About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ: ಡಿಸಿಎಂ ಪರಮೇಶ್ವರ್

ತುಮಕೂರು: ಮೈತ್ರಿ ಸರಕಾರದಲ್ಲಿ ಸಿಎಂ ಇದ್ದಾರೆ, ಆದ್ದರಿಂದ ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ಡಿಸಿಎಂ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸರಕಾರ ಇದೆ, ಸಿಎಂ ಇದ್ದಾರೆ ಆದರೆ ಏಕೆ ಸಿಎಂ ವಿಚಾರ ಮಾತನಾಡುತ್ತೀರಾ? ನನ್ನ ಬಾಯಲ್ಲಿ ಏಕೆ ಹೇಳಿಸ್ತೀರಾ? ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ಬೆಳಗಾವಿಯಲ್ಲಿ ಮಾಧ್ಯಮದವರು ನಿಮಗೆ ಸಿಎಂ ಆಗುವ ಸಾಮರ್ಥ್ಯ ಇದೆಯೇ? ಎಂದು ಕೇಳಿದರು, ಅದಕ್ಕೆ ನಾನು ಹೌದಪ್ಪ ಸಾಮರ್ಥ್ಯ ನನಗೆ ಇದೆ ಎಂದು ಹೇಳಿದ್ದೆ. ಅದರಲ್ಲೇನೂ ತಪ್ಪಿಲ್ಲ. ಸಿಎಂ ಸ್ಥಾನ ಕೊಟ್ಟರೆ ಆಮೇಲೆ ನೋಡೋಣ ಎಂದರು.

ನಾನು ಪಕ್ಷದ ಅಧ್ಯಕ್ಷನಾಗಿದ್ದ ವೇಳೆಯೇ ಸರಕಾರ ರಚನೆ ಮಾಡಿದ್ದೇವೆ. ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರಶ್ನೆಯೇ ಇಲ್ಲ. ಸುಮ್ಮನೆ ಬಾಯಿ ಚಪಲಕ್ಕೆ ಈ ರೀತಿ ಎಲ್ಲರೂ ಮಾತನಾಡುತ್ತಾರೆ ಎಂದು ಕುಟುಕಿದರು. ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬು ಬೆಳೆಯುವ ರೈತರೊಂದಿಗೆ ಮಾಡಿಕೊಂಡ ಒಪ್ಪಂದಗಳಂತೆ ನಡೆದುಕೊಳ್ಳುವುದಿಲ್ಲ. ರೈತರಿಗೆ ಸಹಾಯ ಮಾಡುವುದಕ್ಕೆ ಕಾರ್ಖಾನೆಗಳಿಗೆ ಸರಕಾರ ಹಣ ನೀಡಿದೆ.

ಕಳೆದ ಬಾರಿ ಸಿದ್ದರಾಮಯ್ಯ ಅವರು 450 ರೂಪಾಯಿ ಬೆಂಬಲ ನೀಡಿದ್ದರು. ಕೇಂದ್ರ ಸರ್ಕಾರ ಪ್ರತಿ ನಿಗದಿ ಪಡಿಸುವ ಎಫ್.ಆರ್.ಪಿ(ನ್ಯಾಯ ಹಾಗೂ ಲಾಭದಾಯಕ) ಬೆಲೆ ಏರುಪೇರಾಗುತ್ತದೆ. ಅದರ ಮೇಲೆ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ ಬೆಲೆ ನಿಗದಿಪಡಿಸುತ್ತಾರೆ. ಕೆಲವು ಸಂದರ್ಭ ಎಫ್.ಆರ್.ಪಿ ಬೆಲೆಗಿಂತ ಹೆಚ್ಚು ಸಿಗುತ್ತೆ, ಕಡಿಮೆಯೂ ಸಿಗುತ್ತದೆ ಎಂದರು.

2017-18 ನಡೆದ ಒಪ್ಪಂದದ ಹಣ ಕೊಟಿಲ್ಲ ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ. ಸರಕಾರ ಈಗಾಗಲೇ ರೈತರೊಂದಿಗೆ, ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಅಂತಿಮವಾಗಿ ತೀರ್ಮಾನಿಸಲಾಗುವುದು. ಕೇಂದ್ರ ಸರಕಾರ ದರ ನಿಗದಿಪಡಿಸುವುದರಿಂದ ಸ್ಪಂದಿಸಬೇಕಿದೆ ಎಂದು ಆಗ್ರಹಿಸಿದರು.

ರಾಜ್ಯ ಸರಕಾರ ಎಂದಿಗೂ ರೈತರ ಪರವಾಗಿದೆ. ಬಿಜೆಪಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ರಾಜ್ಯದ ರೈತರ ಸಮಸ್ಯೆ ಬಗೆಹರಿಸುವಂತೆ ಕೇಂದ್ರಕ್ಕೆ ಹೋದಾಗ ಯಾವುದೇ ರೀತಿ ಸ್ಪಂದನೆ ನೀಡಲಿಲ್ಲ. ಈಗ ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕಿ ನಾಟಕವಾಡುತ್ತಾರೆ. ಬಿಜೆಪಿಯವರು ರಾಜಕೀಯಕ್ಕಾಗಿ ರೈತರ ಪರವಾಗಿ ಮಾತನಡುತ್ತಾರೆ

-ಪರಮೇಶ್ವರ್, ಡಿಸಿಎಂ.

Tags

Related Articles

Leave a Reply

Your email address will not be published. Required fields are marked *

Language
Close