About Us Advertise with us Be a Reporter E-Paper

Breaking Newsರಾಜ್ಯ

ಕಬ್ಬಡ್ಡಿ ಆಟಗಾರ್ತಿ ಉಷಾರಾಣಿಗೆ ಸನ್ಮಾನ

ಬೆಂಗಳೂರು: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 2018ರ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ವಿಜೇತ ಭಾರತದ ಕಬ್ಬಡ್ಡಿ ತಂಡದ ಆಟಗಾರ್ತಿ ಉಷಾರಾಣಿ ಅವರನ್ನು ಅಭಿನಂದಿಸಲಾಯಿತು.

ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಪೊಲೀಸ್ ಪೇದೆಯೂ ಆಗಿರುವ ಉಷಾರಾಣಿಗೆ ಸನ್ಮಾನಿಸಿದರು. ಪೊಲೀಸ್ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಉಷಾರಾಣಿ ಅವರಿಗೆ 15 ಲಕ್ಷ ರೂ. ಚೆಕ್ ವಿತರಿಸಿ ಗೌರವಿಸಲಾಯಿತು. ಏಷ್ಯನ್ ಗೇಮ್ಸ್ ನಲ್ಲಿ ಉಷಾರಾಣಿ ಭಾರತದ ಕಬ್ಬಡ್ಡಿ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು ಈ ವೇಳೆ ಡಿಜಿ & ಐಜಿಪಿ ನೀಲಮಣಿ ರಾಜು, ಎಡಿಜಿಪಿ ಭಾಸ್ಕರ್ ರಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಭಾಗಿಯಾಗಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close