About Us Advertise with us Be a Reporter E-Paper

ವಿರಾಮ

* ಮಾದಕ ದ್ರವ್ಯಗಳ ವ್ಯಸನದಿಂದ ಹೊರಬರುವುದು ಹೇಗೆ?

ಡಾ. ಬಿ. ಎಂ. ಹೆಗ್ಡೆ ( ‘ಮಾರಕ’ ದ್ರವ್ಯಗಳು - 3 )

ಪ್ರಜ್ಞಾವಂತರು ಮಾದಕ ದ್ರವ್ಯದ ಅಪಾಯಗಳ ಬಗ್ಗೆ ಶಿಕ್ಷಕರು ಹಾಗೂ ಪಾಲಕರಿಗೆ ಶಿಕ್ಷಣ ನೀಡುವ ಕಾಯಕವನ್ನು ಕೈಗೆತ್ತಿಕೊಳ್ಳಬೇಕು. ಅಂತೆಯೆ ಸಾಮಾನ್ಯ ಜನರಿಗೆ ಮದ್ಯ ತಂಬಾಕು ಸೇವನೆಯ ಅಪಾಯಗಳ ಬಗ್ಗೆ ತಿಳಿ ಹೇಳಬೇಕು.

* ಮಾದಕ ದ್ರವ್ಯ ಅಭ್ಯಾಸವನ್ನು ಬಿಡಲು ಸುಲಭ ಉಪಾಯ ಏನು?
ಎಲ್ಲ ಮಾದಕ ದ್ರವ್ಯ ವ್ಯಸನಿಗಳು ತಮ್ಮ ಅಭ್ಯಾಸಗಳನ್ನು ಕೈಬಿಡುವ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗುತ್ತಾರೆ. ಅಭ್ಯಾಸಗಳನ್ನು ಬಿಡುವುದು ಬಲು ಕಠಿಣ. ಮಾದಕ ದ್ರವ್ಯಗಳ ನೆರವಿಲ್ಲದೆ ಪರಿಸ್ಥಿತಿ ಹಾಗೂ ಭಾವನೆಗಳಿಗೆ ಹೊಂದಿಕೊಳ್ಳಲು ಕಲಿಯುವುದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಮಾದಕ ದ್ರವ್ಯಗಳಿಂದಾಗಿ ಕೆಡುಕಿನಿಂದ ಸುಧಾರಿಸಿಕೊಳ್ಳಲು ಇತರ ಪ್ರೇರಣೆಗಳು ಬೇಕು. ಅಭ್ಯಾಸವನ್ನು ಪ್ರಾರಂಭಿಸಲು ಕಾರಣವಾದ ನಾವು ಮೀರಬೇಕು. ಅಂತೆಯೆ ಇದರಿಂದ ಲಭಿಸಿದ ಯಶಸ್ಸು ಮತ್ತು ಪುನಃ ದುರಾಭ್ಯಾಸಕ್ಕೆ ಹೊರಳಿಕೊಳ್ಳುವುದು ಇವನ್ನು ಕಲಿಯಬೇಕಾದ ಸಂಗತಿಗಳೆಂದು ಭಾವಿಸಬೇಕು. ಆದರೂ, ಕೆಲವೊಂದು ತಪ್ಪುದಾರಿಗೆಳೆಯುವ ಅಂಶಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸಿ ವಿವೇಕದಿಂದ ವರ್ತಿಸಬೇಕು. ವ್ಯಸನಿ ಸೋತಾಗ ಆತನ ಪಾಪ ಪ್ರಜ್ಞೆಯನ್ನು ಹೆಚ್ಚಿಸದೆ, ಆತನ ಸೋಲಿಗೆ ಕಾರಣವಾದ ಸನ್ನಿವೇಶಗಳನ್ನು ಸಹಾನುಭೂತಿಯಿಂದ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.

* ಮಾದಕ ವ್ಯಸನಿಗೆ ಔಷಧಗಳು ಪ್ರಯೋಜನವಾಗುತ್ತದೆಯೆ?
ದುರಾಭ್ಯಾಸದಿಂದಾಗಿ ದುಷ್ಪರಿಣಾಮಗಳು ಆತನ ಮೇಲೆ ಆಗಿರುತ್ತದೆ. ಆ ಸ್ಥಿತಿಯಲ್ಲಿ ಇತ್ಯಾದಿ ಒದಗಿಸಿ ಸಹಾಯ ಮಾಡಬಾರದು. ಏಕೆಂದರೆ ಆತ ಮೂಲ ಚಾಳಿಯನ್ನು ಮುಂದುವರಿಸುತ್ತಲೆ ಇರುತ್ತಾನೆ. ಯಾವಾಗಲೂ ಮಾದಕ ದ್ರವ್ಯ ವ್ಯಸನಿಗೆ ಸಕಾರಾತ್ಮಕ ಪ್ರೇರಣೆ ಒದಗಿಸಿ, ಬದಲಾಗಿ ನಿರುತ್ಸಾಹಿಯನ್ನಾಗಿ ಮಾಡಬೇಡಿ. ಮಾನವತೆಯನ್ನು ಕಾಡುತ್ತಿರುವ ಈ ಮಾರಕ ರೋಗ ನಿರ್ಮೂಲನವಾಗುವ ತನಕ ಎದ್ದೇಳಿ, ಎಚ್ಚರವಾಗಿರಿ. ಈ ಎಲ್ಲ ತೊಂದರೆಗಳ ಮೂಲವೇ ಮನುಷ್ಯನ ಮನಸ್ಸು ಎಂಬುದನ್ನು ಮರೆಯಬೇಡಿ. ಎಲ್ಲ ಮಾದಕ ದ್ರವ್ಯ ಸೇವನೆಯ ಅಪಾಯಗಳ ವಿರುದ್ಧ ನಮಗೆ ಒದಗಿರುವ ಸಂಜೀವಿನಿ ಎಂದರೆ ಪ್ರೀತಿ, ವಿಶ್ವಾಸ ಮನಃಶಾಂತಿ. ಮಾದಕ ದ್ರವ್ಯ ಸೇವನೆ ಮಾಡಬೇಕೆ, ಬೇಡವೆ? ಎಂಬುದನ್ನು ಜನ ನಿರ್ಧರಿಸಬೇಕು. ಒಂದೊಮ್ಮೆ ಈ ಅಪಾಯಕ್ಕೆ ಸಿಲುಕಿದರೆ, ಅದರಿಂದ ಪಾರಾಗಲು ಯಾರಿಂದ ಸಹಾಯ ಪಡೆಯಬೇಕು ಎಂಬುದನ್ನು ತಿಳಿದಿರಬೇಕು.

Tags

Related Articles

Leave a Reply

Your email address will not be published. Required fields are marked *

Language
Close