About Us Advertise with us Be a Reporter E-Paper

ಗುರು

ಭಾವೈಕತೆಯ ಸಂಕೇತ ದಾವಲ ಮಲಿಕ್ ದರ್ಗಾ

*ಚಿತ್ರಲೇಖಾ ಜೋಗೂರ

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯಂಕಂಚಿ ಎಂಬ ಗ್ರಾಮವು ಅಲ್ಲಿರುವ ಹಿಂದು-ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿದೆ.

ಯಂಕಂಚಿ ಗ್ರಾಮವು ದಾವಲಮಲಿಕ್ ಸೂಫಿಸಂತರಿಂದ ಪ್ರಸಿದ್ಧ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ತನ್ನದೆ ಆದ ಪೌರಾಣಿಕ ಕಥೆಯೂ ಕೂಡಾ ಹೊಂದಿದೆ. ಮಲ್ಲಿಕರ ಪೂಜೆಗಾಗಿ ಹಿಂದು-ಮುಸ್ಲಿಂರ ನಡುವೆ ವಾದ ಮೂಡಿತ್ತು. ಮುಸ್ಲಿಂ ಭಕ್ತನೊಬ್ಬನು ದಾವಲಮಲಿಕ್ ಸಂತರ ಪೂಜೆ ನಾನೇ ಮಾಡುವೆ ಎಂದಾಗ, ಅಲ್ಲಿನ ಪೂಜಾರಿ ನಾನೇ ಮಾಡಬೇಕು ಎಂದು ಪಟ್ಟು ಹಿಡಿದ.

ಪ್ರಕರಣ ನ್ಯಾಯನಿರ್ಣಯಾಧಿಕಾರಿಯ ಬಳಿ ಹೋಯಿತು. ಆಗ ನ್ಯಾಯ ತೀರ್ಮಾನಗಳ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಊರಿನ ಪ್ರಮುಖ ಗಣ್ಯರು ತಿರ್ಮಾನಿಸಿದರು. ಇದಕ್ಕೆ ಹಿಂದು-ಮುಸ್ಲಿಂ ವ್ಯಕ್ತಿಗಳು ಒಪ್ಪಿದರು. ಅದರಂತೆ ‘ಯಾರು ದರ್ಗಾದ ಬಾಗಿಲು ತೆಗೆದು ಪೂಜಾ ಮಾಡುತ್ತಾರೋ ಅವರಿಗೆ ಎನ್ನುತ್ತಾರೆ. ಆ ದರ್ಗಾಕ್ಕೆ ಬೀಗ ಹಾಕಿದ್ದರಿಂದ ಅದು ಸುಲಭವಾಗಿ ತೆರೆಯುವುದಿಲ್ಲ. ಹಾಗಾಗಿ ಮುಸ್ಲಿಂ ಭಕ್ತನಿಗೆ ಕೆಲವು ದಿನಗಳ ಕಾಲ ಸಮಯ ನೀಡಿದರು. ಅಷ್ಟರಲ್ಲಿ ಆತ ಬಾಗಿಲು ತೆರೆದರೆ ಮಾತ್ರ ಮಲ್ಲಿಕ್ ಅವರನ್ನು ಪೂಜಿಸುವ ಹಕ್ಕು ನೀಡುತೀನಿ ಎಂದರು. ಆದರೆ ಆ ಬಾಗಿಲು ತೆಗೆಯುವುದು ಆತನಿಂದ ಆಗಲಿಲ್ಲ. ಹಿಂದು ಪೂಜಾರಿಗೆ ಆತನು ಸುಲಭವಾಗಿ ಬಾಗಿಲು ತೆರೆದು ಪೂಜೆ ಮಾಡಿದ. ಆಗಿನಿಂದ ದಾವಲಮಲಿಕ್ ಸಂತರ ಪೂಜೆಯನ್ನು ಹಿಂದುಗಳೇ ನಡೆಸಿಕೊಂಡು ಬರುತ್ತಿದ್ದಾರೆ. ಅಂದಿನಿಂದ ಒಟ್ಟಾಗಿ ದಾವಲಮಲಿಕ್ ಸಂತರ ಉರಸ್ ಮಾಡಿಕೊಂಡು ಬರುತ್ತಿದ್ದಾರೆ.

ಅಷ್ಟೇ ಅಲ್ಲದೆ ದಾವಲಮಲಿಕ್ ಸಂತರು ಬೇಡಿದ ಭಕ್ತರಿಗೆ ಕೇಳಿದ್ದನ್ನು ನೀಡಿದ್ದಾರೆ. ಕೆಲವು ವರ್ಷಗಳ ಹಿಂದೆ ಭಕ್ತೆಯೊಬ್ಬಳು ನನಗೆ ಹೆಣ್ಣು ಮಗುವಾದರೆ ಕುದಿವ ಅನ್ನದಲ್ಲಿ ಕೂಸಿನ ಹಾಕುವೆ ಎಂದು ಬೇಡಿಕೊಂಡಳು. ಅದರಂತೆ ಅವಳಿಗೆ ಹೆಣ್ಣು ಪ್ರಾಪ್ತವಾಗಿ ಕುದಿಯುವ ನೀರಿನಲ್ಲಿ ಕೂಸನ್ನು ಹಾಕಿ ತೆಗೆದರು. ಆ ಮಗುವಿಗೆ ಯಾವುದೇ ರೀತಿಯ ಅಪಾಯವಾಗದೆ ಇರುವುದು ಅವರ ಪವಾಡದ ಅನಾವರಣ ಎಂದು ಅಲ್ಲಿನ ಜನರು ಹೇಳುತ್ತಾರೆ. ಅಲ್ಲಿ ತೊಟ್ಟಿಲ ಕಾರ್ಯಕ್ರಮ ಮಾಡಿ ತೊಟ್ಟಿಲ್ಲನ್ನು ಕಟ್ಟಿದ್ದಾರೆ. ಮಕ್ಕಳಿಲ್ಲದ ಭಕ್ತರಿಗೆ ವರ ನೀಡುವ ಭಗವಾನ್ ದಾವಲಮಲಿಕ್.

ದಾವಲಮಲಿಕ್ ದರ್ಗಾ ಸುತ್ತಲೂ ಇರುವ ಗೋಡೆಯ ಮೇಲೆ ಭಕ್ತಿಯಿಂದ ಭಕ್ತರು ತಮ್ಮ ಹರಕೆಯನ್ನು ಕೇಳಿಕೊಂಡು ನಾಣ್ಯವನ್ನು ಅಂಟಿಸುತ್ತಾರೆ. ವಿಶೇಷ ಎಂದರೆ ನಾಣ್ಯಗಳು ಗೋಡೆಗೆ ಅಂಟಿಕೊಳ್ಳುತ್ತದೆ. ಇದು ಇದು ಕೂಡಾ ಸಂತರ ಪವಾಡಗಳಲ್ಲಿ ಒಂದಾಗಿದೆ. ದರ್ಗಾದ ಮುಂದೆ ಒಂದು ಸುಂದರವಾದ ಶ್ವೇತ ಕುದುರೆ ಇದೆ. ಈ ಕುದುರೆಯನ್ನು ದೇವರ ಕುದುರೆ ಎಂದು ಕರೆಯುತ್ತಾರೆ. ಕುದುರೆಗೆ ಭಕ್ತರು ಧೂಪ, ಹೂಗಳನ್ನು ಅರ್ಪಿಸಿ ನಮಸ್ಕರಿಸುತ್ತಾರೆ. ಅಂದಾಜು 100 ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿರುವ ಕುದುರೆಗೆ ದಾವಲಮಲಿಕ್ ಯಂಕಂಚಿ ಉರಸ್‌ನಲ್ಲಿ ವೈಭವದಿಂದ ಪೂಜಿಸುತ್ತಾರೆ. ಜಾತ್ರೆಯ ಹಿಂದಿನ ದಿನ ಗಂಧದ ಅಭಿಷೇಕ ಮಾಡುತ್ತಾರೆ. ಇದು ಹಿಂದೂ-ಮುಸ್ಲಿಂ ಭಾವೈಕತೆಯ ಭಕ್ತಿಯ ತಾಣವಾಗಿದೆ.

ಈ ಕ್ಷೇತ್ರಕ್ಕೆ ರಾಜ್ಯದ ನಾನಾ ಭಾಗಗಳಿಂದ ಮತ್ತು ಇತರೆ ರಾಜ್ಯಗಳ ಮಹಾರಾಷ್ಟ್ರ ಮತ್ತು ಆಂದ್ರಪ್ರದೇಶದ ಜನರು ಕೂಡಾ ಈ ದಾವಲ ಮಲಿಕ್ ದರ್ಗಾಕ್ಕೆ ಬೇಟಿ ನೀಡುತ್ತಾರೆ.

Tags

Related Articles

Leave a Reply

Your email address will not be published. Required fields are marked *

Language
Close