About Us Advertise with us Be a Reporter E-Paper

Breaking Newsದೇಶಪ್ರಚಲಿತ

ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ, ವಾಹನ ಸವಾರರ ಜೇಬಿಗೆ ಕತ್ತರಿ

ದೆಹಲಿ: ಭಾರತೀಯ ತೈಲ ಸಂಸ್ಥೆಗಳು ಪೆಟ್ರೋಲ್‌ ,ಡೀಸೆಲ್‌ ದರವನ್ನು ಶುಕ್ರವಾರ ಬೆಳ್ಳಗೆಯಿಂದಲೇ ಕ್ರಮವಾಗಿ  0.22 ಹಾಗೂ  0.28 ಪೈಸೆ ಏರಿಕೆ ಮಾಡಿದೆ.

ದೆಹಲಿಯಲ್ಲಿ ಪೆಟ್ರೋಲ್​ ದರ ಲೀಟರ್​ಗೆ 78.52 ರೂ. ಆಗಿದ್ದು, ಡೀಸೆಲ್​ ಬೆಲೆ 70.21 ರೂ.ಗೆ ಏರಿದೆ. ನಿನ್ನೆಯಷ್ಟೇ ಪೆಟ್ರೋಲ್​ ಬೆಲೆ 78.30 ರೂ. ಹಾಗೂ ಡೀಸೆಲ್​ ಬೆಲೆ 69.93 ರೂ. ಇತ್ತು. ಒಂದೇ ದಿನ ಪೆಟ್ರೋಲ್​ 22 ಪೈಸೆ ಹಾಗೂ ಡೀಸೆಲ್​ 28 ಪೈಸೆಯಷ್ಟು ಏರಿಕೆ ಕಂಡಿದೆ.

ಮುಂಬೈನಲ್ಲಿ ಪೆಟ್ರೋಲ್​ ಬೆಲೆ 85.93 ರೂ. ಆಗಿದ್ದು, ಡೀಸೆಲ್​ ​ ಬೆಲೆ 74.53 ರೂ. ಆಗಿದೆ. ನಿನ್ನೆಗೆ ಹೋಲಿಸಿದರೆ ಇದು ಕ್ರಮವಾಗಿ 21 ಪೈಸೆ ಹಾಗೂ 30 ಪೈಸೆಯಷ್ಟು ಹೆಚ್ಚಿದೆ. ನಿನ್ನೆ ಪೆಟ್ರೋಲ್​ ಬೆಲೆ 85.72 ರೂ. ಹಾಗೂ ಡೀಸೆಲ್​ ​ ಬೆಲೆ 74.24 ರೂ.ನಷ್ಟಾಗಿತ್ತು.

Tags

Related Articles

Leave a Reply

Your email address will not be published. Required fields are marked *

Language
Close