ನನ್ನ ಆಸ್ತಿ ಮಾರಿಯಾದರೂ ಬ್ಯಾಂಕ್‌ ಗ್ರಾಹಕರಿಗೆ ಹಣ ಹಿಂದುರಿಗಿಸುತ್ತೇನೆ

Posted In : ಬೆಳಗಾವಿ, ರಾಜ್ಯ, ಸಿನಿಮಾ ಸಮಾಚಾರ

ಬೆಳಗಾವಿ: ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್‌ ಬ್ಯಾಂಕ್‌ ಗ್ರಾಹಕರಿಗೆ ನನ್ನ ಆಸ್ತಿ ಮಾರಿಯಾದರೂ, ಆದಷ್ಟು ಬೇಗ ಹಣ ಹಿಂದುರಿಗಿಸುತ್ತೇನೆ ಎಂದು ಬ್ಯಾಂಕ್‌ ಎಂಡಿ ಹಾಗೂ ಸಂಗೊಳ್ಳಿ ರಾಯಣ್ಣ ಚಿತ್ರ ನಿರ್ಮಾಪಕ ಆನಂದ ಅಪ್ಪಗೋಳ ಹೇಳಿದ್ದಾರೆ.

ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್‌ ಬ್ಯಾಂಕ್‌ ವಿರುದ್ಧ ಗ್ರಾಹಕರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮಾಧ್ಯಮಗಳೆದುರು ಮಾತನಾಡಿ, ನಾನು ಹಾಗೇ ಸಾಯುವ ಮನುಷ್ಯನಲ್ಲಾ ಎಂದು ಗಳಗಳನೆ ಅಳುತ್ತಲೇ ಅಪ್ಪೂಗೋಳ ಗ್ರಾಹಕರಿಗೆ ಹಣ ಹಿಂದಿರುಗಿಸುವ ಬಗ್ಗೆ ಭರವಸೆ ನೀಡಿದ್ದಾರೆ.

ನೋಟ ಬ್ಯಾನ್ ಆದ್ದರಿಂದ ಆಸ್ತಿ ಮಾರಾಟ ಮಾಡಲು ಆಗುತ್ತಿಲ್ಲ. ಅದರಿಂದ ನನಗೆ ನಷ್ಟವಾಗಿದೆ. ಎರಡರಿಂದ ಮೂರು ತಿಂಗಳಲ್ಲಿ ಗ್ರಾಹಕರಿಗೆ ಹಣ ಸಂದಾಯ ಮಾಡುತ್ತೇನೆ ಎಂದರು. ಗುರುವಾರ ಬ್ಯಾಂಕ್‌ ಗ್ರಾಹಕರು ತಮ್ಮ ಹಣ ಹಿಂದಿರುಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

Leave a Reply

Your email address will not be published. Required fields are marked *

ten + eighteen =

 
Back To Top