About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯಸಿನಿಮಾಸ್
Trending

ಹುಚ್ಚ ವೆಂಕಟ್‌ಗೆ ಹುಚ್ಚು ಹೆಚ್ಚಾಯ್ತು..!

Related image

ಬೇಡವಾದ ವಿಚಾರಗಳಿಂದ ಯಾವಗಲೂ ಸುದ್ದಿಯಲ್ಲಿರುವ ಹುಚ್ಚ ವೆಂಕಟ್‌ ಕಳೆದ 2 ದಿನಗಳಿಂದ ಬಾರೀ ಸದ್ದು ಮಾಡುತ್ತಿದ್ದಾರೆ.

ನಿನ್ನೆ ಉಲ್ಲಾಳ ರಸ್ತೆಯಲ್ಲಿರುವ ಬಾರ್ ಒಂದರಲ್ಲಿ ಕಂಠ ಪೂರ್ತಿ ಕುಡಿದು ಹೊರ ಬರುತ್ತಿದ್ದ ಹುಚ್ಚಾ ವೆಂಕಟ್ ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದಿದ್ದಾರೆ. ಇದೇ ವೇಳೆ ಯುವಕರ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಬಳಿಕ ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ತನ್ನ ಹುಚ್ಚಾಟವನ್ನು ಮುಂದುವರಿಸಿದ ಹುಚ್ಚಾ ವೆಂಕಟ್‍ನ ಹುಚ್ಚಾಟ ನೋಡಲು ಸ್ಥಳೀಯರು ಮುಗಿಬೀಳುವಂತಾಗಿದೆ. ಕುಡಿದ ಮತ್ತಿನಲ್ಲಿ ಕೈಯಲ್ಲಿ ಕೂಲ್ ಡ್ರಿಂಕ್ಸ್ ಬಾಟಲ್ ಹಿಡಿದುಕೊಂಡು ತೂರಾಟ ನಡೆಸಿ, ಮೈಮೇಲಿನ ಬಟ್ಟೆಗಳನ್ನು ಸ್ವತಃ ತಾನೇ ಕೊಳೆ ಮಾಡಿಕೊಂಡಿಕೊಂಡು ಹುಚ್ಚಾಟ ತೋರಿಸಿದ್ದಾರೆ. ವೆಂಕಟ್ ಹುಚ್ಚಾಟ ಕಂಡ ಸ್ಥಳೀಯರು ಕೊನೆಗೆ ಆಟೋ ಹತ್ತಿಸಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಇಂದು ಉಲ್ಲಾಳದ ಬಳಿ  ಅಂಗಡಿಯೊಂದರಲ್ಲಿ ನಿಂತಿದ್ದ ಯುವಕನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಟೀ ಕೊಡುವ ಯುವಕನ ಮೇಲೆ ಬಿಸಿ ಟೀ ಎರಚ್ಚಿದ್ದಷ್ಟೇ ಅಲ್ಲದೆ ಆತನನ್ನೇ ಹಿಂಬಾಲಿಸಿ ಹೋಗಿ ಅವನ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ಇಬ್ಬರು ಯುವಕರ ಮೇಲೂ ಹಲ್ಲೆಗೈದಿದ್ದಾರೆ. ಈ ಕುರಿತು ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ವೆಂಕಟ್‌ನನ್ನು ವಶಕ್ಕೆ ಪಡೆದು ಬಳಿಕ ಜ್ಞಾನಭಾರತಿ ಠಾಣೆಗೆ ವರ್ಗಾಯಿಸಿದ್ದಾರೆ. ಪೊಲೀಸರು ಬುದ್ಧಿಮಾತು ಹೇಳಿ ವೆಂಕಟ್ನನ್ನು ಮನೆಗೆ ಕಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close