About Us Advertise with us Be a Reporter E-Paper

ಸಿನಿಮಾಸ್

ಐ ಲವ್ ಯು ದಾವಣಗೆರೆ

ಪ್ರೇಮಿಗಳ ದಿನಕ್ಕೆ ಹತ್ತು ದಿನ ಮೊದಲೇ ದಾವಣಗೆರೆಯಲ್ಲಿ ಪ್ರೇಮದ ಜ್ವರ ಮಿತಿ ಮೀರಿತ್ತು. ಇಡೀ ಊರಿನ ತುಂಬಾ ಎಲ್ಲರೂ ‘ಐ ಲವ್ ಯು’ ‘ಐ ಲವ್ ಯು’ ಎನ್ನುತ್ತಾ ಓಡಾಡುತ್ತಿದ್ದರು. ಎಲ್ಲರೂ ಹಾಯ್ ಬಾಯ್ ಎನ್ನುವಷ್ಟು ಕಾಮನ್ ಆಗಿ, ‘ಐ ಲವ್ ಯು’ ಎನ್ನುತ್ತಿದ್ದರು. ಯಾಕೆ ಎಲ್ಲರೂ ಹೀಗೆ ‘ಐ ಲವ್ ಯು’ ಹೇಳುತ್ತಿದ್ದಾರೆ ಎಂದು ಹುಡುಕಿ ಹೊರಟಾಗ ಇಡೀ ಸೇರಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ತಮ್ಮ ಪ್ರೀತಿಯನ್ನು ಹೇಳುತ್ತಿದ್ದಾರೆ ಎಂಬ ವಿಷಯ ತಿಳಿಯಿತು. ಇದಕ್ಕೆ ಪ್ರತ್ಯುತ್ತರವಾಗಿ ಉಪೇಂದ್ರ ಅವರು ಸಹ ಎಲ್ಲರಿಗೂ ‘ಐ ಲವ್ ಯು’ ಹೇಳಿದರು. ಇಷ್ಟೆಲ್ಲಾ ನಡೆದಿದ್ದು ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ. ನಂತರ ತಿಳಿದ ವಿಷಯವೇನೆಂದರೆ, ಇಷ್ಟೊಂದು ಜನರು ಒಟ್ಟಾಗಿ ಐ ಲವ್ ಯು ಹೇಳಲು ಕಾರಣ ಉಪೇಂದ್ರರ

‘ಐ ಲವ್ ಯು’ ಸಿನಿಮಾದ ಹಾಡುಗಳು. ಹೌದು ಉಪೇಂದ್ರ ರಚಿತಾ ರಾಮ್‌ರನ್ನು ಒಟ್ಟಾಗಿಸಿ, ಆರ್ ನಿರ್ಮಿಸಿ ನಿರ್ದೇಶಿಸಿದ ‘ಐ ಲವ್ ಯು’ ಸಿನಿಮಾದ ಹಾಡುಗಳು ದಾವಣಗೆರೆಯಲ್ಲಿ ಅದ್ದೂರಿಯಾಗಿ ಬಿಡುಗಡೆಯಾದವು. ಈ ಕಾರ್ಯಕ್ರಮವನ್ನು ಕಣ್‌ತುಂಬಿಕೊಳ್ಳಲು ಹೈಸ್ಕೂಲ್ ಮೈದಾನದ ತುಂಬಾ ಜನ ತುಂಬಿದ್ದರು.

ಅನುಶ್ರೀ ನಿರೂಪಣೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ಸೋನು ಗೌಡ, ಮಯೂರಿವರ ಕಲರ್‌ಫುಲ್ ಡ್ಯಾನ್‌ಸ್ ಮೈದಾನದಲ್ಲಿದ್ದವರೆಲ್ಲರನ್ನೂ ಕುಣಿಯುವಂತೆ ಮಾಡಿತು. ನಂತರದಲ್ಲಿ ವೇದಿಕೆ ಮೇಲೆ ಬಂದ ವೃತ್ತಿಯಿಂದ ಡಾಕ್ಟರ್ ಆದ ಸಿನಿಮಾ ಸಂಗೀತ ನಿರ್ದೇಶಕ ಕಿರಣ್ ತೋಟಮ್‌ಬೈಲು, ಸಿನಿಮಾ ಮೇಲೆ ಆಸಕ್ತಿ ಬಂದಾಗಿನಿಂದ ಹಿಡಿದು, ಆರ್ ಚಂದ್ರು ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು, ಹಾಡುಗಳನ್ನು ರವಿಚಂದ್ರನ್ ಅವರಿಗೆ ಕೇಳಿಸಿದಾಗ, ಸಿನಿಮಾಗೆಂದು ಅವರೇ ಒಂದು ಹಾಡನ್ನು ಮಾಡಿಕೊಟ್ಟಿದ್ದು ಸೇರಿದಂತೆ ಇಡೀ ಐ ಲವ್ ಯು ಜರ್ನಿಯ ಕುರಿತು ವಿವರಿಸಿದರು. ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿರುವ ಸೋನು ಗೌಡ ‘ನನ್ನನ್ನು ನಿರ್ದೇಶಕರು ತೆಲುಗು ಸಿನಿಮಾಗಳಲ್ಲಿ ತೋರಿಸುವಷ್ಟು ಚೆನ್ನಾಗಿ ತೋರಿಸಿದ್ದಾರೆ’ ಎಂದು ಸಂತಸ ವ್ಯಕ್ತ ಪಡಿಸಿದರು. ಚಂದ್ರು ನಾನು ಮಾತನಾಡುವುದಕ್ಕಿಂತ ಸಿನಿಮಾವೇ ಮಾತನಾಡುತ್ತದೆ ಎಂಬ ಧಾಟಿಯ ಮಾತುಗಳನ್ನಾಡಿದರು.

ನಾಯಕಿ ರಚಿತಾ ರಾಮ್ ಅಸಲಿಗೆ ಮಾತನಾಡಲೇ ಇಲ್ಲ, ಏಕೆಂದರೆ ಅವರು ವೇದಿಕೆ ಮೇಲೆ ಬಂದಾಗಿನಿಂದ ಅವರ ಅಭಿಮಾನಿಗಳ ಕೂಗಾಟಕ್ಕೆ ಬೇರೆ ಏನೂ ಕೇಳಿಸುತ್ತಿರಲಿಲ್ಲ. ಮೈಕ್ ಧ್ವನಿಯನ್ನು ಕೇಳಿಸದಷ್ಟು ಕೂಗಾಟವಿತ್ತು. ನಂತರದದಲ್ಲಿ ವೇದಿಕೆ ಮೇಲೆ ಬಂದ ಉಪೇಂದ್ರ ದಾವಣಗೆರೆ ಜನರಿಗೆ ಐ ಲವ್ ಯು ಹೇಳಿ ತಮ್ಮದೇ ಹೆಸರಿನ ಸಿನಿಮಾದ ನೂರು ದಿನಗಳ ಸಂಭ್ರಮವನ್ನು ಇಲ್ಲಿಯೇ ಆಚರಿಸಿಕೊಂಡ ಬಗ್ಗೆ ಹೇಳಿದರು. ಹೀಗೆ ಮಾತನಾಡುತ್ತಾ ಅವರ ಮಾತು ರಾಜಕೀಯದತ್ತ ಹೊರಳಿತ್ತು. ಸಿನಿಮಾ ನನ್ನ ದಾರಿ, ರಾಜಕೀಯ ನನ್ನ ಜನರು ನನಗೆ ಬೇಕಿದೆನ್ನೆಲ್ಲಾ ಕೊಟ್ಟಿದ್ದಾರೆ, ಆದರೆ ಜನರಿಗೆ ನಾನು ಏನನ್ನೂ ಕೊಟ್ಟಿಲ್ಲ. ಈಗ ಅವರಿಗೆ ವಾಪಸ್ಸು ಕೊಡುವ ಸಮಯ ಬಂದಿದೆ, ಅದೇ ಪ್ರಜಾಕೀಯ ಎಂದರು. ನಂತರ ಐ ಲವ್ ಯು ಸಿನಿಮಾ ನಾಯಕನಾಗಿ ಮಾತನಾಡಿ, ಇದು ನನ್ನ ‘ಪ್ರೀತ್ಸೆ’, ‘ಎ‘, ‘ಉಪೇಂದ್ರ’ ಮೂರು ಸಿನಿಮಾಗಳ ಶೇಡ್ ಜತೆಗೆ ಚಂದ್ರು ಶೈಲಿಯ ಸಿನಿಮಾ ಎಂದರು. ಕೊನೆಯಲ್ಲಿ ಹಲವಾರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಪೊಲೀಸರ ಜತೆಗೆ ಇಡೀ ಚಿತ್ರತಂಡ ಸೇರಿ ಬಿಡುಗಡೆ ಮಾಡಲಾಯಿತು.

Tags

Related Articles

Leave a Reply

Your email address will not be published. Required fields are marked *

Language
Close