Sri Ganesh Tel

ಉಳ್ಳವರು ಮನೆ ಕಟುವರಯ್ಯ

Posted In : ಕಾಲೆಳೆಯೋ ಕಾಲ

ಮನಿ ಬೇಕಾ ಮನಿ
ಯಾರಿಗೆ ಬೇಕು ಮನಿ
ಮನಿ ಬೇಕಾ ಮನಿ
ಸಿದ್ಲಿಂಗು ಕಿರುಚಾಡುವುದನ್ನು ನೋಡಿ ನನಗೆ
ಅಚ್ಚರಿಯಾಯಿತು. ದಿನಾ ಖರ್ಚಿಗೆ ದುಡ್ಡು ಕೇಳುವ ಈ
ಸಿದ್ಲಿಂಗು ಮನಿ ಬೇಕಾ ಮನಿ ಅಂತಿದಾನಲ್ಲ ಅಂತ
ಆಶ್ಚರ್ಯವಾಗಿ ಕೇಳಿದೆ.

‘ಅಲ್ಲಯ್ಯಾ ಒದ್ರೆ ನಿನ್ನ ಜೇಬಿಂದ ಎಂಟಾಣೆ ಬೀಳುವುದಿಲ್ಲ. ನೀನೆಲ್ಲಿಂದ ಮನಿ ಕೊಡ್ತೀಯಾ, ಏನಾದ್ರೂ ಲಾಟರಿ ಹೊಡೀತಾ ?’
‘ಇಂಗ್ಲಿಷ್ ಮನಿ ಅಲ್ಲಾ ಇದು ಕನ್ನಡದ ಮನಿ. ನಿಮ್ಮ ಬೆಂಗಳೂರವರ ಭಾಷಾದಾಗ ಮನೆ, ಹೌಸ್, ವಸತಿ…’ ‘ಓಹ್, ಅದಕ್ಕೂ ನಿನಗೂ ಏನೋ ಸಂಬಂಧಾ ?’ ‘ನೋಡ್ರಿ ಸರ, ನಮ್ಮ ಸಿ.ಎಂ ಸಾಹೇಬ್ರು ಒಂದು ವರ್ಷಕ್ಕ ಒಂದು ಲಕ್ಷ ಮನಿ ಕೊಡ್ತೀನಿ ಅಂತ ಇವತ್ತು ಸ್ಕೀಮ್ ಅನೌನ್ಸ್ ಮಾಡ್ಯಾರ, ನಿಮಗೇನಾದ್ರೂ ಬೇಕಾದ್ರ ಹೇಳ್ರಿ.’ ‘ಅಲ್ಲಯ್ಯಾ ಇನ್ನು ಆರು ತಿಂಗಳಾದ್ರೆ ಅವರ ಸರಕಾರಾನೇ ಇರೋದಿಲ್ಲ. ಪ್ರತಿ ವರ್ಷ ಮನಿ ಎಲ್ಲಿಂದ ಕೊಡ್ತಾರೆ ? ಪ್ರತಿ ವರ್ಷ ಹೋಗ್ಲಿ, ಈ ವರ್ಷ ಹ್ಯಾಗ್ ಕೊಡ್ತಾರೆ ?’

‘ಅದಕ್ಕ ರಾಜಕೀಯ ಅನ್ನೋದ್ರೀ ಸರ, ಇದ ಸ್ಕೀಮ್‌ನ ಅಧಿಕಾರ ಬಂದ ಕೂಡಲೇ ಮಾಡಿದ್ರ ಈ ನಾಲ್ಕು ವರ್ಷದಾಗ ನಾಕು ಲಕ್ಷ ಮನಿ ಆಗಬೇಕಾಗ್ತಿತ್ತು. ಚುನಾವಣೆ ಬರತೈತಿ, ಗೆದ್ರ ಕೊಡತೇನಿ, ಸೋತ್ರ ಗೆದ್ದವರ ಕಡೆ ಇಸಗೋರಿ ಅಂತ ಹೇಳಿದಂಗ ಅದರ ಅರ್ಥ.’ ’ಅದು ಹೋಗ್ಲಿ, ಕೆಂಪಯ್ಯನ ಹತ್ರ ಅಡ್ವೈಸ್ ತಗೊಂಡ್ರೆ ಏನ್ ತಪ್ಪು ? ಅಂದಿದಾರಲ್ಲಾ..’ ‘ಯಾರು ನಮ್ಮ ಸಿ ಎಂ ಸಾಹೇಬ್ರಾ ? ಹೌದ್ರಿ. ನೋಡ್ರಿ ರವಿ ಚನ್ನಣ್ಣವರ್ ಶಾಣ್ಯಾ ಇರಬಹುದು ಆದ್ರ ಅವರ ಮ್ಯಾಗ ಇನ್ನೊಬ್ಬ ಸಾಹೇಬ ಅದಾನಂತ ಅವಗ ಗೊತ್ತೈತಿ. ಸ್ವತಃ ಸಿ ಎಂ ಅವರೇ ಕೆಂಪಯ್ಯ ಅವರ ಅಡ್ವೈಸ್ ತೊಗೊಂತಾರ ಇವಾ ಯಾವ ಲೆಕ್ಕಾ ಅಂತ ಅದರ ಅರ್ಥ. ಹೋಗ್ಲೀ ಬಿಡ್ರಿ. ಈಗ ಹೇಳ್ರಿ ಮನಿ ಬೇಕಾ ಮನಿ ಹೇಳ್ರಿ.

ಉಳ್ಳವರು ನೂರಾರು ಮನೆ ಕಟ್ಟುವರಯ್ಯ ನಾನೇನು ಕಟ್ಟಲಿ ಸಿದ್ಧಲಿಂಗಾ ಕೊರಳೊಳಗೊಂದು ದಾರ ನಡುವಿಗೊಂದು ಉಡದಾರ!

2 thoughts on “ಉಳ್ಳವರು ಮನೆ ಕಟುವರಯ್ಯ

Leave a Reply

Your email address will not be published. Required fields are marked *

3 × three =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top