About Us Advertise with us Be a Reporter E-Paper

ಗುರು

ಪತಿಯ ಕಾಯಕಕ್ಕೆ ನೆರವಾದ ಹೂಗಾರ ಮಾದೇವಿ

*ಎಸ್.ಜಿ.ಗೌಡರ

ವ್ಯವಸ್ಥೆಯೊಂದಿಗೆ ಧ್ವನಿಗೂಡಿಸಲಾಗದೆ ರಾಜಕೀಯ, ಸಾಮಾಜಿಕ, ಆರ್ಥಿಕ, ವಿಚಾರಗಳಿಂದ ಜನರು ದೂರವಿದ್ದಾರೆ, ನೊಂದ ಬೆಂದವರು ಸಮಾಜದಲ್ಲಿದ್ದಾರೆ, ಧಾರ್ಮಿಕ ಪಿತೂರಿ ನಡೆಸಿ ಜನರನ್ನು ಮೌಡ್ಯಕ್ಕೆ ತಳ್ಳುವವರು ಇದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಚಿಂತನೆ ಮಾಡಿದ ಬಸವಣ್ಣ 12ನೇ ಶತಮಾನದಲ್ಲಿ ಇದಕ್ಕೊಂದು ಪರ್ಯಾಯ ಸಮ ಸಮಾಜ ಕಟ್ಟುವ ಕೆಲಸ ಮಾಡಿದರು. ಅದರ ಫಲವಾಗಿ ಹಲವಾರು ಶಿವಶರಣೆಯರು ಸಮಾಜದ ಮುಖ್ಯವಾಹಿನಿಗೆ ಬಂದರು. ಅವರಲ್ಲಿ ಹೂಗಾರ ಮಾದೇವಿಯು ಓರ್ವಳು.

ಕಾಯಕವೇ ಜೀವಾಳ ಎಂದು ಬದುಕಿದ ಶರಣ ಸಂಕುಲ, ವಚನ ಸಾಹಿತ್ಯದ ಮೂಲಕ ನಾಡಿನ ಶ್ರೇಷ್ಠ ಗುರು, ಲಿಂಗ, ಜಂಗಮ, ಕಾಯಕ, ದಾಸೋಹ ತತ್ವಗಳನ್ನು ಪಾಲಿಸಿದ ಶರಣ ದಂಪತಿಗಳಲ್ಲಿ ಹೂಗಾರ ಮಾದಯ್ಯ, ಆತನ ಪತ್ನಿ ಮಾದೇವಿ ಪ್ರಮುಖರು. ಸತ್ಯಶುಧ್ಧ ಕಾಯಕದಿಂದ ವನಕ್ಕೆ ತೆರಳಿ ಶಿವಪೂಜೆ, ಲಿಂಗಪೂಜೆಗೆ ಬೇಕಾಗುವ ಹೂವು, ಬಿಲ್ವಪತ್ರೆಗಳನ್ನು ಒದಗಿಸುವ ಕಾಯಕವನ್ನು ಮಾಡುತ್ತಿದ್ದರು. ಬಸವಾದಿ ಶರಣರಿಗೆ ಈ ದಂಪತಿಗಳು ತುಂಬಾ ಬೇಕಾದವರಾಗಿದ್ದರು. ನಿಷ್ಠೆಯ ಕಾಯಕ ಮಾಡಿ ಜಂಗಮ ದಾಸೋಹ ಸೇವೆಯನ್ನು ಈ ದಂಪತಿಗಳು ಮಾಡುತ್ತಿದ್ದರು.

ಕಾಯಕದ ಹಾದಿಯಲ್ಲಿ ಶಿವನನ್ನು ಕಂಡು ಆದರ್ಶವಾಗಿ ಬಾಳಿದ ಹೂಗಾರ ಆದರ್ಶ ಶರಣೆಯಾಗಿದ್ದಾಳೆ. ಮಾದರಸರ ಶಿಷ್ಯ ಹೂಗಾರ ಮಾದಯ್ಯ. ಇವನ ಧರ್ಮ ಪತ್ನಿ ಮಾದೇವಿ, ಈ ದಂತಿಗಳ ಏಕೈಕ ಪುತ್ರ ಲಿಂಗಣ್ಣ. ಶಿವನು ಹೂಗಾರ ಮಾದಯ್ಯನನ್ನು ಪರೀಕ್ಷಿಸಿ ಕೈಲಾಸಕ್ಕೆ ಕರೆದೊಯ್ಯುವ ಘಟನೆ, ಗಣಪದವಿ ಬೇಡ ಕಾಯಕದಲ್ಲಿ ಕೈಲಾಸ ಕಾಣುವೆ ಎಂದು ಹೇಳುವ ಪ್ರಸಂಗದಲ್ಲಿ ಮಾದಯ್ಯನ ಧರ್ಮಪತ್ನಿ ಶರಣ ಧರ್ಮ ಪರಿಪಾಲನೆ ಮಾಡಿದ್ದನ್ನು ಜನಪದರು ಹಾಡಿ ಹೊಗಳಿದ್ದಾರೆ. ಆ ಜನಪದ ತ್ರಿಪದಿ ಈ ರೀತಿ ಇದೆ

ಶಿವಭಕ್ತಿ, ಶಿವಭಜನೆ, ಶಿವಕೂಟ, ಶಿವಗೋಷ್ಠಿ
ಲಿಂಗ ಮಾದೇವಿ ಮಾದಯ್ಯ
ಶಿವನೆಂದು ಮಾಡಿ ಶಿವಮತಕ್ಕೆ .

ಮಾದಯ್ಯನ ಪ್ರಾಣ ಹಾರಿಹೋಗಿ ಶವವಾದಾಗ, ಮಾದೇವಿ ತನ್ನ ಪತಿಯ ಕ್ರಿಯಾಸಮಾಧಿಯನ್ನು ತಾನೇ ಅಣಿಗೊಳಿಸಿ, ಕಳೆಬರ ತೊಳೆದು ಭಸ್ಮಧಾರಣೆ ಮಾಡುವಳು. ಈ ಘಟನಾವಳಿಯಲ್ಲಿ ಆ ದಂಪತಿಗಳ ಮುಗ್ಧ ಮಗು ಲಿಂಗಣ್ಣ ತಾಯಿಯನ್ನು ಪ್ರಶ್ನಿಸುವ ಪ್ರಸಂಗಕ್ಕೆ ಪೂರಕವಾಗಿ ಜನಪದ ತ್ರಿಪತಿಯೊಂದು ಹೀಗೆ ವಿವರಿಸಿದೆ –
ಎಲೆಮಗುವೆ ನೀನರಿಯೆ ಮಲಗು ಸಮ್ಮನೆ ಹೋಗು
ತೊಲಗದಾ ಸಿಟ್ಟು ಶರಣನದು, ನನ್ಮಲೆ
ಇಳಿಸಲೀ ಒರತೆ ತೊಡಂವೆನು

ನಿದ್ರಾಮುದ್ರೆಯಲ್ಲಿದ್ದಾಗ ಮಾದಯ್ಯ ಲಿಂಗೈಕ್ಯನಾದಂತೆ ಕಂಡು ಬಂದ. ಮಾದರಸರು ಶಿವಯೋಗ ನಿದ್ರಾಮುದ್ರೆಯಲ್ಲಿದ್ದ ಮಾದಣ್ಣನನ್ನು ನೋಡಿ ಏಳೇಳು ಮಾದಯ್ಯ, ಬೆಳಗಾಗುತ್ತ ಬಂತು, ನೀನು ಹೂ, ಪತ್ರಿ ತರುವ ವೇಳೆಯಾಯಿತು ಶರಣರ ಶಿವಪೂಜೆಗೆ ವೇಳೆಯಾಗುವುದು, ಮಡದಿ ಮಕ್ಕಳೊಂದಿಗೆ ಸೆಡುವೇಕೆ ಕಾಯಕವನ್ನು ನೆನಪಿಸಿಕೊ ಎನ್ನುತ್ತಿದ್ದಂತೆ ಮಾದಣ್ಣ ಎಂದು ಕುತ್ತು, ಲವಲವಿಕೆಯಿಂದ ನಂತರ ಹೂ,ಪತ್ರಿ ತರುವ ಕಾಯಕಕ್ಕೆ ಸಿದ್ದನಾಗಿ ಹೊರಟನು. ಮಾದಯ್ಯನ ಶಿವಪೂಜೆ ಕಾಯಕನಿಷ್ಠೆಯಲ್ಲಿ ಮಾದೇವಿಯು ತೋರುವ ನಡೆ ಆದರ್ಶ ಪ್ರಾಯ ಎನಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close