ನನ್ನ ನಿರ್ಧಾರ ಹೆಮ್ಮೆ ತಂದಿದೆ: ಡೊನಾಲ್ಡ್ ಟ್ರಂಪ್

Posted In : ದೇಶ

ದೆಹಲಿ: ಪ್ಯಾರಿಸ್ ಹವಾಮಾನ ಒಪ್ಪಂದವನ್ನು ವಿರೋಧಿಸಿದಕ್ಕೆ ಸಾಕಷ್ಟು ಟೀಕೆಗಳು ಬಂದ ನಂತರ ನಿರ್ಧಾರ ಸಮರ್ಥಿಸಿರುವ ಟ್ರಂಪ್, ಒಪ್ಪಂದದಿಂದ ಹೊರಬಂದಿರುವುದು ಹೆಮ್ಮೆಯ ನಡೆ ಎಂದು ಹೇಳಿದ್ದಾರೆ. ಹವಾಮಾನ ಬದಲಾವಣೆ ಒಪ್ಪಂದ ಈಗಿನ ಅಧ್ಯಕ್ಷರಿಗೆ ಪ್ರಕೋಪವೆನಿಸಿದೆ.

ಹವಾಮಾನ ಬದಲಾವಣೆ ಚೀನಾದ ವಂಚನೆ ಕ್ರಮ ಎಂದು ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದರು. ಅಮೆರಿಕನ್ನರ ಉದ್ಯೋಗ, ಕಂಪೆನಿಗಳು ಮತ್ತು ನೌಕರರನ್ನು ರಕ್ಷಿಸಲು ಏಕಮುಖವಾಗಿರುವ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದಕ್ಕೆ ಬಂದಿದ್ದೇವೆ ಎಂದು ಟ್ರಂಪ್ ತಮ್ಮ ಭಾಷಣದಲ್ಲಿ ಹೇಳಿದರು.

ನಮ್ಮ ದೇಶದ ಸಾರ್ವಭೌಮತ್ವ ಮತ್ತು ಹಿತಾಸಕ್ತಿ ಕಾಪಾಡಲು ಒಪ್ಪಂದದಿಂದ ಹಿಂದೆ ಸರಿಯುವುದು ಮುಖ್ಯವಾಗಿತ್ತು. ದೇಶದ ಜನತೆ ನನಗೆ ಅಭಿನಂದನೆ ಸಲ್ಲಿಸುತ್ತಾರೆ ಎಂಬ ನಂಬಿಕೆಯಿದೆ. ಮುಂದೊಂದು ದಿನ ಮತ್ತೆ ಒಪ್ಪಂದದ ಜೊತೆ ಸೇರಲೂಬಹುದು ಎಂದರು. ಜರ್ಮನಿಯ ಹಂಬರ್ಗ್ ನಲ್ಲಿ ಟ್ರಂಪ್ 20 ನಾಯಕರ ಗುಂಪನ್ನು ಭೇಟಿ ಮಾಡಲಿದ್ದಾರೆ.

ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ಪ್ರಯತ್ನವಾಗಿ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದರಿಂದ ಹಿಂದೆ ಸರಿಯುವುದಾಗಿ ಕಳೆದ ಜೂನ್ 1ರಂದು ಪ್ರಕಟಿಸಿದ್ದರು. ಚೀನಾದ ನಂತರ ವಿಶ್ವದಲ್ಲಿ ಅತಿ ಹೆಚ್ಚು ಹಸಿರುಮನೆ ಅನಿಲಗಳ ಹೊರಸೂಸುವ ದೇಶ ಅಮೆರಿಕಾ ಆಗಿದೆ.

Leave a Reply

Your email address will not be published. Required fields are marked *

3 × four =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top