About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಹಾಕಿ: ಹರಿಯಾಣ ವನಿತೆಯರಿಗೆ ಗೆಲುವು

ಬೆಂಗಳೂರು: ಭಾರತ 5-ಎ ಹಿರಿಯರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಹರಿಯಾಣ ಮಹಿಳೆಯರ ತಂಡ ಪಂಜಾಬ್ ಎದುರು 6-1 ಗೋಲುಗಳ ಮೂಲಕ ಜಯ ತನ್ನದಾಗಿಸಿಕೊಂಡಿದೆ.

ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆದ ಪಂದ್ಯದಲ್ಲಿ ಹರಿಯಾಣದ ಅಮನ್‌ದೀಪ್(5,13) ಅವರು ಎರಡು ಗೋಲುಗಳನ್ನು ಬಾರಿಸಿದರು. ಪೂನಮ್ ರಾಣಿ(7), ಮನ್‌ಪ್ರೀತ್ ಕೌರ್(9), ಗಂಗಾದೀಪ್ ಕೌರ್(10) ಮತ್ತು ಸೋನಿಕಾ(12) ಅವರು ಗೋಲು ಗಳಿಸುವ ಮೂಲಕ ಹರಿಯಾಣ ಖಾತೆಗೆ ಆರು ಗೋಲು ಸೇರ್ಪಡೆಯಾದರೆ, ಪಂಜಾಬ್‌ನ ರೇನಾ ರಾಣಿ(19) ಅವರು ಒಂದು ಗೋಲು ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಜಾರ್ಖಂಡ್ ತಂಡ ಮಹಾರಾಷ್ಟ್ರವನ್ನು 3-2 ಗೋಲುಗಳಿಂದ ಸೋಲಿಸುವಲ್ಲಿ ಸಫವಾಯಿತು. ಮುಂದಿನ ಪಂದ್ಯದಲ್ಲಿ ಹರಿಯಾಣವನ್ನು ಎದುರಿಸಲಿದೆ.

Tags

Related Articles

Leave a Reply

Your email address will not be published. Required fields are marked *

Language
Close