About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಇಂದಿನಿಂದ ಹಾಂಕಾಂಗ್ ವರ್ಲ್ಡ್ ಟೂರ್

ಕೊವ್‌ಲೊನ್‌‌ (ಹಾಂಕಾಂಗ್): ಹಾಂಕಾಂಗ್ ವರ್ಲ್‌ಡ್ ಟೂರ್ ಸೂಪರ್ 500 ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಕಳೆದ ಟೂರ್ನಿಗಳಲ್ಲಿ ಜಯ ಸಾಧಿಸುವಲ್ಲಿ ವಿಫಲವಾಗಿದ್ದ, ಭಾರತದ ಆಟಗಾರಿಗೆ ಪ್ರಶಸ್ತಿ ಗೆಲ್ಲಲು ಮತ್ತೊಂದು ಅವಕಾಶ ಬಂದಿದೆ.

ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಕಳೆದ ಆವೃತ್ತಿಯಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತೆ ಥೈ ಜು ಯಿಂಗ್ ಎದುರು ಸೋಲನುಭವಿಸಿದ್ದರು. ಪ್ರಸಕ್ತ ಸಾಲಿನ ಕಾಮನ್‌ವೆಲ್ತ್, ಏಷ್ಯಾ ಕ್ರೀಡಾಕೂಟ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದರೆ, ಇಂಡಿಯಾ ಮತ್ತು ಥಾಯ್ಲೆಂಡ್ ಫೈನಲ್ ಪ್ರವೇಶಿಸಿದ್ದರು.

ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ಕಳೆದ ಟೂರ್ನಿಗಳಲ್ಲಿ ನಿರೀಕ್ಷಿತ ಆಟವಾಡುವಲ್ಲಿ ವಿಫಲವಾಗಿ ಸೋಲಿಗೆ ಶರಣಾಗಿದ್ದರು. ಈ ಟೂರ್ನಿಯಲ್ಲಿ ಜಪಾನಿನ ಆಕಾನೆ ಯಮಗುಚಿ ಅವರನ್ನು ಆರಂಭಿಕ ಪಂದ್ಯದಲ್ಲಿ ಎದುರಿಸಲಿದ್ದಾರೆ.

ಪುರುಷರ ಸಿಂಗಲ್‌ಸ್ನಲ್ಲಿ ಹಾಂಕಾಂಗ್‌ನ ವೊಂಗ್ ವಿಂಗ್ ಕೀ ಅವರೊಂದಿಗೆ ಹೋರಾಟ ನಡೆಸಿದರೆ, ಎಚ್.ಎಸ್ ಪ್ರಣಯ್ ಡೆನ್ಮಾರ್ಕ್‌ನ ಆ್ಯಂಡ್ರೆಸ್ ಆಂಟೋನ್ಸೆನ್ ಅವರನ್ನು ಎದುರಿಸಲಿದ್ದಾರೆ. ಅಲ್ಲದೇ ಸಿಂಗಲ್‌ಸ್ನಲ್ಲಿ ಸ್ವಿಸ್ ಓಪನ್ ಚಾಂಪಿಯನ್ ಸಮೀರ್ ವರ್ಮಾ, ಬಿ.ಸಾಯಿ ಉತ್ತಮ ಆಟವಾಡಲು ಸಜ್ಜಾಗಿದ್ದಾರೆ.

ಪುರುಷರ ಡಬಲ್‌ಸ್ನಲ್ಲಿ ಸಾತ್ವಿಕ್‌ಸಿರಾಜ್ ಜೋಡಿ ಮತ್ತು ಮನು ಅತ್ರಿ ಹಾಗೂ ಬಿ ಸುಮಿತ್ ರೆಡ್ಡಿ ಉತ್ತಮ ಪ್ರದರ್ಶನ ತೋರುವ ತವಕದಲ್ಲಿದ್ದಾರೆ. ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ ಮಹಿಳೆಯರ ಡಬಲ್‌ಸ್ನಲ್ಲಿ ಸ್ಪರ್ಧಿಸಿದರೆ, ಮಿಶ್ರ ಡಬಲ್‌ಸ್ನಲ್ಲಿ ಪೊನ್ನಪ್ಪ ಮತ್ತು ಸಾತ್ವಿಕ್ ಜೋಡಿ ಯಶಸ್ವಿ ಹೋರಾಟ ನಡೆಸುವ ಹಂಬಲದಲ್ಲಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close