About Us Advertise with us Be a Reporter E-Paper

ಅಂಕಣಗಳು

ಜನರನ್ನು ಕುರಿ ಮಾಡುತ್ತಿರುವ ಕಂಪನಿಗಳ ನಿಯಂತ್ರಣ ಹೇಗೆ?

ಕಾಳಜಿ: ಕೆ.ಎಂ. ಶಿವಪ್ರಸಾದ್

ತ ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತಿದ್ದ . ಈಗ ನೋಡಿ ಕಾರಿನಲ್ಲಿ ಓಡಾಡುತ್ತಿದ್ದಾನೆ. ಈತ ನೋಡಿ ಮುಂಚೆ ಸೈಕಲ್ ನಲ್ಲಿ ಮನೆಮನೆಗೆ ಸಿಲಿಂಡರ್ ಸರಬರಾಜು ಮಾಡುತ್ತಿದ್ದ ಆದರೆ ಈಗ ಕಾರು ಬುಕ್ ಮಾಡಿದ್ದಾನೆ. ಓಹ್ ಇನ್ನು ಇವರನ್ನ ನೋಡಿ, ಎಂಜಿನಿಯರಿಂಗ್ ಓದಿ ಕೆಲಸಕ್ಕಾಗಿ ಅಲೆದಾಡುತ್ತಿದ್ದ, ಪದವಿ ಮುಗಿಸಿ ಕೆಲಸ ಗಿಟ್ಟಿಸಿದರೂ ಕಡಿಮೆ ಸಂಬಳದಿಂದ ಬೇಸತ್ತಿದ್ದ. ಈಗ ನಮ್ಮ ಕಂಪನಿಗೆ ಸೇರಿ ಲಕ್ಷಾಧೀಶ್ವರ, ಕೋಟ್ಯಧೀಶ್ವರಾಗಿದ್ದಾರೆ. ಕಾರು, ಬಂಗ್ಲೆ, ಫಾರಿನ್ ಟ್ರಿಪ್ಪು ಅಂತೆಲ್ಲಾ ಸುತ್ತಾಡುತ್ತಿದ್ದಾರೆ. ನೀವೂ ಪ್ರಯತ್ನ ಮಾಡಿ ನಮ್ಮೊಂದಿಗೆ ಕೈಜೋಡಿಸಿ ನಿಮ್ಮನ್ನು ಆ ಎತ್ತರಕ್ಕೆ ಕೆಲವೇಕೆಲವು ತಿಂಗಳಲ್ಲಿ ಮುಟ್ಟಿಸಿ ಬಿಡುತ್ತೇವೆ’ ಅನ್ನುವ ಮಾತು ಈಗೀಗ ತುಂಬ ಕೇಳಿಬರುತ್ತದೆ.

ಅದನ್ನು ಕೇಳಿಯೇ ಯುವ ಪೀಳಿಗೆಯ ಬುದ್ಧಿವಂತ ಪ್ರಜೆಗಳು ದಾರಿ ತಪ್ಪುತ್ತಿದ್ದಾರೆ. ಅವಿದ್ಯಾವಂತರಿಗೆ, ಶಿಕ್ಷಣದಿಂದ ವಂಚಿತರಾದವರಿಗೆ ಬುದ್ಧಿ ಹೇಳಬೇಕಾದ ವಿದ್ಯಾವಂತರೇ ಇಂದು ಬ್ಲೇಡ್ ಕಂಪನಿಗಳ ಆಮಿಷಗಳಿಗಳಿಗೆ ಬಲಿಯಾಗಿ ಹಣ ಕಳೆದುಕೊಳ್ಳುವುದಲ್ಲದೇ, ನೆರೆಹೊರೆಯವರಲ್ಲಿ ಹೆಸರು ಹಾಳು ಮಾಡಿಕೊಳ್ಳುವ ಮೂಲಕ ಸ್ನೇಹಿತರ ಕುಹಕದ ಮಾತುಗಳಿಗೆ ಆಹಾರವಾಗುತ್ತಿದ್ದಾರೆ. ಅರ್ಥಾತ್ ಹಣ ಮಾಡುವ ಹುಚ್ಚು ಆಸೆಗೆ ಬಲಿಯಾಗಿ ‘ಬಕ್ರಾ’ಗಳಾಗುತ್ತಿದ್ದಾರೆ.

ಹೌದು, ಇಂದಿಗೆ ಆಗರ್ಭ ಶ್ರೀಮಂತರೆಂದು ಎನಿಸಿಕೊಂಡಿರುವವರೆಲ್ಲ ಹತ್ತಾರು ವರ್ಷಗಳ ಕಾಲ ಶ್ರಮದಿಂದ ದುಡಿದು ಮೇಲೆ ಬಂವರು. ಇಂದಿಗೂ ದೊಡ್ಡ ಬಿಸಿನೆಸ್ ಮ್ಯಾನ್ ಗಳು ಎನಿಸಿಕೊಂಡಿರುವ ಟಾಟಾ ಆಗಲೀ, ಅಂಬಾನಿ ಕುಟುಂಬಸ್ಥರಾಗಲೀ, ಶ್ರಮದಲ್ಲಿ ನಂಬಿಕೆಯಿಟ್ಟು ತಮ್ಮಲ್ಲಿರುವ ವ್ಯವಹಾರ ಜ್ಞಾನವನ್ನು ಬಂಡವಾಳವನ್ನಾಗಿಸಿಕೊಂಡು ಬೆಳೆದವರೇ ಹೊರತು ಹಣ ಮಾಡುವ ಆಸೆಗೆ ಅನೈತಿಕ ದಾರಿ ತುಳಿದವರಲ್ಲ. ಆದರೆ ಗುಣಾತ್ಮಕ ಶಿಕ್ಷಣದ ಬಗ್ಗೆ ಗಂಟೆಗಟ್ಟಲೆ ಬಂಡಲ್ ಬಿಡುವ ಇಂದಿನ ಬಹುತೇಕ ವಿದ್ಯಾವಂತ ಪ್ರಜೆಗಳು ಶ್ರಮಕ್ಕಿಂತ ಅಡ್ಡದಾರಿಯಲ್ಲೇ ಹಣ ಸಂಪಾದನೆಗೆ ಇಳಿದಿರುವುದು ವಿಪರ್ಯಾಸವೇ ಸರಿ.

ವ್ಯವಸ್ಥೆಯನ್ನು ಬದಲಾಯಿಸುವ ಶಕ್ತಿಯಿರುವ ವಿದ್ಯಾವಂತರೇ, ಮೋಸದ ಜಾಲಕ್ಕೆ ಬಲಿಯಾಗಿ ಪಡೆದ ಶಿಕ್ಷಣಕ್ಕೆ ಎಸಗುತ್ತಿರುವುದಲ್ಲದೇ, ತಾವೂ ಅನೈತಿಕ ಜಾಲದಲ್ಲಿ ಸಿಲುಕಿಕೊಂಡು ಪಡಬಾರದ ಪರಿಪಾಟಲು ಅನುಭವಿಸುತ್ತಿದ್ದಾರೆ. ಈ ಮೂಲಕ ಕಲಿತ ವಿದ್ಯೆಯನ್ನು ಒಳ್ಳೆಯದಕ್ಕಿಂತ ಕೆಟ್ಟ ವಿಚಾರಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಬುದ್ಧಿವಂತರು ಅವಿದ್ಯಾವಂತರನ್ನು, ಜನಸಾಮಾನ್ಯರನ್ನು ಯಾಮಾರಿಸಿ ಬದುಕು ಕಟ್ಟಿಕೊಳ್ಳಲು ಹೋರಾಡುತ್ತಿದ್ದರೆ, ಅದೇ ಅತೀ ಬುದ್ಧಿವಂತರು ಅದೇ ಬುದ್ಧಿವಂತರನ್ನು ಮಂಗಾ ಮಾಡುತ್ತಿದ್ದಾರೆ. ಅದರಲ್ಲೂ ವಿವಿಧ ಪದವಿಗಳನ್ನು ಮುಗಿಸಿ ಉದ್ಯೋಗವಿಲ್ಲದೇ ಅಲೆದಾಡುತ್ತಿರುವವರನ್ನೇ ಮುಖ್ಯವಾಗಿ ಟಾರ್ಗೆಟ್ ಮಾಡಿಕೊಳ್ಳುತ್ತಿರುವ ಇಂತಹ ಬ್ಲೇಡ್ ಕಂಪನಿಗಳು ಇಂತಹವರನ್ನು ಪುಸಲಾಯಿಸಿ, ಹಣದ ನಶೆಯನ್ನು ತಲೆಯಲ್ಲಿ ತುಂಬಿ ಯಾಮಾರಿಸುವ ಶುರುವಿಟ್ಟುಕೊಂಡಿದ್ದಾರೆ.

ಇವುಗಳ ಕಾರ್ಯನಿರ್ವಹಣೆ ಶೈಲಿ ಹೇಗಿರುತ್ತದೆಂದರೆ, ವಾರಕ್ಕೊಂದು ಸೆಮಿನಾರ್‌ಗಳು, ಕಾರುಗಳಲ್ಲೇ ಬಂದಿಳಿಯುವ ಸೂಟುಧಾರಿಗಳು, ವೇದಿಕೆ ಮೇಲೆಲ್ಲ ಅಡ್ಡಾಡುತ್ತಾ ನಾವೂ ಹಾಗಿದ್ದೆವು, ಈಗ ನೋಡಿ ನಾವೂ ಹೀಗಾಗಿದ್ದೇವೆ ಎಂಬ ಆಡಂಬರದ ಬದುಕನ್ನು ಅನಾವರಣಗೊಳಿಸಿ ಮನಃಪರಿರ್ತಿಸಲು ಸರ್ಕಸ್ ಮಾಡುುದಲ್ಲದೇ ಹಣಹಣಹಣ ಎಂಬುದನ್ನೇ ವೈಭವೀಕರಿಸಿ ಮುಂದಿದ್ದವರನ್ನು ಮೂರ್ಖರನ್ನಾಗಿಸಲು ಎಷ್ಟು ಸಾಧ್ಯವೋ ಅಷ್ಟನ್ನು ಪ್ರಯತ್ನ ಮಾಡಿಯೇ ತೀರುತ್ತಾರೆ. ಇವರ ಈ ಮೋಡಿಗೆ ಮಾರು ಹೋಗದಿರುವವರಿಗಿಂತ ಹಣದ ಮೇಲಿನ ಆಸೆಗೆ ಬಲಿಯಾಗಿ ಇವರ ಮಾತಿಗೆ ಗೋಣಾಡಿಸಿ ಈ ಜಾಲಕ್ಕೆ ತಂತಮ್ಮ ಸ್ನೇಹಿತರು ಸಂಬಂಧಿಗಳನ್ನು ಸಿಲುಕಿಸಿ ಮೋಸ ಹೋಗುತ್ತಾರೆ.

ಹಾಗಾದರೆ ಈ ಬ್ಲೇಡ್ ಕಂಪನಿಗಳಿಂದ ಲಾಭ ದೊರೆಯುವುದಿಲ್ಲವಾ, ಅದಕ್ಕೆ ಸೇರಿದ ಪ್ರತಿಯೊಬ್ಬರಿಗೂ ಪಂಗನಾಮವೇ ಗಟ್ಟಿನಾ ಅಂದರೆ ಇಲ್ಲ. ಬದಲಾಗಿ ಮೊದಮೊದಲು ಈ ಕಂಪನಿಗಳಲ್ಲಿ ಸದಸ್ಯತ್ವ ಹೊಂದುವ ಮಂದಿಗೆ, ಮಾತಿನಲ್ಲಿ ಮೋಡಿ ಮಾಡುವ ಮಾತುಗಾರರಿಗೆ ಇದರಲ್ಲಿ ಲಾಭ ಜಾಸ್ತಿ. ತಾವೂ ಈ ಕಂಪನಿಯ ಹೆಸರಿನಲ್ಲಿ ಹಣ ಹೂಡಿ ಸದಸ್ಯತ್ವ ಹೊಂದಿದ ನಂತರ ಅದರಲ್ಲಿ ಇಂತಿಷ್ಟು ಹಣ ಕಟ್ಟಿ ಸದಸ್ಯರಾಗಬೇಕು. ನಂತರ ತಮ್ಮ ಕೆಳಗೆ (ಎಡ ಬಲ ಮಾದರಿಯಲ್ಲಿ) ಮತ್ತಷ್ಟು ಜನರನ್ನು ಸೇರಿಸುವ ಮೂಲಕ ಚೈನ್ ಲಿಂಕ್ (ಪ್ರತಿಯೊಬ್ಬರು ತಮ್ಮ ನಂತರ ಕನಿಷ್ಠ ಇಬ್ಬರನ್ನು ಸೇರಿಸಿದರೆ ಮಾತ್ರ ಅವರು ಕಟ್ಟಿರುವ ಹಣ ಅವರಿಗೆ ಲಾಭದ ರೂಪದಲ್ಲಿ ವಾಪಸ್ಸು ಬರುತ್ತದೆ) ಮಾದರಿಯಲ್ಲಿ ಹೆಚ್ಚೆಚ್ಚು ಜನರನ್ನು ಈ ಕಡೇ ಸೆಳೆಯುವ ಕೆಲಸ ಮಾಡಬೇಕು. ಯಾರು ಹೆಚ್ಚಾಗಿ ಮಾತನ್ನೇ ಬಂಡವಾಳ ಮಾಡಿಕೊಂಡು, ಮಾತಿನಿಂದಲೇ ಜನರನ್ನು ಮೋಡಿಗೊಳಪಡಿಸುತ್ತಾರೋ ಅಂತಹವರು ಈ ಜಾಲದಲ್ಲಿ ಲಾಭ ಗಳಿಸುತ್ತಾರೆ.

ಆದರೆ ಮಾನಮರ್ಯಾದೆ ಅನ್ನುವ ಮಂದಿ, ಜನರ ನಡುವೆ ಸಂಕೋಚದಿಂದ, ಅಂಜಿಕೆಯಿಂದ ಬದುಕುತ್ತಿರುವವರು ಈ ವ್ಯವಹಾರದಲ್ಲಿ ಲಾಭಗಳಿಸುವುದು ಕಡಿಮೆ. ಹಾಗಾಗಿ ಮೊದಮೊದಲು ಮಾತಿನ ಮೋಡಿಗೆ ಮಾರು ಹೋಗಿ ಇಂತಹ ಕಂಪನಿಗಳ ಜಾಲಕ್ಕೆ ಬೀಳುವ ಮಂದಿ ನಂತರ ಸಂಕೋಚದಿಂದ ಅತ್ತ ಗುರುತಿಸಿಕೊಳ್ಳದೇ ಹೊರಬರುವುದರಿಂದ ಇಂತಹವರ ಹಣವೂ ಗೋತಾ, ಜನರಿಗೆ ತಿಳಿದ ಮೇಲೆ ಇವರ ಮರ್ಯಾದೆಯೂ ಗೋತಾ!

ನಾಮ ಹಲವು, ಉದ್ದೇಶ ಮಾತ್ರ ಒಂದೇ ಎಂಬ ವರ್ಣನೆ ಇವುಗಳಿಗೆ ಹೊಂದುತ್ತದೆ. ಬಹುತೇಕ ಈ ಬ್ಲೇಡ್ ಹೆಸರಿಗೆ ಒಂದೊಂದು ಉದ್ದೇಶ ಹೊಂದಿರುತ್ತವೆಯಾದರೂ ಅವುಗಳ ಅಂತಿಮ ಉದ್ದೇಶ ಮಾತ್ರ ಜನರನ್ನು ತಮ್ಮ ಕಬಂಧಬಾಹು ಒಳಗೆ ಸಿಲುಕಿಸಿ ಹಣ ಮಾಡುವುದೊಂದೆ ಆಗಿರುತ್ತೆ.

ಅವುಗಳ ಈ ಜಾಲವೂ ಚೈನ್ ಲಿಂಕ್ ಮಾದರಿಯಲ್ಲಿ ವ್ಯವಹರಿಸುತ್ತಿದ್ದು ಅವುಗಳಲ್ಲಿ ಒಂದಷ್ಟು ಟೂರಿಂಗ್ ಪ್ಯಾಕೇಜ್, ಕಂಪ್ಯೂಟರ್ ಶಿಕ್ಷಣ, ಮನೆ ಬಳಕೆ ಸಾಮಾಗ್ರಿಗಳ ಖರೀದಿಯ ನೆಪದಲ್ಲಿ ನಡೆಯುತ್ತಿದ್ದರೆ ಮತ್ತೊಂದಷ್ಟು ನೇರವಾಗಿ ಹಣದ ರೂಪದ ಉಡುಗೊರೆ ನೀಡುವ ಅಂದರೆ ಇಂತಿಷ್ಟು ವರ್ಷಗಳಿಗೆ ಹಣವನ್ನು ದುಪ್ಪಟ್ಟು, ಮೂರುಪಟ್ಟು ಮಾಡಿಕೊಡುವುದಾಗಿ ಆಮಿಷವೊಡ್ಡುತ್ತಿದ್ದಾರೆ. ಇಂತಿಷ್ಟು ಹಣ ಕಟ್ಟಿದರೆ ನೀವೂ ನಮ್ಮ ಕಂಪನಿಯಿಂದ ಇಂತಿಂಥ ಲಾಭಗಳನ್ನು ಪಡೆಯಬಹುದು. ಫಾರಿನ್ ಟ್ರಿಪ್ಪು, ಕಾರು, ಬಂಗಲೆ, ಲಕ್ಷಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಎಂಬ ಬಣ್ಣಬಣ್ಣದ ಹಕ್ಕಿಪಕ್ಷಿಗಳನ್ನೆಲ್ಲ ಆಕಾಶದಲ್ಲಿ ಹಾರಿಬಿಡುತ್ತಿದ್ದಾರೆ.

ಈಗ ಅಂತಹದ್ದೇ ಮುಖವಾಡ ಧರಿಸಿರುವ ಟೂರ್ ಪ್ಯಾಕೇಜ್ ಹೆಸರಿನ ಎರಡ್ಮೂರು ಕಂಪನಿಗಳು ಪ್ರತಿಯೊಂದು ಹಳ್ಳಿಹಳ್ಳಿಗೂ ತಮ್ಮ ಜಾಲ ವಿಸ್ತರಿಸಿಕೊಳ್ಳುತ್ತಿದ್ದು ಕೆಲಸವಿಲ್ಲದ ಹಾಗೂ ಹಣದ ಹುಚ್ಚಿರುವ ವಿದ್ಯಾವಂತರನ್ನೇ ಮುಂದಿಟ್ಟುಕೊಂಡು ಫಾರಿನ್ ಟ್ರಿಪ್ಪು, ಅಂತಾರಾಜ್ಯ ಟ್ರಿಪ್ಪುಗಳು ಆಸೆ ತೋರಿಸುತ್ತಾ ಜನರನ್ನು ಯಾಮಾರಿಸಲು

ಹೀಗೆ ಲಕ್ಷಾಂತರ ಮಂದಿಯಿಂದ ನೂರಾರು ಕೋಟಿರು. ಕೊಳ್ಳೆ ಹೊಡೆಯುವ ಕಂಪನಿಗಳು ಕೊನೆಗೆ ಎಲ್ಲಿ ಹೋಗುತ್ತಿವೆ. ಅವುಗಳ ಲಾಭವೆಷ್ಟುನಷ್ಟವೆಷ್ಟು ಎಂಬ ಸಣ್ಣ ಮಾಹಿತಿಯೂ ಹೊರ ಜಗತ್ತಿಗೆ ತಿಳಿಯುತ್ತಿಲ್ಲ. ಇಂತಹ ಕಂಪನಿಗಳ ಸ್ಥಾಪನೆಗೆ ಸರಕಾರಗಳು ಅನುಮತಿ ನೀಡುತ್ತಿರುವುದಾದರು ಯಾಕೆ ಅನ್ನುವುದೇ ಸಾರ್ವಜನಿಕ ವಲಯದಲ್ಲಿ ಜಿಜ್ಞಾಸೆ ಮೂಡಿಸಿದೆ.

ಇವುಗಳ ವಿರುದ್ಧ ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ಹೋಗಲು ಮುಜುಗರ. ಹಣದ ಆಸೆಯಿಂದಲೇ ಬಹುತೇಕ ಮಂದಿ ಈ ಜಾಲಕ್ಕೆ ಬಲಿಯಾಗುವುದರಿಂದ ಅಲ್ಲದೇ ಈ ಹೊರಗಡೆ ಹೇಳಿಕೊಂಡರೆ ಅವಮಾನವಾಗುತ್ತದೆ ಎಂಬ ಕಾರಣಕ್ಕೆ ಅದೆಷ್ಟೋ ಮಂದಿ ಈ ಜಾಲದ ಬಗ್ಗೆ ಅಸಮಾಧಾನ ಮತ್ತು ತಕರಾರುಗಳಿದ್ದರೂ ಕೂಡ ಪೊಲೀಸ್ ಠಾಣೆವರೆಗೂ ದೂರನ್ನು ಕೊಂಡೊಯ್ಯೊದೇ ತಮ್ಮ ಆಸೆ ಬುರುಕುತನಕ್ಕೆ ಮುಜುಗರ ಅನುಭವಿಸುತ್ತಿರುವ ಸಾವಿರಾರು ಲಕ್ಷಾಂತರ ಮಂದಿಯಿದ್ದಾರೆ.

ಪ್ರಸ್ತುತ ಕಾಲಚಕ್ರವೂ ಮನುಷ್ಯಮನುಷ್ಯತ್ವಕ್ಕಿಂತ ಹಣದ ಮೇಲೆಯೇ ನಡೆಯುತ್ತಿದೆ ನಿಜ. ಆಗಂತ ಹಣವೇ ಮುಖ್ಯವೆಂದೂ ಹಣದ ಹಿಂದೆ ಓಡುವುದು ಎಷ್ಟು ಸರಿ? ಅದೂ ಆ ಮೂಲಗಳ ಅರಿವಿದ್ದೂ? ಈ ಚೈನ್ ಲಿಂಕ್ ಮಾದರಿಯ ಕಾರ್ಯನಿರ್ವಹಣೆ ಸಾಚಾವೆಂದೇ ಇಟ್ಟುಕೊಳ್ಳೋಣ ಹಾಗೆಯೇ ಪ್ರತಿಯೊಬ್ಬರು ಇಬ್ಬರನ್ನು ಸೇರಿಸಿಕೊಳ್ಳುತ್ತಾ ಹೋದರೆ ಕೊನೆಯದಾಗಿ ಆ ಕಂಪನಿಯಲ್ಲಿ ಸೇರಿಕೊಳ್ಳುವ ಮಂದಿ ಆದಾಯಗಳಿಸಲು ಮತ್ಯಾವ ದೇಶಕ್ಕೆ ಹೋಗಿ ಜನರನ್ನು ಕರೆತರಬೇಕು ಅನ್ನುವ ಸತ್ಯ ಅರಿತುಕೊಂಡರೆ ಒಳಿತು.

Tags

Related Articles

Leave a Reply

Your email address will not be published. Required fields are marked *

Language
Close