ವಿಶ್ವವಾಣಿ

‘ಐ ವಾಂಟ್ ಟು ಬಿಕಮ್ ಲೈಕ್ ಆ್ಯಪಲ್ ಒನ್ ಡೇ’

ಇಂದು ಆ್ಯಪಲ್ ಕಂಪನಿಯ ಮೌಲ್ಯ ಒಂದು ಟ್ರಿಲಿಯನ್ ಡಾಲರ್‌ಗಳಷ್ಟು (ಅರವತ್ತೆಂಟು ಲಕ್ಷ ಕೋಟಿ ರುಪಾಯಿಗಳು). ನೂರಾ ಇಪ್ಪತ್ತು ಕೋಟಿ ಜನರಿರುವ ನಮ್ಮ ದೇಶದ ಜಿಡಿಪಿ ಎಷ್ಟು ಗೊತ್ತಾ? ಮೂರು ಟ್ರಿಲಿಯನ್  ಅಂದರೆ ಆ್ಯಪಲ್ ಕಂಪನಿಯ ಮೌಲ್ಯವು ಭಾರತದ ಜಿಡಿಪಿಯ ಮೂರನೇ ಒಂದು ಭಾಗದಷ್ಟಿದೆ. ನಿಮಗೊಂದು ವಿಷಯ ಗೊತ್ತಾ? ಇವತ್ತು ಟ್ರಿಲಿಯನ್ ಡಾಲರ್ ಮೌಲ್ಯದ ಕಂಪನಿಯಾದ ಆ್ಯಪಲ್ ಎರಡು ದಶಕಗಳ ಹಿಂದೆ ದಿವಾಳಿಯ ಅಂಚಿನಲ್ಲಿತ್ತು. ಇಪ್ಪತ್ತು ವರ್ಷ ಅಂದರೆ ಸರಿಸುಮಾರು 7300 ದಿನಗಳು ಅಷ್ಟೇ.

ಒಂದು ಕಂಪನಿ ಕೇವಲ 7300 ದಿನಗಳಲ್ಲಿ ಶೂನ್ಯದ ಅಂಚಿನಿಂದ ಜಗತ್ತಿನ ಅತ್ಯಂತ ದೊಡ್ಡ ಕಂಪನಿಯಾಗಿ ಬದಲಾಯಿತು ಎಂದರೆ ಎಂತಹ ಪರಮಾಶ್ಚರ್ಯ ಅಲ್ಲವೇ? ಇದೆಲ್ಲಾ ಹೇಗಾಯಿತು ಎನ್ನುವುದು  ಸ್ಫೂರ್ತಿದಾಯಕ ವಿಷಯ. ಅದರ ಬಗ್ಗೆ ಪುಸ್ತಕವನ್ನೇ ಬರೆಯಬಹುದು. ಸ್ಟೀವ್ ಜಾಬ್ಸ್ ಅವರು ಆ್ಯಪಲ್ ಕಂಪನಿಯ ಸ್ಥಾಪಕ.  ಒಂದು ದಿನ ಅವರನ್ನೇ ಕಂಪನಿಯಿಂದ ಉಚ್ಛಾಟನೆ ಮಾಡಲಾಯಿತು. ಅದರ ನಂತರ ಕಂಪನಿಯ ಷೇರಿನ ಬೆಲೆ ವಿಮಾನವು ಲ್ಯಾಂಡಿಂಗ್ ಆಗುವಾಗ ಹೇಗೆ ಕೆಳಮುಖವಾಗಿ ಇಳಿಯುತ್ತದೆಯೋ ಹಾಗೆಯೇ ಇಳಿಯುತ್ತಾ ಹೋಯಿತು. ‘ದಿ ಫಾಲ್ ಆಫ್ ಆನ್ ಅಮೆರಿಕನ್ ಐಕಾನ್’ ಎನ್ನುವ ಕವರ್‌ಪೇಜ್ ‘ಬ್ಯುಸಿನೆಸ್ ವೀಕ್’ ಪತ್ರಿಕೆಯ 1995ರ ಫೆಬ್ರವರಿ ಎಡಿಷನ್‌ನಲ್ಲಿ ಬಂದಿತ್ತು. ಮೊದಲ ಮೌಸ್,  ಕ್ಯಾಲಿಗ್ರಫಿ, ಮೊದಲ ಪರ್ಸನಲ್ ಕಂಪ್ಯೂಟರ್, ಮೊದಲ ಪೇಂಟಿಂಗ್, ಮೊದಲ ಪ್ಲಾಫಿ ಡ್ಕ್ಿ, ಹೀಗೆ ಅದೆಷ್ಟೋ ಮೊದಲುಗಳನ್ನು ಜಗತ್ತಿಗೆ ತೋರಿಸಿದ ಕಂಪನಿ ಇನ್ನು ಮುಚ್ಚಿಹೋಗುವ ಹೊಸಲಿನಲ್ಲಿತ್ತು. ಆದರೆ ಕಂಪನಿಯ ಅದೃಷ್ಟವನ್ನು ಬದಲಾಯಿಸಿದವರೇ ಆ ಕಂಪನಿಯ ಪಿತಾಮಹ ಸ್ಟೀವ್ ಜಾಬ್ಸ್.

ಆಗಲೇ ಹೇಳಿದ ಹಾಗೆ ಸ್ಟೀವ್ ಜಾಬ್ಸ್ ಅವರು ಆ್ಯಪಲ್ ಕಂಪನಿಯಲ್ಲಿ ಎರಡನೇ ಇನಿ್ಂಸ್ ಶುರು ಮಾಡಿದಾಗ ಕಂಪನಿ ದಿವಾಳಿತನದಿಂದ ಕೇವಲ ತೊಂಬತ್ತು ದಿನ ದೂರವಿತ್ತು. ಕಂಪನಿಯನ್ನು ಈ ಹಂತದಿಂದ ಎತ್ತಿ  ತರುವುದು ಅಷ್ಟು ಸುಲಭವಾಗಿರಲಿಲ್ಲ. ಇಡೀ ಕಂಪ್ಯೂಟರ್ ಜಗತ್ತೇ ಸ್ಟೀವ್ ಅವರನ್ನು ಒಂದು ಆಶಾಭಾವದಿಂದ ನೋಡುತ್ತಿತ್ತು. ಮೈಕ್ರೋಸ್ಟ್ಾ, ಐಬಿಎಮ್ ನಂತಹ ದೊಡ್ಡ ಕಂಪನಿಗಳೆದುರು ಆ್ಯಪಲ್ ಮತ್ತೊಮ್ಮೆ ಸ್ಟಾರ್ಟ್ ಅಪ್ ಆಗಿತ್ತು. ಸ್ಟೀವ್ ಜಾಬ್ಸ್ ಅವರು ತಮ್ಮ ಮೊದಲ ಇನ್ನಿ್ಂಸ್ ನಲ್ಲಿ ಔಟ್ ಆಗಿ ದೊಡ್ಡ ಪಾಠವನ್ನೇ ಕಲಿತಿದ್ದರು. ಆದರೆ ಬೇಸತ್ತು ಅವರು ಸಿಲಿಕಾನ್ ವ್ಯಾಲಿಯಿಂದ ದೂರ ಹೋಗಿರಲಿಲ್ಲ. ಅವರು ತಮ್ಮ ಸ್ಟಾನ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ನೀಡಿದ ಒಂದು ಜಪ್ರಿಯ ಭಾಷಣದಲ್ಲಿ ಹೇಳಿದ  ತಮ್ಮ ಮನಸ್ಸಿಗೆ ಏನು ಖುಷಿ ಕೊಡುತ್ತದೆಯೋ ಅದನ್ನೇ ಮಾಡುವುದನ್ನು ಮುಂದುವರಿಸಿದ್ದರು.

ಆ್ಯಪಲ್ ಕಂಪನಿಯನ್ನು ಮುಂದೆ ಜಗತ್ತಿನ ಅತೀ ದೊಡ್ಡ ಕಂಪನಿಯಾಗಿ ಮಾಡಬಲ್ಲ ಆಪರೇಟಿಂಗ್ ಸಿಸ್ಟಮ್ ಅವರ ‘ನೆಕ್‌ಸ್ಟ್’ ಎನ್ನುವ ಕಂಪನಿಯಲ್ಲಿ ತಯಾರಿಗಿದ್ದು. ಐಪಾಡ್, ಐಫೋನ್, ಐಪ್ಯಾಡ್, ಐಮ್ಯಾಕ್ ಎನ್ನುತ್ತಾ ನೋಡು ನೋಡುತ್ತಿದ್ದಂತೆ ಕಂಪನಿಯ ಷೇರಿನ ಬೆಲೆ ಸಾಗರದ ಸ್ಥರದಿಂದ ಹಿಮಾಲಯದ ಎತ್ತರಕ್ಕೆ ಏರಿತ್ತು. ಐಫೋನ್ ವಿಶ್ವದ ಇತಿಹಾಸದಲ್ಲಿಯೇ ಅತೀ ಹೆಚ್ಚು ಲಾಭ ಗಳಿಸಿದ ಉತ್ಪನ್ನ ಎಂಬ ಹೆಗ್ಗಳಿಕೆ ಪಡೆಯಿತು.  ಅಮೆರಿಕದಲ್ಲಿ ಅಲ್ಲ ಇಡೀ ಜಗತ್ತಿಗೆ ಆ್ಯಪಲ್ ಕಂಪನಿಯ ಪ್ರಾಡ್ಟ್ಗಳ ಹುಚ್ಚು ಹಿಡಿದಿತ್ತು. ಜನರನ್ನು ಸ್ಮಾರ್ಟ್‌ಫೋನ್‌ಗಳ ಮೂಲಕ ಸ್ಟಾರ್ಟ್ ಮಾಡಿದ್ದೇ ಆ್ಯಪಲ್ ಕಂಪನಿ. ಕೇವಲ ಕರೆಯನ್ನು ಮಾಡಲು ಬಳಸುತ್ತಿದ್ದ ಫೋನ್ ಗಳನ್ನು ಮನುಷ್ಯನ ದೇಹದ ಅಂಗವಾಗಿ ಮಾಡಿತ್ತು ಆ್ಯಪಲ್ ಕಂಪನಿ ತಂದ ಆ್ಯಪ್ ಕನ್ಸೆಪ್ಟ್. ಹಾರ್ಡವೇರ್ ಹಾಗೂ ಸಾಫ್‌ಟ್ವೇರ್ ಎರಡರಲ್ಲೂ ಆ್ಯಪಲ್ ಎತ್ತಿದ ಕೈ. ಎಂಡ್ ಟು ಎಂಡ್ ಬ್ಯುಸಿನೆಸ್ ಮೊಡೆಲ್ ಸ್ಟೀವ್ ಜಾಬ್ಸ್ ಅವರ ಟ್ರಂಪ್ ಕಾರ್ಡ್ ಚೀನಾದಲ್ಲಿ  ಅಮೆರಿಕದಲ್ಲಿ ಹಂಚಿಕೆ. ಐವತ್ತು ಸಾವಿರ ಮೌಲ್ಯದ ಫೋನ್ ಕೇವಲ ಹತ್ತು ಸಾವಿರಕ್ಕೆ ಸಿಗುವ ಹಾಗೆ ಟೆಲಿಕಾಂ ಸರ್ವಿಸ್ ಕೊಡುವ ಕಂಪನಿಯಾದ ಅ ಅರೊಂದಿಗೆ ಒಪ್ಪಂದ ಮಾಡಿಕೊಂಡರುವುದು. ಈ ತರಹದ ಹೊಸ ಹೊಸ ಬಗೆಯ ವ್ಯಾಪಾರದ ಸಾಹಸಗಳಿಗೆ ನೋಕಿಯಾ ಎನ್ನುವ ಅಲುಗಾಡಿಸಲೂ ಸಾಧ್ಯವಾಗದಂತಹ ಕಂಪನಿ ಕುಸಿದು ಹೋಯಿತು. ಇನ್ನೇನು ಕಂಪನಿ ಯಶಸ್ಸಿನ ಉತ್ತುಂಗದಲ್ಲಿದೆ ಎನ್ನುವಾಗ ಆ್ಯಪಲ್ ಕಂಪನಿಯ ಚುಕ್ಕಾಣಿಯಾಗಿದ್ದ ಸ್ಟೀವ್ ಜಾಬ್ಸ್ ಅವರು ಲಿವರ್ ಕ್ಯಾನ್ಸರಿಗೆ ತುತ್ತಾದರು.

2011ರಲ್ಲಿ ಸ್ಟೀವ್  ನಿಧನರಾದಾಗ ಇನ್ನು ಎಷ್ಟು ದಿನ ಕಂಪನಿ ಉಳಿಯಬಹುದು ಎಂದು ಜಗತ್ತು ಅಲ್ಲಿಯ ಉನ್ನತ ನಾಯಕರನ್ನು ಪ್ರಶ್ನೆಯಿಂದ ನೋಡುತ್ತಿತ್ತು. ಕಂಪನಿಯ ಆಂತರಿಕ ಪ್ರಕ್ರಿಯೆಯನ್ನು ಅವರು ಎಷ್ಟೊಂದು ಸದೃಢವಾಗಿಸಿದ್ದರೆಂದರೆ ಸ್ಟೀವ್ ಜಾಬ್ಸ್ ನಂತರವೂ ದಿನದಿಂದ ದಿನಕ್ಕೆ ಕಂಪನಿಯ ಷೇರಿನ ಬೆಲೆ ಹೆಚ್ಚುತ್ತಾ ಹೋಯಿತು. ಈಗಿನ ಆ್ಯಪಲ್ ಸಿಇಒ ‘ಟಿಮ್ ಕುಕ್’ ಸಂಕೋಚ ಸ್ವಭಾವದ ವ್ಯಕ್ತಿ. ಅವರು ಮಾತನಾಡುವುದು ಡಿಮೆ. ಆದರೆ ಅವರ ಪ್ರಾಡ್ಟ್ ಹೆಚ್ಚು ಸದ್ದು ಮಾಡುತ್ತವೆ, ಷೇರಿನ ಬೆಲೆ ಪ್ರತಿಸ್ಪರ್ಧಿ  ನಿದ್ದೆ ಕೆಡಿಸುತ್ತದೆ. ‘ಫಾರ್ಟ್‌ೆ ಗಂಪ್’ ಸಿನಿಮಾದಲ್ಲಿ ಇಪ್ಪತ್ತು ಸೆಕೆಂಡಿನ ಒಂದು ದೃಶ್ಯವಿದೆ. ನನ್ನ ಹತ್ತಿರ ಬೋಟಿನ ವ್ಯಾಪಾರದಿಂದ ಬಂದ ಸ್ವಲ್ಪ ಹಣವಿತ್ತು. ಅದನ್ನು ನಾನು ಸರಿಯಾಗಿ ಬಳಸಿಕೊಳ್ಳಲಿಲ್ಲ. ನನ್ನ ಹತ್ತಿರವಿದ್ದ ಆ ಸ್ವಲ್ಪ ಹಣದಲ್ಲಿ ನನ್ನ ಗೆಳೆಯ ಯಾವುದೋ ಒಂದು ಹಣ್ಣಿನ ಕಂಪನಿಯ ಷೇರ್ ಖರೀದಿಸಿದ್ದ. ಅದು ನನಗೆ ಗೊತ್ತೇ ಇರಲಿಲ್ಲ. ನಾನು ಹಣದ ಬಗ್ಗೆ ಚಿಂತೆಯೇ ಮಾಡುವುದು ಬೇಡ ಎಂದು ಆ ಕಂನಿಯವರು ಪತ್ರ ಬರೆದಿದ್ದಾರೆ ಎಂದು  ಸ್ಟಾಪಿನಲ್ಲಿ ಕೂತಿದ್ದ ಒಬ್ಬ ವಯಸ್ಸಾದ ಹೆಂಗಸಿನ ಹತ್ತಿರ ಈ ಮಾತನ್ನು ಆತ ಹೇಳುತ್ತಾನೆ. ಆತ ಹೇಳಿದ ಹಣ್ಣಿನ ಕಂಪನಿ ಬೇರೆ ಯಾವುದೂ ಅಲ್ಲ, ಅದೇ ಆ್ಯಪಲ್ ಕಂಪ್ಯೂಟರ್. ಈ ಸಿನಿಮಾ ರಿಲೀಸ್ ಆಗಿದ್ದು 1994ರಲ್ಲಿ. ಸಿನಿಮಾದಲ್ಲಿ ತೋರಿಸಿದ್ದು ಕೇವಲ ಒಂದು ಕಾಲ್ಪನಿಕ ಸ್ಕ್ರ್ಟ್‌ಿ ಅಷ್ಟೇ! ಆದರೆ ಆ ಸಿನಿಮಾವನ್ನು ನೋಡಿ ನಂತರ ಯಾರಾದರೂ 10,000 ಡಾಲರ್ ಹಣವನ್ನು ಅಂದು ಆ್ಯಪಲ್ ಕಂಪೆನಿಯಲ್ಲಿ ಹಾಕಿದ್ದರೆ ಇಂದು ಅವರು ಮಿಲೇನಿಯರ್ ಆಗುತ್ತಿದ್ದರು!  0.93 ಡಾಲರ್ ನಷ್ಟಿದ್ದ ಒಂದು ಷೇರಿನ ಬೆಲೆ ಇಂದು 207 ಡಾಲರ್ ಆಗಿದೆ.

ಆ್ಯಪಲ್ ಕಂಪನಿಯ ಇವತ್ತಿನ ಯಶಸ್ಸನ್ನು ಜಗತ್ತು ‘ಗ್ಯಾರೇಜಿನಿಂದ ಶುರುವಾಗಿ ಜಗತ್ತಿನ ಅತ್ಯಂತ ಹೆಚ್ಚು ಮೌಲ್ಯದ ಕಂಪನಿಯಾದ ಕಥೆ’ ಎಂದೇ ಕರೆಯುತ್ತಾರೆ. ಏಕೆಂದರೆ ಕಂಪನಿ 1976ರಲ್ಲಿ ಶುರುವಾಗಿದ್ದು ಸ್ಟೀವ್ ಜಾಬ್ಸ್ ಅವರ ಮನೆಯ ಹಿಂಭಾಗದಲ್ಲಿರುವ ಗ್ಯಾರೇಜಿನಲ್ಲಿ. ಸ್ಟೀವ್ ಜಾಬ್ಸ್ ಹಾಗೂ ಸ್ಟೀವ್ ವೋಜ್ನಿಯಾಕ್ ಎನ್ನುವ ಇಬ್ಬರು ಬೆಳಸಿದ ಕಂಪನಿ ಅದು. ಅಮೆರಿಕದ ಜಿಡಿಪಿ ಸರಿಸುಮಾರು ಇಪ್ಪತ್ತು  ಡಾಲರ್‌ಗಳಷ್ಟಿದೆ. ಅರಲ್ಲಿ ಆ್ಯಪಲ್ ಕಂಪನಿಯ ಮೌಲ್ಯವೇ ಒಂದು ಟ್ರಿಲಿಯನ್ ಡಾಲರ್! ಒಮ್ಮೆ ಆ್ಯಪಲ್ ಪ್ರೊಡಕ್ಟಗಳನ್ನು ನೋಡಿ, ಅವು ಇನ್ನಿತರೆ ಉತ್ಪನ್ನಗಳಿಗಿಂತ ಬೇರೆಯೇ ಇವೆ. ಇವತ್ತಿನ ಆಂಡ್ರಾಯ್ಡ್ ಫೋನ್‌ಗಳನ್ನು ದೂರ ದೂರಕ್ಕೂ ಐಫೋನಿಗೆ ಹೋಲಿಸಲು ಸಾಧ್ಯವಿಲ್ಲ. ಆ್ಯಪಲ್ ತುಂಬಾ ತುಟ್ಟಿ, ಯಾಕೆ ಅದನ್ನು ಕೊಂಡುಕೊಳ್ಳಬೇಕು ಎನ್ನುತ್ತಾರೆ ಜನ. ಆದರೆ ಇಂದು ಒಮ್ಮೆ ಆ್ಯಪಲ್ ಪ್ರಾಡ್ಟ್ ಬಳಸಿದವ ಮತ್ತೆ ಅದನ್ನು ಬಿಡುವುದಿಲ್ಲ. ಚೈನಾದಲ್ಲಿ ಕಿಡ್ನಿ ಮಾರಿ ಐಫೋನ್ ಕೊಂಡುೊಳ್ಳುತ್ತಾರೆ. ಆ್ಯಪಲ್ ಜಗತ್ತಿನ  ಖಾಸಗಿ ಟ್ರಿಲಿಯನ್ ಡಾಲರ್ ಮೌಲ್ಯದ ಕಂಪನಿ. ಆ್ಯಪಲ್ ಹಿಂದೆಯೇ ಅಮೇಜಾನ್ ಇದೆ, ಮೈಕ್ರೋಸ್ಟ್‌ಾ ಇದೆ, ಫೇಸ್ಬುಕ್ ಇದೆ. ಹೀಗೆ ಇನ್ನೂ ಹಲವಾರು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಂಪನಿಗಳಿವೆ. ಆದರೆ ಏನೇ ಹೇಳಿ, ಆ್ಯಪಲ್ ಕಂಪನಿಯ ಕಾರ್ಯ ವೈಖರಿಯೇ ಬೇರೆ. ಅಲ್ಲಿ ಕೆಲಸ ಮಾಡುತ್ತಿರುವ ನನ್ನ ಗೆಳೆಯ ಒಬ್ಬ ಹೇಳುತ್ತಿದ್ದ ಆ್ಯಪಲ್ ಎಷ್ಟೇ ದೊಡ್ಡ ಕಂಪನಿಯಾದರೂ ಅಲ್ಲಿಯ ಕಲ್ಚರ್ ಸ್ಟಾರ್ಟ್ ಅಪ್ ತರಹವೇ ಇದೆಯಂತೆ.

ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯರಿಗೇನು  ಇಲ್ಲ. ಭಾರತದಲ್ಲಿ ಆ್ಯಪಲ್ ತರಹದ ಒಂದು ಕಂಪನಿಯು ಹುಟ್ಟಬಹುದೇ, ನಮ್ಮಲ್ಲಿಯೂ ಒಬ್ಬ ಸ್ಟೀವ್ ಜಾಬ್ಸ್ ಆಗಬಲ್ಲನೇ? ಆ್ಯಪಲ್ ತರಹವೇ ಆಗಬೇಕು ಎಂದರೆ ಸಾಧ್ಯವಿಲ್ಲ, ಸ್ಟೀವ್ ಜಾಬ್ಸ್ ನಾನಾಗಬೇಕು ಅಂದರೆ ಅದೂ ಪ್ರಾಕ್ಟಿಕಲ್ ಅಲ್ಲ. ಅದಕ್ಕೆ ಉತ್ತರವೆಂದರೆ ನಮ್ಮದೇ ಆದ ಒಂದು ಹೊಸ ಬಗೆಯ ಉದ್ಯಮವನ್ನು ಸೃಷ್ಟಿ ಮಾಡಬೇಕು. ಚಿಕ್ಕದಾಗಿ ಶುರುಮಾಡಬೇಕು. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಯಾವುದೇ ಒಂದು ದೊಡ್ಡ ಕಂಪನಿ ಇರಲಿ ಮೊದಲು ಶುರುವಾಗುವುದು ಚಿಕ್ಕದಾಗಿಯೇ. ಚಿಕ್ಕದಾಗಿದ್ದರೆ  ಅದನ್ನು ದೊಡ್ಡದಾಗಿ ಬೆಳೆಸುವುದು ಕ್ವಾಲಿಟಿ. ಜೀವಕ್ಕೆ ಉಸಿರು ಹೇಗೆ ಮುಖ್ಯವೋ ಹಾಗೆ ಪ್ರಾಡಕ್ಟಿಗೆ ಉತ್ಕೃಷ್ಟತೆ. ಅದಕ್ಕಾಗಿ ನಾವು ಏನೇ ಮಾಡಿದರೂ ಅದರಲ್ಲಿ ಯಾರೂ ಸರಿಸಾಟಿಯಾಗಿ ನಿಲ್ಲಲಾಗದಂತಹ ಉತ್ಕೃಷ್ಟತೆಯನ್ನು ತುಂಬಬೇಕು. ಇಂದು ಚೀನಾದ ಎಷ್ಟೊಂದು ಉತ್ಪನ್ನಗಳು ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಆದರೆ ನಮ್ಮ ದೇಶದ ಒಂದು ಅತ್ಯುತ್ತಮ ಪ್ರಾಡ್ಟ್ ಯಾಕೆ ಇಲ್ಲ? ಎಲ್ಲೋ ನಾವು ಒಂದೊಳ್ಳೆ ಅವಕಾಶವನ್ನು ಮಿಸ್ ಮಾಡಿಕೊಳ್ಳುತ್ತಿದೆವೆಯೋ ಅನಿಸುತ್ತಿದೆ.

ಭಾರತದ ಉದ್ಯೋಗಪತಿಗಳು, ಯುವ ಪೀಳಿಗೆಯ ಉದ್ಯಮಿಗಳು ಐಫೋನ್  ಒಂದು ಅದ್ಭುತವಾದ ಉತ್ಪನ್ನವನ್ನು ಸೃಷ್ಟಿಮಾಡಬೇಕು. ನೆನಪಿರಲಿ ಆ್ಯಪಲ್ ಒಂದು ಸಣ್ಣ ಗ್ಯಾರೇಜ್ ನಿಂದ ಶುರುವಾಗಿ ಇಷ್ಟು ದೊಡ್ಡ ಆಗಿದ್ದು, ಒಂದು ದಿನ ಆ ಕಂಪನಿಗೆ ದಿವಾಳಿಯಾಗಲು ಕೇವಲ ತೊಂಬತ್ತು ದಿನ ಬಾಕಿ ಇತ್ತು. ಇಂದು ಅದೇ ಕಂಪನಿಯು ಜಗತ್ತಿನ ಮೊದಲ ಟ್ರಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿದೆ. ಇವತ್ತು ಪ್ರತಿಯೊಬ್ಬ ಉದ್ಯಮಿಯ ಕನಸು ‘ಐ ವಾಂಟ್ ಟು ಬಿಕಮ್ ಲೈಕ್ ಆ್ಯಪಲ್ ಒನ್ ಡೇ’ ಅವರಿಗೆಲ್ಲ ಒಂದೇ ಮಾತನ್ನು ಹೇಳಬೇಕು.  ಆ್ಯಪಲ್ ಒಂದೇ ರಾತ್ರಿಯಲ್ಲಿ ನಿರ್ಮಾಣ ಆಗಿದ್ದಲ್ಲ, ಹಾಗೆಯೇ ಗೆಲುವಿನ ಸುಪ್ಪತ್ತಿಗೆಯ ಮೇಲೆಯೇ ಅದು ಬೆಳೆದು ಬಂದಿಲ್ಲ. ಆ್ಯಪಲ್ ಕಂಪನಿಯ ಹಾಗೆ ಬೆಳೆಯಲು ಸೋಲನ್ನು ಎದುರಿಸುವ ಸಂಯಮ ಬೇಕು, ಹೊಸತೊಂದನ್ನು ಸೃಷ್ಟಿಸುವ ಕಲೆ ಬೇಕು.