Breaking Newsಪಾಲಿಟಿಕ್ಸ್ಪ್ರಚಲಿತ
“ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಲು ಜನಿವಾರಧಾರಿ ಹೇಗೆ ಬಿಟ್ಟರು?”: ಸ್ಮೃತಿ ಇರಾನಿ
ಕುಂಭ ಮೇಳದ ಕುರಿತಂತೆ ವ್ಯಂಗ್ಯ ಮಾಡಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, “ಹಿಂದೂ ಧಾರ್ಮಿಕ ಭಾವನೆಗಳ ಮೇಲೆ ದಾಳಿ ಮಾಡಲಾಗಿದೆ” ಎಂದು ಗಂಭೀರವಾದ ಆಪಾದನೆ ಮಾಡಿದ್ದಾರೆ.
ತಮ್ಮ ಪಕ್ಷ ನಾಯಕರಿಗೆ ಅಸಂಬದ್ಧ ಹೇಳಿಕೆ ನೀಡಲು ಬಿಟ್ಟ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ ಸ್ಮೃತಿ, “ಶಶಿ ತೂರರ ಹೇಳಿಕೆಯು ಧಾರ್ಮಿಕ ನಿಂದನೆಗೆ ಸಮನಾಗಿದೆ. ಜಗತ್ತಿನಾದ್ಯಂತ ಇರುವ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ವಿಚಾರವಾಗಿ ಚುನಾವಣೆ ಸಂದರ್ಭ ಜನಿವಾರ ವ್ಯೂಹಾತ್ಮಕ ನಡೆಯಾಗಿ ಜನಿವಾರ ಧರಿಸುವ ರಾಹುಲ್ ಗಾಂಧಿಗೆ ಪ್ರಶ್ನೆಗಳನ್ನು ಕೇಳಬೇಕು” ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮತ್ತೊಬ್ಬ ಬಿಜೆಪಿ ನಾಯಕ ನಳಿನ್ ಕೊಹ್ಲಿ, “ಇದು ಬಹಳ ದುರದೃಷ್ಟಕರ. ಹಿಂದೂ ಧರ್ಮದ ಕುರಿತಂತೆ ಸುಶಿಕ್ಷಿತರಾದ ಹಾಗು ಗೌರವಾನ್ವಿತ ನಾಯಕರಾದ ಶಶಿ ತರೂರರಂಥ ವ್ಯಕ್ತಿಗಳು ಈ ರೀತಿ ಹೇಳಿಕೆಗಳನ್ನು ನೀಡಬಾರದು” ಎಂದಿದ್ದಾರೆ.
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್, ತಮ್ಮ ಪಾಪಗಳನ್ನು ತೊಳೆದುಕೊಳ್ಳಲು ತರೂರರು ಗಂಗೆಯಲ್ಲಿ ಸ್ನಾನ ಮಾಡಲಿ ಎಂದಿದ್ದು, “ಕುಂಭದ ಮಹತ್ವವನ್ನು ಅವರು ಹೇಗೆ ಅರಿಯಬಲ್ಲರು? ಅವರಿರುವ ವಾತಾವರಣ, ಅವರು ಬೆಳದುಬಂದ ಸಂಸ್ಕಾರಗಳು ಅವರಿಗೆ ಇವೆಲ್ಲ ಅರ್ಥವಾಗಲು ಬಿಡುವುದಿಲ್ಲ. ನೀವು ಸಾಕಷ್ಟು ಪಾಪಗಳನ್ನು ಮಾಡಿದ್ದೀರಿ, ಕುಂಭದಲ್ಲಿ ಪುಣ್ಯಸ್ನಾನ ಮಾಡಿ, ನಿಮ್ಮ ಪಾಪಗಳನ್ನು ತೊಳೆದುಕೊಳ್ಳಲು ಸಹಾಯವಾಗಬುದು” ಎಂದು ಸಿಂಗ್ ತಿಳಿಸಿದ್ದಾರೆ.
ಯೋಗಿ ಆದಿತ್ಯನಾಥರ ವಿರುದ್ಧ ಟ್ವಿಟರ್ನಲ್ಲಿ ಟೀಕೆ ಮಾಡಿದ್ದ ತರೂರ್, “ಗಂಗೆಯನ್ನೇ ಶುದ್ಧಗೊಳಿಸಬೇಕಿದ್ದು, ಪಾಪಗಳನ್ನು ತೊಳೆದುಹಾಕಬೇಕಿದೆ” ಎಂದಿದ್ದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗು ಆತನ ಸಹೋದರಿ ಪ್ರಿಯಾಂಕಾ ರಾಬರ್ಟ್ ವಾದ್ರಾ ಕುಂಭಮೇಳದಲ್ಲಿ ಭಾಗಿಯಾಗಿ ಪುಣ್ಯ ಸ್ನಾನ ಮಾಡುವ ಸುದ್ದಿಗಳು ಬಂದಿರುವ ಬೆನ್ನಲ್ಲೇ ತರೂರ್ ಹೇಳಿಕೆ ಪಡೆದಿರುವುದು ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಗಂಗೆಯಲ್ಲಿ ಪುಣ್ಯ ಸ್ನಾನ ಮಾಡಿದ ಬಳಿಕ ಪ್ರಿಯಾಂಕಾ ರಾಜಕೀಯ ಜವಾಬ್ದಾರಿಗಳನ್ನು ಕೈಗೆತ್ತಿಕೊಳ್ಳುವ ಮಾತುಗಳು ಕೇಳಿಬರುತ್ತಿವೆ.