About Us Advertise with us Be a Reporter E-Paper

ಅಂಕಣಗಳು

ಬಡವರ ಬದುಕಿನ ಆಶಾಕಿರಣ

ರಾಜ್ಯ ರೈತರ ಸಾಲ ಮನ್ನಾ ಮಾಡಿರುವ ರಾಜ್ಯ ಸರಕಾರ ಇದೀಗ ಬೀದಿ ಬದಿಯ ವ್ಯಾಪಾರಿಗಳ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ದಿನದ ಸಾಲ ನೀಡುವ ಬಡವರ ಬಂಧು ಯೋಜನೆಯನ್ನು ಜಾರಿಗೆ ತರುತ್ತಿರುವುದು ಸ್ವಾಗತಾರ್ಹವಾದ ಕ್ರಮವಾಗಿದೆ. ಈ ವ್ಯಾಪಾರಿಗಳಿಗೆ ಸಾಲ ಕೊಡುವುದಕ್ಕಿಂತ ಹೆಚ್ಚಾಗಿ ಅವರನ್ನು ಶೋಷಣೆ ಮಾಡುತ್ತಿದ್ದ ಬಡ್ಡಿ ವ್ಯಾಪಾರಿಗಳಿಂದ ಮುಕ್ತಿ ಕೊಡಿಸಲು ಹೊರಟಿರುವ ನಿರ್ಧಾರ ಅವರ ನೆಮ್ಮದಿಯ ಬದುಕಿಗೆ ಕಾರಣವಾಗಲಿದೆ. ರಾಜ್ಯದಲ್ಲಿ ಬಡ್ಡಿ ದಂಧೆಕೋರರು ಸಣ್ಣ ಸಣ್ಣ ವ್ಯಾಪಾರಿಗಳಿಗೆ ಬೆಳಗ್ಗೆ ಸಾವಿರ ರುಪಾಯಿ ಹಣ ಕೊಡುತ್ತಿದ್ದಾರೆ. ವ್ಯಾಪಾರ ಮುಗಿಸಿದ ನಂತರ ವ್ಯಾಪಾರಿಗಳು ಆ ಸಾವಿರ ರುಪಾಯಿಗೆ ಇನ್ನೂರರಿಂದ ಮುನ್ನೂರು ರುಪಾಯಿ ಹಣವನ್ನು ಸೇರಿಸಿ ದಂಧೆಕೋರರಿಗೆ ನೀಡುತ್ತಿದ್ದಾರೆ. ಹಣ ಕೊಡದಿದ್ದರೆ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸುವುದು, ಬೆದರಿಸುವುದು ಸೇರಿದಂತೆ ಹಲವು ಕುಕೃತ್ಯಗಳಿಗೆ ಕೈ ಹಾಕುತ್ತಿದ್ದಾರೆ. ಈ ದುಷ್ಟಕೂಳರ ಶೋಷಣೆಗೆ ಅದೆಷ್ಟೋ ಸಣ್ಣ ವ್ಯಾಪಾರಿಗಳ ಕುಟುಂಬಗಳು ಬೀದಿಪಾಲಾಗಿವೆ. ಇಂತಹ ಬಡ್ಡಿ ದಂಧೆಕೋರರಿಗೆ ಮಟ್ಟ ಹಾಕಿ ಇಡೀ ದಿನ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರಾಜ್ಯದ ಲಕ್ಷಕ್ಕೂ ಅಽಕ ಕುಟುಂಬಗಳಿಗೆ ನೆರವಾಗುವುದು ಈ ಬಡವರ ಬಂಧು ಯೋಜನೆಯ ಉದ್ದೇಶವಾಗಿದೆ. ಸರಕಾರದ ಸಹಕಾರ ಇಲಾಖೆಯ ನೇತೃತ್ವದಲ್ಲಿ ಯೋಜನೆ ಜಾರಿಗೆ ಬರುತ್ತಿದ್ದು, ಮಾರುಕಟ್ಟೆಗಳಲ್ಲಿ ಸೂಕ್ತ ಸಿಬ್ಬಂದಿಯನ್ನೊಳಗೊಂಡ ತಂಡ ಮೊಬೈಲ್ ಬ್ಯಾಂಕಿಂಗ್ ವಾಹನದಲ್ಲಿ ಬಂದು ವ್ಯಾಪಾರಿಗಳಿಗೆ ಬೆಳಗ್ಗೆಯೇ ಬಡ್ಡಿ ರಹಿತವಾಗಿ ಒಂದು ಸಾವಿರ ರುಪಾಯಿವರೆಗೆ ಸಾಲ ನೀಡಲಿದೆ. ಸಂಜೆಯ ವೇಳೆಗೆ ವ್ಯಾಪಾರ ಮುಗಿದ ನಂತರ ವ್ಯಾಪಾರಿಗಳು ತಾವು ಪಡೆದಿದ್ದ ಸಾಲವನ್ನು ಮರಳಿಸಿ ಬಂದ ಲಾಭದ ಹಣವನ್ನು ಪೂರ್ತಿ ಮನೆಗೆ ಕೊಂಡೊಯ್ದು ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ. ರಾಜ್ಯದಲ್ಲಿ ಅತಿಹೆಚ್ಚು ಅಂದರೆ ಸುಮಾರು ೩೫ ಸಾವಿರ ಬೀದಿ ಬದಿ ವ್ಯಾಪಾರಿಗಳು ಬೆಂಗಳೂರಿನಲ್ಲಿದ್ದಾರೆ. ಬಡ್ಡಿ ದಂಧೆಕೋರರಿಂದ ಶೋಷಣೆಗೆ ಒಳಗಾಗುತ್ತಿರುವುದು ಬೆಂಗಳೂರಿನಲ್ಲೇ ಹೆಚ್ಚು. ಈ ಕಾರಣದಿಂದ ಇಲ್ಲಿ ಪೈಲಟ್ ಯೋಜನೆಯಡಿ ಸಾಲ ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದೆ. ಇದೊಂದು ಉತ್ತಮವಾದ ಯೋಜನೆಯಾಗಿದೆ. ಆದರೆ, ಇದನ್ನು ಜಾರಿಗೆ ತರುವಾಗ ಮತ್ತು ತಂದ ನಂತರ ಸರಕಾರ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗುತ್ತದೆ. ಈ ಜನಪರ ಯೋಜನೆ ನಿಜವಾಗಿಯೂ -ಲಾನುಭವಿಗಳಿಗೆ ತಲುಪಬೇಕಾದರೆ ಸಂಬಂಽಸಿದ ಇಲಾಖೆಯ ಅಽಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡಬೇಕಾಗುತ್ತದೆ. ಈ ಮೂಲಕ ಹಲವಾರು ದಶಕಗಳಿಂದ ವ್ಯಾಪಾರಿಗಳು ಹಾಕುತ್ತಿರುವ ಕಣ್ಣೀರನ್ನು ಒರೆಸುವ ಕೆಲಸವನ್ನು ಸರಕಾರ ಮಾಡಬೇಕು.

Tags

Related Articles

Leave a Reply

Your email address will not be published. Required fields are marked *

Language
Close