About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಭೀಮಾ ಕೋರೆಗಾಂವ್‌ ಗಲಭೆ: ಕಾರ್ಯಕರ್ತರ ಗೃಹ ಬಂಧನ ವಿಸ್ತರಣೆ

ದೆಹಲಿ: ಭೀಮಾ ಕೋರೆಗಾಂವ್‌ ಗಲಭೆ ಸಂಬಂಧ ಬಂಧಿಸಲ್ಪಟ್ಟ ಐವರು ಮಾನವ ಹಕ್ಕುಗಳ ಕಾರ್ಯಕರ್ತರ ಗೃಹ ಬಂಧನವನ್ನು ಸೆಪ್ಟೆಂಬರ್‌ 17ರ ವರೆಗೆ ಸುಪ್ರೀಂ ಕೋರ್ಟ್ ವಿಸ್ತರಣೆ ಮಾಡಿದೆ.

ಇತಿಹಾಸಗಾತಿ ಎಂದು ಹೇಳಲಾದ ರೋಮಿಲಾ ಥಾಪರ್‌ ಹಾಗು ಇತರ ನಾಲ್ವರು ಸಲ್ಲಿಸಿರುವ ಅರ್ಜಿಯ ಆಲಿಕೆಯನ್ನು ಸೆಪ್ಟೆಂಬರ್‌ 17ಕ್ಕೆ ಮುಂದೂಡಲಾಗಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗು ಇತರ ನ್ಯಾಯಾಧೀಶರಾದ ಎ ಎಂ ಖಾನ್ವಿಲ್ಕರ್‌, ಹಾಗು ಡಿ ವೈ ಚಂದ್ರಚೂಡ್‌ ಇದ್ದ ಪೀಠ ಈ ಸಂಬಂಧ ಆಲಿಕೆ ನಡೆಸುತ್ತಿದೆ.

ಮಾನವ ಹಕ್ಕುಗಳ ಕಾರ್ಯಕರ್ತರು ಎಂದು ಹೇಳಲಾದ ವರವರ ರಾವ್‌, ಅರುಣ್‌ ಫೆರೆರ‍್ರಿಯಾ, ವರ್ನಾನ್‌ ಗೋನ್ಸಾಲ್ವಸ್‌, ಸುಧಾ ಭಾರಧ್ವಾಜ್‌ ಹಾಗು ಗೌತಮ್‌ ನವ್ಲಾಕಾರನ್ನು ಗಲಭೆಗೆ ಪ್ರಚೋದನೆ ನೀಡಿದ ಸಂಬಂಧ ಬಂಧಿಸಲಾಗಿದೆ.

ವರ್ಷಾರಂಭದಲ್ಲಿ ಮಹಾರಾಷ್ಟ್ರಾದ್ಯಂತ ನಡೆದಿದ್ದ ಭೀಮಾ ಕೋರೆಗಾಂವ್‌ ಗಲಭೆಗೆ ಸಂಚು ರೂಪಿಸಲು ಡಿಸೆಂಬರ್‌ 31ರಂದು ಎಲ್ಗರ್‌ ಪರಿಷದ್‌ ನಡೆಸಿದ್ದ ಸಂಬಂಧ ಈ ಐವರ ವಿರುದ್ಧ ಆಗಸ್ಟ್‌ 28ರಂದು ಮಹಾರಾಷ್ಟ್ರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ಪ್ರಜಾಫ್ರಭುತ್ವದಲ್ಲಿ ಭಿನ್ನಭಿಪ್ರಾಯ ಮಹತ್ವಾದದ್ದು ಎಂದು ಹೇಳಿದ್ದ ಸುಪ್ರೀಂ ಕೋರ್ಟ್ ಈ ಐವರನ್ನು ಗೃಹ ಬಂಧನದಲ್ಲಿ ಇಡುವಂತೆ ಸೂಚಿಸಿತ್ತು.

Tags

Related Articles

Leave a Reply

Your email address will not be published. Required fields are marked *

Language
Close