About Us Advertise with us Be a Reporter E-Paper

Breaking Newsಕ್ರೀಡೆ
Trending

ಹಾಕಿ ವಿಶ್ವಕಪ್ ಟೂರ್ನಿಗೆ ಅದ್ಧೂರಿ ಚಾಲನೆ: ಇಂದು ಭಾರತ-ದ.ಆಫ್ರಿಕಾ ಮುಖಾಮುಖಿ

ಭುವನೇಶ್ವರ: ಪುರುಷರ ಹಾಕಿ ವಿಶ್ವಕಪ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಒಡಿಶಾ ರಾಜಧಾನಿ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್‍ನ ಶಾರೂಖ್ ಖಾನ್, ಮಾಧುರಿ ದೀಕ್ಷಿತ್, ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಭಾಗಿಯಾಗಿದ್ದರು.

ಈ ಬಾರಿಯ ಟೂರ್ನಿಯಲ್ಲಿ 16 ತಂಡಗಳು ಸೆಣಸಲಿದ್ದು, ಕೆನಡಾ, ದಕ್ಷಿಣ ಆಫ್ರಿಕಾ, ಬೆಲ್ಜಿಯಂ ತಂಡಗಳೊಂದಿಗೆ ಭಾರತ ಟೂರ್ನಿಯ ಸಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಅರ್ಜೆಂಟೀನಾ, ನ್ಯೂಜಿಲೆಂಡ್, ಸ್ಪೇನ್, ಫ್ರಾನ್ಸ್ ತಂಡಗಳು ಎ, ಆಸ್ಟ್ರೇಲಿಯಾ, ಇಂಗ್ಲೆಂಡ್, ಐರ್ಲೆಂಡ್, ಚೀನಾ ತಂಡಗಳು ಬಿ ಹಾಗೂ ನೆದರ್ಲೆಂಡ್ಸ್, ಜರ್ಮನಿ, ಮಲೇಷ್ಯಾ, ಪಾಕಿಸ್ತಾನ ತಂಡಗಳು ಡಿ ಗುಂಪಿನಲ್ಲಿದೆ.

ಮೊದಲ ಪಂದ್ಯ ಇಂದು ಸಂಜೆ 5 ಗಂಟೆಗೆ ನಡೆಯಲಿದೆ. ಭಾರತ-ದಕ್ಷಿಣ ಆಫ್ರಿಕಾ ಹಾಗೂ ಬೆಲ್ಜಿಯಂ-ಕೆನಡಾ ತಂಡಗಳು ಮುಖಾಮುಖಿ ಆಗಲಿವೆ. ಹಾಕಿ ವಿಶ್ವಕಪ್‍ನ 14ನೇ ಆವೃತ್ತಿಯ ಟೂರ್ನಿಗೆ ಆತಿಥ್ಯವಹಿಸಿಕೊಂಡಿರುವ ಭಾರತ ಒಮ್ಮೆ ಮಾತ್ರ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಈ ಬಾರಿ ಭಾರಿ ನಿರೀಕ್ಷೆ ಇದೆ.  43 ವರ್ಷಗಳಿಂದ ವಿಶ್ವಕಪ್ ಪದಕ ಪಡೆಯದ ಭಾರತಕ್ಕೆ ಈ ಬಾರಿ ತವರಿನ ಟೂರ್ನಿ ಚಾಂಪಿಯನ್ ಆಗಲು ಸುವರ್ಣಾವಕಾಶ ಲಭಿಸಿದ್ದು, ಮನ್ ಪ್ರೀತ್ ಸಿಂಗ್ ತಂಡದ ನಾಯಕತ್ವ ವಹಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close