್ಥಾಪಿಸಿದ್ದಾರೆ.
www.getmotivation.com

* ಟೈನಿ ಬುದ್ದ
ಆತ್ಮವಿಶ್ವಾಸದ ಜತೆಯಾಗಿ ಶಾಂತಿ, ಸಂತೋಷದ ಜೀವನವನ್ನು ನಡೆಸಲು ಅಗತ್ಯವಿರುವ ವಿಚಾರಗಳಿಗೆ ಹೆಚ್ಚು ಪ್ರೇರಣೆಯಾಗಬಲ್ಲಂತಹ ಕಥೆ, ಲೇಖನಗಳಿಗೆ ಟೈನಿ ಬುದ್ದ ಹೆಚ್ಚು ಒತ್ತು ನೀಡುತ್ತದೆ. ವಿಶ್ವದಾದ್ಯಂತ ಹೆಚ್ಚು ಪ್ರಸಿದ್ದವಾದ ಬ್ಲಾಗ್‌ಗಳಲ್ಲಿ ಇದೂ ಒಂದಾಗಿದೆ. ಜಾಲಾತಾಣಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಈ ಬ್ಲಾಗ್ ಪ್ರೇರಕ ಬ್ಲಾಗ್‌ಗಳ ಪಟ್ಟಿಯಲ್ಲಿ ಒಂದಾಗಿದೆ. ಈ ಬ್ಲಾಗ್‌ನ್ನು ಲೋರಿ ಡೆಸ್ಚೆನ್ ಸ್ಥಾಪಿಸಿದ್ದಾರೆ.
https://tinybuddha.com

* ಐ ನೀಡ್ ಮೋಟಿವೇಷನ್
ಇದು ಬ್ಲಾಗ್ ಮಾತ್ರವಲ್ಲದೇ ತಂಡವೊಂದು ವೈಯಕ್ತಿಕ ಬೆಳವಣಿಗೆ ಮತ್ತು ಸ್ವಯಂ ಅಭಿವೃದ್ದಿಯನ್ನು ಸಾಧಿಸಲು ಅಗತ್ಯವಿರುವ ತರಬೇತಿ, ತರಗತಿಗಳನ್ನು ನಡೆಸುತ್ತಿದೆ. ಅಲ್ಲದೇ ಈ ವಿಷಯಗಳ ಕುರಿತಾಗಿ ಅನೇಕ ಪುಸ್ತಕಗಳನ್ನು ಬರೆದಿದೆ. ಐ ನೀಡ್ ಮೋಟಿವೇಷನ್ ಅದೆಷ್ಟೋ ಜನರ ಬಾಳಿಗೆ ಬೆಳಕಾಗಿಯೂ ಒದಗಿ
https://ineedmotivation.com

* ಬಿಕಮ್ ದ ಲಯನ್
ಈ ಬ್ಲಾಗ್ ಸಹ ಯಶಸ್ಸನ್ನು ಗಳಿಸಲು ಹಾತೊರೆಯುವವರನ್ನು ಪ್ರೇರೇಪಿಸುವ ಕೆಲಸವನ್ನು ಮಾಡುತ್ತಿರುವ ಬ್ಲಾಗ್ ಆಗಿದ್ದು, ಈ ಬ್ಲಾಗನ್ನು ನಿಕೋಲಾಸ್ ಕ್ಸಿಫಾರಸ್ ಮತ್ತು ಟ್ರೆವರ್ ಓಲ್‌ಡ್ ಹ್ಯಾಮ್ ಎಂಬ ಉದ್ಯಮಿಗಳು ಈ ಬ್ಲಾಗನ್ನು ಸ್ಥಾಪಿಸಿದ್ದಾರೆ.
https://becomethelion.com

* ಮೋಟಿವೇಷನ್ ಫಾರ್ ಡ್ರೀಮರ್‌ಸ್
ಸಾಧನೆಯ ಕನಸು ಕಾಣುವ ಕನಸುಗಾರರಿಗೆ ಅಗತ್ಯ ವಿಷಯಗಳ ಕುರಿತಾಗಿ ಈ ಬ್ಲಾಗ್‌ನಲ್ಲಿ ಮಾಹಿತಿ ನೀಡಲಾಗಿದೆ. ಗೂಗಲ್ ಹುಡುಕಾಟದಲ್ಲಿ ಹೆಚ್ಚು ಪ್ರಚಲಿತವಿರುವ ಇದಾಗಿದೆ. ಈ ಬ್ಲಾಗನ್ನು ಮೋಸಸ್ ಸಿಮುಯೆಂಬಾ ಸ್ಥಾಪಿಸಿದ್ದಾರೆ.
www.motivation-for-dreamers.com

* ಮೋಟಿವ್ ಇನ್ ಮೋಷನ್
ದೃಶ್ಯರೂಪದಲ್ಲಿ ಲಭ್ಯವಿರುವ ಬ್ಲಾಗ್ ಮೋಟಿವ್ ಇನ್ ಮೋಷನ್. ಯಶಸ್ಸು ಗಳಿಸಲು ಮನಸ್ಸನ್ನು ಹದಗೊಳಿಸಲು ಪ್ರಯತ್ನವನ್ನು ಈ ಬ್ಲಾಗ್‌ನಲ್ಲಿ ಮಾಡಲಾಗುತ್ತದೆ. ಈ ಬ್ಲಾಗ್‌ನ್ನು ಇವಾನ್ ಟಿಯಾಗ್ ಸ್ಥಾಪಿಸಿದ್ದಾರೆ.
https://becomethelion.com

* ಪ್ಲಾನೆಟ್ ಟು ಸಕ್ಸಸ್
ಸ್ಪೂರ್ತಿ ನೀಡುವ, ಸ್ವಯಂ ಅಭಿವೃದ್ದಿಗೆ ನೆರವಾಗಬಲ್ಲಂತಹ ಬ್ಲಾಗ್ ಪ್ಲಾನೆಟ್. ಇದರಲ್ಲಿ ಪ್ರಕಟವಾದ ಲೇಖನಗಳೆಲ್ಲವೂ ಓದುಗನನ್ನು ಹಿಡಿದಿಟ್ಟುಕೊಳ್ಳುವಂತದ್ದೇ. ಈ ಬ್ಲಾಗ್‌ನ್ನು ಮುಲ್ಲರ್ ಸ್ಥಾಪಿಸಿದ್ದಾರೆ.
http://www.planetofsuccess.com/

* ಮೋಟಿವೇಷನ್ ಟು ಮೂವ್
ಯಶಸ್ಸನ್ನು ಗಳಿಸಲು ಹೆಚ್ಚು ಪ್ರಭಾವಿಸುವ ಬ್ಲಾಗ್ ಇದಾಗಿದ್ದು, ಅಂತರ್ಜಾಲದಲ್ಲಿ ದೊರೆಯುವ ಬ್ಲಾಗ್‌ಗಳಿಗಿಂತ ಹೆಚ್ಚು ವೈವಿಧ್ಯಮಯವಾಗಿದೆ. ಈ ಬ್ಲಾಗ್‌ನಲ್ಲಿ ಫಿಟ್ನೆಸ್, ವೈಯಕ್ತಿಕ ಬೆಳವಣಿಗೆ, ಪ್ರೇರಣೆ ಮತ್ತು ಪ್ರಮುಖ ವಿಷಯಗಳ ಕುರಿತು ಲೇಖನಗಳಿಗಾಗಿ ಈ ಬ್ಲಾಗ್ ಭೇಟಿ ನೀಡಬಹುದು. ಈ ಬ್ಲಾಗನ್ನು ಸ್ಕಾಟ್ ಸ್ಮಿತ್ ಸ್ಥಾಪಿಸಿದ್ದಾರೆ.
https://motivationtomove.com

ವಿಶ್ವದ ಟಾಪ್ 10 ಪ್ರೇರಣಾ ಬ್ಲಾಗ್‌ಗಳು ಇವಾಗಿದ್ದು, ಜೀವನದಲ್ಲಿ ಸೋತವರು, ಗೆಲ್ಲಲು ಹವಣಿಸುವವರು, ಸೋತವರ ಕುರಿತಾಗಿ ತಿಳಿಯಲು ಕೌತುಕತೆಯನ್ನು ಹೊಂದಿರುವವರೆಲ್ಲರೂ ಸಹ ಈ ಬ್ಲಾಗನ್ನೊಮ್ಮೆ ಭೇಟಿ ನೀಡಿ, ತಾವು ಗೆಲುವಿನತ್ತ ಹೆಜ್ಜೆ ಹಾಕಬಹುದು.

Tags

Related Articles

Leave a Reply

Your email address will not be published. Required fields are marked *

Language
Close