About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ವಿಶ್ವ ಕಪ್‌ ಹಾಕಿ: ಒಡಿಶಾದಲ್ಲಿ ಅದ್ಧೂರಿ ಉದ್ಘಾಟನೆ (ವಿಡಿಯೊ)

ಒಡಿಶಾ: ಭಾರತದ ರಾಷ್ಟ್ರೀಯ ಕ್ರೀಡೆಯಾದ ಹಾಕಿ ಪ್ರಸ್ತುತ ವಿಶ್ವದಲ್ಲಿ ಕ್ರಿಕೆಟ್‌ನಷ್ಟೇ ಮಹತ್ವ ಪಡೆದುಕೊಂಡಿದೆ. 14ನೇ ಆವೃತ್ತಿಯ ವಿಶ್ವಕಪ್ ಒಡಿಶಾ ರಾಜಧಾನಿಯಾದ ಭುವನೇಶ್ವರಿಯ ಕಳಿಂಗ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಉದ್ಘಾಟನೆಯಾಯಿತು. ಬಾಲಿವುಡ್‌ ನಟ ಶಾರುಖ್‌ ಖಾನ್‌, ನಟಿ ಮಾಧುರಿ ದೀಕ್ಷೀತ್‌ ಸೇರಿಂದತೆ ಅನೇಕ ಗಣ್ಯರು ಭಾಗವಹಿಸಿದ್ದರು. ನಾಳೆಯಿಂದ ಡಿ.16 ವರೆಗೆ ನಡೆಯಲಿದೆ.

ಟ್ವಿಟ್ಟರ್‌ನಲ್ಲಿ ಪ್ರಧಾನಿ ಮೋದಿ, ಕೇಂದ್ರ ಸಚಿವ ರಾಜವರ್ಧನ್‌ ರಾಥೋರ್‌ ಶುಭಾಷಯ ಕೋರಿದ್ದಾರೆ. ಒಡಿಶಾದಲ್ಲಿ ನಡೆಯುತ್ತಿರುವ ವಿಶ್ವ ಕಪ್‌ ಹಾಕಿ ಟೂರ್ನಿಗೆ ಭಾಗವಹಿಸಿರುವ ಎಲ್ಲಾ ತಂಡಗಳಿಗು ಅಭಿನಂದನೆಗಳು ಎಂದು ಟೀಟ್ಟ್‌ ಮಾಡಿದ್ದಾರೆ.ವಿಶ್ವ ಕಪ್‌ನ 14ನೇ ಆವೃತ್ತಿಯಲ್ಲಿ ವಿಶ್ವದ 16 ತಂಡಗಳು ಭಾಗವಹಿಸಲಿದ್ದು, ಭಾರತ ತಂಡ ಉತ್ತಮ ಅಭ್ಯಾಸದೊಂದಿಗೆ ನಿರೀಕ್ಷಿತ ಪ್ರದರ್ಶನ ನೀಡುವ ಮೂಲಕ ಎರಡನೇ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ. 16 ತಂಡಗಳನ್ನು ಎ,ಬಿ,ಸಿ,ಡಿ ಎಂದು ನಾಲ್ಕು ಪೂಲ್‌ಗಳಾಗಿ ವಿಂಗಡಿಸಲಾಗಿದೆ. ಭಾರತದ ತಂಡ ಪೂಲ್ ‘ಸಿ’ನಲ್ಲಿ ಸ್ಥಾನ ಪಡೆದುಕೊಂಡಿದೆ.

ಮೂರನೇ ಬಾರಿಗೆ ವಿಶ್ವ ಕಪ್‌ನ ಅತಿಥ್ಯ ವಹಿಸಿರುವ ಭಾರತ ತಂಡ 16 ತಂಡಗಳೊಂದಿಗೆ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ. ಭಾರತದ 1973ರಲ್ಲಿ ನೆದರ್‌ಲೆಂಡ್ ಎದುರಿನ ಫೈನಲ್‌ನಲ್ಲಿ ನೀರಸ ಪ್ರದರ್ಶನ ತೋರಿ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. 1975ರಲ್ಲಿ ಮಲೇಷ್ಯಾದ ಕೌಲಲಂಪುರದಲ್ಲಿ ನಡೆದ ಮೂರನೇ ಆವೃತ್ತಿಯ ವಿಶ್ವ ಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಪರಾಭವಗೊಳಿಸಿ ಪ್ರಶಸ್ತಿ ಜಯಿಸಿತ್ತು. ಇದದ ಬಳಿಕ ಟೀಂ ಇಂಡಿಯಾಗೆ ಜಯ ಗಳಿಸುವ ಅವಕಾಶ ಸಿಗಲಿಲ್ಲ. ಈ ಬಾರಿಯಾದರೂ ಅಮೋಘ ಪ್ರದರ್ಶನ ತೋರುವ ಮೂಲಕ ಜಯ ಸಾಧಿಸಿ ತವರಿನ ಅಭಿಮಾನಿಗಳ ಮನ ಗೆಲ್ಲುವ ತವಕದೊಂದಿಗೆ ಮೈದಾನಕ್ಕೆೆ ಆಗಮಿಸಲಿದೆ. ಭಾರತ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ವಿಶ್ವ ಕಪ್‌ನ ಫಲಿತಾಂಶ
ವರ್ಷ ನಡೆದ ಸ್ಥಳ ಜಯ ಅಂಕ ರನ್ನರ್ ಅಪ್
1971 ಬಾರ್ಸಿಲೋನಾ, ಸ್ಪೇನ್ ಪಾಕಿಸ್ತಾನ 1-0 ಸ್ಪೇನ್
1973 ಆಮ್ಸೆಟೆಲ್ವೇನ್, ನೆದರ್‌ಲೆಂಡ್ ನೆದರ್‌ಲೆಂಡ್ 2-2(ಪೆನಾಲ್ಟಿ 4-2) ಭಾರತ
1975 ಕೌಲಾಲಂಪುರ, ಮಲೇಷ್ಯಾಾ ಭಾರತ 2-1 ಪಾಕಿಸ್ತಾನ
1978 ಬ್ಯೂನಸ್ ಐರಿಸ್, ಅರ್ಜೆಂಟೀನಾ ಪಾಕಿಸ್ತಾನ 3-2 ನೆದರ್‌ಲೆಂಡ್
1982 ಬಾಂಬೆ, ಭಾರತ ಪಾಕಿಸ್ತಾನ 3-1 ವೆಸ್ಟ್‌ ಜರ್ಮನಿ
1986 ಲಂಡನ್, ಇಂಗ್ಲೆೆಂಡ್ ಆಸ್ಟ್ರೇಲಿಯಾ 2-1 ಇಂಗ್ಲೆೆಂಡ್
1990 ಲಾಹೋರ್, ಪಾಕಿಸ್ತಾನ ನೆದರ್‌ಲೆಂಡ್ 3-1 ಪಾಕಿಸ್ತಾನ
1994 ಸಿಡ್ನಿಿ, ಆಸ್ಟ್ರೇಲಿಯಾ ಪಾಕಿಸ್ತಾನ 1-1(ಪೆನಾಲ್ಟಿ 4-3) ನೆದರ್‌ಲೆಂಡ್
1998 ಉಟ್ರೆೆಕ್ಟ್‌, ನೆದರ್‌ಲೆಂಡ್ ನೆದರ್‌ಲೆಂಡ್ 3-2 ಸ್ಪೇನ್
2002 ಕೌಲಾಲಂಪುರ, ಮಲೇಷ್ಯಾ ಜರ್ಮನಿ 2-1 ಆಸ್ಟ್ರೇಲಿಯಾ
2006 ಜರ್ಮನಿ ಜರ್ಮನಿ 4-3 ಆಸ್ಟ್ರೇಲಿಯಾ
2010 ದೆಹಲಿ, ಭಾರತ ಆಸ್ಟ್ರೇಲಿಯಾ 2-1 ಜರ್ಮನಿ
2014 ದಿ ಹೇಗ್, ನೆದರ್‌ಲೆಂಡ್ ಆಸ್ಟ್ರೇಲಿಯಾ 6-1 ನೆದರ್‌ಲೆಂಡ್

ನಾಲ್ಕು ಗುಂಪುಗಳು

ಎ ಗುಂಪು ಬಿ ಗುಂಪು ಸಿ ಗುಂಪು ಡಿ ಗುಂಪು
ಅರ್ಜಂಟೀನಾ ಆಸ್ಟ್ರೇಲಿಯಾ ಬೆಲ್ಜಿಯಂ ನೆದರ್‌ಲೆಂಡ್
ನ್ಯೂಜಿಲೆಂಡ್ ಇಂಗ್ಲೆೆಂಡ್ ಭಾರತ (ಅತಿಥ್ಯ ರಾಷ್ಟ್ರ) ಜರ್ಮನಿ
ಸ್ಪೇನ್ ಐರ್ಲೆಂಡ್ ಕೆನಾಡ ಮಲೇಷ್ಯಾ
ಫ್ರಾನ್ಸ್‌ ಚೀನಾ ದಕ್ಷಿಣ ಆಫ್ರಿಕಾ ಪಾಕಿಸ್ತಾನ

ಟೂರ್ನಿಯಲ್ಲಿ ಭಾಗವಹಿಸುವ 4 ಅಗ್ರ ತಂಡಗಳು
ಅರ್ಜೆಂಟೀನಾ
ಆಸ್ಟ್ರೇಲಿಯಾ
ಬೆಲ್ಜಿಯಂ
ಜರ್ಮನಿ

Tags

Related Articles

Leave a Reply

Your email address will not be published. Required fields are marked *

Language
Close