About Us Advertise with us Be a Reporter E-Paper

Breaking Newsಸಿನಿಮಾಸ್

ಸಲಿಂಗ ಪ್ರೇಮಿಗಳ ಕಲ್ಪನಾ ಚಿತ್ರ ‘ಬೆಸ್ಟ್ ಫ್ರೆಂಡ್’

158 ವರ್ಷಗಳ ಕಾನೂನು ಫಲವಾಗಿ ಕಾಯ್ದೆ 377ರ ಅನ್ವಯ ಸಲಿಂಗ ಕಾಮಕ್ಕೆ ಸಮ್ಮತಿ ಇದೆ ಎಂದು ಸವೋಚ್ಚ ನ್ಯಾಯಾಲಯ ಇತ್ತೀಚಿಗಷ್ಟೇ ತೀರ್ಪು ನೀಡಿದೆ. ಅಂತಹ ಶೋಷಿತ ವರ್ಗಗಳ ಬದುಕು ಮತ್ತು ಅವರ ಭಾವನೆಗಳ ಬುತ್ತಿಯನ್ನು ಎಳೆಯಾಗಿಟ್ಟುಕೊಂಡು ರೆಡಿಯಾಗಿರುವ ಸಿನಿಮಾ ‘ಬೆಸ್ಟ್ ಫ್ರೆಂಡ್’. 2012ರಲ್ಲಿ (ಹಾಸನ) ಹಾಸನದಲ್ಲಿ ಇಬ್ಬರು ಹೆಣ್ಣು ಮಕ್ಕಳ ನಡುವಿನ ಸಲಿಂಗ ಪ್ರೇಮದ ಸತ್ಯ ಘಟನೆಯೊಂದನ್ನು ಆಧರಿಸಿದ ಚಿತ್ರ ಇದಾಗಿದ್ದು, ಕಾಲ್ಪನಿಕತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಸಲಿಂಗ ಸಮುದಾಯದವರನ್ನು ಪ್ರೀತಿಸಿ ಗೌರವಿಸಬೇಕೆಂಬ ಸಂದೇಶವನ್ನು ಸಾರುವುದೇ ‘ಬೆಸ್ಟ್ ಫ್ರೆಂಡ್’ನ ಕಥಾಹಂದರವಾಗಿದೆ.

ಎರಡು ವರ್ಷದ ಸಂಶೋಧನೆಯ ಪರಿಶ್ರಮದಿಂದ ಟೇ.ಶಿ. ವೆಂಕಟೇಶ್ ‘ಬೆಸ್ಟ್ ಫ್ರೆಂಡ್’ ಚಿತ್ರಕ್ಕೆ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಇದು ತೀರ್ಪು ನೀಡಲಾಗದ ಪ್ರೇಮಕತೆ’ ಎಂಬ ಅಡಿ ಬರಹ ಎಲ್ಲರ ಗಮನ ಸೆಳೆದಿರುವುದು ವಿಶೇಷ. ನಿಜ ಜೀವನದಲ್ಲಿ ಶ್ರುತಿ ಮತ್ತು ರಶ್ಮಿ ಇರುವಂತೆ, ರೀಲ್‌ನಲ್ಲಿ ಮೇಘನಾ ಮತ್ತು ದ್ರಾವ್ಯ ಶೆಟ್ಟಿ ಅಭಿನಯಿಸಿದ್ದಾರೆ. ಇವರೊಂದಿಗೆ ಆಶಾ, ಸುಮತಿ ಪಾಟೀಲ್ ಇತರರು ಅಭಿನಯಿಸಿದ್ದಾರೆ.

‘ಬೆಸ್ಟ್ ಹಾಡುಗಳಿಗೆ ಆರವ್ ರುಶಿಕ್ ಸಂಗೀತ ಸಂಯೋಜನೆ ಮಾಡಿದ್ದು, ಅಂಬ್ರಲಾ ಆಡಿಯೋ ಮುಖಾಂತರ ಚಿತ್ರದ ಧ್ವನಿ ಸುರಳಿ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿದೆ. ’ಬೆಸ್ಟ್ ಫ್ರೆಂಡ್’ಗೆ ರವಿ ಸುವರ್ಣ-ಧನುಷ್ ಜಯನ್ ಛಾಯಾಗ್ರಹಣ ಮಾಡಿದ್ದು, ಕೆ.ಆರ್. ಲಿಂಗರಾಜು ಎಡಿಟಿಂಗ್ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ’ಬೆಸ್‌ಟ್ ಫ್ರೆಂಡ್’ ಚಿತ್ರವನ್ನು ಅಖಂಡ ಕರ್ನಾಟಕ ಚಲನಚಿತ್ರ ಚಿತ್ರೋದ್ಯಮ ಪರಿಷತ್ ಮುಖಾಂತರ ಲಯನ್ ಎಸ್. ವೆಂಕಟೇಶ್ ನಿರ್ಮಾಣ ಮಾಡಿದ್ದು, ಮುಂದಿನ ವರ್ಷ ‘ಬೆಸ್‌ಟ್ ಫ್ರೆಂಡ್’ ತೆರೆಗೆ ಬರಲಿದೆ.

Tags

Related Articles

Leave a Reply

Your email address will not be published. Required fields are marked *

Language
Close