ವಿಶ್ವವಾಣಿ

ನಾನು ಕಾಂಗ್ರೆಸ್‌ ಪಕ್ಷವನ್ನೇ ವಿವಾಹವಾಗಿದ್ದೇನೆ: ರಾಹುಲ್‌ ಗಾಂಧಿ

ಹೈದರಾಬಾದ್‌: ತಾವು ಕಾಂಗ್ರೆಸ್‌ ಪಕ್ಷವನ್ನೇ ವಿವಾಹ ಮಾಡಿಕೊಂಡಿರುವುದಾಗಿ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ತಮ್ಮ ವಿವಾಹದ ಯೋಜನೆಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್‌ ಗಾಂಧಿ ಮೇಲಿನಂತೆ ಹೇಳಿದ್ದಾರೆ.

ಬೀದರ್‌ನಲ್ಲಿ ಪಕ್ಷದ ಸಾರ್ವಜನಿಕ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಲು ರಾಹುಲ್‌ ಹೈದರಾಬಾದ್‌ಗೆ ಆಗಮಿಸಿದ್ದಾರೆ. ಇದೇ ವೇಳೆ, ನಗರದಲ್ಲಿರುವ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿ ರಾಹುಲ್‌ ಮಾತನಾಡಲಿದ್ದಾರೆ.

2019ರ ಚುನಾವಣೆಯಲ್ಲಿ ಬಿಜೆಪಿಗೆ 230 ಸೀಟುಗಳೂ ಸಿಗುವುದು ಕಷ್ಟವಿದ್ದು, ನರೇಂದ್ರ ಮೋದಿ ಇನ್ನೊಮ್ಮೆ ಪ್ರಧಾನಿಯಾಗಲಾರರು ಎಂದಿದ್ದಾರೆ.

ಇದೇ ವೇಳೆ, ಕಾಂಗ್ರೆಸ್‌ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ಪ್ರಧಾನಿಯಾಗಿ ಯಾರನ್ನು ಆಯ್ಕೆ ಮಾಡಲಿದ್ದೀರಿ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡಲು ರಾಹುಲ್‌ ನಿರಾಕರಿಸಿದ್ದಾರೆ.