About Us Advertise with us Be a Reporter E-Paper

ವಿವಾಹ್

ನಿನ್ನನ್ನು ನೀನೆ ಕಳೆದುಕೊಂಡರೆ ಹೇಗೆ ಹುಡುಗಿ?

ಸದಾಶಿವ್ ಸೊರಟೂರು

ರಾತ್ರಿ ಹನ್ನೆರಡೋ, ಎರಡು ಗಂಟೆಯೋ ಲೆಕ್ಕವಿಲ್ಲದ ಹಾಗೆ ಯಾವಾಗೆಂದರೆ ಅವಾಗ ಕಾಲ್ ಮಾಡಿ ಒಂದೇ ಸಮನೆ ಅಳುತ್ತಿದ್ದಳು! ಅವನನ್ನು ಒಪ್ಪಿಸಿ ಕರೆತಂದು ಬಿಡು, ಸಾಕು ಈ ಜನ್ಮಕ್ಕೆ ಅಂತ ಗೋಗೊರೆಯುತ್ತಿದ್ದಳು.

ಬದುಕು, ಸಾಧನೆ, ಶಿಸ್ತು, ಪೆರೆಂಟ್‌ಸ್ ಅಂತ ಮಾತಾಡುತ್ತಿದ್ದ ಹುಡುಗಿ ಈಕೆನಾ? ಅನಿಸಿತು. ತುಂಬಾನೇ ಸ್ಟ್ರಾಂಗ್ ಗರ್ಲ್ ಅಂತ ಹೆಸರು  ಆದರೆ ಈ ಒಂದು ಕಾರಣಕ್ಕೆ ಇನ್ನಿಲ್ಲದಂತೆ ಕುಸಿದು ಹೋಗಿದ್ದಳು. ಅಷ್ಟೊಂದು ಸ್ಟ್ರಾಂಗ್ ಅಂತ ಕಾಣಿಸಿಕೊಂಡಿದ್ದ ಈಕೆ ಆ ಪರಿ ವೀಕ್ ಆಗಿದ್ದು ಹೇಗೆ? ಅಷ್ಟಕ್ಕೂ ಇವಳು ದುರ್ಬಲ ವಾಗಿಯೇ ಇದ್ದು ಹಾಗೆ ತೋರಿಸಿಕೊಂಡಿದ್ದಳಾ? ಅವಳು ಅಂತಲ್ಲ ಟೋಟಲಿ ಹೆಣ್ಣು ಮಕ್ಕಳು ಈ ಭಾವನಾತ್ಮಕ ವಿಷಯಗಳಲ್ಲಿ ಒಂದು ರೀತಿಯ ವೀಕೆ! ಅದೊಂದು ಪೆದ್ದುತನ! ಅವಳ ಭಾವನಾತ್ಮಕ ಮಡ್ಡುತನ ಎಲ್ಲಿಯವರೆಗೂ ಹೋಗುತ್ತೆ ಅಂದರೆ ತನ್ನ ತನವನ್ನೇ ಬಿಟ್ಟುಕೊಡು ವಷ್ಟು ಸೋತು ಹೋಗುತ್ತಾಳೆ.

 ಸಂಬಂಧ ಅದು ಪ್ರೀತಿಯೊ, ಗೆಳೆತನವೊ, ಅಕ್ಕ ತಂಗಿಯರೊ, ಅಕ್ಕ ತಮ್ಮನೋ ಯಾವುದೊ ಒಂದರಲ್ಲಿ ಯಡವಟ್ಟಾಗಿ ಬಿಟ್ಟರೆ ಅಕ್ಷರಶಃ ಆಕೆ ಭಾವನಾತ್ಮಕವಾಗಿ ತುಂಬಾ ರಿಯಾಕ್‌ಟ್ ಆಗುತ್ತಾಳೆ. ಗಂಡಸರು ಈ ವಿಷಯ ದಲ್ಲಿ ಗಟ್ಟಿಗರು. ಆಕೆ ಈ ಹೊತ್ತಿನಲ್ಲಿ ಮೊದಲಿನ ಸ್ಥಿತಿಗೆ ಬರದಷ್ಟು ಮುಂದೆ ಹೋಗುತ್ತಾಳೆ. ಸುಮ್ಮನೆ ಒಂದು

ಉದಾಹರಣೆಯನ್ನು ನೋಡುವುದಾದರೆ ಒಬ್ಬನನ್ನು ಪ್ರೀತಿಸಿ ಕೊಂಡಿದ್ದ ಹುಡುಗಿ ಅವನೊಂದಿಗೆ ಬದುಕು ಹಂಚಿಕೊಳ್ಳುವ ಕನಸು ಕಟ್ಟಿಕೊಂಡಿರುತ್ತಾಳೆ. ಅದಕ್ಕಾಗಿ ತನ್ನನ್ನು ಸಂಪೂರ್ಣ ಅರ್ಪಿಸಿ ಕೊಂಡಿರುತ್ತಾಳೆ.  ಕಾರಣಕ್ಕೆ ಆತ ದೂರವಾಗುತ್ತಿದ್ದಾನೆ ಅನ್ನುವ ಸುಳಿವು ಸಿಕ್ಕರೆ ಸಾಕು ಅಥವಾ ಅವನೇ ಆ ಬೇಡಿಕೆಯನ್ನು ಮುಂದಿಟ್ಟರೆ ಹುಚ್ಚಿ ಯಾಗುತ್ತಾಳೆ.

ಭಾವನೆಗಳು ಸಂಪೂರ್ಣ ಹಿಡಿತ ತಪ್ಪುತ್ತವೆ. ಉಳಿಸಿಕೊಳ್ಳಲು ಎಂತಹ ಕಾರ‌್ಯಕ್ಕೂ ಇಳಿದು ಬಿಡುವ ಯೋಚನೆ ಮಾಡುತ್ತಾಳೆ. ಹೋರಾಟದಿಂದ ಹಿಡಿದು ತಾನು ದೈಹಿಕವಾಗಿ ಇನ್ನಷ್ಟು ಸುಂದರವಾಗಿ ಕಾಣುವ ಪ್ರಯತ್ನದವರೆಗೂ ಕೈ ಹಾಕುತ್ತಾಳೆ. ಮಾನಸಿಕ ಖಾಯಿಲೆಗಳಿಗೆ ಒಡ್ಡಿಕೊಳ್ಳುತ್ತಾಳೆ. ಇನ್ನು ಮುಂದೆ ನನಗೊಂದು ಬದುಕೇ ಇಲ್ಲವೆಂಬಂತೆ ವರ್ತಿಸುತ್ತಾಳೆ. ಸಂಬಂಧಗಳು ಬಯಸುವ ಒಂದು ಆಪ್ತತೆಯೇ ಬೇರೆ,  ಬೇರೆ. ಅವರೆಡನ್ನು ಬೆರೆಸಿಕೊಂಡು ತನ್ನ ತನವನ್ನು ಹಾಗೆ ತೆತ್ತು ಬಿಡುತ್ತಾಳೆ.

ನಿನ್ನನ್ನು ನೀನು ಕಳೆದುಕೊಳ್ಳವುದರಲ್ಲಿ ಯಾವ ಗೆಲುವಿದೆ? ಕಳಚಿಕೊಂಡ ಒಂದು ಬಂಧದ ಮುಂದೆ ದೇಹಿ ಅನ್ನಲು ನಿನಗೇನಾಗಿದೆ? ಅವನಿಲ್ಲದೇ ಬದುಕಿಲ್ಲ ಎಂಬುದು ಒತ್ತರಿಸಿಕೊಂಡು ಬಂದ ಭಾವುಕತೆ ಅಷ್ಟೇ! ಅದು ನಿನ್ನ ಪೆದ್ದುತನ. ಒಂದು ನೆನಪಿ ರಲಿ ನಿನ್ನನ್ನೇ ಕಸಿಯುವಂತೆ ಮಾಡುವ ಒಂದು ಬಂಧವಾದರೂ ಏನಕ್ಕೆ? ತೊಲಗಿತು ಬಿಡು ಶನಿ ಅಂತ ಖುಷಿ ಪಡಬಾರದೇ? ಬಿ ಪ್ರಾಕ್ಟಿಕಲ್ ಹುಡುಗಿ! ಬಿದ್ದ  ಎದ್ದು ನಿಲ್ಲು. ನಿನ್ನ ತಪ್ಪಿದ್ದರೆ ಒಂದು ಕ್ಷಮೆ ಕೇಳು! ಕಳಚಿದ ಸಂಬಂಧ ಸರಿ ಹೋಗುತ್ತದೆಯೆಂದರೆ ಕೈ ಜೋಡಿಸು. ಇಲ್ಲವೆಂದರೆ ಸುಮ್ಮನೆ ಕೈಮುಗಿದು ಕಳುಹಿಸಿಕೊಡು. ಸಾಗಬೇಕಾದ ಹಾದಿ ಬಹಳವಿದೆ. ಅತ್ತ ಕಡೆ ಮುಖ ಮಾಡು!

Tags

Related Articles

Leave a Reply

Your email address will not be published. Required fields are marked *

Language
Close