About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಹಿಂದೂಗಳು, ಸಿಖ್ಖರು ಅಫ್ಘಾನಿಸ್ತಾನದ ಮೂಲ ನಿವಾಸಿಗಳು: ಅಫ್ಘನ್‌ ರಾಯಭಾರಿ

ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಾದ ಹಿಂದೂಗಳು ಹಾಗು ಸಿಖ್ಖರು ಭಾರತದಿಂದ ವಲಸೆ ಬಂದವರು ಎಂದು ಎಲ್ಲೆಡೆ ಭಾವಿಸಲಾಗಿದೆ, ಆದರೆ ವಾಸ್ತವದಲ್ಲಿ ಹಿಂದೂಗಳು ಹಾಗು ಸಿಖ್ಖರು ಅಫ್ಘಾನಿಸ್ತಾನದ ಮೂಲನಿವಾಸಿಗಳು ಎಂದು ಅಫ್ಘನ್‌ ರಾಯಭಾರಿ ಹಮ್ದುಲ್ಲಾ ಮೋಹಿಬ್‌ ಹೇಳಿದ್ದಾರೆ. 

ವಾಷಿಂಗ್ಟನ್‌: ಹಿಂದೂಗಳು ಹಾಗು ಸಿಖ್ಖರು ಅಫ್ಘಾನಿಸ್ತಾನದ ಮೂಲನಿವಾಸಿಗಳು ಎಂದು ಅಮೆರಿದಲ್ಲಿರುವ ಅಫ್ಘಾನಿಸ್ತಾನ ರಾಯಭಾರಿ ಹಮ್ದುಲ್ಲಾ ಮೋಹಿಬ್‌ ಹೇಳಿದ್ದಾರೆ.

ಅಫ್ಘಾನಿಸ್ತಾನದ ಜಲಾಲಾಬಾದ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಸಿಖ್ಖರ ಸ್ಮರಣಾರ್ಥ, ಅಮೆರಿಕದ ಅಫ್ಘನ್‌ ರಾಯಭಾರ ಕಚೇರಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೋಹಿಬ್‌, “ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಾದ ಹಿಂದೂಗಳು ಹಾಗು ಸಿಖ್ಖರು ಭಾರತದಿಂದ ವಲಸೆ ಬಂದವರು ಎಂದು ಎಲ್ಲೆಡೆ ಭಾವಿಸಲಾಗಿದೆ. ಆದರೆ ವಾಸ್ತವದಲ್ಲಿ ಹಿಂದೂಗಳು ಹಾಗು ಸಿಖ್ಖರು ಅಫ್ಘಾನಿಸ್ತಾನದ ಮೂಲನಿವಾಸಿಗಳು. ಅಫ್ಘನ್‌ ನೆಲದೊಂದಿಗೆ ಅವರು ಹೊಂದಿರುವ ಆಳವಾದ ನಂಟನ್ನು ಈ ಸಮಾರಂಭದ ಮೂಲಕ ಸ್ಮರಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಇದೇ ಸಂದರ್ಭದ ಕುರಿತು ಮಾತನಾಡಿದ ಅಮೆರಿಕ ಕಾಂಗ್ರೆಸ್‌ನ ಮೊದಲ ಹಿಂದೂ ಸದಸ್ಯೆ ತುಳಸಿ ಗಬ್ಬಾರ್ಡ್‌, “ತಾಲಿಬಾನ್‌ ಆಡಳಿತದ ಸಂದರ್ಭ ಅಫ್ಘಾನಿಸ್ತಾನದಲ್ಲಿದ್ದ ಹಿಂದೂಗಳು ಹಾಗು ಸಿಖ್ಖರಿನ್ನು ತುಚ್ಛವಾಗಿ ಕಾಣಲಾಗುತ್ತಿದ್ದ ಕಾರಣ ಸಾಕಷ್ಟು ಮಂದಿ ಆಶ್ರಯ ಅರಸಿ ಭಾರತಕ್ಕೆ ಬಂದಿದ್ದರು. ಭೀತಿ ಮೂಡಿಸುವ ಈ ತಂತ್ರಗಾರಿಕೆಗಳೆಲ್ಲಾ ನಮ್ಮಲ್ಲಿ ಒಡಕು ಮೂಡಿಸಲು ಮಾಡಲಾಗುತ್ತಿದೆ. ಅಫ್ಘಾನಿಸ್ತಾನದಲ್ಲಾಗುತ್ತಿರುವ ಕ್ರೂರತೆ ವಿರುದ್ಧ ನಾವೆಲ್ಲಾ ತೊಡೆತಟ್ಟಿ ನಿಲ್ಲಬೇಕಿದೆ” ಎಂದು ಹೇಳಿದ್ದಾರೆ.

ವಾಷಿಂಗ್ಟನ್‌ನಲ್ಲಿರುವ ಅಫ್ಘಾನಿಸ್ತಾನ ರಾಯಭಾರ ಕಚೇರಿಯ ಆವರಣದಲ್ಲ ಮೃತಪಟ್ಟವರಿಗೆ ಶ್ರದ್ಧಾಂಜಲಿ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಅಫ್ಘಾನಿಸ್ತಾನ, ಭಾರತಗಳ ರಾಯಭಾರ ಕಚೇರಿಗಳ ಅಧಿಕಾರಿಗಳು ಹಾಗು ಅಮೆರಿಕ ಸರಕಾರ ಪ್ರತಿನಿಧಿಗಳು ಭಾಗವಹಿಸಿದ್ದರು.

ಹಿಂದೂ ಹಾಗೂ ಸಿಖ್ ಸಮುದಾಯಕ್ಕೆ ಸೇರಿದ್ದ ಅಪಾರ ಮಂದಿ, ಭಗವದ್ಗೀತೆಯ ಶ್ಲೋಕಗಳನ್ನು ಉಚ್ಛರಿಸಿದ್ದಲ್ಲದೇ ವಾಷಿಂಗ್ಟನ್‌ ಗುರುದ್ವಾರದ ಗುರುಗಳು ಹೇಳಿಕೊಟ್ಟ ಭಜನೆಗಳನ್ನು ಹೇಳುತ್ತಿದ್ದರು

ಅಫ್ಘಾನಿಸ್ತಾನ ಅಧ್ಯಕ್ಷರನ್ನು ಭೇಟಿಯಾಗಲು ತೆರಳುತ್ತಿದ್ದ ಹಿಂದೂಗಳು ಹಾಗು ಸಿಖ್ಖರನ್ನು ಗುರಿಯಾಗಿಸಿದ್ದ ಭಯೋತ್ಪಾದಕರು ಆತ್ಮಹತ್ಯಾ ದಾಳಿ ನಡೆಸಿದ್ದರು. ಘಟನೆಯಲ್ಲಿ 19 ಮಂದಿ ಮೃತಪಟ್ಟಿದ್ದರು. ಘಟನೆಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್‌ ಹೊತ್ತುಕೊಂಡಿದೆ.

Related Articles

Leave a Reply

Your email address will not be published. Required fields are marked *

Language
Close